Bigg Boss Kannada 11: "ಏನೋ ಕಿತ್ತು ದಬಾಕ್ತಿನಿ ಅಂತ ಬಂದವರು ಬೇಗ ಹೋಗಿದ್ದಾರೆ"; ಕಿಚ್ಚ ಸುದೀಪ್ ಎದುರೇ ಮಾನಸ-ಹಂಸ ವಾಗ್ಯುದ್ಧ

ಬಿಗ್ ಬಾಸ್ ಮನೆಯೊಳಗೆ ಹೋದ್ಮೇಲೆ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು ಬಳಿಕ ಮೈಂಡ್ ಗೇಮ್ ಆಡುವುದಕ್ಕೆ ಶುರು ಮಾಡುತ್ತಾರೆ. ಎರಡು ತಂಡಗಳಾಗಿ ಟಾಸ್ಕ್ ಶುರುವಾದ್ಮೇಲೆ ಮತ್ತಷ್ಟು ದ್ವೇಷ ಶುರುವಾಗುತ್ತೆ. ಆದರೆ, ಈ ಬಾರಿ ಹಾಗಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ವೇದಿಕೆ ಮೇಲೆ ಕಿಚ್ಚ ಸುದೀಪ್ ಎದುರೇ ವಾಗ್ಯುದ್ಧ ನಡೆದಿದೆ.

ಕಳೆದ ಬಾರಿನೇ ತುಕಾಲಿ ಸಂತೋಷ್ ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದರು. ಆ ವೇಳೆನೇ ತುಕಾಲಿ ಸಂತೋಷ್ ಅವರ ಪತ್ನಿ ಗಮನ ಸೆಳೆದಿದ್ದರು. ಅಲ್ಲಿಂದ ಮಾನಸ ತುಕಾಲಿ ಸಂತೋಷ್ ಅವರನ್ನು ಮುಂದಿನ ಬಿಗ್ ಬಾಸ್ ಸೀಸನ್‌ಗೆ ಕರೆಸಿ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಅದರಂತೆ ಈ ಬಾರಿ ಮಾನಸ ತುಕಾಲಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.

Bigg Boss Kannada 11 Puttakkana Magalu fame Hamsa and Manasa Tukali became rival in front of Sudeep

'ಪುಟ್ಟಕನ್ ಮಕ್ಕಳು' ಧಾರಾವಾಹಿಯಲ್ಲಿ ರಾಜಿಯಾಗಿ ನಟಿಸುತ್ತಿದ್ದ ನಟಿ ಹಂಸ ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಈ ಬಾರಿ ಒಬ್ಬೊಬ್ಬರನ್ನೇ ಮನೆಯೊಳಗೆ ಕಳುಹಿಸಿಲ್ಲ. ಜೋಡಿಯಾಗಿ ಮನೆಯೊಳಗೆ ಪ್ರವೇಶ ಕೊಟ್ಟಿದ್ದಾರೆ. ನಟಿ ಹಂಸ ಜೊತೆ ಮಾನಸ ತುಕಾಲಿಯವರನ್ನು ಮನೆಯೊಳಗೆ ಪ್ರವೇಶ ಕೊಡಿಸಿದ್ದರು. ಈ ವೇಳೆ ಇಬ್ಬರನ್ನೂ ವೇದಿಕೆ ಮೇಲೆ ಕರೆದಿದ್ದ ಕಿಚ್ಚ ಸುದೀಪ್ ಎದುರೇ ಇಬ್ಬರೂ ಟಾಂಗ್ ಕೊಟ್ಟುಕೊಂಡಿದ್ದು ಮುಂದಿನ ಯುದ್ಧಕ್ಕೆ ಸಾಕ್ಷಿ ಎಂಬಂತೆ ಇತ್ತು.

ಆರಂಭದಲ್ಲಿ ಮಾನಸ ತುಕಾಲಿಯವರನ್ನು ವಿಶೇಷ ಅತಿಥಿಯಾಗಿ ವೇದಿಕೆ ಮೇಲೆ ಕೂರಿಸಲಾಗಿತ್ತು. ಇಬ್ಬರನ್ನು ವೇದಿಕೆ ಮೇಲೆ ಕರೆದಾಗ ಪ್ರತಿ ಬಾರಿ ಮಾನಸ ಅವರ ಬಳಿ ಸ್ವರ್ಗಕ್ಕೆ ಯಾರು ಹೋಗಬೇಕು? ನರಕಕ್ಕೆ ಯಾರು ಹೋಗಬೇಕು? ಅನ್ನುವ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತಿತ್ತು. ಹಾಗೇ ತ್ರಿವಿಕ್ರಮ್ ಹಾಗೂ ಶಿಶಿರ್ ಬಂದಾಗ ಕಿಚ್ಚ ಇದೇ ಅಭಿಪ್ರಾಯವನ್ನು ಕೇಳಿದ್ದರು. ಆಗ ಮಾನಸ ತ್ರಿವಿಕ್ರಮ್ ಅವರ ಕಡೆಗೆ ವಾಲಿದ್ದರು.

ನಟಿ ಹಂಸ ಅವರು ವೇದಿಕೆ ಮೇಲೆ ಬಂದಾಗಲೂ ಮಾನಸ ತುಕಾಲಿ ಅವರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿತ್ತು. ಆ ವೇಳೆ ಹಂಸ ಅವರು ನಾಲ್ಕೈದು ವಾರ ಇರಬಹುದು ಎಂದು ಮಾನಸ ಹೇಳಿದ್ದರು. ಇದು ನಟಿ ಹಂಸಗೆ ಕೊಂಚ ಇರಿಸು ಮುರಿಸು ಮಾಡಿದಂತೆ ಇತ್ತು. ಹಾಗೇ ಮಾನಸ ತುಕಾಲಿ ಅವರನ್ನು ವೇದಿಕೆ ಮೇಲೆ ಕರೆದಾಗಲೂ ಹಂಸಗಿಂತ ತಾನೇ ಬೆಟರ್ ಅನ್ನುವಂತೆ ಹೇಳಿದ್ದರು. ಅದು ಇನ್ನು ಕಿಚ್ಚು ಹಂಚಿತ್ತು.

ಕೊನೆಗೂ ಹಂಸ ಟಾಂಗ್ ಕೊಟ್ಟೇ ಬಿಟ್ಟರು. ಇಲ್ಲಿ ಕೆಲವರು ಏನೋ ಕಿತ್ತು ದಬಾಕುತ್ತೇನೆ ಅಂತ ಬರುತ್ತಾರೆ. ಏನೂ ದಬಾಕದೆ ಹಾಗೇ ಹೋಗುತ್ತಾರೆ. ನಾನು ಈ ಮನೆಯಲ್ಲಿ ಹೆಚ್ಚು ದಿನ ಇರುತ್ತೇನೆ ಎಂದು ಮಾನಸ ತುಕಾಲಿ ಎದುರು ಹಂಸ ಹೇಳಿದ್ದಾರೆ. ಬಹುಶ: ಇದು ಬಿಗ್ ಬಾಸ್ ಮನೆಯೊಳಗೆ ಹೆಚ್ಚು ತಾರಕಕ್ಕೆ ಏರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಈ ಬಾರಿ ಬಿಗ್ ಬಾಸ್‌ನಲ್ಲಿ ಫೈಟ್ ಜೋರಾಗಿಯೇ ಇರುತ್ತೆ. ಅಂದುಕೊಂಡಂತೆ ಮಾನಸ ತುಕಾಲಿ, ಧರ್ಮ ಕೀರ್ತಿರಾಜ್, ಚೈತ್ರಾ ಕುಂದಾಪುರ, ಲಾಯರ್ ಜಗದೀಶ್, ಉಗ್ರಂ ಮಂಜು ಹೆಚ್ಚು ಎಫೆಕ್ಟಿವ್ ಆಗಿ ಈ ಬಾರಿ ಕಾಣಿಸಿಕೊಳ್ಳಬಹುದು. ಗೋಲ್ಡ್ ಸುರೇಶ್ ಸರ್ಪ್ರೈಸ್ ಕೊಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಇನ್ನು ಉಳಿದವರು ಮನೆಯೊಂದು ಕಿರುತೆರೆ ವೀಕ್ಷಕರನ್ನು ಹೇಗೆಲ್ಲ ಮನರಂಜಿಸುತ್ತಾರೆ ಅನ್ನೋದರ ಮೇಲೆ ಅವರ ಭವಿಷ್ಯ ನಿರ್ಧರಿಸಿದೆ.

More from Filmibeat

English summary
Bigg Boss Kannada 11 Puttakkana Magalu fame Hamsa and Manasa Tukali became rival in front of Sudeep
Read more about: bigg boss sudeep filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X