BBK 11: ರಜತ್ ವಿಷಯದಲ್ಲಿ ಉಗ್ರಂ ಮಂಜುಗೇ ಆಗದೆ ಇದ್ದಿದ್ದು ಝಾನ್ಸಿ ಮಾಡಿದ್ದೇಗೆ?

ಬಿಗ್‌ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆ ಹೊಸ್ತಿಲಲ್ಲಿ ಕಲರ್ಸ್ ಕನ್ನಡ ಹೊಸ ಧಾರಾವಾಹಿಗಳನ್ನು ಪರಿಚಯಿಸುವುದಕ್ಕೆ ಸಿದ್ಧವಾಗಿದೆ. ಇತ್ತ ಬಿಗ್ ಬಾಸ್ ಮುಗಿಯುತ್ತಿದ್ದಂತೆ ಅತ್ತ ಹೊಸ ಧಾರಾವಾಹಿಗಳು ಆರಂಭ ಆಗುತ್ತವೆ. ಅದರಲ್ಲಿ 'ಯಜಮಾನ' ಕೂಡ ಒಂದು. ಈಗಾಗಲೇ ಈ ಧಾರಾವಾಹಿಯ ಪ್ರಮೋಷನ್ ಕೂಡ ಆರಂಭ ಆಗಿದೆ. ಇಂದಿನ (ಜನವರಿ 21) ಸಂಚಿಕೆಯಲ್ಲಿ ಬಿಗ್‌ ಬಾಸ್ ಮನೆಯಲ್ಲಿ 'ಯಜಮಾನ' ಸೀರಿಯಲ್ ಪ್ರಮುಖ ಪಾತ್ರಧಾರಿಗಳು ಎಂಟ್ರಿ ಕೊಟ್ಟಿವೆ.

ಬಿಗ್ ಬಾಸ್ ಮನೆಯೊಳಗೆ ಆರು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಹನುಮಂತ, ಉಗ್ರಂ ಮಂಜು, ಮೋಕ್ಷಿತಾ ಪೈ, ರಜತ್, ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಇವರ ಮಧ್ಯೆ ಬಿಗ್‌ ಬಾಸ್ ಟ್ರೋಫಿಗಾಗಿ ಪೈಪೋಟಿ ನಡೆಯಲಿದೆ. ಈ ಆರು ಮಂದಿಯಲ್ಲಿ ಯಾರಿಗೆ ಬಿಗ್ ಬಾಸ್ ಕಿರೀಟ ಸಿಗುತ್ತೆ ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

Bigg Boss Kannada 11 Rajath Kishan head down in front of Yajamana serial character Jansi

ಬಿಗ್ ಬಾಸ್ ಮನೆಯೊಳಗೆ ಇದೂವರೆಗೂ ಹೈಲೈಟ್ ಆಗಿದ್ದು ರಜತ್ ಹಾಗೂ ಉಗ್ರಂ ಮಂಜು ನಡುವಿನ ಕಿತ್ತಾಟ. ರಜತ್ ಹಾಗೂ ಉಗ್ರಂ ಮಂಜು ಇಬ್ಬರಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದೇ ಇಲ್ಲವೇನೋ ಅನ್ನುವಷ್ಟು ಕಿತ್ತಾಡಿದ್ದಾರೆ. ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ. ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದಾರೆ. ಆದರೆ, ಉಗ್ರಂ ಮಂಜು ಅದ್ಹೇಗೆ ತಿರುಗೇಟು ನೀಡಿದರೂ ರಜತ್ ಮಾತ್ರ ಕ್ಯಾರೇ ಅನ್ನಲ್ಲಿಲ್ಲ. ಆದರೆ, 'ಯಜಮಾನ' ಧಾರಾವಾಹಿ ನಟಿಯ ಮುಂದೆ ತಲೆ ತಗ್ಗಿಸಿ ನಿಂತಿದ್ದಾರೆ.

'ಯಜಮಾನ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಎರಡು ಪಾತ್ರಗಳು ರಾಘವೇಂದ್ರ ಹಾಗೂ ಝಾನ್ಸಿ. ಈ ಎರಡು ಪಾತ್ರಗಳನ್ನು ಬಿಗ್‌ ಬಾಸ್ ಮನೆಯೊಳಗೆ ಕಳಿಸಿ ಸ್ಪರ್ಧಿಗಳೊಂದಿಗೆ ಕೆಲವು ಸಮಯ ಇರುವುದಕ್ಕೆ ಅವಕಾಶ ನೀಡಲಾಗಿದೆ. ಈ ವೇಳೆ ತಮ್ಮ ಪಾತ್ರಕ್ಕೆ ತಕ್ಕಂತೆ ನಡೆದುಕೊಂಡಿರುವ ಝಾನ್ಸಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದೆ. ಅವರು ಹೇಳಿದಂತೆ ಕೇಳುವಂತೆ ಮಾಡಿದ್ದಾರೆ. ಅದರಲ್ಲಿ ರಜತ್ ಕೊಟ್ಟ ಟಾಸ್ಕ್ ಚರ್ಚೆಯಾಗುತ್ತಿದೆ.

ಬಿಗ್‌ ಬಾಸ್ ಮನೆಯಲ್ಲಿ ಐದು ದಿನಗಳ ಕಾಲ ಇದ್ದ ರಜತ್ ಯಾರಿಗೂ ತಲೆಬಾಗಿರಲಿಲ್ಲ. ಆದರೆ, ರಿಲೀಸ್ ಆಗಿರುವ ಪ್ರೋಮೋದಲ್ಲಿ ಝಾನ್ಸಿ "ಮೂರು ಎಣಿಸುವುದರೊಳಗೆ ನನ್ನ ಮುಂದೆ ನಿಂತು ತಲೆ ತಗ್ಗಿಸಬೇಕು" ಎಂದು ಆಜ್ಞಾನೆ ಮಾಡಿದ್ದರು. ಉಗ್ರಂ ಮಂಜು ಆರ್ಭಟಕ್ಕೆ ನಡುಗದ ರಜತ್ ಮನೆಯೊಳಗೆ ಅತಿಥಿಯಾಗಿ ಬಂದಿದ್ದ ಝಾನ್ಸಿಗೆ (ಮಧುಶ್ರೀ ಬೈರಪ್ಪ) ಆಜ್ಙೆಯಂತೆ ತಲೆ ತಗ್ಗಿಸಿ ನಿಂತಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

Bigg Boss Kannada 11 Rajath Kishan head down in front of Yajamana serial character Jansi

ಇದೇ ವೇಳೆ ರಜತ್ ಹೇಳಿದ ಒಂದು ಮಾತು ಕೂಡ ಅಷ್ಟೇ ವೈರಲ್ ಆಗಿದೆ. ಝಾನ್ಸಿ ತನ್ನ ಮುಂದೆ ತಲೆ ತಗ್ಗಿಸಿ ನಿಲ್ಲಬೇಕು ಅಂದಾಗ ರಜತ್ "ಹುಡುಗಿಯರ ವಿಷಯದಲ್ಲಿ ನಾನು ಸ್ವಲ್ಪ ವೀಕ್" ಎಂದು ಹೇಳುತ್ತಾರೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಹಾಗೇ ಉಗ್ರಂ ಮಂಜುಗೆ ರಜತ್ ಅನ್ನು ಬಗ್ಗಿಸುವುದಕ್ಕೆ ಆಗಲಿಲ್ಲ. ಅಂತಹದ್ದರಲ್ಲಿ ಝಾನ್ಸಿ ಬಂದು ತಲೆ ತಗ್ಗಿಸುವಂತೆ ಮಾಡಿದಳು ಅಂತ ಸೋಶಿಯಲ್ ಮೀಡಿಯಾ ಮಾತಾಡಿಕೊಳ್ಳುತ್ತಿದೆ. ಏನಕ್ಕೂ ರಜತ್ ತಲೆ ತಗ್ಗಿಸಿದ್ದು ಯಾಕೆ ಅನ್ನೋದು ಇವತ್ತಿನ ಬಿಗ್ ಬಾಸ್‌ ಸಂಚಿಕೆಯಲ್ಲಿ ರಿವೀಲ್ ಆಗಲಿದೆ.

ಇನ್ನು ಸೀಸನ್ 11 ಗೆಲ್ಲೋರು ಯಾರು ಅನ್ನೋ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಆರು ಮಂದಿಯಲ್ಲಿ ಸ್ಟ್ರಾಟಜಿ ಕಿಂಗ್ ಉಗ್ರಂ ಮಂಜು, ಹಳ್ಳಿ ಹೈದ ಹನುಮಂತು, ಮೋಕ್ಷಿತಾ ಪೈ, ರಜತ್, ಭವ್ಯಾ ಗೌಡ, ತ್ರಿಕ್ರಮ್ ನಡುವೆ ತೀವ್ರ ಪೈಪೋಟಿ ಇದೆ. ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ಹಾಗೂ ಉಗ್ರಂ ಮಂಜು ಇವರಲ್ಲಿ ಇಬ್ಬರು ಫಿನಾಲೆಗೆ ಬರಬಹುದು ಎಂದು ಅಂದಾಜಿಸಲಾಗಿದೆ.

More from Filmibeat

English summary
Bigg Boss Kannada 11 Rajath Kishan head down in front of Yajamana serial character Janvi;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X