Bigg Boss Kannada 11: ಬಿಗ್‌ಬಾಸ್ ಮನೆಯೊಳಗೆ ಕೊನೆಯದಾಗಿ ಎಂಟ್ರಿ ಕೊಟ್ಟ ಸ್ಪರ್ಧಿ ಯಾರು? ಹಿನ್ನೆಲೆಯೇನು?

ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಆಗಿ ಆರಂಭಗೊಂಡಿದೆ. ಕಲರ್ಸ್ ಕನ್ನಡದಲ್ಲಿ ನಾಳೆ (ಸೆಪ್ಟೆಂಬರ್ 30) ಯಿಂದ ಕಿರುತೆರೆಯಲ್ಲಿ ಬಿಗ್‌ ಬಾಸ್ ಅಬ್ಬರ ಜೋರಾಗಲಿದೆ. ಸುಮಾರು 17 ಮಂದಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಅದರಲ್ಲಿ ಗೆಸ್ ಮಾಡಿದಂತೆ ಒಬ್ಬರು ಮಿಸ್ ಆಗಿದ್ದಾರೆ.

ಬಿಗ್‌ ಬಾಸ್ ಕಾರ್ಯಕ್ರಮಕ್ಕೂ ಮುನ್ನ ಫಿಲ್ಮಿಬೀಟ್ ಕನ್ನಡ ಬಹುತೇಕ ಸ್ಪರ್ಧಿಗಳನ್ನು ರಿವೀಲ್ ಮಾಡಿತ್ತು. ಅದರಂತೆ ಅವರಲ್ಲಿ ಕಿರಣ್ ರಾಜ್ ಒಬ್ಬರನ್ನು ಬಿಟ್ಟರೆ, ಉಳಿದವರೆಲ್ಲರೂ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಕೊನೆಯದಾಗಿ ಎಂಟ್ರಿ ಕೊಟ್ಟಿರುವ ಸ್ಪರ್ಧಿ ಇಂಟ್ರೆಸ್ಟಿಂಗ್ ಆಗಿದ್ದಾರೆ. ಅಲ್ಲದೆ ಸಿನಿಮಾ ಹಾಗೂ ಕಿರುತೆರೆಯಲ್ಲಿ ಪರಿಚಯ ಇದ್ದಾರೆ.

Bigg Boss Kannada 11 Shani serial fame Ranjith become last contestant

ಈ ಬಾರಿ ಬಿಗ್‌ಬಾಸ್‌ಗೆ ಕೆಲವು ಪತ್ರಕರ್ತರ ವರ್ಗದಿಂದ ಮಿಸ್ ಆಗಿದ್ದಾರೆ. ಕಳೆದೆರಡು ಬಾರಿಯೂ ಪತ್ರಕರ್ತರೊಬ್ಬರು ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಿದ್ದರು. ಈ ಬಾರಿ ಮಿಸ್ ಆಗಿದ್ದಾರೆ. ಉಳಿದಂತೆ ಸಿನಿಮಾ, ಕಿರುತೆರೆ, ಸಾಮಾಜಿಕ ಕಾರ್ಯಕರ್ತೆ, ವಕೀಲರ ವಲಯದಿಂದ ಬಿಗ್ ಬಾಸ್‌ ಮನೆಯೊಳಗೆ ಪ್ರವೇಶ ಸಿಕ್ಕಿದೆ. ಅಂದ್ಹಾಗೆ 17 ಸ್ಪರ್ಧಿಗಳಲ್ಲಿ ಬಿಗ್ ಬಾಸ್ ಮನೆಯೊಳಗೆ ಕೊನೆಯದಾಗಿ ಪ್ರವೇಶ ಮಾಡಿದ್ದು ನಟ ರಂಜಿತ್.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ಶನಿ' ಧಾರಾವಾಹಿಯಲ್ಲಿ ರಂಜಿತ್ ನಟಿಸಿದ್ದರು. ಸೂರ್ಯ ದೇವನ ಪಾತ್ರದಲ್ಲಿ ನಟಿಸಿ ರಂಜಿತ್ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದರು. ಈ ಧಾರಾವಾಹಿ ಪ್ರಸಾರ ಆಗುವಾಗ ಸಾಕಷ್ಟು ಜನ ಮನ್ನಣೆಯನ್ನು ಪಡೆದಿತ್ತು. ಅಲ್ಲದೆ, ಸೂರ್ಯ ದೇವನಾಗಿ ನಟಿಸುತ್ತಿದ್ದ ರಂಜಿತ್ ಕೂಡ ಮಿಂಚಿದ್ದರು. ಆ ಧಾರಾವಾಹಿ ಬಳಿಕ ರಂಜಿತ್ ಸಿನಿಮಾಗಳ ಮುಖ ಮಾಡಿದ್ದರು.

ಧಾರಾವಾಹಿ ಬಳಿಕ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ನಿಖಿಲ್ ಕುಮಾರ್ ನಟಿಸಿದ್ದ 'ಸೀತಾ ರಾಮ ಕಲ್ಯಾಣ' ಸಿನಿಮಾದಲ್ಲಿ ನಟಿಸಿದ್ದರು. ಹಾಗೇ 'ಭರಾಟೆ', 'ಶಿವಾರ್ಜುನಾ', 'ಜೇಮ್ಸ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ಖಳನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಂಜಿತ್ ಕುಮಾರ್ ಬಿಗ್‌ಬಾಸ್ ಕನ್ನಡ 11ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ಖಳನಾಯಕನಾಗುತ್ತಾರಾ? ಇಲ್ಲ ನಾಯಕನಾಗುತ್ತಾರಾ? ಅನ್ನೋ ಕುತೂಹಲವಂತೂ ಇದ್ದೇ ಇದೆ.

ರಂಜಿತ್ ಕುಮಾರ್ ಸಿನಿಮಾ ಜೊತೆ ಜೊತೆಗೆ ಕ್ರಿಕೆಟ್ ಪಂದ್ಯಾವಳಿಗಳಲ್ಲೂ ಸಕ್ರಿಯರಾಗಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ರಂಜಿತ್ ಕಾಣಿಸಿಕೊಂಡಿದ್ದರು. ಕಿಚ್ಚ ಸುದೀಪ್ ಜೊತೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇಷ್ಟು ಧಾರಾವಾಹಿ ಹಾಗೂ ಸಿನಿಮಾ ಅಂತ ಬ್ಯುಸಿಯಾಗಿದ್ದ ನಟ ರಂಜಿತ್ ಕುಮಾರ್ ಈಗ ಬಿಗ್ ಬಾಸ್ ಅಂತಹ ರಿಯಾಲಿಟಿ ಶೋನಲ್ಲಿ ಸದ್ದು ಮಾಡುವ ನಿರೀಕ್ಷೆಯಲ್ಲಿದ್ದಾರೆ.

More from Filmibeat

English summary
Bigg Boss Kannada 11 Shani serial fame Ranjith become last contestant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X