Bigg Boss Kannada 11: ಬಿಗ್‌ಬಾಸ್‌ಗೆ ಇವರೆಲ್ಲರೂ ಹೋಗೋದು ಕನ್ಫರ್ಮ್: ಯಾರವರು?

ಬಿಗ್‌ಬಾಸ್ ಕನ್ನಡ 11 ರಿಯಾಲಿಟಿ ಶೋ ಆರಂಭ ಆಗುವುದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. 11ನೇ ಸೀಸನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಬಿಗ್ ಬಾಸ್ 10ನೇ ಸೀಸನ್‌ವರೆಗೂ ಸ್ಪರ್ಧಿಗಳನ್ನು ರಹಸ್ಯವಾಗಿಟ್ಟುಕೊಂಡು ವೇದಿಕೆ ಮೇಲೆ ರಿವೀಲ್ ಮಾಡುತ್ತಿದ್ದರು. ಆದರೆ, ಈ ಬಾರಿ ಬಿಗ್‌ಬಾಸ್ ಆರಂಭಕ್ಕೂ ಮುನ್ನವೇ ನಾಲ್ಕೈದು ಸ್ಪರ್ಧಿಗಳನ್ನು ರಿವೀಲ್ ಮಾಡಲಿದ್ದಾರೆ.

ನಾಳೆ (ಸೆಪ್ಟೆಂಬರ್ 28)ರಂದು ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಒಂದು ದಿನ ಮುನ್ನವೇ 'ರಾಜಾ ರಾಣಿ' ಶೋ ಫಿನಾಲೆ ಇದೆ. ಅದರಲ್ಲಿ ಈ ಬಾರಿ ಬಿಗ್‌ ಬಾಸ್‌ ಮನೆಗೆ ಪ್ರವೇಶ ಮಾಡಲಿರುವ ನಾಲ್ಕರಿಂದ ಐದು ಸ್ಪರ್ಧಿಗಳನ್ನು ಕಲರ್ಸ್ ಕನ್ನಡ ರಿವೀಲ್ ಮಾಡಲಿದೆ. ಅಷ್ಟಕ್ಕೂ ಅವರು ಯಾರು? ಕನ್ಫರ್ಮ್ ಆಗಿ ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡುವ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.

Bigg Boss Kannada 11 these are the confirmed contestants here is the details

ಈ ಬಾರಿ ಬಿಗ್‌ಬಾಸ್ ಕನ್ನಡ ಕಾನ್ಸೆಪ್ಟ್‌ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ. ಸ್ವರ್ಗ ಹಾಗೂ ನರಕದ ಕಲ್ಪನೆಯನ್ನು ಇಟ್ಟುಕೊಂಡು ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಲಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್‌ಬಾಸ್ ಥ್ರಿಲ್ ಆಗಿರುತ್ತೆ. ಹಾಗೇ ಈಗಾಗಲೇ ಸ್ಪರ್ಧಿಗಳು ಯಾರು ಹೋಗಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಸದ್ಯ ಈ ಸ್ಪರ್ಧಿಗಳು ಬಿಗ್‌ಬಾಸ್ ಕನ್ನಡ 11ಕ್ಕೆ ಎಂಟ್ರಿ ಕೊಡುವುದು ಪಕ್ಕಾ ಅಂತ ಮೂಲಗಳು ತಿಳಿಸಿವೆ.

'ಕನ್ನಡತಿ' ನಟ ಕಿರಣ್ ರಾಜ್

ಇತ್ತೀಚೆಗಷ್ಟೇ ತೆರೆಕಂಡಿದ್ದ ನಟ ಕಿರಣ್ ರಾಜ್ 'ರಾನಿ' ಸಿನಿಮಾ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ಕಿರಣ್ ರಾಜ್‌ಗೆ ಅಪಘಾತ ಕೂಡ ಆಗಿತ್ತು. ಆ ಮೂಲಕ ಕೂಡ ಸುದ್ದಿಯಲ್ಲಿದ್ದರು. ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಹೋಗಲಿರುವ ಸ್ಪರ್ಧಿಗಳಲ್ಲಿ ಇವರೂ ಒಬ್ಬರು. ಇದೇ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಿದ್ದ 'ಕನ್ನಡತಿ' ಧಾರಾವಾಹಿ ಮೂಲಕ ಕಿರಣ್ ರಾಜ್ ಕಿರುತೆರೆ ವೀಕ್ಷಕರ ನೆಚ್ಚಿನ ನಟನಾಗಿದ್ದರು. ಈಗ ರಿಯಾಲಿಟಿ ಶೋ ಮೂಲಕ ಮತ್ತೆ ವೀಕ್ಷಕರನ್ನು ರಂಜಿಸಲಿದ್ದಾರೆ. ಆದರೆ, ಸ್ವರ್ಗನಾ? ನರಕನಾ? ಅನ್ನೋದು ಭಾನುವಾರವೇ ಗೊತ್ತಾಗುತ್ತೆ.

ನಟಿ ಅನುಷಾ ರೈ

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಕಾಣಿಸಿಕೊಳ್ಳಲಿರುವ ಮತ್ತೊಬ್ಬ ನಟಿ ಅನುಷಾ ರೈ. ಸಿನಿಮಾ ಹಾಗೂ ಧಾರಾವಾಹಿ ಎರಡರಲ್ಲೂ ನಟಿಸಿರುವ ಈ ನಟಿ ಈ ಬಾರಿ ಬಿಗ್‌ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ. ಎಂಜಿನಿಯರಿಂಗ್ ಪದವಿ ಪಡೆದಿರುವ ಈ ನಟಿ ನಟನೆ ಹಾಗೂ ಸಂಗೀತದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. 'ಮಹಾನುಭಾವ', 'ಕರ್ಷಣಂ', 'ಗೂಸಿ ಗ್ಯಾಂಗ್','ದಮಯಂತಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದರೆ, 'ಅಣ್ಣಯ್ಯ', 'ಸರಯೂ', 'ರಾಜಕುಮಾರಿ' ಅಂತಹ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.

ನಟ ತ್ರಿವಿಕ್ರಮ್

ಕನ್ನಡದ ಮತ್ತೊಬ್ಬ ನಟ ತ್ರಿವಿಕ್ರಮ್ ಕೂಡ ಈ ಬಾರಿ ಬಿಗ್‌ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ. 'ಪದ್ಮಾವತಿ' ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿರುವ ತ್ರಿವಿಕ್ರಮ್ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ನವರಾತ್ರಿ' ಅನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಟಿಸಿದ 'ಪ್ರೇಮ ಬರಹ' ಹಾಗೇ 'ರಂಗನಾಯಕಿ', 'ಸಕೂಚಿ' ಸಿನಿಮಾದಲ್ಲಿ ನಟಿಸಿದ್ದಾರೆ.

ಧರ್ಮ ಕೀರ್ತಿರಾಜ್

ಯುವ ನಟ ಧರ್ಮ ಕೀರ್ತಿರಾಜ್ ಕೂಡ ಈ ಬಾರಿ ದೊಡ್ಮನೆ ಒಳಗೆ ಹೋಗುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಇಂದು(ಸೆಪ್ಟೆಂಬರ್ 28) ನಡೆಯುವ ರಾಜ-ರಾಣಿ ಗ್ರ್ಯಾಂಗ್ ಫಿನಾಲೆಯಲ್ಲಿ ಕೆಲ ಬಿಗ್‌ಬಾಸ್ ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತದೆ ಎನ್ನಲಾಗ್ತಿದೆ. ಹಾಗಾಗಿ ಕೀರ್ತಿರಾಜ್ ಹೆಸರು ಇಂದೇ ಬಹಿರಂಗ ಆಗುತ್ತಾ ಕಾದು ನೋಡಬೇಕಿದೆ. 'ನವಗ್ರಹ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

More from Filmibeat

English summary
Bigg Boss Kannada 11 these are the confirmed contestants here is the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X