BBK 11: ಬಿಗ್ ಬಾಸ್ ಮನೆಯಲ್ಲಿ ಚುಂಬನದ ಚರ್ಚೆ; ಮೋಕ್ಷಿತಾಗೆ ತ್ರಿವಿಕ್ರಮ್ ಮುತ್ತಿಟ್ಟಿದ್ದು ನಿಜವೇ?

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. 11ನೇ ಸೀಸನ್ ಯಾಕೋ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಲ್ಲಿದೆ. ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ವೀಕ್ಷಕರು ಬೇಸರ ಹೊರ ಹಾಕಿದ್ದರು. ಇನ್ಮುಂದೆ ಬಿಗ್‌ ಬಾಸ್ ನೋಡುವುದಿಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಗದ್ದಲ ಎಬ್ಬಿಸಿದ್ದರು.

ಲಾಯರ್ ಜಗದೀಶ್ ಹೊರ ಬಂದ್ಮೇಲೆ ಕಿರುತೆರೆ ವೀಕ್ಷಕರನ್ನು ಎಂಟರ್‌ಟೈನ್ ಮಾಡುವುದು ಯಾರು? ಅನ್ನೋ ಪ್ರಶ್ನೆನೂ ಎದ್ದಿತ್ತು. ಆದರೆ, ಬಿಗ್ ಬಾಸ್ ಲಾಯರ್ ಜಗದೀಶ್ ಅವರ ಸ್ಥಾನ ತುಂಬುವುದಕ್ಕೆ ಸರಿಗಮಪ ರಿಯಾಲಿಟಿ ಶೋನಲ್ಲಿ ಹಾಡಿ ಜನಪ್ರಿಯನಾಗಿರುವ ಹನುಮಂತು ಅವರನ್ನು ಮನೆಯೊಳಗೆ ಕಳುಹಿಸಿದ್ದಾರೆ. ಹನುಮಂತು ಎಂಟ್ರಿ ಬಿಗ್‌ ಬಾಸ್ ರಂಗೇರುವ ಸಾಧ್ಯತೆಯಿದೆ.

Bigg Boss Kannada 11 Trivikram gave a kiss to Mokshitha what is that matter

ಈ ಮಧ್ಯೆ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ತಮ್ಮ ತಾಕತ್ತು ತೋರಿಸುವುದಕ್ಕೆ ಶತ ಪ್ರಯತ್ನ ಮಾಡುತ್ತಿದ್ದಾರೆ. ಇಷ್ಟೆಲ್ಲ ಕಸರತ್ತುಗಳ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಗಾಸಿಪ್‌ಗಳು ಜೋರಾಗಿಯೇ ಹರಿದಾಡುತ್ತಿವೆ. ಆರಂಭದ ದಿನಗಳಲ್ಲಿ ನಟ ತ್ರಿವಿಕ್ರಮ್ ಹಾಗೂ 'ಪಾರು' ಧಾರಾವಾಹಿಯ ನಟಿ ಮೋಕ್ಷಿತಾ ಪೈ ಅವರ ಮಧ್ಯೆ ಚಿಕ್ಕದೊಂದು ಅಸಮಧಾನ ಮೂಡಿತ್ತು. ಮೋಕ್ಷಿತಾ ಪೈ ಅವರನ್ನು ತ್ರಿವಿಕ್ರಮ್ ಆಗಾಗ ನಾಮಿನೇಟ್ ಮಾಡಿದ್ದೂ ಇದೆ.

ಸದಾ ಮೋಕ್ಷಿತಾ ವಿರುದ್ಧವೇ ಧ್ವನಿ ಎತ್ತುತ್ತಿದ್ದ ತ್ರಿವಿಕ್ರಮ್‌ಗೆ ಮೋಕ್ಷಿತಾ ಮೇಲೆ ಒಲವಾಗಿದೆಯೇ? ಇಂತಹದ್ದೊಂದು ಪ್ರಶ್ನೆ ಮೂಡುವುದಕ್ಕೆ ಕಾರಣ ನಿನ್ನೆಯ (ಅಕ್ಟೋಬರ್ 22) ಎಪಿಸೋಡ್. ತ್ರಿವಿಕ್ರಮ್, ಹಂಸ ಹಾಗೂ ಮಾನಸಾ ಮೂವರಲ್ಲಿ ಒಳ್ಳೆಯ ಬಾಂಡಿಂಗ್ ಬೆಳೆಯುತ್ತಿದೆ. ಹೀಗಾಗಿ ತ್ರಿವಿಕ್ರಮ್ ಅವರೊಂದಿಗೆ ಓಪನ್ ಆಗಿ ಮಾತಾಡುತ್ತಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಕೂಡ ತ್ರಿವಿಕ್ರಮ್ ಇಬ್ಬರ ಬಳಿ ಒಂದು ಗುಟ್ಟನ್ನು ಬಿಟ್ಟು ಕೊಟ್ಟಿದ್ದರು.

Bigg Boss Kannada 11 Trivikram gave a kiss to Mokshitha what is that matter

ಮೋಕ್ಷಿತಾ ಅವರಿಗೆ ಮುತ್ತು ಕೊಟ್ಟಿದ್ದಾಗಿ ಹಂಸ ಹಾಗೂ ಮಾನಸಾ ಅವರ ಮುಂದೆ ತ್ರಿವಿಕ್ರಮ್ ಹೇಳಿದ್ದರು. ಈ ಮಾತನ್ನು ಕೇಳಿ ಹಂಸ ಹಾಗೂ ಮಾನಸ ಶಾಕ್ ಆಗಿದ್ದರು. ಮಾನಸ ಸೀದಾ ಮೋಕ್ಷಿತಾ ಅವರ ಬಳಿ ತ್ರಿವಿಕ್ರಮ್ ಚುಂಬಿಸಿದ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಆ ವೇಳೆ ಶಾಕ್ ಆಗಿದ್ದ ಮೋಕ್ಷಿತಾ ಕಿಸ್ ಕೊಟ್ಟ ವಿಷಯವನ್ನು ನಿರಾಕರಿಸಿದ್ದರು. ಬಳಿಕ ತ್ರಿವಿಕ್ರಮ್ ಇಬ್ಬರಿಗೂ ಈ ವಿಷಯ ಹೇಳಿದರೆ, ರಿಯಾಕ್ಷನ್ ಹೇಗಿರುತ್ತೆ ಎಂದು ತಿಳಿದುಕೊಳ್ಳುವುದಕ್ಕೆ ಹೀಗೆ ಹೇಳಿದ್ದಾಗಿ ಫೂಲ್ ಮಾಡಿದ್ದಾರೆ.

ಇನ್ನು ಲಾಯರ್ ಜಗದೀಶ್ ಮನೆಯಿಂದ ಹೊರ ಹೋದಮೇಲೆ ಮನೆ ಮಂದಿ ಕೊಂಚ ಮಟ್ಟಿಗೆ ನೆಮ್ಮದಿಯಾಗಿದ್ದಾರೆ. ಟಾಸ್ಕ್ ಬಂದಾಗ ಕೂಗಾಡಿ ಕಿರುಚಾಡುತ್ತಿರೋದು ಬಿಟ್ಟರೆ, ಇನ್ನು ಉಳಿದ ಸಮಯದಲ್ಲಿ ಕಾಮಿಡಿ ಮಾಡಿಕೊಂಡು ಮಸ್ತ್ ಆಗಿ ಎಂಜಾಯ್ ಮಾಡಿಕೊಂಡು ಇದ್ದಾರೆ. ಆದ್ರೀಗ ಲಾಯರ್ ಜಗದೀಶ್ ಸ್ಥಾನದಲ್ಲಿ ಹನುಮಂತು ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿ ಕೊಡಿಸಿದ್ದಾರೆ.

ಹನುಮಂತು ಬಂದು ಇನ್ನು ಎರಡು ದಿನ ಆಗಿಲ್ಲ ಆಗಲೇ ಬಿಗ್ ಬಾಸ್‌ ಮನೆ ಸಾಕಾಗಿ ಹೋಗಿದೆ. ಬಿಗ್ ಬಾಸ್ ಮಂದಿ ಕಿರುಚಾಡುವುದನ್ನು ನೋಡಿ ಕಂಗಾಲಾಗಿ ಹೋಗಿದ್ದಾರೆ. ಅದರಲ್ಲೂ ಮನೆಯ ಕ್ಯಾಪ್ಟನ್ ಆಗುತ್ತಿದ್ದಂತೆ ಹನುಮಂತು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದರು. ಬಿಗ್ ಬಾಸ್ ಮಂದಿಯನ್ನು ಹನುಮಂತು ಹೇಗೆ ಮ್ಯಾನೇಜ್ ಮಾಡಬಹುದು? ಎಷ್ಟು ದಿನ ಉಳಿದುಕೊಳ್ಳಬಹುದು? ಅನ್ನೋ ಪ್ರಶ್ನೆ ಎದುರಾಗಿದೆ.

More from Filmibeat

English summary
Bigg Boss Kannada 11 Trivikram gave a kiss to Mokshitha what is that matter:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X