BBK 11: ಬಿಗ್‌ಬಾಸ್‌ನಲ್ಲಿ ಹಲ್‌ಚಲ್ ಎಬ್ಬಿಸಿದ ರಜತ್; ವೈಲ್ಡ್ ಎಂಟ್ರಿ ಸ್ಪರ್ಧಿಗೆ ಒಂದು ವಾರಕ್ಕೆ ಸಿಗ್ತಿರೋ ಸಂಭಾವನೆ ಎಷ್ಟು?
ಬಿಗ್‌ಬಾಸ್ ಕನ್ನಡ ಸೀಸನ್ 11 ಕಿರುತೆರೆ ವೀಕ್ಷಕರನ್ನು ಮತ್ತೆ ಸೆಳೆಯುವುಕ್ಕೆ ಶುರು ಮಾಡಿದೆ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಮನೆ ಒಳಗೆ ಹೋದವರ ಹಾವಳಿ ಹೆಚ್ಚಾಗಿದೆ. ಪ್ರತಿ ದಿನ ಬಿಗ್ ಬಾಸ್ ನೋಡುತ್ತಿರುವ ಕಿರುತೆರೆ ವೀಕ್ಷಕರಿಗೆ ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ಇಬ್ಬರೂ ಉಳಿದ ಸ್ಪರ್ಧಿಗಳನ್ನು ಡಾಮಿನೇಟ್ ಮಾಡುತ್ತಿದ್ದಾರೆ ಅಂತ ಅನಿಸುವುದಕ್ಕೆ ಶುರುವಾಗಿದೆ.
ಅದರಲ್ಲೂ ಅಪ್ಪಟ ದರ್ಶನ್ ಅಭಿಮಾನಿ ಅಂತಲೇ ಗುರುತಿಸಿಕೊಂಡಿರುವ ರಜತ್ ಬಿಗ್‌ಬಾಸ್ ಮನೆಯೊಳಗೆ ಹಲ್‌ಚಲ್ ಎಬ್ಬಿಸಿದ್ದಾರೆ. ರಜತ್ ಹಾವಳಿಗೆ ಈಗಾಗಲೇ ಮನೆಯೊಳಗೆ 50 ದಿನಗಳನ್ನು ಕಳೆದಿರುವ ಸ್ಪರ್ಧಿಗಳು ತಂಡಾ ಹೊಡೆದಿದ್ದಾರೆ. ರಜತ್ ಆಕ್ರಮಣಕಾರಿ ಆಟಕ್ಕೆ ತ್ರಿವಿಕ್ರಮ್ ಹಾಗೂ ಉಗ್ರಂ ಮಂಜು ತಿರುಗೇಟು ಕೊಡುತ್ತಿದ್ದಾರೆ.

ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರಜತ್ ಕಿರುತೆರೆ ವೀಕ್ಷಕರ ಕಣ್ಣಿಗೆ ಬಿದ್ದಿದ್ದಾರೆ. ಲಾಯರ್ ಜಗದೀಶ್ ಹೊರಬಂದ್ಮೇಲೆ ಹನುಮಂತನ್ನು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಕಳುಹಿಸಲಾಗಿತ್ತು. ಅದಾದ ಬಳಿಕ ಶೋಭಾ ಶೆಟ್ಟಿ ಹಾಗೂ ರಜತ್ ಮನೆಯೊಳಗೆ ಹಾವ ಎಬ್ಬಿಸಿದ್ದಾರೆ. ಸದ್ಯ ಸುದ್ದಿ ಮಾಡುತ್ತಿರುವ ರಜತ್‌ಗೆ ಒಂದು ವಾರಕ್ಕೆ ಎಷ್ಟು ಸಂಭಾವನೆ ಸಿಗುತ್ತಿದೆ?
ರಜತ್ ಕಿಶನ್ ಬಿಗ್‌ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಂತೆ ಮನೆಯ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಹಾವ- ಭಾವ, ಮಾತುಗಳು ಮನೆ ಮಂದಿಯನ್ನು ಕಿರಿ ಕಿರಿ ಮಾಡಿರುವುದಂತೂ ನಿಜ. ಅಷ್ಟೇ ಅಲ್ಲ ಕಿಚ್ಚ ಸುದೀಪ್ ಕೂಡ ರಜತ್‌ಗೆ ಮೊದಲ ವಾರವೇ ವಾರ್ನಿಂಗ್ ಕೊಟ್ಟಿದ್ದರು. ಆದರೂ, ರಜತ್ ಉಳಿದ ಸ್ಪರ್ಧಿಗಳಿಗೆ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ.

ಆರಂಭದಲ್ಲಿಯೇ ರಜತ್ ಕಿಶನ್ ಹಾಗೂ ಗೋಲ್ಡ್ ಸುರೇಶ್ ಮಧ್ಯೆ ಕಿತ್ತಾಟ ನಡೆದಿತ್ತು. ರಜತ್ ವರ್ತನೆಯನ್ನು ಗೋಲ್ಡ್ ಸುರೇಶ್ ಖಂಡಿಸಿದ್ದರು. ಇನ್ನು ರಜತ್ ಪದ ಬಳಕೆಯನ್ನು ಮೋಕ್ಷಿತಾ ಪೈ, ಹನುಮಂತ ಹಾಗೂ ಶೋಭಾ ಶೆಟ್ಟಿ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮೊದಲ ವಾರದಿಂದಲೇ ಮನೆಯೊಳಗೆ ಸಂಚಲನ ಸೃಷ್ಟಿಸಿರುವ ರಜತ್ ಒಂದು ವಾರಕ್ಕೆ ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ.
ಕಿರುತೆರೆಯ ಮೂಲಗಳ ಪ್ರಕಾರ ರಜತ್‌ರನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸುವುದಕ್ಕೆ ಎರಡು ಮೂರು ವಾರಗಳಿಂದಲೇ ಮಾತುಕಥೆ ನಡೆಯುತ್ತಿತ್ತು. ರಜತ್ ಒಂದು ಡಿಮ್ಯಾಂಡ್ ಇಟ್ಟಿದ್ದರೆ, ಕಲರ್ಸ್ ಕನ್ನಡದ ಪ್ರಸ್ತಾವನೆಯೇ ಬೇರೆ ಇತ್ತು. ರಜತ್ ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ 1.20 ಲಕ್ಷ ರೂಪಾಯಿ ಸಂಭಾವನೆ ಕೇಳಿದ್ದರು. ಆದರೆ, ಕಲರ್ಸ್ ಕನ್ನಡ 80 ಸಾವಿರ ನೀಡುವುದಾಗಿ ಆಫರ್ ಕೊಟ್ಟಿತ್ತು. ಈ ಬಗ್ಗೆ ಒಂದಿಷ್ಟು ದಿನಗಳ ಕಾಲ ಚರ್ಚೆ ಕೊನೆಗೆ ಒಂದು ಅಮೌಂಟ್‌ಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ರಜತ್‌ಗೆ 90 ರಿಂದ 1 ಲಕ್ಷ ರೂ. ವಾರಕ್ಕೆ ಸಂಭಾವನೆ ರೂಪದಲ್ಲಿ ಸಿಗುತ್ತಿದೆ ಎನ್ನಲಾಗಿದೆ.
ಇದು ಟಿವಿ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿರುವ ಸುದ್ದಿ. ಈ ಅಂಕಿ ಅಂಶಗಳನ್ನು ರಜತ್ ಕಡೆಯವರಾಗಲಿ, ಕಲರ್ಸ್ ಕನ್ನಡ ಆಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ರಜತ್ ಸದ್ಯ ಬಿಗ್‌ಬಾಸ್‌ನಲ್ಲಿ ಹವಾ ಎಬ್ಬಿಸಿರುವುದಂತೂ ನಿಜ. ಇವರ ಆಟಕ್ಕೆ ಮನೆ ಮಂದಿಯೇ ಸುಸ್ತಾಗಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಮೈಂಡ್ ಗೇಮ್‌ಗಳನ್ನು ನೋಡುವುದಕ್ಕೆ ಸಿಗಬಹುದು.


Click it and Unblock the Notifications











