BBK 11: ವಿಚಿತ್ರ ಬೇಡಿಕೆ ಇಟ್ಟ ಹನುಮಂತ; ಬಿಗ್‌ ಬಾಸ್ ಬಂದ ಮುಕ್ಳಪ್ಪ ತಾಳಿಕಟ್ಟು ಅನ್ಬೇಕಂತೆ!

ಈ ಬಾರಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಹಲವು ಕಾರಣಗಳಿಗೆ ಸ್ಪೆಷಲ್. ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಸ್ಪರ್ಧಿಯೊಬ್ಬನಿಗೆ ಬಿಗ್ ಬಾಸ್ ಕಿರೀಟ ಧಕ್ಕಿದೆ. ಆತನೇ ಹಳ್ಳಿ ಹೈದ ಹನುಮಂತ. ಬಿಗ್ ಬಾಸ್ ಮನೆಯೊಳಗೆ ಇದ್ದಷ್ಟು ದಿನವೂ ವೀಕ್ಷಕರನ್ನು ತನ್ನ ಸಹಜ ಸ್ವಭಾವದಿಂದಲೇ ಮನಗೆದ್ದಿದ್ದರು.

ಬಿಗ್ ಬಾಸ್ ಕನ್ನಡ 11 ರ ನಾಲ್ಕನೆ ವಾರಕ್ಕೆ ಎಂಟ್ರಿ ಕೊಟ್ಟಿದ್ದ ಹನುಮಂತ ಘಟಾನುಘಟಿಗಳಿಗೆ ಟಕ್ಕರ್ ಕೊಡುತ್ತಾ ಮುಂದೆ ಸಾಗಿದ್ದ. ಹಾಡುವುದಕ್ಕೂ ಸೈ, ಟಾಸ್ಕ್‌ಗಳಲ್ಲೂ ಜೈ ಅಂತ ಅಂಜದೆ ಆಡಿ ಗೆದ್ದಿದ್ದು ಬಂದಿದ್ದಾನೆ. ಆತನ ಮುಗ್ಧತೆ ಕಿರುತೆರೆ ವೀಕ್ಷಕರಿಗೆ ಮೆಚ್ಚುಗೆ ಆಗಿತ್ತು. ಈ ಬಾರಿ ವೀಕ್ಷಕರೇ ಹನುಮಂತ ಗೆಲ್ಲಬೇಕು ಅಂತ ಪಟ್ಟು ಹಿಡಿದು ಕೂತಿದ್ದರು. ಕೊನೆಗೂ ಹನುಮಂತ ಗೆದ್ದಿದ್ದಾರೆ.

Bigg Boss Kannada 11 winner Hanumantha wants Bigg Boss to come to his wedding

ಬಿಗ್ ಬಾಸ್ ಕನ್ನಡ ಸೀಸನ್ 11 ಗೆದ್ಮೇಲೆ ಹನುಮಂತನಿಗೆ ವಿಚಿತ್ರ ಆಸೆಯೊಂದು ಹುಟ್ಟಿಕೊಂಡಿದೆ. ಅದಕ್ಕೆ ಬಿಗ್‌ ಬಾಸ್ ಮುಂದೆನೇ ಒಂದು ಬೇಡಿಕೆ ಇಟ್ಟಿದ್ದಾನೆ. ಬಿಗ್ ಬಾಸ್ ಯಾರು ಅಂತ ತೋರಿಸಬೇಕು. ಅವರು ತನ್ನ ಮದುವೆಗೆ ಬರಬೇಕು ಅಂತ ಕೇಳಿಕೊಂಡಿದ್ದಾನೆ. ಅಷ್ಟಕ್ಕೂ ಹಳ್ಳಿ ಹೈದ ಹನುಮಂತನ ಈ ಬೇಡಿಕೆ ಈಡೇರುತ್ತಾ? ಹನುಮಂತ ಕಲರ್ಸ್ ಕನ್ನಡಕ್ಕೆ ಇಟ್ಟ ಬೇಡಿಕೆ ಏನು? ಅಂತ ನೋಡುವುದಾದರೆ..

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಅಲ್ಟಿಮೆಟ್ ಮನರಂಜನೆ ಕೊಟ್ಟಿದ್ದು ಹನುಮಂತ. ಇಷ್ಟು ದಿನ ಸರಿಗಮಪದ ಹನುಮಂತ ಅಂತಲೇ ಅಂದುಕೊಂಡಿದ್ದರು. ಹನುಮಂತ ಹಳ್ಳಿ ಹೈದ, ಹಾಡು ಹೇಳುತ್ತಾನೆ ಅಂತಷ್ಟೇ ಭಾವಿಸಿದ್ದರು. ಆದರೆ, ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಹನುಮಂತ ಸಖತ್ ಎಂಟರ್‌ಟೈನರ್ ಅನ್ನೋದು ಅರಿಗೆ ಬಂದಿತ್ತು. ಅದು ಮನೆಯೊಳಗಷ್ಟೇ ಅಲ್ಲ. ಬಿಗ್ ಬಾಸ್ ಗೆದ್ದು ಮನೆಯಿಂದ ಆಚೆ ಬಂದ್ಮೇಲೂ ಅದೇ ಮುಗ್ಧತೆಯಿಂದ ಚೇಷ್ಟೆ ಮಾತುಗಳನ್ನು ಆಡಿ ರಂಜಿಸಿದ್ದಾರೆ.

ಬಿಗ್ ಬಾಸ್ ಗೆದ್ದ ಮೇಲೆ ಕಲರ್ಸ್ ಕನ್ನಡ ಮೂವರು ಸ್ಪರ್ಧಿಗಳನ್ನು ಇಟ್ಟುಕೊಂಡು ಪತ್ರಿಕಾ ಗೋಷ್ಠಿ ನಡೆಸಿದ್ದರು. ಈ ವೇಳೆ ಇನ್ನೇನು ಪತ್ರಿಕಾಗೋಷ್ಠಿ ಮುಗಿಯಬೇಕು ಆ ವೇಳೆ ಹನುಮಂತ ಕಲರ್ಸ್ ಕನ್ನಡಕ್ಕೆ ಇಟ್ಟಿದ್ದ ಬೇಡಿಕೆ ಹಾಗೂ ಆಸೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತ್ತು.

"ನನ್ನದೊಂದು ಪ್ರಶ್ನೆ ಪ್ರಕಾಶ್ ಸರ್‌ಗೆ.. ಬಿಗ್ ಬಾಸ್ ಮಾತಾಡುತ್ತಿದ್ದರಲ್ಲ ಅವರನ್ನು ಪರಿಚಯ ಮಾಡಿಸಿಕೊಡಿ. ಮದುವೆ ಮಂತ್ರ ಅವರ ಬಾಯಿಯಲ್ಲೇ ಹೇಳಿಸಿಬಿಡೋಣ. ಹನುಮಂತ ಈಗ ತಾಳಿ ಕಟ್ಟುವ ಸಮಯ. ಮುಕ್ಳಿ ಮುಚ್ಕೊಂಡು ತಾಳಿಕಟ್ಟು ಎನ್ನುತ್ತಾರೆ" ಎಂದು ತನ್ನನ್ನು ತಾನೇ ಕಾಮಿಡಿಕೊಂಡು ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇಂತಹದ್ದೇ ಚಿಕ್ಕ ಪುಟ್ಟ ಕಾಮಿಡಿ ಮಾಡುತ್ತಾ ಕನ್ನಡಿಗರ ಮನಗೆದ್ದು ಬೀಗಿದ್ದಾರೆ.

ಸದ್ಯ ಬಿಗ್ ಬಾಸ್ ಗೆದ್ದ ಮೇಲೆ ಬಂದ ಹಣದಿಂದ ಹನುಮಂತ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ. ಹಾಗೇ ಮನೆ ರಿಪೇರಿ ಮಾಡಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿರುವ ಹನುಮಂತ ಮುಂದಿನ ಹಾದಿ ಏನು? ಭವಿಷ್ಯದಲ್ಲಿ ಹನುಮಂತನ ಭವಿಷ್ಯ ಹೇಗಿರುತ್ತೆ? ಈ ಜನಪ್ರಿಯತೆಯನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೆ? ವೃತ್ತಿಯಾಗಿ ಏನನ್ನು ಆಯ್ಕೆ ಮಾಡಿಕೊಳ್ಳಬಹುದು? ಅನ್ನೋ ಕುತೂಹಲ ಈಗ ಎಲ್ಲರಲ್ಲೂ ಶುರುವಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X