BBK 11: ಬಿಗ್ ಬಾಸ್ ಕನ್ನಡ 11 ಗೆದ್ದು ಬೀಗಿದ ಹನುಮಂತ; ವೇದಿಕೆ ಮೇಲೆ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 11ರ ಮುಕ್ತಾಯ ಗೊಂಡಿದೆ. ಅದ್ಧೂರಿಯಾಗಿ ನಡೆದ ಗ್ರ್ಯಾಂಡ್ ಫಿನಾಲೆ ಕಿರುತೆರೆ ವೀಕ್ಷಕರಿಗೆ ಸಖತ್ ಕಿಕ್ ಕೊಟ್ಟಿದೆ. ಆರು ಮಂದಿ ಸ್ಪರ್ಧಿಗಳ ಪೈಕಿ ಯಾರು ಟ್ರೋಫಿ ಗೆಲ್ಲುತ್ತಾರೆ ಅನ್ನೋ ಕುತೂಹಲ ಕ್ಷಣ ಕ್ಷಣದಲ್ಲೂ ಕಾಣಿಸುತ್ತಿತ್ತು. ಕೊನೆಯಲ್ಲಿ ಉಳಿದುಕೊಂಡ ಆರು ಮಂದಿಯಲ್ಲಿ ಯಾರು ಗೆಲ್ಲುತ್ತಾರೆ? ಅನ್ನೋ ಎಲ್ಲೂ ಕ್ಯೂರಿಯಾಸಿಟಿಗೂ ತೆರೆಬಿದ್ದಿದೆ.
ಗ್ರ್ಯಾಂಡ್ ಫಿನಾಲೆಯಲ್ಲಿ ಆರು ಮಂದಿ ಇದ್ದರು. ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ ಪೈ, ಭವ್ಯಾ ಗೌಡ, ಹನುಮಂತ ಭರ್ಜರಿ ಪೈಪೋಟಿ ಕೊಟ್ಟಿದ್ದರು. ಭವ್ಯಾ ಗೌಡ ಐದನೇ ರನ್ನರ್‌ಅಪ್ ಆಗಿದ್ದರೆ, ಉಗ್ರಂ ಮಂಜು 4ನೇ ರನ್ನರ್ ಅಪ್ ಹಾಗೂ 3ನೇ ರನ್ನರ್ ಅಪ್ ಆಗಿ ಮೋಕ್ಷಿತಾ ಪೈ ಹೊರ ಬಂದಿದ್ದರು. ಉಳಿದ ಮೂವರಲ್ಲಿ ಯಾರು ವಿನ್ನರ್ ಅನ್ನೋದು ಸಖತ್ ಕಿಕ್ ಕೊಟ್ಟಿತ್ತು.

ಕೊನೆಯ ವಾರದಿಂದಲೂ ಈ ಬಾರಿ ಬಿಗ್ ಬಾಸ್ ಗೆಲ್ಲೋದು ಹನುಮಂತು ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಬಿಗ್ ಬಾಸ್ ಗೆಲ್ಲುವ ವ್ಯಕ್ತಿಗೆ 5 ಕೋಟಿಗೂ ಅಧಿಕ ವೋಟ್‌ಗಳು ಬಿದ್ದಿವೆ ಎಂದು ಕಿಚ್ಚ ಸುದೀಪ್ ಹೇಳಿದಾಗಲೂ ಅದನ್ನು ಹನುಮಂತುಗೆ ಅಂತಲೇ ಚರ್ಚೆ ಆಗಿತ್ತು. ನಿರೀಕ್ಷೆಯಂತೆ ಬಿಗ್ ಬಾಸ್ ಕನ್ನಡ 11 ಗೆದ್ದು ಬೀಗಿದ್ದಾರೆ ಹಳ್ಳಿ ಹೈದ ಹನುಮಂತ.
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದ ಹನುಮಂತ ತನ್ನ ಮುಗ್ಧತೆಯಿಂದಲೇ ವೀಕ್ಷಕರ ಮನಸ್ಸು ಗೆಲ್ಲುತ್ತಾ ಮುಂದೆ ಸಾಗಿದ್ದರು. ಲಾಯರ್ ಜಗದೀಶ್ ಹೊರಗೆ ಬರುತ್ತಿದ್ದಂತೆ ಈ ಬಾರಿಯ ಬಿಗ್ ಬಾಸ್ ಮುಗಿದೇ ಹೋಯ್ತು ಅಂತಲೇ ಭಾವಿಸಿದ್ದರು. ಆದರೆ, ಅವರ ಜಾಗಕ್ಕೆ ಹನುಮಂತು ಅನ್ನು ಮನೆಯೊಳಗೆ ಕಳುಹಿಸಿದ್ದರು. ಬಳಿಕ ಬಿಗ್ ಬಾಸ್ ಗತಿಯನ್ನು ಬದಲಿಸಿದ್ದರು.
ತಮ್ಮದೇ ಶೈಲಿಯಲ್ಲಿ ಆಟ ಆಡಿಕೊಂಡು ಬಂದಿದ್ದ ಹನುಮಂತು ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಹನುಮಂತು ಟ್ರೆಂಡಿಂಗ್‌ನಲ್ಲಿ ಇರುತ್ತಿದ್ದರು. ಕೊನೆ ಹಂತದಲ್ಲಿ ತ್ರಿವಿಕ್ರಮ್ ಹಾಗೂ ಹನುಮಂತು ನಡುವೆ ಟಫ್ ಫೈಟ್ ಇತ್ತು. ಆದರೆ, ಜನರು ಹನುಮಂತುಗೆ ಆಶೀರ್ವಾದ ಮಾಡಿದ್ದರು. ಕಿಚ್ಚ ಸುದೀಪ್ ಹನುಮಂತು ವಿನ್ನರ್ ಎಂದು ಘೋಷಿಸಿದ್ದರು.
ಬಿಗ್ ಬಾಸ್‌ನವರು ಕರೆದಾಗ ಗೆಲ್ಲುತ್ತೇನೆ ಎಂದು ಬಂದಿರಲಿಲ್ಲ. ಮನೆಯೊಳಗೆ ಹೋಗಿ ಸುಮ್ಮನೆ ಮಜಾ ಮಾಡಿಕೊಂಡು ಬರೋಣ ಅಂತ ಬಂದಿದ್ದೆ. ಆದರೆ, ಜನರು ಇಲ್ಲಿವರೆಗೂ ಕರೆದುಕೊಂಡು ಬಂದು ನನ್ನನ್ನು ಗೆಲ್ಲಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. ಹನುಮಂತು ಅವರಿಗೆ ಸುಮಾರು 5 ಕೋಟಿಗೂ ಅಧಿಕ ವೋಟ್‌ಗಳನ್ನು ಬಿದ್ದಿವೆ. ಹಾಗೇ ರನ್ನರ್ ಅಪ್ ತ್ರಿವಿಕ್ರಮ್‌ಗೆ 2 ಕೋಟಿ ವೋಟ್ ಬಿದ್ದಿದೆ.


Click it and Unblock the Notifications











