BBK 12: ಈ ಬಾರಿ ಬಿಗ್‌ಬಾಸ್ ಗೆಲ್ಲೋದು ಇಬ್ಬರು; ಮೂರನೇ ವಾರವೇ ವಿನ್ನರ್ ಯಾರು ಅಂತ ಗೊತ್ತಾಗುತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಮೂರು ದಿನಗಳಾಗಿವೆ. ಮನೆಯೊಳಗಿರುವ 18 ಮಂದಿ ಸ್ಪರ್ಧಿಗಳು ಈಗೀಗ ಬಿಗ್ ಬಾಸ್ ಮನೆಗೆ ಹೊಂದಿಕೊಳ್ಳುತ್ತಿದ್ದಾರೆ. ಹಾಗೇ ನಿಧಾನವಾಗಿ ಮನೆಯೊಳಗೆ ಕಿತ್ತಾಟಗಳು ಶುರುವಾಗಿದೆ. ಒಂಟಿ ಹಾಗೂ ಜಂಟಿ ಸದಸ್ಯರ ನಡುವೆ ವೈಮನಸ್ಸು ಶುರುವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇದು ತಾರಕಕ್ಕೇರುವ ಸಾಧ್ಯತೆಯಿದೆ. ಮೊದಲೆರಡು ದಿನ ಜಾಲಿ ಜಾಲಿಯಾಗಿದ್ದ ಸದಸ್ಯರು ವೈಲೆಂಟ್ ಆಗುವುದಕ್ಕೆ ಶುರುವಾಗಿದ್ದಾರೆ.
ಬಿಗ್ ಬಾಸ್ ಕೊಟ್ಟ ಟಾಸ್ಕ್‌ಗಳನ್ನು ಒಂಟಿ ತಂಡದ ಸದಸ್ಯರು ಹಾಗೂ ಜಂಟಿ ತಂಡದ ಸದಸ್ಯರು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿರುವ 18 ಮಂದಿಗೂ ಕ್ಲಾಸ್ ತೆಗೆದುಕೊಂಡಿದ್ದರು. ಮೊದಲ ಮೂರು ವಾರದ ಗಡುವು ನೀಡಿದ್ದು, ಎರಡು ಫಿನಾಲೆ ನಡೆಯುತ್ತೆ ಎಂದು ಹೇಳಿದ್ದಾರೆ. ಇದು ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಕಿಚ್ಚ ಹಚ್ಚುವುದಕ್ಕೆ ಶುರುವಾಗಿದೆ.

ಬಿಗ್ ಬಾಸ್ ಮನೆಯೊಳಗೆ ಏನು ನಡೀತಿದೆ ಅನ್ನೋದನ್ನು ಹೊರತು ಪಡಿಸಿದರೆ, ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಸರ್ಪ್ರೈಸ್ ಸಿಕ್ಕಿದೆ. ಸೈಲೆಂಟ್ ಆಗಿ ಸೇಫ್ ಗೇಮ್ ಆಡುತ್ತಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಸಖತ್ ಚಮಕ್ ಕೊಟ್ಟಿದೆ. ಅದೇ ವೀಕ್ಷಕರಲ್ಲಿ ಕುತೂಹಲವನ್ನು ಕೆರಳಿಸಿದೆ. ಇಂದಿನ (ಸೆಪ್ಟೆಂಬರ್ 30) ಎಪಿಸೋಡ್‌ನಲ್ಲಿ ಬಿಗ್ ಬಾಸ್ ನೀಡಿದ ಈ ಸರ್ಪ್ರೈಸ್‌ನ ಹೈಲೈಟ್ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಮಿಂಚಿನ ಓಟ ಶುರು
ಬಿಗ್ ಬಾಸ್ ಅಸಲಿ ಕತೆ ಶುರುವಾಗಿ ಮೂರು ದಿನಗಳು ಆಗಿವೆ. ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೊಂದಾಣಿ ಮಾಡುವುದೇ ಆಗಿದೆ. ಈಗಾಗಲೇ ಹಲವು ಬಾರಿ ಬಿಗ್ ಬಾಸ್ ಮನೆ ಮಂದಿಗೆ ಎಚ್ಚರಿಕೆಗಳನ್ನು ಕೊಟ್ಟಿತ್ತು. ಆದರೂ ಸುಧಾರಿಸಿಕೊಳ್ಳದ ಮನೆ ಮಂದಿಗೆ ಬಿಗ್ ಬಾಸ್ ಮಿಂಚಿನ ಓಟ ಶುರುವಾಗಿ ಮೂರು ದಿನಗಳಾಗಿದೆ ಎಂದು ಸಖತ್ ಚಮಕ್ ಕೊಟ್ಟಿದೆ. ಈಗ ಸ್ಪರ್ಧಿಗಳು ಪೈಪೋಟಿಗೆ ಬಿದ್ದು ಆಟ ಆಡುವುದಕ್ಕೆ ಶುರು ಮಾಡಿದ್ದಾರೆ.
ಮೂರು ವಾರ ಕ್ಯಾಪ್ಟನ್ ಇಲ್ಲ
ಬಿಗ್ ಬಾಸ್ ಕನ್ನಡ 12ನೇ ಸೀಸನ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಲೇ ಇದೆ. ಆದರೆ, ಮೂರನೇ ದಿನ ಸ್ಪರ್ಧಿಗಳಿಗೆ ಮೂರು ಟ್ವಿಸ್ಟ್ ಸಿಕ್ಕಿವೆ. ಅದೇನಂದ್ರೆ, ಬಿಗ್ ಬಾಸ್ ಮನೆಯಲ್ಲಿ ಇದೇ ಮೊದಲ ಬಾರಿಗೆ ಎರಡು ಫಿನಾಲೆ ಇರುತ್ತೆ. ಮೂರು ವಾರಗಳ ಬಳಿಕ ಬಿಗ್ ಎಲಿಮಿನೇಷನ್ ಇರುತ್ತೆ. ಒಬ್ಬರೇ ಮನೆಯಿಂದ ಹೊರ ಹೋಗಬಹುದು. ಇಲ್ಲಾ ಗುಂಪು ಗುಂಪಾಗಿ ಎಲಿಮಿನೇಷನ್ ಆಗಬಹುದು. ಹಾಗೇ ಈ ಮೂರು ವಾರಗಳ ವರೆಗೂ ಬಿಗ್ ಬಾಸ್‌ನಲ್ಲಿ ಕ್ಯಾಪ್ಟನ್ ಅನ್ನೋ ಕಾನ್ಸೆಪ್ಟ್ ಇರೋದಿಲ್ಲ.

ಇಬ್ಬರು ವಿನ್ನರ್
ಇಂದಿನ ಸಂಚಿಕೆಯ ಬಿಗ್ ಟ್ವಿಸ್ಟ್ ಅಂದರೆ, 12ನೇ ಸೀಸನ್‌ನಲ್ಲಿ ಒಬ್ಬರಲ್ಲ ಇಬ್ಬರು ಬಿಗ್ ಬಾಸ್ ಟ್ರೋಫಿಯನ್ನು ಗೆಲ್ಲಬಹುದು. ಇದು ಬಿಗ್ ಬಾಸ್ ಸ್ಪರ್ಧಿಗಳ ಮುಖದಲ್ಲಿ ಸಂತಸವನ್ನು ಮೂಡಿಸಿದೆ. ಆದರೆ, ಮೂರು ವಾರಗಳ ಬಳಿಕ ಬಿಗ್ ಬಾಸ್ ಮನೆಯಲ್ಲಿ ಏನು ನಡೆಯುತ್ತೆ ಅನ್ನೋ ಆತಂಕ ಕೂಡ ಇದೆ. ಮೂರನೇ ದಿನ ಬಿಗ್ ಬಾಸ್ ಚಮಕ್ ಕೊಟ್ಮೇಲೆ ಸ್ಪರ್ಧಿಗಳು ಚುರುಕಾಗಿದ್ದಾರೆ.
ಮನೆಯೊಳಗೆ ಅಶ್ವಿನಿ ಪ್ರಾಬಲ್ಯ
ಮೊದಲ ಮೂರು ದಿನಗಳು ಸೈಲೆಂಟ್ ಆಗಿದ್ದ ಬಿಗ್ ಬಾಸ್ ಮನೆಯಲ್ಲಿ ಸದ್ದು ಕೇಳಿಸುತ್ತಿದೆ. ಇದೇ ಮೊದಲ ಬಾರಿಗೆ ಅಶ್ವಿನಿ ಜಂಟಿ ಜೋಡಿ ಕಾವ್ಯ ಹಾಗೂ ಗಿಲ್ಲಿ ನಟನ ಮೇಲೆ ಸಿಡಿದೆದ್ದಿದ್ದಾರೆ. ಇಬ್ಬರೂ ಅವಾಜ್ ಹಾಕಿ ಗದರಿಸಿದ್ದಾರೆ. ಈ ಮೂವರ ನಡುವೆ ವಾದ-ವಿವಾದಗಳು ಆದವು. ಬಳಿಕ ಅಶ್ವಿನಿಗೆ ಕ್ಷಮೆ ಕೇಳಿ ಅಲ್ಲಿಂದ ನಿರ್ಗಮಿಸಿದ್ದಾರೆ. ಕೊನೆಯಲ್ಲಿ ಚಿಕ್ಕದಾದ ಒಂದು ಟಾಸ್ಕ್ ಕೂಡ ಇತ್ತು.


Click it and Unblock the Notifications











