BBK 12: ಅಶ್ವಿನಿ ಗೌಡ Vs ಅಶ್ವಿನಿ;ಯೋಗ್ಯತೆ ಇದ್ದರೆ ಆಟ ಆಡ್ಬೇಕು ಅಂತ ಅಶ್ವಿನಿ ಮೇಲೆ ಸಮರ ಸಾರಿದ ಅಶ್ವಿನಿ
ಬಿಗ್ ಬಾಸ್ ಕನ್ನಡ ಸೀಸನ್ 12 ಮೊದಲ ವಾರ ಹಂಗೋ ಹಿಂಗೋ ಕಳೆದು ಹೋಯ್ತು. ಮನೆ ಮಂದಿಗೆ ಸೀಸನ್ 12ರ ಗಂಭೀರ ನಡೆಯ ಬಗ್ಗೆ ಹೇಳಿ ಹೇಳಿ ಸುಸ್ತಾಗಿ ಹೋಗಿದ್ದರು. ಎಷ್ಟು ಹೇಳಿದರೂ ಎಚ್ಚೆತ್ತಿಕೊಳ್ಳದ ಸದಸ್ಯರಿಗೆ ಈಗ ಬಿಸಿ ಮುಟ್ಟಿದೆ. ಮೊದಲ ವಾರವೇ ಡಬಲ್ ಎಲಿಮಿನೇಷನ್‌ನಲ್ಲಿ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್ ಹೊರಬೀಳುತ್ತಿದ್ದಂತೆ ಮನೆ ಮಂದಿ ಅಲರ್ಟ್ ಆಗಿದ್ದಾರೆ.
ಕಳೆದ ಮೂರು ನಾಲ್ಕು ದಿನಗಳಿಂದ ಬಿಗ್ ಬಾಸ್ ಸದ್ದು ಗದ್ದಲಗಳು ಕೇಳಿಸುವುದಕ್ಕೆ ಶುರುವಾಗಿದೆ. ಮನೆ ಮಂದಿ ಅಗ್ರೆಸಿವ್ ಆಗುತ್ತಿದ್ದಾರೆ. ಪರಸ್ಪರ ಕಿತ್ತಾಟ ಹಾಗೂ ಗುದ್ದಾಟದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಒಂಟಿ ಹಾಗೂ ಜಂಟಿ ತಂಡಗಳು ಬದಲಾಗಿವೆ. ಆರಂಭದಲ್ಲಿ ಎಂಟ್ರಿ ಕೊಟ್ಟ ತಂಡಗಳು ಈಗಿಲ್ಲ. ಒಂಟಿ ಮಂದಿ ಜಂಟಿಯಾಗಿದ್ದಾರೆ. ಜಂಟಿಯಾಗಿದ್ದವರು ಒಂಟಿಯಾಗಿದ್ದಾರೆ.

ವೀಕೆಂಡ್ ಮುಗಿಸಿ, ಕಿಚ್ಚನ ಕೈಯಿಂದ ಒಂದಿಷ್ಟು ಬೈಸಿಕೊಂಡು, ಒಂದಿಷ್ಟು ಹೊಗಳಿಸಿಕೊಂಡು ಈ ಎರಡು ತಂಡಗಳೂ ಹೊಸ ಟಾಸ್ಕ್‌ಗಳಿಗೆ ರೆಡಿಯಾಗಿವೆ. ಈ ಹಂತದಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೆಲವರು ರೋಷಾಗ್ನಿಯಾಗಿದ್ದಾರೆ. ಮತ್ತೆ ಕೆಲವರು ಇದನ್ನೆಲ್ಲ ನೋಡಿ ಸೈಲೆಂಟ್ ಆಗಿದ್ದಾರೆ. ಸದ್ಯಕ್ಕೀಗ ಬಿಗ್ ಬಾಸ್ ಬಿಟ್ಟಿರುವ ಪ್ರೋಮೋದಲ್ಲಿ ಅಶ್ವಿನಿ ಗೌಡ Vs ಅಶ್ವಿನಿ ನಡುವೆ ಜಟಾಪಟಿ ಶುರುವಾಗಿದೆ. ಮಂಗಳವಾರದ (ಅಕ್ಟೋಬರ್ 7) ಮೊದಲ ಪ್ರೋಮೋ ಹೈಲೈಟ್ ಏನು ಅಂತ ನೋಡೋಣ.
ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್‌ಗಳು ಕಿಕ್ ಕೊಡುವುದಕ್ಕೆ ಶುರುವಾಗಿವೆ. ಮನೆ ಸದಸ್ಯರ ನಡುವೆ ಜಟಾಪಟಿ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಅಶ್ವಿನಿ ಗೌಡ ಹಾಗೂ ನಟ ಗಿಲ್ಲಿ ಮಧ್ಯೆ ಕಿತ್ತಾಟ ನಡೆಯುತ್ತಿತ್ತು. ಅದ್ರೀಗ ಮತ್ತೊಬ್ಬ ಸದಸ್ಯೆ ಅಶ್ವಿನಿ ಕಡೆಗೆ ಶಿಫ್ಟ್ ಆಗಿದೆ. ಟಾಸ್ಕ್ ಒಂದರಲ್ಲಿ ಚಿಕ್ಕದೊಂದು ವಿಷಯಕ್ಕೆ ಇವರಿಬ್ಬರೂ ಕಿತ್ತಾಡಿಕೊಂಡಿದ್ದಾರೆ.
ಈಗಾಗಲೇ ರಿಲೀಸ್ ಮಾಡಿರುವ ಪ್ರೋಮೊದಲ್ಲಿ ಅಶ್ವಿನಿ ವರ್ಸಸ್ ಅಶ್ವಿನಿ ಅನ್ನೋದು ಗೊತ್ತಾಗಿದೆ. ಮೇಲ್ನೋಟಕ್ಕೆ ನೀರಿನ ಬಾಟಲಿ ವಿಚಾರಕ್ಕೆ ಕಿತ್ತಾಡಿಕೊಂಡಿರೋದು ಗೊತ್ತಾಗುತ್ತಿದೆ. ಅಶ್ವಿನಿ ಗೌಡ ಡೈನಿಂಗ್ ಟೇಬಲ್ ಮೇಲಿದ್ದ ಬಾಟಲಿಯನ್ನು ಎತ್ತಿಕೊಂಡು ಹೋದಾಗ ಈ ಗಲಾಟೆ ಶುರುವಾಗಿತ್ತು. ತಾಕತ್ತಿದ್ದರೆ ಟಚ್ ಮಾಡು ನೋಡೋಣ ಅಂತ ಅಶ್ವಿನಿ ಗೌಡ. ಇವೆಲ್ಲ ಇಟ್ಕೊಳ್ಬೇಡಿ ಅಂತ ಇನ್ನೊಬ್ಬರು ಅಶ್ವಿನಿ. ಆಟನಾ ಆಟ ತರ ಆಡಿ ಅಂತ ಅಶ್ವಿನಿ ಗೌಡ. ಕಿರುಚಬೇಡಿ ಅಂತ ಅಶ್ವಿನಿ ಎಸ್.ಎನ್. ಯೋಗ್ಯತೆ ಇದ್ದರೆ ಆಟ ಆಡ್ಬೇಕು ಅಂತ ಅಶ್ವಿನಿ ಗೌಡ. ಯೋಗ್ಯತೆ ಇರೋದಕ್ಕೆ ಇಲ್ಲಿರೋದು ಅಂತ ಅಶ್ವಿನಿ ಎಸ್.ಎನ್. ಹೀಗಾಗಿ ಮಾತಿಗೆ ಮಾತು ಬೆಳೆದು ದೊಡ್ಡ ರಂಪಾಟವೇ ನಡೆದಿದೆ. ಸರಿ, ಇಷ್ಟೆಲ್ಲ ಆಗಿದೆ ಮುಂದೇನು ಅಂತ ನೋಡುವುದಕ್ಕೆ ಇವತ್ತಿನ ಬಿಗ್ ಬಾಸ್ ಎಪಿಸೋಡ್ ನೋಡಬೇಕು.
ಇನ್ನು ಇವರಿಬ್ಬರ ಕಿತ್ತಾಟಕ್ಕೆ ಮನೆ ಮಂದಿ ಸೈಲೆಂಟ್ ಆಗಿದ್ದಾರೆ. ಜಾಹ್ನವಿ ದೈಹಿಕ ಹಲ್ಲೆ ಅಂತ ಕೂಗಿದ್ದು ಬಿಟ್ಟರೆ, ಬೇರೆ ಯಾರೂ ತುಟಿ ಪಿಟಿಕ್ ಅಂದಿಲ್ಲ. ಕಾಕ್ರೋಚ್ ಸುಧಿ ಸುಮ್ಮನೆ ಗುರಾಯಿಸಿದ್ದು ಬಿಟ್ಟರೆ, ಉಳಿದವರೆಲ್ಲರೂ ಏನಾಗುತ್ತಿದೆ ಅಂತ ಮುಖ ಮುಖ ನೋಡುತ್ತಾ ನಿಂತು ಬಿಟ್ಟಿದ್ದಾರೆ. ಸದ್ಯ ಇದು ಪ್ರೋಮೋ ಝಲಕ್ ಅಷ್ಟೇನೆ. ಈ ಗಲಾಟೆ ಬಳಿಕ ಏನಾಯ್ತು? ಅನ್ನೋದು ಇವತ್ತಿನ ಎಪಿಸೋಡ್‌ನಲ್ಲಿ ರಿವೀಲ್ ಆಗಲಿದೆ. ಹಾಗೇ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಾ ಅನ್ನೋದು ನೋಡಬೇಕಿದೆ.


Click it and Unblock the Notifications











