BBK 12: ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್.. ಮನೆಯಿಂದ ಹೊರ ಬಂದ ಡಾಗ್ ಸತೀಶ್
ಬಿಗ್ ಬಾಸ್ ಕನ್ನಡ ಸೀಸನ್ 12 ವೀಕ್ಷಕರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದೆ. ಇದೇ ವಾರ ಮಿಡ್ ಸೀಸನ್ ಫಿನಾಲೆ ಇದೆ. ಅದಕ್ಕೂ ಮುನ್ನ ಮನೆಯಲ್ಲಿರುವ ಬಹಳಷ್ಟು ಮಂದಿ ಎಲಿಮಿನೇಟ್ ಆಗುತ್ತಾರೆಂದು ಹೇಳಲಾಗಿತ್ತು. ಅದಂತೆ ಎಲಿಮಿನೇಷನ್ ಪ್ರಕ್ರಿಯೆಗಳು ಶುರುವಾಗಿವೆ. ಇಂದಿನ ಎಪಿಸೋಡ್‌ನಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ. ಮಿಡ್ ವೀಕ್ ಫಿನಾಲೆಗೂ ಮುನ್ನ ಒಂದು ಎಲಿಮೇಷನ್ ನಡೆದು ಹೋಗಿದೆ.
ಈ ವಾರ ಫಿನಾಲೆಗೂ ಮುನ್ನ ಮನೆಯೊಳಗೆ ಇರುವ ಸುಮಾರು 13 ಮಂದಿ ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದರು. ಬೆಳಗ್ಗೆನೇ ಹೊರ ಬಿದ್ದ ಪ್ರೋಮೊದಲ್ಲಿ ಮಿಡ್ ನೈಟ್ ಸೈರನ್ ಹೊಡೆದಿತ್ತು. ಇದರಲ್ಲಿ ಇವರಲ್ಲಿ ಇಬ್ಬರು ಎಲಿಮಿನೇಟ್ ಆಗುತ್ತಾರೆಂದು ಮನೆ ಮಂದಿಗೆ ಶಾಕ್ ಆಗಿದ್ದರು. ಫಿನಾಲೆಗೂ ಮುನ್ನ ಯಾರು ಎಲಿಮಿನೇಟ್ ಆಗಿರಬಹುದೆಂಬ ಲೆಕ್ಕಾಚಾರ ಆಗಿನಿಂದಲೇ ಶುರುವಾಗಿತ್ತು.

ಪ್ರೋಮೊ ಹೊರಬೀಳುತ್ತಿದ್ದಂತೆ ವೀಕ್ಷಕರು ಮೂರು ಹೆಸರುಗಳನ್ನು ತೆಗೆದುಕೊಂಡಿದ್ದರು. ಅವರಲ್ಲಿ ಮಂಜು ಭಾಷಿಣಿ, ಜಾಹ್ನವಿ ಹಾಗೂ ಡಾಗ್ ಸತೀಶ್ ಹೆಸರು ಕೇಳಿ ಬಂದಿದ್ದವು. ಈ ಮೂವರಲ್ಲಿ ನಿರೀಕ್ಷೆ ಮಾಡಿದಂತೆ ಡಾಗ್ ಸತೀಶ್ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಾರೆಂಬ ಮಾಹಿತಿ ಸಿಕ್ಕಿದೆ. ಅಷ್ಟಕ್ಕೂ ಡಾಗ್ ಸತೀಶ್ ಎಲಿಮಿನೇಷನ್ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
13 ಮಂದಿ ನಾಮಿನೇಷನ್
ಬಿಗ್ ಬಾಸ್ ಸೀಸನ್ 12 ನಿರೀಕ್ಷೆ ಮಾಡಿದಂತೆ ಇಲ್ಲ. ಈ ಬಾರಿ ಸಾಕಷ್ಟು ಬದಲಾವಣೆಗಳೊಂದಿಗೆ ವೀಕ್ಷಕರ ಮುಂದೆ ಬಂದಿದ್ದಾರೆ. ಅದರಲ್ಲಿ ಮೂರು ವಾರಕ್ಕೆ ನಡೆಯುತ್ತಿರುವ ಮಿಡ್ ವೀಕ್ ಫಿನಾಲೆ ಕೂಡ ಸೇರಿಕೊಂಡಿದೆ. ಈ ಫಿನಾಲೆಗೂ ಮುನ್ನ ಈಗಾಗಲೇ ಮನೆಯೊಳಗೆ ಇರುವ ಹಲವು ಸ್ಪರ್ಧಿಗಳು ಎಲಿಮಿನೇಟ್ ಆಗಲಿದ್ದಾರೆ. ಈ ವಾರು ನಾಲ್ಕು ಮಂದಿಯನ್ನು ಬಿಟ್ಟು 13 ಮಂದಿ ಎಲಿಮಿನೇಟ್ ಆಗಿದ್ದರು. ಅದರಲ್ಲಿ ಡಾಗ್ ಸತೀಶ್ ಕೂಡ ಒಬ್ಬರು.
ಡಾಗ್ ಸತೀಶ್ ಎಲಿಮಿನೇಷನ್ ಯಾಕೆ?
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾದಲ್ಲಿಂದ ಕೆಲವು ಸ್ಪರ್ಧಿಗಳು ಸೈಲೆಂಟ್ ಆಗಿದ್ದಾರೆ. ಮನೆಯೊಳಗೆ ಆಕ್ಟಿವ್ ಆಗಿಲ್ಲ. ಕೆಲವೇ ಕೆಲವು ಮಂದಿ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಹೀಗಾಗಿ ಬಿಗ್ ಬಾಸ್ ಮೊದಲ ವಾರದಲ್ಲಿಯೇ ಸ್ಪರ್ಧಿಗಳನ್ನು ಎಚ್ಚರಿಸಿತ್ತು. ಇಂತಹ ಸ್ಪರ್ಧಿಗಳಲ್ಲಿ ಡಾಗ್ ಸತೀಶ್ ಕೂಡ ಒಬ್ಬರಾಗಿದ್ದರು. ಚಂದ್ರಪ್ರಭ ಜೊತೆ ಜಂಟಿಯಾಗಿ ಎಂಟ್ರಿ ಕೊಟ್ಟಿದ್ದ ಡಾಗ್ ಸತೀಶ್ ವೀಕ್ಷಕರನ್ನು ಸೆಳೆಯುವಲ್ಲಿ ಸೋತಿದ್ದಾರೆ. ಹೀಗಾಗಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ ಎನ್ನಲಾಗಿದೆ.

ಇನ್ನೆಷ್ಟು ಮಂದಿ ಎಲಿಮಿನೇಷನ್
ಮಿಡ್ ಸೀಸನ್ ಫಿನಾಲೆ ಅಕ್ಟೋಬರ್ 18ರಿಂದಲೇ ಆರಂಭ ಆಗುತ್ತಿದೆ. ಹೀಗಾಗಿ ಇಂದಿನಿಂದಲೇ (ಅಕ್ಟೋಬರ್ 16) ಎಲಿಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ನಾಳೆ ಕೂಡ ಎಲಿಮಿನೇಟ್ ಆಗಬಹುದೆಂದು ನಿರೀಕ್ಷೆ ಮಾಡಲಾಗುತ್ತಿದೆ. ಹಾಗೇ ಫಿನಾಲೆಯ ಮೊದಲ ದಿನ (ಅಕ್ಟೋಬರ್ 18) ಮಾಸ್ ಎಲಿಮಿನೇಷನ್ ಆಗುವ ಸಾಧ್ಯತೆಯಿದೆ. ಕಿರುತೆರೆ ಜಗತ್ತಿನಲ್ಲಿ ಇಂತಹದ್ದೊಂದು ಚರ್ಚೆ ನಡೆಯುತ್ತಿದೆ.
ವೈಲ್ಡ್ ಕಾರ್ಡ್ ಎಂಟ್ರಿ
ಬಿಗ್ ಬಾಸ್ ಸೀಸನ್ 12 ಆರಂಭ ಆಗುವುದಕ್ಕೂ ಮುನ್ನ ಕೆಲವು ಹೆಸರುಗಳು ಕೇಳಿ ಬಂದಿದ್ದವು. ಅವರು ಮನೆಯೊಳಗೆ ಪ್ರವೇಶ ಮಾಡಿರಲಿಲ್ಲ. ಆ ಹೆಸರುಗಳು ಮತ್ತೆ ಕೇಳಿ ಬರುತ್ತಿವೆ. ಇವರಲ್ಲಿ ವಿಜಯ್ ಸೂರ್ಯ, ಭೂಮಿಕಾ ದೇಶಪಾಂಡೆ, ಮೌನ ಗುಡ್ಡೆಮನೆ, ವರುಣ್ ಆರಾಧ್ಯ ಹೆಸರುಗಳು ಕೇಳಿಬರುತ್ತಿವೆ. ವೀಕೆಂಡ್‌ನಲ್ಲಿ ಯಾರು ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಾರೆಂದು ನೋಡಬೇಕಿದೆ.


Click it and Unblock the Notifications











