ಆರೋಪಗಳ ಸುರಿಮಳೆ ಸುರಿಸುತ್ತಿರುವ ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಹಿನ್ನೆಲೆಯೇನು?
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗಿ ಒಂದು ವಾರ ಯಶಸ್ಸಿಯಾಗಿ ಮುಗಿದಿದೆ. ಆರಂಭದಲ್ಲಿ ಸೈಲೆಂಟ್ ಆಗಿದ್ದ ಸ್ಪರ್ಧಿಗಳು ಒಬ್ಬೊಬ್ಬರಾಗಿಯೇ ಓಪನ್ ಆಗಿ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಕೆಲ ಸ್ಪರ್ಧಿಗಳು ಉಗ್ರ ಸ್ವರೂಪ ತಾಳಿದ್ದಾರೆ. ಮತ್ತೆ ಕೆಲವರು ಮೈಂಡ್ ಗೇಮ್ ಅನ್ನು ಈಗಾಗಲೇ ಶುರು ಮಾಡಿದ್ದಾರೆ. ಇನ್ನು ಕೆಲವರು ತಮ್ಮ ಬದುಕಿನ ಕಷ್ಟದ ದಿನಗಳನ್ನು ಹೊರ ಹಾಕುತ್ತಿದ್ದಾರೆ. ಅದರಲ್ಲಿ ಜಾಹ್ನವಿ ಕೂಡ ಒಬ್ಬರು.
ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ ಇತ್ತೀಚೆಗೆ ಸಿನಿಮಾದಲ್ಲಿಯೂ ನಟಿಸಿದ್ದರು. ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಿರುವ ಜಾಹ್ನವಿ ಈಗ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಶೋಗೆ ಕಾಲಿಡುತ್ತಿದ್ದಂತೆ ಅವರ ವೈಯಕ್ತಿಕ ಜೀವನದ ಬಗ್ಗೆ ಓಪನ್ ಆಗಿ ಮಾತಾಡುತ್ತಿದ್ದಾರೆ. ಅದರಲ್ಲೂ ಡಿವೋರ್ಸ್ ಬಗ್ಗೆ ಜಾಹ್ನವಿ ಆಡಿದ ಮಾತುಗಳು ಮಾಜಿ ಪತಿಯನ್ನು ಕೆರಳಿಸಿವೆ.

ಬಿಗ್ ಬಾಸ್ ಮನೆಯೊಳಗೆ ಜಾಹ್ನವಿ ಮಾಜಿ ಪತಿ ಕಾರ್ತಿಕ್ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೂ ಮುನ್ನವೂ ಜಾಹ್ನವಿ ಗಂಭೀರ ಆರೋಪಗಳನ್ನು ಮಾಡಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿಯೂ ಕಾರ್ತಿಕ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅಷ್ಟಕ್ಕೂ ಮಾಜಿ ಪತಿ ಕಾರ್ತಿಕ್ ಹಿನ್ನೆಲೆಯೇನು? ಇಬ್ಬರ ನಡುವೆ ವಿಚ್ಚೇದನ ಆಗಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.
ಜಾಹ್ನವಿ ಮಾಜಿ ಪತಿ ಕಾರ್ತಿಕ್ ಆಶ್ವವೇಗ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಮಾಜಿ ಪತ್ನಿ ಜಾಹ್ನವಿ ಮಾಡಿದ ಆರೋಪಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಓಪನ್ ಆಗಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಜಾಹ್ನವಿಯವರ ಮಾಡಿದ ತಪ್ಪುಗಳನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಕಾರ್ತಿಕ್ ಹಾಗೂ ಜಾಹ್ನವಿ ಮದುವೆ ಆಗಿದ್ದೇಗೆ? ಅವರು ಎಲ್ಲಿಯವರು? ಅವರ ಶಿಕ್ಷಣದ ಹಿನ್ನೆಲೆಯೇನು? ಅವರಿಬ್ಬರ ಜೀವನದಲ್ಲಿ ಏನೆಲ್ಲ ಆಯ್ತು? ಅನ್ನೋದನ್ನು ಹೇಳಿಕೊಂಡಿದ್ದಾರೆ.
ಜಾಹ್ನವಿಯವರ ಬಗ್ಗೆ ಜನರು ಗೊತ್ತಿದೆ. ಆದರೆ, ಅವರ ಪತಿಯ ಹಿನ್ನೆಲೆ ಏನು ಅನ್ನೋದು ಗೊತ್ತಿರೋದು ಕಮ್ಮಿನೇ. ಜಾಹ್ನವಿ ಮಾಜಿ ಪತಿ ಕಾರ್ತಿಕ್ ಸಿನಿಮಾ, ಕಿರುತೆರೆ ಹಿನ್ನೆಲೆಯಿಂದ ಬಂದವರಲ್ಲ. ಅವರದ್ದು ಬ್ಯುಸಿನೆಸ್ ಬ್ಯಾಕ್‌ಗ್ರೌಂಡ್. ಮೂಲತ: ಚಿತ್ರದುರ್ಗದವರಾದ ಕಾರ್ತಿಕ್ ಸ್ಥಿತಿವಂತರೇ. ತಂದೆ ಟ್ರಾನ್ಸ್‌ಪೋರ್ಟ್ ಬ್ಯುಸಿನೆಸ್ ಮಾಡುತ್ತಿದ್ದರು. ಅಲ್ಲದೆ, ಚಿತ್ರದುರ್ಗದಲ್ಲಿ ಬಾಡಿಗೆ ಬರುವ ಮಳಿಗೆಗಳು ಇವೆ.
"ನಮ್ಮ ತಂದೆ ಊರು ಚಿತ್ರದುರ್ಗ. ನಮ್ಮ ತಾಯಿ ಊರು ಮಡಿಕೇರಿ. ನಮ್ಮ ತಂದೆಯದ್ದು ಪ್ರೈವೇಟ್ ಟ್ರಾನ್ಸ್‌ಪೊರ್ಟೇಷನ್ ಇದೆ. ಚಿತ್ರದುರ್ಗದ ಸುತ್ತಮುತ್ತ ಸುಮಾರು 70 ವರ್ಷಗಳಿಂದ ಬಸ್ ಚಲಿಸುತ್ತಿದೆ. ತಿಪ್ಪೇಸ್ವಾಮಿ ಟ್ರಾನ್ಸ್‌ಪೋರ್ಟ್ ಅಂತ ಇದೆ. ಟ್ರಾನ್ಸ್‌ಪೊರ್ಟೇಷನ್ ಮೇಜರ್ ಬ್ಯುಸಿನೆಸ್. ಅದು ಬಿಟ್ಟರೆ, ಪೆಟ್ರೊಲ್ ಬಂಕ್‌ಗಳು ಇದ್ದಾವೆ. ಕೃಷಿಯನ್ನು ಮಾಡುತ್ತೇವೆ. ಬೇರೆ ಬೇರೆ ಮೂಲಗಳಿಂದ ಬಾಡಿಗೆ ಬರುತ್ತೆ." ಎಂದು ಫ್ಯಾಮಿಲಿ ಹಿನ್ನೆಲೆ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್ನು ಕಾರ್ತಿಕ್ ಚಿತ್ರದುರ್ಗದಲ್ಲಿಯೇ ಹುಟ್ಟಿ ಬೆಳೆದಿದ್ದಾರೆ. 5ನೇ ತರಗತಿವರೆಗೂ ಅಲ್ಲಿಯೇ ಶಿಕ್ಷಣ ಪಡೆದರು. ಬಳಿಕ ಸಂಡೂರಿನಲ್ಲಿ ಶಿಕ್ಷಣ ಮುಂದುವರೆಸಿದ್ದರು. ಡಿಪ್ಲೋಮಾ ಎಲ್ಲವನ್ನೂ ಸಂಡೂರಿನಲ್ಲಿಯೇ ಮಾಡಿದ್ದರು. ಅಲ್ಲಿಂದ ಇಂಜಿನಿಯರಿಂಗ್ ಮಾಡುವುದಕ್ಕೆಂದು ಬೆಂಗಳೂರಿಗೆ ಶಿಫ್ಟ್ ಆಗಿದ್ದರು. 2004ಕ್ಕೆ ಬೆಂಗಳೂರಿಗೆ ಬಂದು ನೆಲೆಸುವುದಕ್ಕೆ ಶುರು ಮಾಡಿದ್ದರು. ಚಿತ್ರದುರ್ಗದಲ್ಲಿ ಇಂದಿಗೂ ಅವರ ಆಸ್ತಿಗಳೆಲ್ಲವೂ ಇದ್ದಾವೆ.
ಕಾರ್ತಿಕ್ ಇಬ್ಬರು ಸಹೋದರರು ಹಾಗೂ ಒಬ್ಬ ತಂಗಿ ಇದ್ದಾರೆ. ಇವರಲ್ಲಿ ಕಾರ್ತಿಕ್ ಅವರೇ ದೊಡ್ಡವರು. ಇಬ್ಬ ತಮ್ಮ ಏರ್‌ಪೋರ್ಟ್‌ನಲ್ಲಿ ಕೆಲಸ. ಇನ್ನೊಬ್ಬ ತಮ್ಮ ಕೆನಡಾದಲ್ಲಿ ಇದ್ದಾರೆ. ಎಲ್ಲರಿಗೂ ಮದುವೆ ಆಗಿದ್ದು, ತಂಗಿ ಆಂಧ್ರದಲ್ಲಿ ಇರುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಇಷ್ಟೊಂದು ಸ್ಥಿತಿವಂತರಾಗಿದ್ದರೂ ಇವರ ಮೊದಲ ಮದುವೆ ಮುರಿದು ಬಿದ್ದಿದ್ದೇಕೆ? ಅನ್ನೋದನ್ನು ಹೇಳಿಕೊಂಡಿದ್ದಾರೆ.
ಕಾರ್ತಿಕ್ ಹಾಗೂ ಜಾಹ್ನವಿ ಇಬ್ಬರ ಮದುವೆ ಹೇಗೆ ಆಯ್ತು? ಅನ್ನೋದನ್ನು ಹೇಳಿಕೊಂಡಿದ್ದಾರೆ. 2011ರಲ್ಲಿ ಮದುವೆ ಆಯ್ತು. ಒಂದೇ ವರ್ಷದಲ್ಲಿ ಗಂಡು ಮಗು ಕೂಡ ಆಯ್ತು. ಜಾಹ್ನವಿ ಮದುವೆಗೆ ಮುನ್ನ ಬೆಂಗಳೂರು ಹುಡುಗನನ್ನೇ ಮದುವೆ ಆಗಬೇಕು. ಶಿಕ್ಷಣವನ್ನು ಮುಂದುವರೆಸಬೇಕು ಅಂತ ಷರತ್ತು ಹಾಕಿದ್ದರು. ಮದುವೆ ಬಳಿಕ ಸಿನಿಮಾ, ಸೀರಿಯಲ್ ಮಾಡಬೇಕು ಅಂತ ಆಸೆ ವ್ಯಕ್ತಪಡಿಸಿದ್ದಾಗ, ಕಾರ್ತಿಕ್ ಒಪ್ಪಲಿಲ್ಲ. ನ್ಯೂಸ್ ಚಾನೆಲ್‌ಗಳಲ್ಲಿ ಕೆಲಸ ಮಾಡುವುದಕ್ಕೆ ಅನುಮತಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.


Click it and Unblock the Notifications











