BBK 12: ಬಿಗ್ ಬಾಸ್‌ನ 13ನೇ ಸ್ಪರ್ಧಿ ಧ್ರುವಂತ್ ಮಾಡಿಕೊಂಡ ವಿವಾದವೇನು? ಕಳೆದ ವರ್ಷ ಏನಾಗಿತ್ತು?
ಬಿಗ್ ಬಾಸ್ ಕನ್ನಡ ಸೀಸನ್ 12ರ ಮತ್ತೊಬ್ಬ ಇಂಟ್ರೆಸ್ಟಿಂಗ್ ಸ್ಪರ್ಧಿ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ. ಕನ್ನಡ ಕಿರುತೆರೆಯಲ್ಲಿ 'ಮುದ್ದು ಮಣಿಗಳು', 'ಓ ಮುದ್ದು ಮನಸೇ' ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಎರಡು ಧಾರಾವಾಹಿಗಳು ಇವರಿಗೆ ಕನ್ನಡಿಗರ ಮನೆ ಮನಗಳನ್ನು ತಲುಪುವಂತೆ ಮಾಡಿತ್ತು. ಅದೇ ಧ್ರುವಂತ್ ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಕೆಲವು ವರ್ಷಗಳ ಹಿಂದೆ ಬಂದಿದ್ದ ಸಿರಿ ಕನ್ನಡದಲ್ಲಿ ಪ್ರಸಾರ ಆಗಿದ್ದ 'w/o ಕೃಷ್ಣಮೂರ್ತಿ' ಧಾರಾವಾಹಿ ಮೂಲಕವೂ ಗಮನ ಸೆಳೆದಿದ್ದರು. ಕನ್ನಡ ಅಷ್ಟೇ ಅಲ್ಲ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚಿರುವ ಧ್ರುವಂತ್ ಈಗ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮತ್ತೆ ಕನ್ನಡಿಗರ ಮನಸ್ಸು ಗೆಲ್ಲುವುದಕ್ಕೆ ಹೊರಟಿದ್ದಾರೆ. ಈಗಾಗಲೇ ಒಂಟಿಯಾಗಿ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ.

ಬಿಗ್ ಬಾಸ್ ವೇದಿಕೆ ಮೇಲೆ ಧ್ರುವಂತ್ ಎಂಟ್ರಿ ಕೊಡುತ್ತಿದ್ದಂತೆ ಕಳೆದ ವರ್ಷ ಸಂಚಲನ ಸೃಷ್ಟಿಸಿದ್ದ ಧ್ರುವಂತ್ ವಿವಾದ ಚರ್ಚೆ ಆಯ್ತು. ಕಿಚ್ಚ ಸುದೀಪ್ ಸೂಕ್ಷ್ಮವಾಗಿ ಈ ವಿವಾದವನ್ನು ನೆನಪಿಸಿದ್ದರು. ತಾನು ಮಾಡಿಕೊಂಡ ವಿವಾದದ ಬಗ್ಗೆ ಧ್ರುವಂತ್ ಕೂಡ ಓಪನ್ ಆಗಿ ಮಾತಾಡಿದ್ದಾರೆ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಧ್ರುವಂತ್ ಸಿಕ್ಕಿಕೊಂಡ ವಿವಾದವೇನು? ತಿಳಿಯುವುದಕ್ಕೆ ಮುಂದೆ ಓದಿ.
ಧ್ರುವಂತ್ ಮೂಲತ: ಮಂಗಳೂರಿನವರು. ಆದರೆ ಬೆಳೆದಿದ್ದು ಕೊಡಗಿನಲ್ಲಿ. ನಟನೆಗೆ ಕಾಲಿಡುವುದಕ್ಕೂ ಮುನ್ನ ಧ್ರುವಂತ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಅಪ್ಪ-ಅಮ್ಮನಿಗೆ ಧ್ರುವಂತ್ ನಟನೆ ಮಾಡುವುದು ಇಷ್ಟವಿರಲಿಲ್ಲ. ಹೀಗಾಗಿ ಒಳ್ಳೆಯ ಕೆಲಸ ತೆಗೆದುಕೊಳ್ಳಲಿ ಎಂಬ ಆಸೆಯಿತ್ತು. ಅವರ ಆಸೆಯಂತೆ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ದೂ ಇದೆ. ಆದರೆ, ಅದು ನನಗೆ ಒಗ್ಗುವುದಿಲ್ಲ ಎಂದು ತಿಳಿದ ಧ್ರುವಂತ್ ನಟನೆ ಕಡೆಗೆ ಮುಖ ಮಾಡಿದ್ದರು.
ಕಳೆದ ವರ್ಷ ಧ್ರುವಂತ್ ವಿರುದ್ಧ ಯುವತಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಸಂಬಂಧ ರಾಜ ರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು. ಮದುವೆ ಆಗುತ್ತೇನೆಂದು ತನ್ನ ವಿರುದ್ಧ ದೈಹಿಕ ಸಂಪರ್ಕಕ್ಕೆ ಒತ್ತಡ ಹಾಕಿದ್ದರು ಎಂದು ಈ ದೂರಿನಲ್ಲಿ ತಿಳಿಸಲಾಗಿತ್ತು. ಈ ಸಂಬಂಧ ಬೆಂಗಳೂರಿನ ಆರ್‌ಆರ್ ನಗರದ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದರು.
ಇಷ್ಟೇ ಅಲ್ಲದೆ ಆ ಯುವತಿ ತನ್ನ ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದು, ಒಂದು ವೇಳೆ ಹಣ ಕೊಡದೇ ಹೋದರೆ ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸಿದ್ದಾನೆಂದು ಎಂದು ಯುವತಿ ದೂರಿನಲ್ಲಿ ಆರೋಪಿಸಿದರು. ಲೈಂಗಿಕ ದೌರ್ಜನ್ಯ, ಹಲ್ಲೆ, ಕೊಲೆ ಬೆದರಿಕೆ ಆರೋಪ ಮೇಲೆ ನಟ ಧ್ರುವಂತ್ ಉರ್ಫ್ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಧ್ರುವಂತ್ ಮೊದಲ ಮದುವೆ ಕೂಡ ಮುರಿದು ಬಿದ್ದಿತ್ತು. ಅದೂ ಕೂಡ ಬೀದಿ ರಂಪಾಟವಾಗಿತ್ತು. ಕೋರ್ಟ್, ಕಚೇರಿ ಅಂತ ಮೊದಲ ಪತ್ನಿ ಧ್ರುವಂತ್ ವಿರುದ್ಧ ತಿರುಗಿಬಿದ್ದಿದ್ದರು. ವಿವಾದಗಳಲ್ಲಿ ಸಿಲುಕಿದ್ದ ನಟ, ಒಂದಿಷ್ಟು ದಿನ ಸೈಲೆಂಟ್ ಆಗಿದ್ದು, ಈಗ ಮತ್ತೆ ಬಿಗ್ ಬಾಸ್‌ಗೆ ಎಂಟ್ರಿ ಕೊಡುವ ಮೂಲಕ ಸುದ್ದಿಯಲ್ಲಿ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರಾ? ಅನ್ನೋದು ನೋಡಬೇಕಿದೆ.


Click it and Unblock the Notifications











