BBK 12: ಯಾರಿದು ಬಿಗ್‌ಬಾಸ್‌ ಕನ್ನಡದ 15ನೇ ಸ್ಪರ್ಧಿ ಕರಿಬಸಪ್ಪ? ಟೈಗರ್ ಪ್ರಭಾಕರ್ ಸಿನಿಮಾ ದಿಕ್ಕು ಬದಲಿಸಿದ್ದೇಗೆ?

ಬಿಗ್ ಬಾಸ್ ಕನ್ನಡ ಸೀಸನ್ 12ರ ಓಪನಿಂಗ್ ಅದ್ಧೂರಿಯಾಗಿ ನಡೆದಿದೆ. ಎಕ್ಸ್‌ಪೆಕ್ಟ್ ಮಾಡಿರುವ ಹಾಗೂ ಮಾಡದೇ ಇರುವ ಸ್ಪರ್ಧಿಗಳು ಈಗಾಗಲೇ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ, ಸೀರಿಯಲ್ ಸೇರಿದಂತೆ ಬೇರೆ ಬೇರೆ ಕ್ಷೇತ್ರದಿಂದ ಬಂದ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಆರಂಭದ ದಿನ ಒಟ್ಟು 19 ಮಂದಿಯನ್ನು ಮನೆಯೊಳಗೆ ಕಳುಹಿಸಲಾಗಿದೆ.

ಬಿಗ್ ಬಾಸ್ ಕನ್ನಡ ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿದೆ. ಯಾಕಂದ್ರೆ, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಾಗಿದೆ. ಅವರಲ್ಲಿ ಬಾಡಿ ಬಿಲ್ಡರ್ ಕರಿಬಸಪ್ಪ ಕೂಡ ಇಬ್ಬರು. ದೇಹದಾಢ್ಯತೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಕರಿಬಸಪ್ಪ ಈಗ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.

Bigg Boss Kannada 12 contestant no 15 Karibasappa life story and achievements

ಬಿಗ್ ಬಾಸ್ ಗುರುತಿಸಿ ಕರೆದುಕೊಂಡಿರುವ ಈ ಕರಿಬಸಪ್ಪ ಅವರ ಹಿನ್ನೆಲೆಯೇನು? ಇವರ ಸಾಧನೆ ಏನು? ಬಿಗ್ ಬಾಸ್‌ಗೆ ಅವರು ಆಯ್ಕೆ ಆಗಿದ್ದು ಹೇಗೆ? ಇವೆಲ್ಲವನ್ನು ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.

ಯಾರಿದು ಕರಿಬಸಪ್ಪ?

ಈ ಹಿಂದಿನ ಸೀಸನ್‌ಗಿಂತ ಬಿಗ್ ಬಾಸ್ ಕನ್ನಡ 12 ವಿಭಿನ್ನವಾಗಿದೆ. ಸ್ಪರ್ಧಿಗಳ ಆಯ್ಕೆಯಲ್ಲಂತೂ ವಿಭಿನ್ನವಾಗಿ ನಿಂತಿದೆ. ಅದಕ್ಕೆ ಉತ್ತರ ಉದಾಹರಣೆಯೇ ಕರಿಬಸಪ್ಪ. ಮೂಲತ: ದಾವಣಗರೆ ಮೂಲದವರಾದ ಕರಿಬಸಪ್ಪ ಸಾಮಾನ್ಯ ಕುಟುಂಬದಿಂದ ಬಂದವರು. ಒಂದು ಸಿನಿಮಾದ ನೋಡಿ ಹುಟ್ಟಿದ ಆಸೆ, ಅವರನ್ನು ಇಲ್ಲಿವರೆಗೂ ಕರೆದುಕೊಂಡು ಬಂದು ನಿಲ್ಲಿಸಿದೆ.

ಟೈಗರ್ ಪ್ರಭಾಕರ್ ಸಿನಿಮಾವೇ ಪ್ರೇರಣೆ

ಅಂದ್ಹಾಗೆ ಇವರ ಪೂರ್ತಿ ಹೆಸರು ಲಕ್ವಳ್ಳಿ ಮೈಲಪ್ಪ ಕರಿಬಸಪ್ಪ. ಇವರ ತಂದೆ ನಗರ ಸಭೆಯಲ್ಲಿ ಕಸ ಗುಡಿಸುವ ಕೆಲಸ ಮಾಡಿ ಇವರನ್ನು ಬೆಳೆಸಿದ್ದರು. ಒಮ್ಮೆ ಟೈಗರ್ ಪ್ರಭಾಕರ್ ನಟಿಸಿದ ಕಾಡಿನ ರಾಜ ಸಿನಿಮಾವನ್ನು ನೋಡಿದ್ದರು. ಅದರಲ್ಲಿ ಪ್ರಭಾಕರ್ ಚೆಸ್ಟ್ ಕುಣಿಸುವ ದೃಶ್ಯ ಇವರ ಮೇಲೆ ಪ್ರಭಾವ ಬೀರಿತ್ತು. ಅವರಂತೆ ಆಗಬೇಕು ಅಂತ ಜಿಮ್‌ಗೆ ಸೇರಿಕೊಂಡಿದ್ದರು. 1993ರಲ್ಲಿ ಸ್ಪೋರ್ಟ್ಸ್ ಕೋಟಾದಲ್ಲಿ ಪೊಲೀಸ್ ಇಲಾಖೆಗೆ ಸೇರಿಕೊಂಡರು. ಕರ್ನಾಟಕ ಪೊಲೀಸ್‌ನಿಂದ ಸ್ಪರ್ಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆದರು.

Bigg Boss Kannada 12 contestant no 15 Karibasappa life story and achievements

ಸಿನಿಮಾದವರ ನಂಟೂ ಇದೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಕರಿಬಸಪ್ಪ ಅವರಿಗೆ ಕನ್ನಡ ಚಿತ್ರರಂಗದ ದಿಗ್ಗಜರು ಸನ್ಮಾನ ಮಾಡಿದ್ದಾರೆ. ಡಾ.ರಾಜ್‌ಕುಮಾರ್, ಡಾ.ಪುನೀತ್ ರಾಜ್‌ಕುಮಾರ್, ಟೈಗರ್ ಪ್ರಭಾಕರ್ ಜೊತೆ ಸನ್ಮಾನ ಮಾಡಿಸಿಕೊಂಡಿದ್ದಾರೆ. ನೋಡುವುದಕ್ಕೆ ಒರಟು ಅಂತ ಅನಿಸಿದರೂ ಸಿಕ್ಕಾಪಟ್ಟೆ ಕಾಮಿಡಿ ಮಾಡುತ್ತೇನೆ ಎಂದು ಕರಿಸಬಸಪ್ಪ ಹೇಳಿಕೊಂಡಿದ್ದಾರೆ.

More from Filmibeat

English summary
Bigg Boss Kannada 12 contestant no 15 Karibasappa life story and achievements.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X