BBK 12: ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿಗೆ ಕನ್ನಡ ಯಾಕಿಷ್ಟು ಕಷ್ಟ? ಕಿಚ್ಚನಿಗೆ ಶಾಕ್ ಆಗಿದ್ದೇನು?

ಬಿಗ್ ಬಾಸ್ ಕನ್ನಡ 12 ಆರಂಭ ಆಗುವುದಕ್ಕೆ ಇನ್ನೇ ಕ್ಷಣಗಣನೆ ಶುರುವಾಗಿದೆ. ಅದಾಗಲೇ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಬಿಗ್ ಬಾಸ್ ರಿವೀಲ್ ಮಾಡುತ್ತಿದೆ. ಇನ್ನು ಕೆಲವೇ ನಿಮಿಷಗಳು ಬಾಕಿ ಉಳಿದಿದ್ದು ಶೋ ಆರಂಭಕ್ಕೂ ಮುನ್ನ ಇನ್ನೆಷ್ಟು ಸ್ಪರ್ಧಿಗಳನ್ನು ಅನಾವರಣ ಮಾಡುತ್ತೆ ಅನ್ನೋದನ್ನು ನೋಡಬೇಕಿದೆ. ಕೆಲವೇ ನಿಮಿಷಗಳ ಹಿಂದೆ ಬಿಗ್ ಬಾಸ್ ಮನೆಗೆ ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್ ರಕ್ಷಿತಾ ಶೆಟ್ಟಿ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರೋಮೊ ರಿಲೀಸ್ ಆದಾಗಲೇ ಕಿಚ್ಚ ಅನಿರೀಕ್ಷತವಾದುದ್ದನ್ನು ನಿರೀಕ್ಷಿಸಿ ಎಂದು ಸುಳಿವು ನೀಡಿದ್ದರು. ಅದರಂತೆ ಶೋ ಆರಂಭಕ್ಕೂ ಮುನ್ನವೇ ನಾಲ್ಕು ಮಂದಿ ಸ್ಪರ್ಧಿಗಳ್ಯಾರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಇವರಲ್ಲಿ ಕರಾವಳಿಯ ಹುಡುಗಿ ರಕ್ಷಿತಾ ಶೆಟ್ಟಿ ಕೂಡ ಒಬ್ಬರು. ಇವರ ಎಂಟ್ರಿ ಕಿರುತೆರೆ ವೀಕ್ಷಕರಿಗೆ ನಿಜಕ್ಕೂ ಸರ್ಪ್ರೈಸ್ ಕೊಟ್ಟಿರೋದಂತೂ ಸತ್ಯ.

Bigg Boss Kannada 12 Contestant Rakshita Shetty struggling to speak Kannada because of this reason

ಕಷ್ಟ ಪಟ್ಟು ಕನ್ನಡ ಮಾತಾಡುವ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಕ್ಕೆ ನೆಟ್ಟಿಗರು ಅಪಸ್ವರ ಎತ್ತಿದ್ದಾರೆ. ಸರಿಯಾಗಿ ಕನ್ನಡವೇ ಬಾರದವರನ್ನು ಬಿಗ್ ಬಾಸ್‌ಗೆ ಕರೆದುಕೊಂಡು ಬಂದಿದ್ದಾರೆಂದು ಟೀಕಿಸುತ್ತಿದ್ದಾರೆ. ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಕನ್ನಡ ಮಾತಾಡುವುದಕ್ಕೆ ಯಾಕಿಷ್ಟು ಕಷ್ಟ ಪಡುತ್ತಾರೆ? ಇವರ ಹಿನ್ನೆಲೆಯೇನು? ಇವರ ರೆಸಿಪಿ ಕೇಳಿ ಕಿಚ್ಚನೇ ಶಾಕ್ ಆಗಿದ್ದು ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.

ರಕ್ಷಿತಾ ಶೆಟ್ಟಿ ಎಂಟ್ರಿಗೆ ನೆಟ್ಟಿಗರು ಬೇಸರ

ರಕ್ಷಿತಾ ಶೆಟ್ಟಿ ಈ ಬಾರಿ ಬಾಗ್ ಬಾಸ್‌ನ ನಿರೀಕ್ಷಿತ ಎಂಟ್ರಿ ಏನು ಆಗಿರಲಿಲ್ಲ. ಆದರೂ ಕರಾವಳಿ ಮೂಲಕ ಈ ವ್ಲಾಗರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈ ಕಾರಣಕ್ಕೆ ಅವರನ್ನು ಬಿಗ್ ಬಾಸ್ ಮನೆಗೆ ಕರೆದುಕೊಂಡು ಬಂದಿರಬಹುದೆಂದು ಹೇಳಲಾಗುತ್ತಿದೆ. ಆದರೆ, ಕನ್ನಡ ಸರಿಯಾಗಿ ಅರ್ಥ ಆಗದ, ಮಾತಾಡುವುದಕ್ಕೆ ಬಾರದ ರಕ್ಷಿತಾ ಶೆಟ್ಟಿಯ ಎಂಟ್ರಿಯನ್ನು ಟೀಕಿಸಿದ್ದಾರೆ. ಅಷ್ಟಕ್ಕೂ ರಕ್ಷಿತಾ ಕನ್ನಡ ಮಾತಾಡುವುದಕ್ಕೆ ಇಷ್ಟು ಕಷ್ಟ ಪಡುವುದಕ್ಕೊಂದು ಕಾರಣವಿದೆ.

ರಕ್ಷಿತಾ ಶೆಟ್ಟಿ ಕನ್ನಡ ಯಾಕಿಷ್ಟು ಕಷ್ಟ?

ರಕ್ಷಿತಾ ಶೆಟ್ಟಿ ಹುಟ್ಟಿದ್ದ ಮಂಗಳೂರಿನಲ್ಲಿಯೇ ಆದರೂ, ಬೆಳೆದಿದ್ದು ಮುಂಬೈನಲ್ಲಿ. ಮಾತೃಭಾಷೆ ತುಳು ಆಗಿದ್ದರಿಂದ ಮುಂಬೈನಲ್ಲಿ ತುಳುವನ್ನೇ ಮಾತಾಡುತ್ತಿದ್ದರು. ಹೀಗಾಗಿ ಕನ್ನಡ ಭಾಷೆಯನ್ನು ಈಗ ಕಲಿಯುತ್ತಿದ್ದಾರೆ. ಅವರ ಅಜ್ಜಿ ಮನೆ ಮಂಗಳೂರಿಗೆ ಬಂದಾಗ ಕನ್ನಡ ಹಾಗೂ ತುಳು ಭಾಷೆಯಲ್ಲಿ ಹೆಚ್ಚಾಗಿ ವಿಡಿಯೋ ಮಾಡುತ್ತಾರೆ. ಈ ಕಾರಣಕ್ಕೆ ಅವರನ್ನು ಆಗಾಗ ಟ್ರೋಲ್ ಕೂಡ ಮಾಡುತ್ತಾರೆ.

ಎರಡು ಭಾಷೆಯಲ್ಲಿ ವಿಡಿಯೋ

ರಕ್ಷಿತಾ ಶೆಟ್ಟಿ ಕನ್ನಡ ಭಾಷೆ ಹಾಗೂ ತುಳು ಭಾಷೆಗೆಂದು ಇನ್‌ಸ್ಟಾಗ್ರಾಂನಲ್ಲಿ ಎರಡು ಪ್ರತ್ತೇಕ ಖಾತೆಗಳನ್ನು ತೆರೆದಿದ್ದಾರೆ. ಎರಡು ಭಾಷೆಯಲ್ಲಿಯೂ ರೀಲ್ಸ್ ಮಾಡಿ ಹಾಕುತ್ತಾರೆ. ಕನ್ನಡ ಖಾತೆಯಲ್ಲಿ ಈಗಾಗಲೇ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ. ಹಾಗೇ ತುಳು ಭಾಷೆಯ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಲಕ್ಷದ ಹದಿನಾರು ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ.

ರಕ್ಷಿತಾ ರೆಸಿಪಿಗೆ ಕಿಚ್ಚನೇ ಶಾಕ್

ರಕ್ಷಿತಾ ಶೆಟ್ಟಿ ಫನ್ನಿ ವಿಡಿಯೋಗಳ ಜೊತೆಗೆ ಕೆಲವೊಮ್ಮೆ ವಿಚಿತ್ರವಾಗಿ ಅಡುಗೆ ಮಾಡುತ್ತಾರೆ. ಒಂದು ವಿಡಿಯೋದಲ್ಲಿ ಮೀನು ಸಾರಿಗೆ ಸಕ್ಕರೆ ಹಾಕಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ರಕ್ಷಿತಾರನ್ನು ವೆಲ್‌ ಕಮ್ ಮಾಡಿದ ಬಳಿಕ ಕಿಚ್ಚ ಸುದೀಪ್ ಅದನ್ನೇ ಕೆದುಕಿ ತಮಾಷೆ ಮಾಡಿದ್ದಾರೆ. ನಿಮ್ಮ ಅಡುಗೆ ತಿಂದು ತುಂಬಾ ಚೆನ್ನಾಗಿದೆ ಅಂತ ಹೇಳಿದವರು ಯಾರು? ಎಂದು ಕೇಳಿ ತಮಾಷೆ ಮಾಡಿದ್ದಾರೆ.

More from Filmibeat

English summary
Bigg Boss Kannada 12 Contestant Rakshita Shetty struggling to speak Kannada because of this reason.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X