BBK 12: 2ನೇ ದಿನವೇ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್; ಈ ಬಾರಿ 2 ಫೈನಲ್.. ಇಲ್ಲಿದೆ ಡಿಟೈಲ್ಸ್

ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗುವುದಕ್ಕೂ ಮುನ್ನವೇ ಕಿಚ್ಚ ಸುದೀಪ್ ಈ ಬಾರಿ ನಿರೀಕ್ಷೆ ಮಾಡದ್ದನ್ನು ನಿರೀಕ್ಷಿಸಿ ಎಂದು ಸುಳಿವು ನೀಡಿದ್ದರು. ಇಲ್ಲಿವರೆಗೂ ಕಿಚ್ಚ ಹೇಳಿದಂತೆಯೇ ನಡೆಯುತ್ತಿದೆ. ಬಿಗ್ ಬಾಸ್ ಕನ್ನಡ ಆರಂಭ ಆಗಿ ಕೇವಲ 2 ದಿನಗಳಾಗಿದೆಯಷ್ಟೇ. ಅಷ್ಟರಲ್ಲಿಯೇ ಎರಡು ಬಿಗ್ ಟ್ವಿಸ್ಟ್ ಕೊಟ್ಟಿದೆ. ಎರಡನೇ ದಿನ ಬೆಳಗಿನ ಪ್ರೋಮೋ ರಿಲೀಸ್ ಆಗಿದ್ದು ಅದರಲ್ಲಿ ಮನೆ ಮಂದಿಗೆ ಶಾಕ್ ಕೊಟ್ಟಿದೆ.

12ನೇ ಸೀಸನ್ ಗ್ರ್ಯಾಂಡ್ ಓಪನಿಂಗ್ ವೇಳೆನೇ ಕಿಚ್ಚ ಒಂದು ಎರಡಾಗಬಹುದು. ಎರಡು ಒಂದಾಗಬಹುದು. ಏನು ಬೇಕಾದರೂ ಆಗಬಹುದೆಂದು ಸುಳಿವು ನೀಡಿದ್ದರು. ಆ ಸುಳಿವಿನಂತೆ ಬಿಗ್ ಬಾಸ್ ಈಗ ಬಿಗ್ ಟ್ವಿಸ್ಟ್ ಕೊಟ್ಟಿದೆ. 2ನೇ ದಿನ ಹೊಸ ಟಾಸ್ಕ್‌ಗಳ ನಿರೀಕ್ಷೆಯಲ್ಲಿದ್ದ 18 ಮಂದಿ ಸದಸ್ಯರಿಗೆ ಎರಡು ಫಿನಾಲೆ ನಡೆಯುತ್ತೆ ಎಂದು ಹೇಳಿ ಬೆಚ್ಚಿ ಬೀಳಿಸಿದೆ.

Bigg Boss Kannada 12 Day 2 Promo Reveals Shocking Twist Announced Two Finals here is details

ಬಿಗ್ ಬಾಸ್ ಈ ಬಾರಿ ವೀಕ್ಷಕರಿಗೂ ಮಸ್ತ್ ಕಿಕ್ ಕೊಡುವ ಸಾಧ್ಯತೆಯಿದೆ. ಮೊದಲ ದಿನವೇ ಕರಾವಳಿಯ ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದರು. ಫಸ್ಟ್‌ ಡೇನೇ ಶಾಕ್ ಕೊಟ್ಟಿದ್ದ ಬಿಗ್ ಬಾಸ್, ಎರಡನೇ ದಿನ ಕೊಟ್ಟಿರೋ ಶಾಕ್‌ ಅನ್ನು ಹೇಗೆ ಸ್ವೀಕರಿಸಿದ್ದಾರೆ ಅನ್ನೋದು ಇಂದಿನ (ಸೆಪ್ಟೆಂಬರ್ 30) ಎಪಿಸೋಡ್‌ನಲ್ಲಿ ನೋಡಬೇಕಿದೆ. ಅಷ್ಟಕ್ಕೂ ಈ ಟ್ವಿಸ್ಟ್‌ಗೆ ನೆಟ್ಟಿಗರ ರಿಯಾಕ್ಷನ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಬಿಗ್ ಬಾಸ್ 12 ಟ್ವಿಸ್ಟ್ ಮೇಲೆ ಟ್ವಿಸ್ಟ್

12ನೇ ಸೀಸನ್ ಅಂದುಕೊಂಡಷ್ಟು ಸರಳವಾಗಿಲ್ಲ. ಇಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗೋದು ಗ್ಯಾರಂಟಿ. ದಿನಕ್ಕೊಂದು ಟ್ವಿಸ್ಟ್ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಎರಡು ದಿನಕ್ಕೆ ಎರಡು ಟ್ವಿಸ್ಟ್‌ ಕೊಟ್ಟು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ವಾರದ ಉದ್ದಕ್ಕೂ ಹೀಗೆ ಟ್ವಿಸ್ಟ್‌ಗಳನ್ನು ಕೊಡುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಆದ್ರೀಗ ಎರಡು ಫೈನಲ್ ಅಂತ ಹೇಳಿದ್ದರು ಮನೆ ಮಂದಿಗಷ್ಟೇ ಅಲ್ಲ. ವೀಕ್ಷಕರಲ್ಲೂ ಕುತೂಹಲ ಮೂಡಿರೋದು ನಿಜ.

2ನೇ ಫೈನಲ್ ಯಾವಾಗ?

ಬಿಗ್ ಬಾಸ್‌ ಕನ್ನಡ 12 ಸೀಸನ್‌ಗಳಲ್ಲಿಯೂ ಎರಡೆರಡು ಫೈನಲ್ ಇಟ್ಟಿದ್ದು ಇದೇ ಮೊದಲು. ಹಿಂದೆಂದು ಇಂತಹ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದ್ರೀಗ ಮೂರನೇ ವಾರಕ್ಕೆ ಮೊದಲ ಫೈನಲ್ ನಡೆಯಲಿದೆ. ಅಲ್ಲಿ ಸ್ಪರ್ಧಿಗಳು ಪರ್ಫಾರ್ಮ್ ಮಾಡದೇ ಹೋದರೆ, ಅವರಿಗೆ ಗೇಟ್ ಪಾಸ್ ಸಿಗೋದು ಗ್ಯಾರಂಟಿ. ಅದಕ್ಕೆ ಎರಡನೇ ದಿನವೇ ಮುನ್ನೆಚ್ಚರಿಕೆಯನ್ನು ನೀಡಿದೆ. ಹೀಗಾಗಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಈ ಬಾರಿ ಅಷ್ಟು ಸುಲಭ ಇರೋದಿಲ್ಲ ಅನ್ನೋದು ಕನ್ಫರ್ಮ್.

ಗುಂಪು ಗುಂಪಾಗಿ ಎಲಿಮಿನೇಟ್ ಆಗಬಹುದು

ಬಿಗ್ ಬಾಸ್ ಅನ್ನು ಯಾರು ಗೆಲ್ಲುತ್ತಾರೆ ಅನ್ನೋದನ್ನು ನೋಡುವುದಕ್ಕೆ 100 ದಿನಗಳು ಕಾಯಬೇಕಿಲ್ಲ. ಮೂರನೇ ವಾರದಲ್ಲಿಯೇ ಒಂದು ಫಿನಾಲೆ ನಡೆಯಲಿದೆ. ನಿಮ್ಮಲ್ಲಿ ಯಾರು? ಯಾವಾಗ? ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು. ಒಬ್ಬೊಬ್ಬರಾಗಿ ಹೋಗಬಹುದು. ಗುಂಪು ಗುಂಪಾಗಿ ಎಲಿಮಿನೇಟ್ ಆಗಬಹುದು. ಎಲಿಮಿನೇಷನ್ ಭಯದಿಂದ ಮುಕ್ತರಾಗಬೇಕಂದರೆ, ಅದಕ್ಕೆ ಒಂದೇ ದಾರಿ ಎಂದು 2ನೇ ದಿನದ ಬೆಳಗಿನ ಪ್ರೋಮೊದಲ್ಲಿ ಟ್ಚಿಸ್ಟ್ ಕೊಟ್ಟಿದೆ.

ಹೆಚ್ಚಾಗುತ್ತಾ ವೈಲ್ಡ್ ಕಾರ್ಡ್ ಎಂಟ್ರಿ

ಈ ಬಾರಿ ಬಿಗ್ ಬಾಸ್‌ನಲ್ಲಿ ವಾರಕ್ಕೊಬ್ಬರು ಎಲಿಮಿನೇಟ್ ಆಗುತ್ತಾರೋ ಅನ್ನೋ ಕಾನ್ಸೆಪ್ಟ್ ಇಲ್ಲ. ಎರಡು ಫೈನಲ್ ಇರೋದ್ರಿಂದ ಮೊದಲ ಮೂರು ವಾರದಲ್ಲಿಯೇ ಪರ್ಫಾಮ್ ಮಾಡದೇ ಇರೋದು ಮನೆಯಿಂದ ಹೊರಬರೋದು ಗ್ಯಾರಂಟಿ. ಹೀಗಾಗಿ ವೈಲ್ಡ್ ಕಾರ್ಟ್ ಎಂಟ್ರಿಗಳು ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಅಷ್ಟಕ್ಕೂ ಬಿಗ್ ಬಾಸ್ ಕೊಟ್ಟಿರೋ ಟ್ವಿಸ್ಟ್ ಏನು ಅಂತ ನೋಡುವುದಕ್ಕೆ ಇಂದಿನ ಎಪಿಸೋಡ್ ನೋಡಲೇಬೇಕು.

More from Filmibeat

English summary
Bigg Boss Kannada 12: Day 2 promo Announced Two Finals. Shocking fans with the announcement of not one but two finals. Here is details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X