BBK 12: ಈ ವಾರ ನಾಮಿನೇಟ್ ಆದ 8 ಮಂದಿ ಯಾರು? ಬಿಗ್ ಬಾಸ್ ಮನೆಗೆ ಗುಡ್ ಬೈ ಹೇಳೋದು ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12 ಮತ್ತೊಂದು ವೀಕೆಂಡ್‌ಗೆ ಬಂದು ನಿಂತಿದೆ. ಒಂದು ವಾರ ಬಿಗ್ ಬಾಸ್ ಮನೆಯಲ್ಲಿ ಸದಸ್ಯರ ನಡೆಗಳನ್ನು ಬಗ್ಗೆ ಕಿಚ್ಚ ಸುದೀಪ್ ವಿವರಣೆ ನೀಡುವ ಸಮಯ. ಇನ್ನೊಂದು ಕಡೆ ವೀಕೆಂಡ್ ಬಂತು ಅಂದರೆ, ಮನೆಯೊಳಗೆ ಇರುವ ಸದಸ್ಯರು ಆತಂಕಕ್ಕೆ ಒಳಗಾಗುತ್ತಾರೆ. ವಾರ ಕೊನೆಯಲ್ಲಿ ಅವರಿಗೆ ಎದುರಾಗುವ ಎರಡು ಆತಂಕಗಳೆಂದರೆ, ಒಂದು ಎಲಿಮಿನೇಷನ್. ಇನ್ನೊಂದು ಕಿಚ್ಚನ ಭಯ.
ಪ್ರತಿ ವಾರ ಕಿಚ್ಚ ಸುದೀಪ್ ವೇದಿಕೆ ಮೇಲೆ ಬಂದಾಗ ಒಂದು ವಾರಗಳ ಕಾಲ ಮನೆಯೊಳಗೆ ನಡೆದ ಘಟನೆಗಳನ್ನು ಮೆಲುಕು ಹಾಕುತ್ತಾರೆ. ಕೆಲವು ಸ್ಪರ್ಧಿಗಳ ತಪ್ಪು ಗ್ರಹಿಕೆಗಳನ್ನು ಸರಿ ಪಡಿಸುತ್ತಾರೆ. ಇನ್ನು ಕೆಲವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ವೇದಿಕೆ ಮೇಲೆ ಕಾಮಿಡಿ ಮಾಡುತ್ತಾರೆ. ಮನೆಯೊಳಗಿರುವ ಸ್ಪರ್ಧಿಗಳಿಗೆ ಚಪ್ಪಾಳೆ ಕೊಡುತ್ತಾರೆ. ಇದೆಲ್ಲವನ್ನೂ ಕಣ್ತುಂಬಿಕೊಳ್ಳುವುದಕ್ಕೆ ಕಿರುತೆರೆ ವೀಕ್ಷಕರು ತುದಿಗಾಲಲ್ಲಿ ನಿಂತಿರುತ್ತಾರೆ.

ಈ ವಾರ ಬಿಗ್ ಬಾಸ್ ಮನೆಯ ಏಳು ಮಂದಿ ಸದಸ್ಯರು ನಾಮಿನೇಟ್ ಆಗಿದ್ದಾರೆ. ಈ ಎಂಟು ಮಂದಿಯಲ್ಲಿ ಮನೆಯಿಂದ ಹೊರಗೆ ಬರೋದು ಯಾರು? ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಏನೆಲ್ಲ ಚರ್ಚೆ ಮಾಡಬಹುದು? ತಿಳಿಯುವುದಕ್ಕೆ ಮುಂದೆ ಓದಿ..
ನಾಮಿನೇಟ್ ಆಗಿರೋರು ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12 ಒಂದೊಂದು ವಾರ ಕಳೆಯುತ್ತಿದ್ದಂತೆ ಕುತೂಹಲದ ಘಟ್ಟ ತಲುಪುತ್ತಿದೆ. ಪ್ರತಿ ವಾರ ಟ್ವಿಸ್ಟ್ ಅಂಡ್ ಟರ್ನ್ ಕೊಡುತ್ತಿರುವ ಬಿಗ್ ಬಾಸ್ ಈ ವಾರ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಈ ವಾರ ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಜಾಹ್ನವಿ, ಮ್ಯೂಟೆಂಟ್ ರಘು, ಕಾಕ್ರೋಚ್ ಸುಧಿ, ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರೆ. ಅವರು ಯಾರು ಅನ್ನೋದು ಈ ವೀಕೆಂಡ್‌ನ ಕುತೂಹಲ.
ಎಲಿಮಿನೇಟ್ ಆಗೋದ್ಯಾರು?
ಸದ್ಯ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಟ್ ಆಗಿರುವ ಎಂಟು ಮಂದಿ ಸದಸ್ಯರಲ್ಲಿ ಒಬ್ಬರು ಮನೆಯಿಂದ ಹೊರ ಬರುತ್ತಾರೆ. ಸದ್ಯದ ಲೆಕ್ಕಾಚಾರದ ಪ್ರಕಾರ, ಧ್ರುವಂತ್ ಹಾಗೂ ಜಾಹ್ನವಿ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಇವರಿಬ್ಬರಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬಹುದೆಂಬ ಮಾತುಗಳು ಕೇಳಿ ಬರುತ್ತಿದೆ. ಅದರಲ್ಲೂ ಧ್ರುವಂತ್ ಎಲಿಮಿನೇಟ್ ಆಗುವ ಚಾನ್ಸ್ ಹೆಚ್ಚಿದೆ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ಕಿಚ್ಚ ಸುದೀಪ್ ಈ ವಾರ ಎಲಿಮಿನೇಷನ್ ಇಲ್ಲ ಅಂದರೆ, ಈ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗುತ್ತೆ.

ಜಾಹ್ನವಿಗೆ ಕ್ಲಾಸ್ ?
ಕಿಚ್ಚ ಸುದೀಪ್ ಇಂದು (ನವೆಂಬರ್ 15) ಕೆಲವು ಪ್ರಮುಖ ಅಂಶಗಳನ್ನು ಚರ್ಚೆ ಮಾಡಲಿದ್ದಾರೆ. ಅವುಗಳಲ್ಲಿ ಜಾಹ್ನವಿ ಮಾಡಿದ ಆರೋಪ ಹೈಲೈಟ್ ಆಗುವ ಸಾಧ್ಯತೆಯಿದೆ. ಸೂರಜ್ ಬಳಿಕ ಜಾಹ್ನವಿ ಕಲರ್ಸ್ ಕನ್ನಡದ ಮೇಲೆ ಆರೋಪ ಮಾಡಿದ್ದರು. ಸ್ಪಂದನಾ ಅವರನ್ನು ಕಲರ್ಸ್ ಕನ್ನಡವೇ ಉಳಿಸಿಕೊಳ್ಳುತ್ತಿದೆ ಎಂದಿದ್ದರು. ಪರೋಕ್ಷವಾಗಿ ಪಕ್ಷಪಾತ ಮಾಡುತ್ತಿದೆ ಎನ್ನುವ ಆರೋಪ ಮಾಡಿದ್ದರು. ಈ ವಿಚಾರವನ್ನೇ ಇಟ್ಟುಕೊಂಡು ಜಾಹ್ನವಿಗೆ ಕಿಚ್ಚ ಕ್ಲಾಸ್ ತೆಗೆದುಕೊಳ್ಳವ ಸಾಧ್ಯತೆಯಿದೆ.
ಮಾಳು ನಿಪನಾಳ ಬಗ್ಗೆನೂ ಚರ್ಚೆ
ಇನ್ನು ಕ್ಯಾಪ್ಟನ್ ಆಗಿದ್ದ ಮಾಳು ನಿಪನಾಳ ಬಗ್ಗೆನೂ ಚರ್ಚೆಯಾಗುವ ಸಾಧ್ಯತೆಯಿದೆ. ಮಾಳು ಕ್ಯಾಪ್ಟನ್ ಆಗಿದ್ದಾಗ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವುದಕ್ಕೆ ಕೊಟ್ಟ ಕಾರಣಗಳು ಸಮಂಜವಾಗಿ ಇರಲಿಲ್ಲ ಎಂದು ಮನೆ ಮಂದಿ ಆರೋಪ ಮಾಡಿದ್ದಾರೆ. ಹಾಗೇ ಕಳಪೆ ಪಟ್ಟ ಕೊಟ್ಟು ಜೈಲಿನಲ್ಲಿಯೂ ಕಾಲ ಕಳೆಯುವಂತೆ ಮಾಡಿದ್ದರು. ಹೀಗಾಗಿ ಮಾಳು ತೆಗೆದುಕೊಂಡಿದ್ದ ನಿರ್ಧಾರಗಳ ಬಗ್ಗೆನೂ ಕಿಚ್ಚ ಸುದೀಪ್ ಕುಲಂಕುಶವಾಗಿ ಚರ್ಚೆ ಮಾಡಲಿದ್ದಾರೆ.


Click it and Unblock the Notifications











