BBK 12: ಮೊದಲ ಎಲಿಮಿನೇಷನ್ನೇ ಡಬಲ್; ಹೊರ ಬಂದ ಇಬ್ಬರು ಸ್ಪರ್ಧಿಗಳ್ಯಾರು? ಏನಿದು ಲೆಕ್ಕಾಚಾರ?

ಬಿಗ್ ಬಾಸ್ ಕನ್ನಡ 12 ಆರಂಭ ಆಗಿ ಒಂದು ವಾರ ಕಳೆದಿದೆ. ಮೊದಲ ಎಲಿಮಿನೇಷನ್ ಕೂಡ ನಡೆದಿದೆ. ಬಿಗ್ ಬಾಸ್ ಮನೆಯಿಂದ 19 ಮಂದಿ ಸ್ಪರ್ಧಿಗಳ ಪೈಕಿ ಇಬ್ಬರು ಹೊ ಬಂದಿದ್ದೂ ಆಗಿದೆ. ಬಿಗ್ ಬಾಸ್ ಶುರುವಾಗುವ ಆರಂಭದಲ್ಲಿ ಅನಿರೀಕ್ಷಿತವಾದದ್ದನ್ನು ನಿರೀಕ್ಷೆ ಮಾಡಿ ಎಂಬ ಸುಳಿವನ್ನು ನೀಡಲಾಗಿತ್ತು. ಅದಂತೆ ಮೊದಲ ವಾರದ ಎಲಿಮಿನೇಷನ್ ಕಿಕ್ ಕೊಟ್ಟಿದೆ. ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರ ಬಿದ್ದಿದ್ದಾರೆ.

ಬಿಗ್ ಬಾಸ್ ಶುರುವಾದ ದಿನದಿಂದ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಕೆಯನ್ನು ನೀಡುತ್ತಲೇ ಇದ್ದರು. ಎರಡೆರಡು ಫಿನಾಲೆಗಳ ಬಗ್ಗೆ ಮಾತಾಡಿದ್ದರು. ಮಾಸ್ ಎಲಿಮಿನೇಷನ್ ಬಗ್ಗೆನೂ ನೇರವಾಗಿ ಸುಳಿವು ನೀಡಿದ್ದರು. ಆದರೆ, ಮನೆಯೊಳಗೆ ಇರುವ ಕೆಲ ಸ್ಪರ್ಧಿಗಳು ಕಿಚ್ಚನ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಕಾರಣಕ್ಕೆ ಮೊದಲ ವಾರದಲ್ಲಿಯೇ ಡಬಲ್ ಎಲಿಮಿಷನ್ ಆಗಿದೆ ಎಂಬ ಮಾತು ಹೇಳಿಬರುತ್ತಿದೆ.

Bigg Boss Kannada 12 first week elimination Karibasappa and RJ Amith out of Bigg Boss

ಈ ಸೀಸನ್‌ನ ಮೊದಲ 'ವಾರದ ಕಥೆ ಕಿಚ್ಚನ ಜೊತೆ'ಯಲ್ಲಿ ಸ್ಪರ್ಧಿಗಳಿಗೆ ಸುದೀಪ್ ಏನು ಹೇಳಬಹುದು? ಯಾರಿಗೆಲ್ಲ ಕ್ಲಾಸ್ ತೆಗೆದುಕೊಳ್ಳಬಹುದು? ಎಂದು ಕುತೂಹಲದಿಂದ ನೋಡುತ್ತಿದ್ದರು. ನಿರೀಕ್ಷೆ ಮಾಡಿದಂತೆ ಕಿಚ್ಚ ಸ್ಪರ್ಧಿಗಳ ಮೇಲೆ ಗರಂ ಆಗಿದ್ದರು. ಒಂಟಿ ಹಾಗೂ ಜಂಟಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ಜಂಟಿ ತಂಡದ ವಿರುದ್ಧ ಕಿಡಿಕಾರಿದ್ದಾರೆ. ನಿನ್ನೆ (ಅಕ್ಟೋಬರ್ 5) ಕಿಚ್ಚ ಮಾತುಗಳನ್ನು ಕೇಳಿದ ಬಳಿಕ ವೀಕ್ಷಕರು ಈ ವಾರ ಎಲಿಮಿನೇಟ್ ಆಗುವವರು ಯಾರೆಂದು ಗೆಸ್ ಮಾಡಿದ್ದರು. ನಿರೀಕ್ಷೆ ಮಾಡಿದಂತೆ ಅವರೇ ಎಲಿಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟೋ ಟ್ವಿಸ್ಟ್

ಮೊದಲ ವಾರ ಬಿಗ್ ಬಾಸ್ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಅನ್ನು ಕಂಡಿತ್ತು. ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದರು. ಇದು ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿಯೇ ಮೊದಲಾಗಿತ್ತು. ಇನ್ನೇನು ಮೊದಲ ವಾರ ಮುಗಿದು ವೀಕೆಂಡ್ ಬಂದಾಗ ಎಲಿಮಿನೇಟ್ ಆಗಿದ್ದ ರಕ್ಷಿತಾ ಶೆಟ್ಟಿಯನ್ನು ಮನೆಯೊಳಗೆ ಕಳುಹಿಸಿದ್ದರು. ರಕ್ಷಿತಾ ಹೊಳಗೆ ಹೊಗುತ್ತಿದ್ದಂತೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ.

Bigg Boss Kannada 12 first week elimination Karibasappa and RJ Amith out of Bigg Boss

ಈ ವಾರ ಡಬಲ್ ಎಲಿಮಿನೇಷನ್

ಹೌದು, ಬಿಗ್ ಬಾಸ್ ಕನ್ನಡ 12ರ ಮೊದಲ ವಾರದ ಎಲಿಮಿನೇಷನ್ ನಡೀತಿದೆ. ಈ ಬಾರಿನೂ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದೆ. ಮೊದಲ ವಾರದಲ್ಲಿ ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಿದೆ. ಇಂಟರ್‌ನ್ಯಾಷನಲ್ ಬಾಡಿ ಬಿಲ್ಡರ್ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇಬ್ಬರೂ ಒಂದೇ ವಾರಕ್ಕೆ ಮನೆಯ ಜರ್ನಿಯನ್ನು ಮುಗಿಸಿದ್ದಾರೆ.

ಡಬಲ್ ಎಲಿಮಿನೇಷನ್‌ಗೆ ಕಾರಣವೇನು?

ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಎಲಿಮಿನೇಷನ್‌ ಡಬಲ್ ಆಗಿದೆ. ಇದಕ್ಕೆ ಬಲವಾದ ಕಾರಣವೂ ಇದೆ. ಸೀನ್‌ ಆರಂಭದಿಂದಲೇ ಬಿಗ್ ಬಾಸ್ ಸುಳಿವುಗಳನ್ನು ನೀಡುತ್ತಿತ್ತು. ಬಿಗ್‌ಬಾಸ್‌ ಮನೆಯಲ್ಲಿ ಫಿನಾಲೆ ಆಟ ಶುರುವಾಗಿ 48 ಗಂಟೆಗಳೇ ಆಗಿದೆ. ಆದರೆ, ಮನೆಯ ಸದಸ್ಯರು ಮಾತ್ರ ಇನ್ನೂ ಅರಿವಿಲ್ಲದೆಯೇ ಇದ್ದಾರೆ ಎಂದಿದ್ದರು. ಅದರೂ ಕೆಲ ಸ್ಪರ್ಧಿಗಳು ಸೈಲೆಂಟ್ ಆಗಿಯೇ ಇದ್ದರು. ಅವರಲ್ಲಿ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್ ಜೋಡಿ ಕೂಡ ಒಂದು. ಈ ಕಾರಣಕ್ಕೆ ಮನೆಯಲ್ಲಿ ಆಕ್ಟಿವಿಟಿಯೇ ಇಲ್ಲದಂತೆ ಇದ್ದ ಜೋಡಿಯನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.

ಮುಂದಿನ ವಾರದ ಕಥೆಯೇನು?

ಮೊದಲ ವಾರದಲ್ಲಿಯೇ ಇಬ್ಬರು ಎಲಿಮಿನೇಟ್ ಆಗಿದ್ದರಿಂದ ಇಬ್ಬರು ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿದೆ. ಇದರಿಂದ ಒಳಗಿರುವ ಸ್ಪರ್ಧಿಗಳಲ್ಲಿ ಭಯ ಹುಟ್ಟಿಸಿದೆ. ಮುಂದಿನ ವಾರವೂ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಹೀಗಾಗಿ ಇನ್ನೂ ತಾನಾಯಿತು, ತನ್ನ ಕೆಲಸ ಆಯ್ತು ಅಂದುಕೊಂಡಿರುವ ಸ್ಪರ್ಧಿಗಳು 2ನೇ ವಾರ ಹೇಗೆ ಆಟ ಆಡುತ್ತಾರೆ ಅನ್ನೋದು ನೋಡಬೇಕಿದೆ.

More from Filmibeat

English summary
Bigg Boss Kannada 12 first week elimination Karibasappa and RJ Amith out of Bigg Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X