ಮತ್ತೆ ಬಿಗ್ ಬಾಸ್ ಡೋರ್ ಓಪನ್ ಆಯ್ತು.. 12ನೇ ಸೀಸನ್‌ನ ಮೊದಲ ವಾರದ ಟಿಆರ್‌ಪಿನೂ ಬಂತು!

ಬಿಗ್ ಬಾಸ್ ಕನ್ನಡ ಸೀಸನ್ 12 ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಜಾಲಿವುಡ್ ಸ್ಟುಡಿಯೋ ಪರಿಸರ ನಿಯಮ ಪಾಲಿಸದೇ ಇದ್ದಿದ್ದರಿಂದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೀಸ್ ಮಾಡಿತ್ತು. ಇದರೊಳಗೆ ಇದ್ದ ಬಿಗ್ ಬಾಸ್ ಮನೆಯನ್ನೂ ಸೀಲ್‌ಡೌನ್ ಮಾಡಲಾಗಿತ್ತು. ಎರಡು ದಿನಗಳ ಕಾಲ ಬಿಗ್ ಬಾಸ್ ಶೋವನ್ನು ರದ್ದು ಮಾಡಬೇಕಾಗಿತ್ತು. ಈಗ ಕೊನೆಗೂ ಸಮಸ್ಯೆ ಬಗೆಹರಿದು ಮತ್ತೆ ಬಿಗ್ ಬಾಸ್ ಶೋ ಆರಂಭ ಆಗಿದೆ.

ಈ ಬಾರಿ ಬಿಗ್ ಬಾಸ್ ವಿಭಿನ್ನವಾಗಿರುತ್ತೆ ಎಂದು ಆರಂಭಕ್ಕೂ ಮುನ್ನವೇ ತಿಳಿಸಲಾಗಿತ್ತು. ಅದರಂತೆ ಬಿಗ್ ಬಾಸ್ 12ನೇ ಸೀಸನ್ ಆರಂಭ ಆಗುತ್ತಿದ್ದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ವೀಕ್ಷಕರನ್ನು ತನ್ನತ್ತ ಸೆಳೆದಿತ್ತು. ಈಗ ಮೊದಲ ವಾರ ಕನ್ನಡದ ಈ ಬಿಗ್ ರಿಯಾಲಿಟಿ ಶೋಗೆ ವೀಕ್ಷಕರು ಹೇಗೆ ಪ್ರತಿಕ್ರಿಯಿಸಿದ್ದಾರೆ ಅನ್ನೋ ಫಲಿತಾಂಶನೂ ಹೊರಬಿದ್ದಿದೆ.

Bigg Boss Kannada 12 First week got highest TRP since launch

ಬಿಗ್ ಬಾಸ್ ಸೀಸನ್ 12ರ ಮೊದಲ ವಾರದ ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ಕನ್ನಡದ ಈ ಜನಪ್ರಿಯ ರಿಯಾಲಿಟಿ ಶೋಗೆ ಸಿಕ್ಕಾಪಟ್ಟೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆಗಿ ಹೊರಹೊಮ್ಮಿದೆ. ಹಾಗಿದ್ದರೆ, ಮೊದಲ ವಾರವೇ ಬಿಗ್ ಬಾಸ್ ಕನ್ನಡ ಸೀಸನ್ 12ಗೆ ಸಿಕ್ಕಿರುವ ರೆಸ್ಪಾನ್ಸ್ ಏನು? ಈ ರಿಯಾಲಿಟಿ ಶೋಗೆ ಬಂದ ಟಿಆರ್‌ಪಿ ಎಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಬಿಗ್ ಬಾಸ್ 12 ಮೊದಲ ವಾರದ ಟಿಆರ್‌ಪಿ ಎಷ್ಟು?

ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರಾಂಡ್ ಓಪನಿಂಗ್‌ಗೆ ಅತೀ ಹೆಚ್ಚು ಟಿಆರ್‌ಪಿ ಬಂದಿದೆ. ಸೆಪ್ಟೆಂಬರ್ 28 ಭಾನುವಾರ ಸಂಜೆ 6 ಗಂಟೆಯಿಂದ ಆರಂಭ ಆಗಿ 10.30ರವರೆಗೆ ನಡೆದಿತ್ತು. ಈ ದಿನ ಕಲರ್ಸ್ ಕನ್ನಡಕ್ಕೆ ಅತೀ ಹೆಚ್ಚು ಟಿಆರ್‌ಪಿ ಬಂದಿದೆ. ಇದೊಂದು ದಿನ 10.8 ಟಿಆರ್‌ಪಿ ಬಂದಿದೆ. ಈ ಮೂಲಕ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಅತೀ ಹೆಚ್ಚು ಎಂದು ಹೇಳಲಾಗಿದೆ.

ಕಿಚ್ಚನಿಗೆ ನಿರೂಪಣೆ ಫಿದಾ

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್‌ಗೆ ಅಭೂತಪೂರ್ವ ರೆಸ್ಪಾನ್ಸ್‌ ಸಿಕ್ಕಿದೆ. ಕಿಚ್ಚ ನಿರೂಪಣೆ ಬಿಗ್ ಬಾಸ್‌ನ ಯುಎಸ್‌ಪಿ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿವೆ. ಕಿಚ್ಚನ ಮಾತುಗಳು, ಮ್ಯಾನರಿಸಂ, ಕಾಮಿಡಿ ಹಾಗೂ ಸ್ಪರ್ಧಿಗಳನ್ನು ಹ್ಯಾಂಡಲ್ ಮಾಡುವ ರೀತಿಗೆ ವೀಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಹೀಗಾಗಿ 12ನೇ ಸೀಸನ್‌ನ ಗ್ರ್ಯಾಂಡ್ ಫಿನಾಲೆ ಕೂಡ ಸೂಪರ್ ಸಕ್ಸಸ್ ಆಗಿದೆ.

Bigg Boss Kannada 12 First week got highest TRP since launch

ವೀಕ್ ಡೇಸ್ ಟಿಆರ್‌ಪಿ ಎಷ್ಟು?

ಗ್ರ್ಯಾಂಡ್ ಓಪನಿಂಗ್‌ಗೆ ಭರ್ಜರಿ ಟಿಆರ್‌ಪಿ ಸಿಕ್ಕಿದೆ. ಅದೇ ಹಾಗೇ ಮೊದಲ ವಾರ ವೀಕ್ ಡೇಸ್‌ ಟಿಆರ್‌ಪಿ ಕೂಡ ಅಷ್ಟೇ ಅದ್ಭುತವಾಗಿದೆ. ಗ್ರ್ಯಾಂಡ್ ಓಪನಿಂಗ್‌ ಬಳಿಕ ಆರಂಭವಾದ ಡೈಲಿ ಶೋಗೂ ಸೂಪರ್‌ ರೆಸ್ಪಾನ್ಸ್ ಸಿಕ್ಕಿದೆ. 7.1 ಟಿಆರ್‌ಪಿ ಮೂಲಕ ಕಲರ್ಸ್ ಕನ್ನಡಕ್ಕೆ ಹೊಸ ಭರವಸೆಯನ್ನು ಮೂಡಿದೆ. ಒಟ್ಟಾರೆ ಮೊದಲ ವಾರದ ಬಿಗ್ ಬಾಸ್‌ ಕನ್ನಡ 12 ಸಕ್ಸಸ್ ಆಗಿದೆ.

2ನೇ ಸ್ಥಾನಕ್ಕೆ ಏರಿದ ಬಿಗ್ ಬಾಸ್

ಬಿಗ್ ಬಾಸ್ ಕನ್ನಡ ಸೀಸನ್ 12 ಭರ್ಜರಿ ಯಶಸ್ಸು ಕಲರ್ಸ್ ಕನ್ನಡವನ್ನು ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿದೆ. 38ನೇ ವೀಕ್‌ನಲ್ಲಿ 275 ಜಿಆರ್‌ಪಿ ಇದ್ದ ಚಾನೆಲ್ ರೇಟಿಂಗ್ 211 ಅಂಕಗಳ ಏರಿಕೆ ಮೂಲಕ 486ಕ್ಕೆ ಜಂಪ್ ಆಗಿದೆ. ಈ ಮೂಲಕ ಜೀ ಕನ್ನಡದ ಸಮೀಪದಲ್ಲಿದೆ. ಬಿಗ್ ಬಾಸ್ ಕಲರ್ಸ್ ಕನ್ನಡಕ್ಕೆ ಆರಂಭಿಕ ಗೆಲುವನ್ನು ಕೊಟ್ಟಿದೆ. ಮುಂದಿನ ವಾರಗಳಲ್ಲಿ ಹೇಗಿರುತ್ತೆ? ಎಂದು ನೋಡಬೇಕಿದೆ.

More from Filmibeat

English summary
Bigg Boss Kannada 12 First week got highest TRP since launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X