BBK 12: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಲಾಂಚ್; ಮನೆಯೊಳಗೆ ಯಾರೆಲ್ಲ ಎಂಟ್ರಿ ಕೊಟ್ರು?

ಬಿಗ್ ಬಾಸ್ ಕನ್ನಡ 12ನೇ ಸೀಸನ್‌ನಲ್ಲಿ ಮನರಂಜನೆಗೇನು ಕಮ್ಮಿಯಿಲ್ಲ. ಈ ರಿಯಾಲಿಟಿ ಶೋ ಶುರುವಾಗಿ ಮೂರು ವಾರಗಳು ಆಗುತ್ತಿದ್ದಂತೆ ಮಿಡ್ ಸೀಸನ್ ಫಿನಾಲೆ, ಗ್ರ್ಯಾಂಡ್ ಲಾಂಚ್ 2.0 ಮೂಲಕ ಮನರಂಜನೆ ಕೊಡಲಾಗಿದೆ. ವೀಕ್ಷಕರಿಗೆ ವೀಕೆಂಡ್‌ನಲ್ಲಿ ಪ್ರತಿ ದಿನ ಮೂರು ಗಂಟೆಗಳ ಕಾಲ ಸಖತ್ ಮನರಂಜನೆ ಸಿಕ್ಕಿದೆ. ಎಲ್ಲಕ್ಕಿಂತ ವೈಲ್ಡ್ ಕಾರ್ಡ್ ಎಂಟ್ರಿ ಯಾರು ಕೊಡಬಹುದೆಂಬ ಕುತೂಹಲವಿತ್ತು. ಅದೀಗ ರಿವೀಲ್ ಆಗಿದೆ.

ಈ ವೀಕೆಂಡ್ ಕಿಚ್ಚ ಸುದೀಪ್ ಕೆಲವರಿಗೆ ಕ್ಲಾಸ್ ತೆಗೆದುಕೊಳ್ಳಬೇಕಿತ್ತು. ಇಂತಹದ್ದೊಂದು ನಿರೀಕ್ಷೆ ವೀಕ್ಷಕರಲ್ಲೂ ಇತ್ತು. ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ, ಜಾಹ್ನವಿ ಆಡಿದ ಮಾತುಗಳಿಗೆ ಕ್ಲಾಸ್ ತೆಗೆದುಕೊಳ್ಳಬೇಕಿತ್ತು. ಇಬ್ಬರನ್ನು ಎಲಿಮಿನೇಟ್ ಮಾಡಬೇಕಿತ್ತು. ಮೂವರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡಿಸಬೇಕಿತ್ತು. ಇಂತಹ ಹಲವು ವಿಷಯಗಳು ಇಲ್ಲಿ ವೀಕೆಂಡ್‌ನಲ್ಲಿ ನಡೆಯುವುದಿತ್ತು.

Bigg Boss Kannada 12 Grand launch 2 o Wild Card Entry contestant list

ಬಿಗ್ ಬಾಸ್ ಮೊದಲನೇ ಫಿನಾಲೆ ಹಾಗೂ ಗ್ರ್ಯಾಂಡ್ ಲಾಂಚ್ 2.0 ಮೇಲೆ ನೀರಿಕ್ಷೆಯಿತ್ತು. ಕೊನೆಗೂ ಬಿಗ್ ಬಾಸ್ ಮನೆಯೊಳಗೆ ವೈಲ್ಡ್ ಎಂಟ್ರಿ ಕೊಡಲಿರುವ ಮೂರು ಸ್ಪರ್ಧಿಗಳು ಯಾರು ಅನ್ನೋದಕ್ಕೆ ಈಗ ತೆರೆ ಬಿದ್ದಿದೆ. ಮೂವರ ಹೆಸರುಗಳನ್ನು ರಿವೀಲ್ ಮಾಡಲಾಗಿದೆ. ಹಾಗಿದ್ದರೆ, ಆ ಮೂವರು ಸ್ಪರ್ಧಿಗಳು ಯಾರು? ಅವರ ಹಿನ್ನೆಲೆಯೇನು? ತಿಳಿಯುವುದಕ್ಕೆ ಮುಂದೆ ಓದಿ.

ಮೊದಲನೇ ಸ್ಪರ್ಧಿ ರಾಘವೇಂದ್ರ

ಬಿಗ್ ಬಾಸ್ ಕನ್ನಡ 12ರಲ್ಲಿ ಮೂರನೇ ವಾರದ ಹೊತ್ತಿಗೆ ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದು, ಅವರಲ್ಲಿ ಮೊದಲನೆಯವರು ರಾಘವೇಂದ್ರ. ಇತ್ತೀಚೆಗೆ ಇವರು 'ಕಾಂತಾರ ಚಾಪ್ಟರ್ 1' ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇಷ್ಟೇ ಅಲ್ಲದೆ, ಕಲರ್ಸ್ ಕನ್ನಡ ರಿಯಾಲಿಟಿ ಶೋ ಕ್ವಾಟ್ಲೆ ಕಿಚನ್ ವಿನ್ನರ್ ಆಗಿದ್ದರು. ಈಗ ಮೊದಲನೇ ಸ್ಪರ್ಧಿಯಾಗಿ ರಾಘವೇಂದ್ರ ಎಂಟ್ರಿ ಕೊಟ್ಟಿದ್ದಾರೆ. ಊಟ ಸಿಗದೇ ಹೋದರೆ, ಮನೆಯೊಳಗೆ ಇದ್ದಿದ್ದೆಲ್ಲ ಪೀಸ್ ಪೀಸ್ ಆಗುತ್ತೆ ಎಂದು ಹೇಳಿ ಒಳಗೆ ಹೋಗಿದ್ದಾರೆ.

ಎರಡನೇ ಸ್ಪರ್ಧಿ ರಿಶಾ ಗೌಡ

ಬಿಗ್ ಬಾಸ್ ಮನೆಯೊಳಗೆ ಎರಡನೇ ಸ್ಪರ್ಧಿಯಾಗಿ ರಿಶಾ ಗೌಡ ಎಂಟ್ರಿ ಕೊಟ್ಟಿದ್ದಾರೆ. ರಿಷಾ ಗೌಡ ಕ್ರೀಡಾಪಟು ಆಗಬೇಕೆಂಬ ಆಸೆ ಇಟ್ಟಿಕೊಂಡಿದ್ದರು. ರನ್ನರ್ ಆಗಿದ್ದವರಿಗೆ ಸ್ಪೋರ್ಟ್ಸ್‌ನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದಿತ್ತು. ಆದರೆ, ಅವರನ್ನು ಮನರಂಜನಾ ಲೋಕಕ್ಕೆ ಕರೆದುಕೊಂಡು ಬಂದಿದೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಆಸ್ಟಿನ್​​ ನ ಮಹಾನ್ ಮೌನ', 'ಬೆಂಗಳೂರು ಇನ್', 'ಜೂನಿಯರ್', 'ಗ್ಯಾಂಗ್​​ಸ್ಟರ್ ಆಫ್ ರಾಜಧಾನಿ' ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ರಿಶಾ ಗೌಡಗೂ ಕೂಡ ಸಿಕ್ಕಾಪಟ್ಟೆ ಕೋಪವಂತೆ. ಹೀಗಾಗಿ ಮನೆಯಲ್ಲಿ ಹಂಗಾಮ ಸೃಷ್ಟಿ ಮಾಡುತ್ತಾರಾ ಅನ್ನೋ ನಿರೀಕ್ಷೆಯಿಂದ ವೀಕ್ಷಕರು ಕಾಯುತ್ತಿದ್ದಾರೆ.

ಮೂರನೇ ಸ್ಪರ್ಧಿ ಸೂರಜ್ ಸಿಂಗ್

ಮೂರನೇ ಸ್ಪರ್ಧಿ ನಿಜಕ್ಕೂ ಸರ್ಪ್ರೈಸಿಂಗ್ ಆಗಿತ್ತು. ಸಿನಿಮಾರಂಗಕ್ಕೆ ಸಂಬಂಧ ಪಡದೇ ಇರುವ ಸೂರಜ್ ಸಿಂಗ್ ಎಂಬುವವರು ಎಂಟ್ರಿ ಕೊಟ್ಟಿದ್ದಾರೆ. ಮೂಲತ: ಮೈಸೂರಿನವರಾಗಿರುವ ಇವರು ಐಟಿ ಪ್ರೊಫೆನಲ್. ಕೆನಡಾದಲ್ಲಿ ಇದ್ದವರು ಅಮ್ಮನಿಗಾಗಿ ಮೈಸೂರಿಗೆ ಮರಳಿದ್ದಾರೆ. ಸದ್ಯ ಮಾಡಲ್ ಆಗಿಯೂ ಗುರುತಿಸಿಕೊಂಡಿರುವ ಸೂರಜ್ ಫಿಟ್ನೆಸ್ ಫ್ರೀಕ್ ಜೊತೆ ಅಡುಗೆ ಕೂಡ ಮಾಡುತ್ತಾರಂತೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯೊಳಗೆ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇವರಲ್ಲಿ ರಾಘವೇಂದ್ರ ಹಾಗೂ ರಿಶಾ ಗೌಡ ತಮಗೆ ಕೋಪ ಜಾಸ್ತಿ ಅಂತ ಹೇಳುತ್ತಲೇ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಮಾಡಲ್ ಸೂರಜ್ ಸಿಂಗ್ ತಮ್ಮ ಚಾರ್ಮ್‌ನಿಂದ, ಸ್ಕಿಲ್‌ನಿಂದ ಮನೆಯಲ್ಲಿ ಹೇಗೆ ಆಟ ಆಡುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Bigg Boss Kannada 12 Grand launch 2.o Wild Card Entry contestant list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X