11ನೇ ಸೀಸನ್‌ನಲ್ಲಿ ಶೇ.82ರಷ್ಟು ಟಿವಿ ವೀಕ್ಷಕರನ್ನು ಸೆಳೆದಿದ್ದ ಬಿಗ್ ಬಾಸ್ ಕನ್ನಡ; 12ನೇ ಸೀಸನ್ ಹೇಗಿರುತ್ತೆ?
ಭಾರತ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗಾಗಲೇ ಕೆಲವೆಡೆ ಆರಂಭ ಆಗಿದೆ. ಹಿಂದಿ, ಮಲಯಾಳಂ, ತೆಲುಗು ಭಾಷೆಗಳಲ್ಲಿ ಶುರುವಾಗಿದೆ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಇದೇ ತಿಂಗಳು (ಸೆಪ್ಟೆಂಬರ್) 28ರಂದು ಕನ್ನಡದಲ್ಲಿ ಅದ್ಧೂರಿಯಾಗಿ ಆರಂಭ ಆಗುತ್ತಿದೆ. 12ನೇ ಸೀಸನ್‌ಗೆ ಬೇಕಿರೋ ಎಲ್ಲಾ ತಯಾರಿಗಳೂ ತೆರೆಮರೆಯಲ್ಲಿ ನಡೆಯುತ್ತಿದೆ. 11ನೇ ಸೀಸನ್ ಕನ್ನಡದ ಮಟ್ಟಿಗೆ ಲಾಭದಾಯಕ ಅಂತ ಸಾಬೀತಾಗಿತ್ತು.
ಈಗ ಅದೇ ಜೋಷ್‌ನಲ್ಲಿ ಮತ್ತೊಂದು ಸೀಸನ್ ಆರಂಭ ಆಗುತ್ತಿದೆ. ಬಿಗ್ ಬಾಸ್ ಕನ್ನಡ 11ನೇ ಸೀಸನ್ ಕರ್ನಾಟಕದಲ್ಲಿ ಶೇ.82ರಷ್ಟು ವೀಕ್ಷಕರನ್ನು ತಲುಪಿತ್ತು ಎಂದು ಜಿಯೋಸ್ಟಾರ್ ಹೇಳಿಕೊಂಡಿದೆ. ಈ ಮೂಲಕ ಕರ್ನಾಟಕದ ಅತೀ ದೊಡ್ಡ ಹಾಗೂ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿತ್ತು. ಹೀಗಾಗಿ 12ನೇ ಸೀಸನ್ ಅನ್ನು ವಿಶೇಷವಾಗಿ ಕಿರುತೆರೆಗೆ ತರುವುದಕ್ಕೆ ಸಿದ್ಧವಾಗಿದೆ.

ಕಳೆದ ಒಂದು ದಶಕಗಳಿಗಿಂತಲೂ ಹೆಚ್ಚು ಕಾಲ ಪ್ರಸಾರ ಆಗಿರುವ ಬಿಗ್ ಬಾಸ್ ಕನ್ನಡ ಈಗ 12ನೇ ಸೀಸನ್‌ಗೆ ಕಾಲಿಡಲಿದೆ. ಕಿಚ್ಚ ಸುದೀಪ್ ನಿರೂಪಣೆ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರೆ, ಈ ಸೀಸನ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು, ಟಾಸ್ಕ್‌ಗಳು ವೀಕ್ಷಕರನ್ನು ಒಂದೂವರೆ ಗಂಟೆಗಳ ಕಾಲ ಈ ರಿಯಾಲಿಟಿ ಶೋ ಅನ್ನು ನೋಡುವಂತೆ ಮಾಡುತ್ತವೆ.
ಬಿಗ್ ಬಾಸ್ ಕನ್ನಡ ಜಿಯೋಸ್ಟಾರ್ ಸಂಸ್ಥೆಯ ಮಹತ್ವಕಾಂಕ್ಷೆಯ ಶೋಗಳಲ್ಲಿ ಒಂದಾಗಿದೆ. ಹೀಗಾಗಿ ಈ ಬಾರಿ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗುತ್ತಿದ್ದಾರೆ. ಜಿಯೋಸ್ಟಾರ್ ಸೌತ್‌ನ ಎಂಟರ್‌ಟೈನ್ಮೆಂಟ್ ಕ್ಲಸ್ಟರ್ ಹೆಡ್ ಕೃಷ್ಣನ್ ಕುಟ್ಟಿ ಪ್ರಕಾರ, "ಬಿಗ್ ಬಾಸ್ ಒಂದು ಕಲ್ಚರ್ ಪವರ್‌ಹೌಸ್. ಇದು ಸಮಾಜದ ವೈವಿಧ್ಯಮಯ ಸಂಕೀರ್ಣತೆಯ ಪ್ರತಿಬಿಂಬವಾಗಿದೆ. ಹೀಗಾಗಿ ವೀಕ್ಷಕರು ಈ ರಿಯಾಲಿಟಿ ಶೋನೊಂದಿಗೆ ಕನೆಕ್ಟ್ ಆಗುವುದಕ್ಕೆ ಸಾಧ್ಯವಾಗುತ್ತೆ." ಎಂದು ಹೇಳಿದ್ದಾರೆ.
ಹಾಗೇ ಬಿಗ್ ಬಾಸ್ ಕನ್ನಡ ಹೇಗೆ ಪ್ರತಿ ಸೀಸನ್‌ನಲ್ಲೂ ಬದಲಾಗುತ್ತಾ ಮುನ್ನುಗುತ್ತಿದೆ ಎನ್ನುವುದನ್ನು ಹೇಳಿದ್ದಾರೆ. "ಪ್ರತಿ ಸೀಸನ್‌ನಲ್ಲೂ ಹೊಸ ರೂಪದಲ್ಲಿ ಮರುಪರಿಚಯ ಮಾಡಿಕೊಳ್ಳುತ್ತಲೇ ವೀಕ್ಷಕರನ್ನು ಸೆಳೆಯುತ್ತಾ ಇಷ್ಟು ವರ್ಷಗಳ ಕಾಲ ನಿಷ್ಠೆಯಿಂದ ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಕನ್ನಡ ಇದು ಕೇವಲ ಟಿವಿ ಶೋ ಅಷ್ಟೇ ಅಲ್ಲ. ಇದು ಪೀಳಿಗೆಗಳನ್ನೂ, ಸಮುದಾಯಗಳನ್ನೂ ಸಂಪರ್ಕಿಸುವ ಒಂದು ಸಾಂಸ್ಕೃತಿಕ ಸಾಧನ" ಎಂದು ಬಿಗ್ ಬಾಸ್ ಬೆಳೆವಣಿಗೆಯನ್ನು ಬಣ್ಣಿಸಿದ್ದಾರೆ.

ಬಿಗ್ ಬಾಸ್ ತಾರೆಯರಿಗೆ ವೇದಿಕೆ
ಬಿಗ್ ಬಾಸ್ ಕನ್ನಡ ಇಷ್ಟು ವರ್ಷಗಳಿಂದ ಹೊಸ ತಾರೆಯರನ್ನು ಹುಟ್ಟಾಕಿದೆ. ಸೋಶಿಯಲ್ ಮೀಡಿಯಾ ತಾರೆಯರನ್ನು ಇನ್ನಷ್ಟು ಜನಪ್ರಿಯಗೊಳಿಗೆ ಮುಖ್ಯವಾಹಿನಿಗೆ ತಂದಿದೆ. ಹಾಗೇ ಕೆಲವು ಬ್ರ್ಯಾಂಡ್‌ಗಳು ಕೂಡ ಬಿಗ್ ಬಾಸ್‌ನಿಂದಲೇ ಜನಪ್ರಿಯವಾಗಿದೆ. ಆಟೋ, ಟೆಕ್, ಇ-ಕಾಮರ್ಸ್, ಪುಡ್ ಪ್ರಾಡಕ್ಟ್‌ಗಳು ತಮ್ಮ ಬ್ರ್ಯಾಂಡ್‌ಗಳ ಮೌಲ್ಯಗಳನ್ನು ಹೆಚ್ಚಿಸಿಕೊಂಡಿವೆ ಎಂಬುವುದು ಆಯೋಜಕರ ಅಭಿಪ್ರಾಯ.
ಮನರಂಜನೆಗೆ ಪ್ರಮುಖ ಆದ್ಯತೆ
ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳ ವ್ಯಕ್ತಿತ್ವದ ಅನಾವಣ ಆಗಿದ್ದರೆ, ಇನ್ನೊಂದು ಕಡೆ ಮನರಂಜನೆ ತಾಣ. ಟಾಸ್ಕ್‌ಗಳಿಂದ, ಸ್ಪರ್ಧಿಗಳ ಆಕ್ಟಿವಿಟೀಸ್‌ನಿಂದ ವೀಕ್ಷಕರನ್ನು ಸೆಳೆಯುತ್ತಿದೆ. ಇದು ಕೇವಲ ಯುವಕರನ್ನಷ್ಟೇ ಅಲ್ಲ. ಮನೆಯಲ್ಲಿರುವ ಹಿರಿಯರನ್ನು ಕೂಡ ಸೆಳೆಯುತ್ತಿದೆ. ಹೀಗಾಗಿ ವೀಕ್ಷಕರನ್ನು ಸೆಳೆಯುವುದಕ್ಕೆ ಜಿಯೋಹಾಟ್‌ಸ್ಟಾರ್ ಮೂಲಕ ಲೈವ್ ವೋಟಿಂಗ್, ಸಮೀಕ್ಷೆಗಳು ಮತ್ತು ಕ್ವಿಜ್‌ಗಳಲ್ಲಿ ಭಾಗವಹಿಸುವ ಅವಕಾಶವನ್ನು ನೀಡಲಾಗಿದೆ.


Click it and Unblock the Notifications











