BBK 12: ಬಿಗ್‌ಬಾಸ್‌ನಿಂದ ಮಲ್ಲಮ್ಮನ ಪರದಾಟವೋ.. ಮಲ್ಲಮ್ಮನಿಂದ ಬಿಗ್‌ಬಾಸ್ ಪರದಾಡುತ್ತಿಯೋ?
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ವೇದಿಕೆ ಮೇಲೆ ನಿಂತ 19 ಮಂದಿ ಮನೆಯೊಳಗೆ ಹೋದವರಲ್ಲಿ ಒಬ್ಬರು ಮೊದಲ ದಿನವೇ ಎಲಿಮಿನೇಟ್ ಆಗಿದ್ದಾರೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಇಂತಹದ್ದೊಂದು ಎಲಿಮಿನೇಷನ್ ನಡೆದೇ ಇರಲಿಲ್ಲ. ಈ ಎಲಿಮಿನೇಷನ್‌ಗೆ ಹಲವು ಕಾರಣಗಳನ್ನು ಊಹೆ ಮಾಡಬಹುದು. ಈಗ ಮತ್ತೊಬ್ಬ ಸ್ಪರ್ಧಿ ಕೂಡ ಇದೇ ಸಾಲಿಗೆ ಸೇರುತ್ತಾರಾ? ಅನ್ನೋ ಪ್ರಶ್ನೆ ಕಾಡುತ್ತಿದೆ.
ಬಿಗ್ ಬಾಸ್ ಮನೆಗೆ ಸೋಶಿಯಲ್ ಮೀಡಿಯಾ ಸ್ಟಾರ್ ಕ್ಯಾಟಗರಿಯಿಂದ ಎಂಟ್ರಿ ಕೊಟ್ಟವರು ಮಲ್ಲಮ್ಮ. ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರತಿಭೆ ಮಲ್ಲಮ್ಮನನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿದೆ. ಒಂಟಿಯಾಗಿ ಎಂಟ್ರಿ ಕೊಟ್ಟಿರುವ ಮಲ್ಲಮ್ಮನಿಗೆ ಮನೆಯೊಳಗೆ ಮೊದಲ ದಿನ ಉಳಿದ ಸ್ಪರ್ಧಿಗಳಿಂದ ಬೆಂಬಲ ಸಿಗುತ್ತಿದೆ. ಆದರೆ, ಬಿಗ್ ಬಾಸ್ ಬಗ್ಗೆ ಅರಿವೇ ಇಲ್ಲದ ಮಲ್ಲಮ್ಮನ ಮೊದಲ ದಿನ ಹೇಗಿತ್ತು? ಇಲ್ಲಿ ಪರದಾಡಿದವರು ಯಾರು? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಕಿಚ್ಚ ಸುದೀಪ್ ವೇದಿಕೆ ಮೇಲೆ ಇಂತಹದ್ದೊಂದು ಸುಳಿವು ನೀಡಿದ್ದರು. ಮಲ್ಲಮ್ಮನನ್ನು ಮನೆಯೊಳಗೆ ಕಳುಹಿಸಿ ಕೊಡುವಾಗಲೇ ಈ ಬಾರಿ ಬಿಗ್ ಬಾಸ್‌ಗೆ ಟಾಸ್ಕ್ ಸಿಗೋದು ಗ್ಯಾರಂಟಿ ಅನ್ನೋ ಸಿಗ್ನಲ್ ಕೊಟ್ಟಿದ್ದರು. ಮೊದಲ ದಿನ ಅಂತಹದ್ದೊಂದು ಸುಳಿವು ಸಿಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಮಲ್ಲಮ್ಮ ಪರದಾಡುತ್ತಿದ್ದಾರಾ? ಇಲ್ಲ ಮಲ್ಲಮ್ಮನಿಗೆ ಅರ್ಥ ಮಾಡಿಸೋಕೆ ಬಿಗ್ ಬಾಸ್ ಪರದಾಡುತ್ತಿದೆಯಾ? ಅನ್ನೋ ಅನುಮಾನ ಶುರುವಾಗಿದೆ.
ಮಲ್ಲಮ್ಮನಿಗೆ ಟಾಸ್ಕ್ ಅರ್ಥ ಆಗ್ತಿಲ್ಲ
ಹೌದು, ಬಿಗ್ ಬಾಸ್ ಕನ್ನಡ 12ರ ಮೊದಲ ದಿನದ ಟಾಸ್ಕ್ ಆರಂಭಗೊಂಡಿದೆ. ಮನೆ ಮಂದಿಗೆ ದಿನಸಿ ಕೊಡುವುದಕ್ಕೆ ಬಿಗ್ ಬಾಸ್ ಟಾಸ್ಕ್ ಒಂದನ್ನು ಕೊಟ್ಟಿದೆ. ಒಂಟಿ ತಂಡಕ್ಕೊಂದು ಟಾಸ್ಕ್, ಜಂಟಿ ತಂಡಕ್ಕೊಂದು ಟಾಸ್ಕ್. ಹೀಗಾಗಿ ಈ ಟಾಸ್ಕ್‌ನಲ್ಲಿ ಮಲ್ಲಮ್ಮ ಕೂಡ ಭಾಗವಹಿಸಬೇಕಿದೆ. ಮನೆಮಂದಿಯೊಂದು ನಗುನಗುತ್ತಾ ಹೊಂದಾಣಿಕೆ ಮಾಡಿಕೊಂಡಿರುವ ಮಲ್ಲನಿಗೆ ಟಾಸ್ಕ್ ವಿಷಯ ಬಂದಾಗ ಕಷ್ಟ ಆಗುತ್ತಿದೆ. ಇದು ಮೊದಲ ದಿನವೇ ಗೊತ್ತಾಗಿದೆ.
ಇತ್ತ ಬಿಗ್ ಬಾಸ್‌ಗೂ ಮಲ್ಲಮ್ಮನಿಗೆ ಟಾಸ್ಕ್ ಏನು ಅಂತ ಹೇಳುವುದಕ್ಕೆ ಕಷ್ಟ ಆಗುತ್ತಿದೆ. ಮೊದಲ ದಿನ ಸಿಂಪಲ್ ಟಾಸ್ಕ್ ಅನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಲ್ಲಮ್ಮ ಪರದಾಡಿದ್ದಾರೆ. ಹಾಗೇ ಮಲ್ಲಮ್ಮನಿಗೆ ಈ ಟಾಸ್ಕ್ ಅನ್ನು ಅರ್ಥ ಮಾಡಿಸುವುದಕ್ಕೂ ಬಿಗ್ ಬಾಸ್ ಪರದಾಡಿದಂತೆ ಕಂಡು ಬಂದಿದೆ. ಈ ಕಾರಣಕ್ಕೆ ಬಿಗ್ ಬಾಸ್ ಮುಂದಿನ ದಿನಗಳಲ್ಲಿ ಮಲ್ಲಮ್ಮನನ್ನು ಹೇಗೆ ಹ್ಯಾಂಡಲ್ ಮಾಡುತ್ತೆ ಅನ್ನೋ ಕುತೂಹಲವಿದೆ.
ಮಲ್ಲಮ್ಮನಿಗೆ ಟ್ವಿಸ್ಟ್ ಕೊಡಬಹುದೇ?
ಬಿಗ್ ಬಾಸ್ ಮನೆಯ ರೂಲ್ಸ್, ಟಾಸ್ಕ್ ಅನ್ನು ಅರ್ಥ ಮಾಡಿಸುವುದಕ್ಕೆ ಮಲ್ಲಮ್ಮನಿಗೆ ಸಹಾಯಕರೊಬ್ಬರು ಬೇಕಿದ್ದಾರೆ. ಸದ್ಯ ಮನೆಯೊಳಗೆ ಜಂಟಿಯಾಗಿ ಬಿಟ್ಟಿರುವ ಬಿಗ್ ಬಾಸ್ ಮುಂದಿನ ದಿನಗಳಲ್ಲಿ ಜಂಟಿಯಾಗಿ ಮಾಡಬಹುದು. ಅದಕ್ಕೆ ಕೆಲವು ಟ್ವಿಸ್ಟ್‌ಗಳನ್ನು ಕೊಡಬೇಕಾಗಿ ಬರಬಹುದು. ಮೊದಲ ದಿನ ಮಲ್ಲಮ್ಮನಿಗೆ ಟಾಸ್ಕ್ ಅರ್ಥ ಮಾಡಿಸುವುದಕ್ಕೆ ಬಿಗ್ ಬಾಸ್ ಪರದಾಡಿದ್ದರಿಂದ ಹೆಚ್ಚು ದಿನ ಮನೆಯೊಳಗೆ ಉಳಿಯುವುದಿಲ್ಲ ಅನ್ನೋ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಆದರೆ, ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಇರುವ ವಿಶೇಷ ಸ್ಪರ್ಧಿ ಮಲ್ಲಮ್ಮ. ಉತ್ತರ ಕರ್ನಾಟಕದ ಪ್ರತಿಭೆಗೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ ಮೊದಲ ವಾರ ಮಲ್ಲಮ್ಮನನ್ನು ಉಳಿಸಿಕೊಳ್ಳುತ್ತಾರಾ? ಇಲ್ಲ ಎಲಿಮಿನೇಟ್ ಮಾಡುತ್ತಾರಾ? ಅನ್ನೋ ಪ್ರಶ್ನೆ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ವೀಕ್ಷಕರ ಮನಸ್ಸು ಗೆದ್ದರೆ, ಮಲ್ಲಮ್ಮ ಮನೆಯಲ್ಲಿ ಉಳಿದುಕೊಳ್ಳಬಹುದು. ಇಲ್ಲದೇ ಹೋದಲ್ಲಿ ಮೊದಲ ವಾರವೇ ಎಲಿಮಿನೇಟ್ ಆಗುವ ಭೀತಿ ಅಂತೂ ಇದೆ.


Click it and Unblock the Notifications











