Bigg Boss Kannada 12 Live: ಬಿಗ್ ಬಾಸ್ 12 ಗ್ರ್ಯಾಂಡ್ ಓಪನಿಂಗ್ ಶುರು; ಒಂಟಿ- ಜಂಟಿ ಟ್ವಿಸ್ಟ್

ಬಿಗ್ ಬಾಸ್ ಕನ್ನಡ 12 ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಸೀಸನ್. ಕಲರ್ಸ್ ಕನ್ನಡಕ್ಕೆ ಸೀಸನ್ 11 ಒಳ್ಳೆಯ ರೇಟಿಂಗ್ ತಂದುಕೊಟ್ಟಿತ್ತು. ಜಿಯೋಸ್ಟಾರ್ ಹೇಳೀಕೊಂಡಂತೆ ಶೇ. 80ರಷ್ಟು ವೀಕ್ಷಕರು ಬಿಗ್‌ ಬಾಸ್ ಕನ್ನಡ ಸೀಸನ್ 11 ಅನ್ನು ವೀಕ್ಷಣೆ ಮಾಡಿದ್ದರು. ಈಗ 12ನೇ ಸೀಸನ್ ಮೇಲೆ ಎಲ್ಲರೂ ಕಣ್ಣಿದೆ. ಈ ಬಾರಿ ಬಿಗ್ ಬಾಸ್ ಫಾರ್ಮೆಟ್ ಅನ್ನು ಕೊಂಚ ಮಟ್ಟಿಗೆ ಬದಲಾಯಿಸಲಾಗಿದೆ. ಶೋ ಆರಂಭಕ್ಕೂ ಮುನ್ನವೇ ಕಾಕ್ರೋಚ್ ಸುಧೀ, ಮಂಜು ಭಾಷಿಣಿ ಹಾಗೂ ಮಲ್ಲನ ಈ ಮೂವರನ್ನು ಹೆಸರನ್ನು ರಿವೀಲ್ ಮಾಡಿರೋದೇ ಸಾಕ್ಷಿ.

ಕಿಚ್ಚ ಸುದೀಪ್ ನಿರೂಪಣೆ ಬಿಗ್ ಬಾಸ್ ಕನ್ನಡ ಸೀಸನ್ 12ರ ಹೈಲೈಟ್. ಪ್ರತಿ ಸೀಸನ್‌ಗಿಂತ ಈ ಬಾರಿ ಕಿಚ್ಚ ವಿಭಿನ್ನವಾಗಿ ಹಾಗೂ ಇನ್ನಷ್ಟು ಎನರ್ಜೆಟಿಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ನಿರೂಪಣೆ ಶೈಲಿ ಈ ರಿಯಾಲಿಟಿ ಶೋ ಪ್ರಮುಖ ಆಕರ್ಷಣೆ. ಸಂದರ್ಭಕ್ಕೆ ತಕ್ಕಂತೆ ಪಂಚ್ ಕೊಡುವ, ಕಾಮಿಡಿ ಕಿಕ್ ನೀಡುವ ಕಿಚ್ಚನ ಸ್ವ್ಯಾಗ್ ನೋಡುವುದೇ ಒಂದು ಹಬ್ಬ. ಇಂದು (ಸೆಪ್ಟೆಂಬರ್ 28) ಸಂಜೆ 6 ಗಂಟೆಯಿಂದ ಗ್ರ್ಯಾಂಡ್ ಆಗಿ 12ನೇ ಸೀಸನ್ ಲಾಂಚ್ ಆಗಲಿದೆ.

Bigg Boss Kannada 12 Live Updates Kichcha Sudeep hosted Contestants Performances amp amp Highlights

ಇನ್ನು ಈ ಬಾರಿ ಬಿಗ್ ಬಾಸ್ ಸೆಟ್ ಕೂಡ ಸಂಪೂರ್ಣವಾಗಿ ಬದಲಾಗಿದೆ. ಕಿಚ್ಚನ ಷರತ್ತಿನಂತೆ ಸಂಪೂರ್ಣ ಕನ್ನಡಮಯವಾಗಿದೆ. ನಾಡ ಹಬ್ಬ ದಸರಾ ಶೈಲಿಯಲ್ಲಿ ಸೆಟ್‌ ನಿರ್ಮಾಣ ಆಗಿದೆ. ಎಲ್ಲೆಲ್ಲೂ ಕನ್ನಡದ ಪದಗಳೇ ಕಾಣಿಸುತ್ತವೆ. ಇನ್ನು ಈಗಾಗಲೇ ಕೆಲವು ಸ್ಪರ್ಧಿಗಳ ಹೆಸರು ಲೀಕ್ ಆಗಿವೆ. ಗಿಲ್ಲಿ ನಟ, ಅಶ್ವಿನಿ ಗೌಡ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ಧನುಷ್ ಗೌಡ, ಅಭಿಷೇಕ್ ಶ್ರೀಕಾಂತ್, ಸ್ಪಂದನಾ ಸೋಮಣ್ಣ, ಡಾಗ್ ಸತೀಶ್, ರಾಶಿಕಾ ಶೆಟ್ಟಿ, ಮೌನ ಗುಡ್ಡೇಮನೆ, ಶ್ರೇಯಸ್ ಮಂಜು, ಶ್ವೇತಾ ಪ್ರಸಾದ್, ವಿಜಯ್ ಸೂರ್ಯ, ಆರ್‌.ಜೆ ಅಮಿತ್, ಜಾಹ್ನವಿ, ದೇವಿಕಾ ಭಟ್ ಹೆಸರು ಲೀಕ್ ಆಗಿವೆ. ಇವರೆಲ್ಲರೂ ಬಿಗ್ ಬಾಸ್‌ಗೆ ಎಂಟ್ರಿ ಕೊಡುತ್ತಾರಾ? ಶೋ ಹೈಲೈಟ್ ಏನು? ಅನ್ನೋದರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • Sep 28, 2025 9:19 PM
    ಅಭಿ ಜೊತೆ ಜಂಟಿಯಾದ ಅಶ್ವಿನಿ

    ಒಂಟಿ ಜಂಟಿ ಕಾನ್ಸೆಪ್ಟ್ ಅಡಿ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆ ಒಂಟಿಯಾಗಿ ತಮ್ಮ ಪಾರ್ಟನರ್ ಗೆ ಕಾಯುತ್ತಿದ್ದ ಅಭಿಗೆ ಸದ್ಯ ಪಾರ್ಟನರ್ ಸಿಕ್ಕಿದ್ದು ಮುದ್ದು ಲಕ್ಷ್ಮೀ ಖ್ಯಾತಿಯ ಅಶ್ವಿನಿ ಅವರ ಜೊತೆ ಮನೆಯೊಳಗೆ ಹೋಗಿದ್ದಾರೆ. ಆರಂಭದಲ್ಲಿ ಅಶ್ವಿನಿ ಅಗ್ನಿ ಪರೀಕ್ಷೆ ನೀಡಿದರಾದರೂ ಕೊನೆಯಲ್ಲಿ ಅಭಿ ಜೊತೆ ಮನೆಯೊಳಗೆ ಹೋಗುವ ತೀರ್ಮಾನ ಕೈಗೊಂಡರು

  • Sep 28, 2025 8:51 PM
    ಸುದೀಪ್ ಹೃದಯ ಗೆದ್ದ ಮಲ್ಲಮ್ಮ

    ಉತ್ತರ ಕರ್ನಾಟಕದ ಹಲವರು ಬೆಂಗಳೂರಿಗೆ ಬಂದು ಬದುಕು ರೂಪಿಸಿಕೊಂಡಿದ್ದಾರೆ. ಹೆಸರು ಮಾಡಿ ಬಿಗ್ ಬಾಸ್ ಮನೆಯನ್ನು ಕೂಡ ಪ್ರವೇಶಿಸಿದ್ದಾರೆ. ತಮ್ಮ ಮುಗ್ದ ಮಾತುಗಳಿಂದ ಕಿಚ್ಚನ ಹೃದಯವನ್ನು ಕೂಡ ಗೆದ್ದಿದ್ದಾರೆ. ಮಲ್ಲಮ್ಮ ಅವರ ಮಾತುಗಳಿಗೆ ಮಾರು ಹೋದ ಸುದೀಪ್ ಮಲ್ಲಮ್ಮ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡರು. ಲೆಮನ್ ಟೀ ರೆಸೆಪಿ ಕೇಳಿ ಮನಸಾರೆ ನಕ್ಕರು.

  • Sep 28, 2025 8:15 PM
    ಕಿಚ್ಚನ ಬಗ್ಗೆ ಮಂಜುಭಾಷಿಣಿ ಕವನ

    ಬಿಗ್‌ಬಾಸ್ ಮನೆಗೆ 8ನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಮಂಜುಭಾಷಿಣಿ ಬಂದಿದ್ದಾರೆ. ಸುದೀಪ್ ಅವರನ್ನು ಹಾಡಿ ಹೊಗಳಿದ ಆಕೆ ಒಂದು ಕವನ ಹೇಳಿ ಗಮನ ಸೆಳೆದಿದ್ದಾರೆ. ಸೋತಾಗ ಕೈ ಚೆಲ್ಲಿದಾಗ ಬಿದ್ದಾಗ ಎದ್ದಾಗ ಕಣ್ಣೀರು ಒರೆಸುವ ಕೋಮಲ ಸ್ಪರ್ಶವಾಗಿ, ಹಿತ ನುಡಿಯ ಹಿತೈಷಿ ರನ್ನನಾಗಿ ಅಬ್ಬರಿಸಿ ಸೊಕ್ಕನ್ನು ಮುರಿಯುವ ವೀರ ಮದಕರಿ ನಾಯಕನಾಗಿ ಮನೆಯೊಳಗಿನ ಮನಗಳ ಬಾಂಧವ್ಯ ಕಟ್ಟುವ ಕೆಂಪೇಗೌಡನಾಗಿ ವಾರದ ಕಥೆಯಾಗಿ ಬೆನ್ನು ತಟ್ಟುವ ಚಪ್ಪಾಳೆಯಾಗಿ ನಮ್ಮೆಲ್ಲರಿಗೂ ತೋರುವನು ದಾರಿದೀಪ ನಮ್ಮೆಲ್ಲರ ಅಚ್ಚುಮೆಚ್ಚಿನ ಮಾಣಿಕ್ಯ ಕೋಟಿಗೊಬ್ಬ ಸುದೀಪ ಎಂದು ಕೊಂಡಾಡಿದ್ದಾರೆ.

  • Sep 28, 2025 8:05 PM
    ಡಾಗ್ ಸತೀಶ್ ಜೊತೆ ಜಂಟಿಯಾಗಿ ಎಂಟ್ರಿ ಕೊಟ್ಟ ಚಂದ್ರಪ್ರಭ

    ಬಿಗ್ ಬಾಸ್ ಕನ್ನಡ 12ನೇ ಸೀಸನ್‌ನಲ್ಲಿ ಕಾಮಿಡಿಯನ್ ಚಂದ್ರಪ್ರಭ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇವರಿಗೆ ಶೇ. 64ರಷ್ಟು ವೋಟಿಂಗ್ ಬಂದಿದ್ದರಿಂದ ಒಂಟಿ, ಜಂಟಿ ಪರಿಕಲ್ಪನೆಯಲ್ಲಿ ಡಾಗ್ ಸತೀಶ್ ಅವರೊಂದಿಗೆ ಮನೆಯೊಳಗೆ ಸೇರಿದ್ದಾರೆ.

    ಡಾಗ್ ಸತೀಶ್ ಜೊತೆ ಜಂಟಿಯಾಗಿ ಎಂಟ್ರಿ ಕೊಟ್ಟ ಚಂದ್ರಪ್ರಭ
  • Sep 28, 2025 7:55 PM
    'ಗೀತಾ' ಧಾರಾವಾಹಿಯ ಧನುಷ್ ಗೌಡ ಒಂಟಿ

    ಗೀತಾ ಧಾರಾವಾಹಿಯ ಧನುಷ್ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಒಂಟಿಯಾಗಿ ಎಂಟ್ರಿ ಕೊಡಬೇಕಾ? ಇಲ್ಲ ಜಂಟಿಯಾಗಿ ಎಂಟ್ರಿ ಕೊಡಬೇಕಾ? ಅನ್ನೋ ವೋಟಿಂಗ್ ಪ್ರಕ್ರಿಯೆಯಲ್ಲಿ ಶೇ.78ರಷ್ಟು ವೋಟ್ ಪಡೆದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    'ಗೀತಾ' ಧಾರಾವಾಹಿಯ ಧನುಷ್ ಗೌಡ ಒಂಟಿ
  • Sep 28, 2025 7:44 PM
    ಒಂಟಿಯಾಗಿ ಆಡಲಿರೋ ಜಾಹ್ನವಿ

    ಸುದ್ದಿ ನಿರೂಪಕಿ ಹಾಗೂ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಜಾಹ್ನವಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಒಂಟಿಯಾಗಿ ಎಂಟ್ರಿ ಕೊಡಬೇಕಾ? ಇಲ್ಲ ಜಂಟಿಯಾಗಿ ಎಂಟ್ರಿ ಕೊಡಬೇಕಾ? ಅನ್ನೋ ವೋಟಿಂಗ್ ಪ್ರಕ್ರಿಯೆಯಲ್ಲಿ ಜಾಹ್ನವಿಗೆ ಶೇ.76ರಷ್ಟು ಒಂಟಿಯಾಗಿಯೇ ಹೋಗಬೇಕು ಎಂದು ಹೇಳಿದ್ದಾರೆ. ಹೀಗಾಗಿ ಒಂಟಿಯಾಗಿಯೇ ಆಡಲಿದ್ದಾರೆ.

    ಒಂಟಿಯಾಗಿ ಆಡಲಿರೋ ಜಾಹ್ನವಿ
  • Sep 28, 2025 7:16 PM
    ಏನಿದು ಒಂಟಿ- ಜಂಟಿ ಟಾಸ್ಕ್?

    ಈ ಬಾರಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಒಂಟಿಯಾಗಿ ಅಥವಾ ಜಂಟಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಯಾರಿಗೆ ಒಂಟಿಯಾಗಿಯೇ ದೊಡ್ಮನೆ ಆಟ ಆಡುವ ಸಾಮರ್ಥ್ಯ ಇದೆ, ಯಾರು ಜಂಟಿಯಾಗಿ ಹೋಗಬೇಕು ಎಂದು ವೇದಿಕೆ ಮುಂಭಾಗದಲ್ಲಿ ಇರುವ ವೀಕ್ಷಕರು ವೀಕ್ಷಕರು ಮತದಾನದ ಮೂಲಕ ನಿರ್ಧರಿಸುತ್ತಾರೆ. 75% ಹೆಚ್ಚು ಮತಗಳು ಸಿಕ್ಕವರು ಒಂಟಿಯಾಗಿ ಹೋಗುತ್ತಾರೆ. ಕಾಕ್ರೋಚ್ ಸುಧಿ ಒಂಟಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

  • Sep 28, 2025 7:14 PM
    ಬಿಗ್ ಬಾಸ್‌ಗೆ ಬಂದ ಡಾಗ್ ಸತೀಶ್‌

    50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ದುಬಾರಿಯಾಗಿರುವ ಶ್ವಾನ ನಾಯಿಯೊಂದನ್ನು ಖರೀದಿ ಮಾಡಿದ್ದೇನೆ ಎಂದು ಹೇಳಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್‌ ಅವರ ಮನೆ ಮನೆ ಮೇಲೆ ಇತ್ತೀಚೆಗೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು.ರಾಜ್‌ಕುಮಾರ್, ವಿಷ್ಣುವರ್ಧನ್, ಸಲ್ಮಾನ್ ಖಾನ್ ಸೇರಿದಂತೆ ಹಲವು ಸಿನಿಮಾ ತಾರೆಯರಿಗೆ ನಾಯಿಗಳನ್ನು ನೀಡಿರುವುದಾಗಿ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಹೇಳಿದ್ದ ಡಾಗ್ ಸತೀಶ್ ಈ ಬಾರಿಯ ''ಬಿಗ್ ಬಾಸ್'' ಮನೆಗೆ ಬಂದಿದ್ದಾರೆ.

  • Sep 28, 2025 7:06 PM
    ಕೊತ್ತಲವಾಡಿ ಚೆಲುವೆ ಬಿಗ್ ಬಾಸ್‌ ಮನೆಗೆ

    ಕೆಂಡಸಂಪಿಗೆ ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ಕಾವ್ಯಾ ಶೈವ ಆ ನಂತರ ಬೆಳ್ಳಿತೆರೆಗೆ ಬಂದರು. ಯಶ್ ತಾಯಿ ನಿರ್ಮಾಣದ ಕೊತ್ತಲವಾಡಿ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಕೊತ್ತಲವಾಡಿ ಮಕಾಡೆ ಮಲಗಿತು. ಆದರೂ ಕೂಡ ಸದ್ಯ ಕಾವ್ಯಾ ಅವರ ಅದೃಷ್ಟ ಖುಲಾಯಿಸಿದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಕಾವ್ಯಾ ಶೈವ ಈ ಬಾರಿಯ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

  • Sep 28, 2025 6:40 PM
    ಕಾಕ್ರೋಚ್ ಸುಧಿ ಎಂಟ್ರಿ

    ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್ ಎಪಿಸೋಡ್ ಶುರುವಾಗಿದೆ. ನಟ ಕಾಕ್ರೋಚ್ ಸುಧಿ ಮೊದಲ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದಾರೆ. ನಾನು ಬಿಗ್‌ಬಾಸ್ ಆಟಕ್ಕೆ ಸಂಭಾವನೆಗೆ ಬಂದಿಲ್ಲ, ಹಂಬಲಕ್ಕೆ ಬಂದಿದ್ದೀನಿ ಎಂದು ಸುಧಿ ವೇದಿಕೆಯಲ್ಲಿ ಹೇಳಿದ್ದಾರೆ.

  • Sep 28, 2025 6:28 PM
    ಮೌನ ಗುಡ್ಡೆಮನೆ ಸ್ಪಷ್ಟನೆ

    "ನಾನು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸುತ್ತಿಲ್ಲ, ನಾನು ಕಾರ್ಯಕ್ರಮದೊಂದಿಗೆ ಯಾವುದೇ ರೀತಿಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಅನೇಕರು ತೋರಿಸಿದ ಪ್ರೀತಿ, ಬೆಂಬಲ ಮತ್ತು ಕುತೂಹಲವನ್ನು ನಾನು ನಿಜವಾಗಿಯೂ ಗೌರವಿಸುತ್ತೇನೆ, ಆದರೆ ಈ ವಿಷಯದ ಸುತ್ತಲಿನ ಗೊಂದಲ ಕೊನೆಗೊಳಿಸಲು ನಾನು ಬಯಸುತ್ತೇನೆ. ಸದ್ಯ ನನ್ನ ಗಮನ ಬಿಗ್‌ಬಾಸ್‌ನ ಹೊರಗಿನ ನನ್ನ ವೈಯಕ್ತಿಕ ಮತ್ತು ವೃತ್ತಿಪರ ಬದ್ಧತೆಗಳ ಮೇಲೆ ಸಂಪೂರ್ಣವಾಗಿ ನೆಟ್ಟಿದೆ. ಎಲ್ಲರ ಕಾಳಜಿ ಮತ್ತು ಉತ್ಸಾಹವನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ, ಆದರೆ ನಾನು ಬಿಗ್‌ಬಾಸ್‌ಗೆ ಹೋಗುವ ಬಗ್ಗೆ ಸುಳ್ಳು ಊಹೆಗಳನ್ನು ಮಾಡಬಾರದೆಂದು ನಾನು ವಿನಂತಿಸುತ್ತೇನೆ" ಎಂದು ಕಿರುತೆರೆ ನಟಿ ಮೌನ ಗುಡ್ಡೆಮನೆ ಸ್ಪಷ್ಟನೆ ನೀಡಿದ್ದಾರೆ.

  • Sep 28, 2025 6:04 PM
    ಅದ್ಧೂರಿಯಾಗಿ ಬಿಗ್ ಬಾಸ್ 12 ಆರಂಭ

    ಬಹು ನಿರೀಕ್ಷಿತ ಬಿಗ್ ಬಾಸ್ ಕನ್ನಡ 12 ಅದ್ಧೂರಿಯಾಗಿ ಆರಂಭವಾಗಿದೆ. ಅಪ್ಪಟ ಕರ್ನಾಟಕ ಸಂಸ್ಕೃತಿಯನ್ನು ಸಾರುತ್ತಾ ಕಲರ್‌ಫುಲ್ ಸೆಟ್‌ನಲ್ಲಿ ಬಿಗ್ ಬಾಸ್ ಕನ್ನಡ ಶುರುವಾಗಿದೆ. ಕಿಚ್ಚ ಸುದೀಪ್ ಸ್ವ್ಯಾಗ್ ಎಂಟ್ರಿಗೆ ವೀಕ್ಷಕರು ಫಿದಾ ಆಗಿದ್ದಾರೆ.

    ಅದ್ಧೂರಿಯಾಗಿ ಬಿಗ್ ಬಾಸ್ 12 ಆರಂಭ
  • Sep 28, 2025 5:37 PM
    ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿಗೆ ಕನ್ನಡ ಯಾಕಿಷ್ಟು ಕಷ್ಟ?

    ಬಿಗ್ ಬಾಸ್ ಕನ್ನಡ 12 ಆರಂಭ ಆಗುವುದಕ್ಕೆ ಇನ್ನೇ ಕ್ಷಣಗಣನೆ ಶುರುವಾಗಿದೆ. ಅದಾಗಲೇ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಬಿಗ್ ಬಾಸ್ ರಿವೀಲ್ ಮಾಡುತ್ತಿದೆ. ಇನ್ನು ಕೆಲವೇ ನಿಮಿಷಗಳು ಬಾಕಿ ಉಳಿದಿದ್ದು ಶೋ ಆರಂಭಕ್ಕೂ ಮುನ್ನ ಇನ್ನೆಷ್ಟು ಸ್ಪರ್ಧಿಗಳನ್ನು ಅನಾವರಣ ಮಾಡುತ್ತೆ ಅನ್ನೋದನ್ನು ನೋಡಬೇಕಿದೆ. ಕೆಲವೇ ನಿಮಿಷಗಳ ಹಿಂದೆ ಬಿಗ್ ಬಾಸ್ ಮನೆಗೆ ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್ ರಕ್ಷಿತಾ ಶೆಟ್ಟಿ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ.

  • Sep 28, 2025 4:30 PM
    ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಎಂಟ್ರಿ

    ವಿಭಿನ್ನವಾಗಿ ಅಡುಗೆ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅಲ್ಲೆಯನ್ನೇ ಎಬ್ಬಿಸಿದ ಕರಾವಳಿ ಪ್ರತಿಭೆ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೀನು ಸಾರಿಗೆ ಸಕ್ಕರೆ ಹಾಕುವ ರಕ್ಷಿತಾ ಶೆಟ್ಟಿಯನ್ನು ಕಿಚ್ಚ ಸುದೀಪ್ ವೇದಿಕೆ ಮೇಲೆ ಕಾಲೆಳೆದಿದ್ದಾರೆ. ಸದ್ಯ ಕಲರ್ಸ್ ಕನ್ನಡ ಮತ್ತೊಬ್ಬ ಸ್ಪರ್ಧಿಯನ್ನು ರಿವೀಲ್ ಮಾಡಿದೆ.

  • Sep 28, 2025 2:42 PM
    ಬಿಗ್ ಬಾಸ್ ಮಲ್ಲಮ್ಮ ಈಸ್ ಕಮಿಂಗ್

    ಈಗಾಗಲೇ ರಿವೀಲ್ ಆಗಿರುವ ಮೂವರು ಸ್ಪರ್ಧಿಗಳಲ್ಲಿ ಮಲ್ಲಮ್ಮ ಅವರ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ. ಮಲ್ಲನ ಜೊತೆ ಕಿಚ್ಚ ಸುದೀಪ್ ಸಂಭಾಷಣೆ ಝಲಕ್ ಕಿಕ್ ಕೊಡುತ್ತಿದೆ. ಮಲ್ಲನ್ನ ಮುಗ್ಧ ಮಾತುಗಳಿಗೆ ಕಿಚ್ಚ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಸಂಜೆ 6 ಗಂಟೆಯಿಂದ ಬಿಗ್‌ ಬಾಸ್‌ ಕನ್ನಡ 12ರ ಭರಪೂರ ಮನರಂಜನೆ ಸಿಗೋದು ಗ್ಯಾರಂಟಿ.

  • Sep 28, 2025 1:39 PM
    ಎರಡನೇ ಸ್ಫರ್ಧಿ ಮಂಜು ಭಾಷಿಣಿ ಮನವಿ

    ಕಿರುತೆರೆಯಲ್ಲಿ ಅಪಾರ ಹೆಸರು, ಕೀರ್ತಿಯನ್ನು ಗಳಿಸಿದ, ಮಾಯಾಮೃಗ, ಸಿಲ್ಲಿ ಲಲ್ಲಿ ಖ್ಯಾತಿಯ ಸದ್ಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಮಂಜು ಭಾಷಿಣಿ ಈ ಬಾರಿ ಬಿಗ್ ಬಾಸ್‌ ಮನೆಗೆ ಹೋಗಿದ್ದಾರೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಈ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಗಲಿದ್ದು ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಮಂಜು ಭಾಷಿಣಿ ತಮ್ಮ ಅಭಿಮಾನಿಗಳಲ್ಲಿ ಮತ್ತು ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ಧಾರೆ. ಈ ಬಾರಿಯ ಬಿಗ್‌ಬಾಸ್‌ ಮನೆಯಲ್ಲಿ ನಿಮ್ಮ ಮಂಜು ಭಾಷಿಣಿಯೂ ಇರುತ್ತಾಳೆ. ಎಷ್ಟು ಚೆನ್ನಾಗಿ ಆಟ ಆಡೋಕೆ ಸಾಧ್ಯವೋ? ಎಷ್ಟು ಪ್ರಾಮಾಣಿಕವಾಗಿರೋಕೆ ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತೇನೆ. ನನ್ನ ಆಟ ಇಷ್ಟವಾದ್ರೆ ಮಾತ್ರ ವೋಟ್ ಮಾಡಿ ಎಂದು ಹೇಳಿರುವ ಮಂಜು ಭಾಷಿಣಿ ಇದು ನನ್ನ ಹೊಸ ಪಯಣ ಎಂದು ಹೇಳಿದ್ಧಾರೆ.

  • Sep 28, 2025 1:03 PM
    ಧರ್ಮೇಂದ್ರ ಕುಮಾರ್ ಅಳಿಲು ಸೇವೆ

    ಇತಿಹಾಸಕಾರ, ಸಂಶೋಧಕ ಮತ್ತು ಲೇಖಕರಾಗಿ ಗುರುತಿಸಿಕೊಂಡಿರುವ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಬಿಗ್ ಬಾಸ್‌ ಬಗ್ಗೆ ಮಾತಾಡಿದ್ದಾರೆ. ಮೈಸೂರು ಪೇಟ ಧರಿಸಿ ಬಿಗ್ ಬಾಸ್‌ ಮಾಡಿದ್ದು ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಮನೆಯ ಇಂಟಿರಿಯರ್ ಡಿಸೈನ್ ಮಾಡಿದ್ದರಲ್ಲಿ ತನ್ನದೊ ಒಂದು ಅಳಿಲು ಸೇವೆ ಇದೆ ಎಂದು ಧರ್ಮೇಂದ್ರ ಕುಮಾರ್ ಹೇಳಿದ್ದಾರೆ. ಇವತ್ತು ಸಂಜೆ ನೀವು ಶೋ ನೋಡಿದರೆ ಮೆಚ್ಚಿಕೊಳ್ಳುತ್ತೀರ." ಸಂಜೆ ಶೋ ನೋಡಿದ ಮೇಲೆ ಧರ್ಮಿ ನೀನು ಮಾಡಿರೋ ಕೆಲಸ ಅದ್ಭುತ" ಅನ್ನುತ್ತೀರ ಎಂದು ಧರ್ಮೇಂದ್ರ ಕುಮಾರ್ ಹೇಳಿಕೊಂಡಿದ್ದಾರೆ.

More from Filmibeat

English summary
Bigg Boss Kannada 12 grand opening live Updates: Contestants Entry, Kichcha Sudeep performance, Celebrity List, Twists and highlights from BBK 12.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X