BBK 12: ಬಿಗ್‌ಬಾಸ್‌ಗೆ ಹೋಗ್ತೀನಿ ಅಂತ ಜನರ ಹತ್ತಿರ ಹೋದ ಈ ಮಾಸ್ಕ್ ಮ್ಯಾನ್ ಯಾರು? ಗುರುತಿಸಬಲ್ಲಿರೇ?

ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಲೇ ಬಿಗ್ ಬಾಸ್ ಬಗ್ಗೆ ಟಾಕ್ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಯಾರು? ಅನ್ನೋ ಕುತೂಹಲ ದುಪ್ಪಟ್ಟಾಗಿದೆ. ಬಿಗ್ ಬಾಸ್ ಕನ್ನಡದ 11ನೇ ಸೀಸನ್ ಸೂಪರ್‌ ಸಕ್ಸಸ್ ಆಗಿತ್ತು. ಇದೇ ಜೋಷ್‌ನಲ್ಲಿ ಬಿಗ್ ಬಾಸ್ ಕನ್ನಡದ 12ನೇ ಸೀಸನ್ ಆರಂಭಿಸುವುದಕ್ಕೆ ಕಲರ್ಸ್ ಕನ್ನಡ ಎದುರು ನೋಡುತ್ತಿದೆ.

ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡದ 12ನೇ ಎರಡನೇ ಸೀಸನ್‌ ಅನ್ನೂ ನಿರೂಪಣೆ ಮಾಡುತ್ತಿದ್ದಾರೆ. ಪ್ರೋಮೊದಲ್ಲಿ ಬೇರೆ ಅನಿರೀಕ್ಷಿತವಾದದ್ದನ್ನು ನಿರೀಕ್ಷೆ ಮಾಡಿ ಎಂದು ಹೇಳಿದ್ದಾರೆ. ಹೀಗಾಗಿ ಇದೂವರೆಗೂ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಹೆಸರುಗಳು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ. ಬಿಗ್‌ ಬಾಸ್ ಸದಸ್ಯರ ಹೆಸರು ತೀರಾ ಗೌಪ್ಯವಾಗಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ.

Bigg Boss Kannada 12 mask man video went viral netizens recognize him as Cockroach Sudhi will go to Bigg Boss

ಈ ಗ್ಯಾಪ್‌ನಲ್ಲಿ ಕಲರ್ಸ್ ಕನ್ನಡ ಒಂದು ಮಾಸ್ಕ್ ಮ್ಯಾನ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ಆ ಮಾಸ್ಕ್ ಮ್ಯಾನ್ ಜನರ ಮಧ್ಯೆ ಹೋಗಿ ಬಿಗ್‌ಬಾಸ್ ಹೋಗುತ್ತಿದ್ದೇನೆ ಅಂತ ಹೇಳುಕೊಂಡು ಓಡಾಡಿದ್ದಾರೆ. ಜನರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಜೊತೆಗೆ ತನ್ನನ್ನು ಯಾರೆಂದು ಗುರುತಿಸುತ್ತಾರಾ? ಎಂದು ಪರೀಕ್ಷೆ ಕೂಡ ಮಾಡಿದ್ದಾರೆ. ಹಾಗಿದ್ರೆ, ಈ ಮಾಸ್ಕ್ ಮ್ಯಾನ್ ಯಾರು? ಇವರು ಬಿಗ್ ಬಾಸ್ ಮನೆಗೆ ಹೋಗೋದು ನಿಜವೇ? ತಿಳಿಯುವುದಕ್ಕೆ ಮುಂದೆ ಓದಿ.

ಬಿಗ್ ಬಾಸ್ ಮಾಸ್ಕ್ ಮ್ಯಾನ್

ಬಿಗ್‌ ಬಾಸ್‌ನ 12ನೇ ಸೀಸನ್ ಆರಂಭ ಆಗುವುದಕ್ಕೂ ಮುನ್ನ ಜನರ ತಲೆಗೆ ಹುಳಬಿಡುವ ವಿಡಿಯೋ ಒಂದನ್ನು ರಿಲೀಸ್ ಮಾಡಲಾಗಿದೆ. ಮಾಸ್ಕ್ ತೊಟ್ಟ ವ್ಯಕ್ತಿಯೊಬ್ಬ ಕಾರಿನಿಂದ ಇಳಿದು ಜನರ ಮಧ್ಯೆ ಹೋಗಿ ಬಿಗ್ ಬಾಸ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಜನರು ಹೇಗೆಲ್ಲ ಪ್ರತಿಕ್ರಿಯೆ ನೀಡಬಹುದೆಂದು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅಷ್ಟಕ್ಕೂ ಈ ಮಾಸ್ಕ್ ಮ್ಯಾನ್ ಅಂತ ಜನರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಮತ್ತೆ ಕೆಲವರು ಒಬ್ಬ ನಟನ ಹೆಸರನ್ನು ಸೂಚಿಸಿದ್ದಾರೆ.

ಈ ವಿಡಿಯೋದ ಹೈಲೈಟ್ ಏನು?

ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಇಂತಹದ್ದೊಂದು ಕಾನ್ಸೆಪ್ಟ್ ಇದೇ ಮೊದಲು. "ನಾನು ಬಿಗ್ ಬಾಸ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿದರೆ ನೀವು ನಂಬುತ್ತೀರಾ?" ಅಂತ ಜನರ ಮಧ್ಯೆ ಹೋಗಿ ಕೇಳುವುದರಿಂದ ವಿಡಿಯೋ ಆರಂಭ ಆಗುತ್ತೆ. ಜನರ ಹತ್ತಿರ ಒಂದೊಂದು ಹೆಸರು ಹೇಳಿಕೊಂಡು ಈ ಮಾಸ್ಕ್ ಮ್ಯಾನ್ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆಂದು ಹೇಳಿದ್ದಾರೆ. ಆದರೆ ಈ ವಿಡಿಯೋದಲ್ಲಿ ಇರುವ ವ್ಯಕ್ತಿ ನಿಜಕ್ಕೂ ಬಿಗ್ ಬಾಸ್ ಮನೆಗೆ ಹೋಗುತ್ತಾರಾ? ಇಲ್ಲ ಕೇವಲ ಪ್ರಚಾರಕ್ಕೆ ಮಾಡಿದ ವಿಡಿಯೋನಾ? ಅನ್ನೋ ಗೊಂದಲಕ್ಕೆ ಬಿದ್ದಿದ್ದಾರೆ.

ಈ ಮಾಸ್ಕ್ ಮ್ಯಾನ್ ಯಾರು?

ಅಷ್ಟಕ್ಕೂ ಈ ವಿಡಿಯೋದಲ್ಲಿ ಮಾಸ್ಕ್ ಮ್ಯಾನ್ ಯಾರು? ಈ ಧ್ವನಿಯನ್ನು ಎಲ್ಲಿಯೋ ಕೇಳಿದ ಹಾಗೆ ಇದೆಯಲ್ಲ? ಈ ಹಾವ-ಭಾವವನ್ನೆಲ್ಲ ಎಲ್ಲೋ ನೋಡದ ಹಾಗೆ ಇದೆಯಲ್ಲ ಅಂತ ಅನಿಸುತ್ತಿದೆ. ಮಾಸ್ಕ್ ಮ್ಯಾನ್ ಧ್ವನಿಗೆ ಫಿಲ್ಟರ್ ಹಾಕಿದ್ದರೂ, ನೆಟ್ಟಿಗರು ಒಬ್ಬ ನಟನ ಧ್ವನಿಯಂತೆಯೇ ಕೇಳಿಸಿದೆ. ಹೀಗಾಗಿ ಈ ಮಾಸ್ಕ್ ಮ್ಯಾನ್ 'ಟಗರು' ಖ್ಯಾತಿಯ ಕಾಕ್ರೋಜ್ ಸುಧಿನೇ ಇರಬೇಕು ಅಂತ ಅಂದಾಜಿಸಿದ್ದಾರೆ. ವಿಡಿಯೋಗೆ ಕಮೆಂಟ್‌ಗಳು ಇದೊಂದೇ ಹೆಸರು ಬಂದಿದೆ.

ನೆಟ್ಟಿಗರ ಕಮೆಂಟ್‌ಗಳು ಏನು?

ಈ ಮಾಸ್ಕ್ ಮ್ಯಾನ್ ವಿಡಿಯೋಗೆ ನೆಟ್ಟಿಗರು ಕಮೆಂಟ್‌ಗಳು ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿವೆ. ಒಬ್ಬರು "RCB ಕಪ್ ಗೆದ್ದಿದ್ದು ನೋಡಾಯ್ತು. ಇನ್ನೇನಿದ್ರೂ
ಕಾಕ್ರೋಜ್ ಸುಧಿ ಅಣ್ಣ ಕಪ್ ಗೆಲ್ಲೋದನ್ನ ನೋಡ್ಬೇಕು ಅಷ್ಟೇ. ಶುಭವಾಗಲಿ ಅಣ್ಣಾ.. ಗೆದ್ದು ಬನ್ನಿ.. ಈ ಸಲ ಕಪ್ ನಿಮ್ದೇ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ನಾನು ಬಿಗ್‌ ಬಾಸ್‌ಗೆ ಹೋಗಲ್ಲ ಅಂದಿದ್ದಕ್ಕೆ ನಿನ್ ಕಡೆಯಿಂದಾನೇ ಪ್ರಮೋಷನ್ ಮಾಡಿಸುತ್ತಿದ್ದಾರೆ" ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬರು "ಇದು ಕಾಕ್ರೋಚ್ ಸುಧಿ ಅಂತ ಹೆಂಗೆ ಗೊತ್ತಾಯ್ತು ಅಂದ್ರೆ, ಅವರು ಕಿವಿಗ್ ಹಾಕಿರೋ ಓಲೆ ಮತ್ತೆ ಅವರು ವಾಯ್ಸ್" ಎಂದು ಹೇಳಿದ್ದಾರೆ. ಒಟ್ನಲ್ಲಿ ಇದು ಕಾಕ್ರೋಜ್ ಸುಧಿ ಹೌದೋ ಅಲ್ಲವೋ. ಬಿಗ್‌ ಬಾಸ್‌ಗೆ ಹೋಗ್ತಾರೋ ಇಲ್ವೋ.. ಇದೆಲ್ಲದಕ್ಕೂ ಭಾನುವಾರ ಉತ್ತರ ಸಿಗಲಿದೆ.

More from Filmibeat

English summary
Bigg Boss Kannada 12 mask man video went viral netizens recognize him as Cockroach Sudhi will go to Bigg Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X