BBK 12: ಮಿಡ್ ಸೀಸನ್ ಫಿನಾಲೆಗೆ ವೇದಿಕೆ ರೆಡಿ; 3ನೇ ವಾರಕ್ಕೊಬ್ಬರು ವಿನ್ನರ್..ಗೆದ್ದವರಿಗೆಷ್ಟು?
ಬಿಗ್ ಬಾಸ್ ಕನ್ನಡದ 12ನೇ ಸೀಸನ್ ನಿರೀಕ್ಷೆ ಮಾಡಿದಂತೆ ಇರೋದಿಲ್ಲ. ಶೋ ಆರಂಭದಲ್ಲಿಯೇ ಕಿಚ್ಚ ಸುದೀಪ್ ಈ ಬಾರಿ ಇಬ್ಬರು ವಿನ್ನರ್ ಆದರೂ ಆಗಬಹುದೆಂಬ ಸುಳಿವು ನೀಡಿದ್ದರು. ಅದರಂತೆ ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯುತ್ತಿದೆ. ಈ ಫಿನಾಲೆಯಲ್ಲಿ ಒಬ್ಬರು ವಿನ್ನರ್ ಅನ್ನು ಘೋಷಣೆ ಮಾಡಲಾಗುತ್ತೆ. ಬಿಗ್ ಬಾಸ್ ಮನೆಯಲ್ಲಿ 100 ದಿನಗಳನ್ನು ಕಳೆದ ಬಳಿಕ ವಿನ್ನರ್ ಘೋಷಣೆ ಆಗುತ್ತಿತ್ತು. ಆದ್ರೀಗ ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯುತ್ತಿರೋದು ಕಿರುತೆರೆ ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.
Expect The Unexpected ಥೀಮ್‌ನಲ್ಲಿ ಈ ಬಾರಿ ಬಿಗ್ ಬಾಸ್ ಶುರುವಾಗಿದೆ. ಶೋ ಆರಂಭ ಆದ ಕ್ಷಣದಿಂದ ಒಂದಲ್ಲ ಒಂದು ಟ್ವಿಸ್ಟ್ ಅನ್ನು ಕೊಡುತ್ತಲೇ ಮುಂದೆ ಸಾಗುತ್ತಿದೆ. ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದು ಅಚ್ಚರಿ ಮೂಡಿಸಿತ್ತು. ಬಿಗ್ ಬಾಸ್ ಇತಿಹಾಸದಲ್ಲಿಯೇ ಇಂತಹದ್ದೊಂದು ಪ್ರಕ್ರಿಯೆ ನಡೆದಿರಲಿಲ್ಲ. ಒಂದು ವಾರದ ಬಳಿಕ ಮತ್ತೆ ರಕ್ಷಿತಾ ಶೆಟ್ಟಿಯನ್ನು ಮನೆಯೊಳಗೆ ಕಳುಹಿಸಿಕೊಡಲಾಗಿತ್ತು.

ಈಗಾಗಲೇ ಕಿಚ್ಚ ಸುದೀಪ್ ಮೂರನೇ ವಾರದಲ್ಲೊಂದು ಫಿನಾಲೆ ನಡೆಯುತ್ತೆ ಎಂದು ಹೇಳಿದ್ದರು. ಈಗ ಮೂರನೇ ವಾರ ಬಂದೇ ಬಿಟ್ಟಿದೆ. ಈ ವೀಕೆಂಡ್‌ನಲ್ಲಿ ಬಿಗ್ ಬಾಸ್ ಮಿಡ್ ಸೀಸನ್ ಫಿನಾಲೆ ನಡೆಯಲಿದೆ. ಇದು ಬಿಗ್ ಬಾಸ್ ವೀಕ್ಷಕರಿಗೆ ಹೊಸತು. ಹಾಗಾಗಿ ಮಿಡ್ ಸೀಸನ್ ಫಿನಾಲೆಯ ಸ್ವರೂಪ ಹೇಗಿರುತ್ತೆ? ಫಿನಾಲೆ ರೀತಿಯೇ ಎಂಟರ್‌ಟೈನ್ಮೆಂಟ್ ಇರುತ್ತಾ? ಗೆದ್ದವರಿಗೆ ಸಿಗುವ ಹಣವೆಷ್ಟು? ಇದೆಲ್ಲವನ್ನೂ ತಿಳಿಯುವುದಕ್ಕೆ ಮುಂದೆ ಓದಿ.
ನಿರೀಕ್ಷೆಗೂ ಮೀರಿದ ತಿರುವು
ಬಿಗ್ ಬಾಸ್ ಕನ್ನಡ ಸೀಸನ್ 12 ಇಲ್ಲಿವರೆಗೂ ವೀಕ್ಷಕರನ್ನು ರಂಚಿಸುತ್ತಾ ಬಂದಿದೆ. ಕೆಲವೊಮ್ಮೆ ಅತ್ಯಂತ ರೋಚಕತೆಯಿಂದಲೂ ಕೂಡಿತ್ತು. ಈ ಮೂರನೇ ವಾರಕ್ಕೆ ಇನ್ನೊಂದು ಅನಿರೀಕ್ಷಿತ ತಿರುವನ್ನು ಕೊಡುತ್ತಿದೆ ಬಿಗ್ ಬಾಸ್. ಅದುವೇ ಬಿಗ್ ಬಾಸ್ ಕನ್ನಡ ಸೀಸನ್ 12ರ ಮಿಡ್ ಸೀಸನ್ ಫಿನಾಲೆ. ಇದೇ ಮೊದಲ ಬಾರಿಗೆ 3ನೇ ವಾರಕ್ಕೆ ಮೊದಲ ಫಿನಾಲೆ ನಡೆಯಲಿದೆ. ಇದರಲ್ಲಿ ವೀಕ್ಷಕರಿಗೆ ಸಿಕ್ಕಾಪಟ್ಟೆ ಟ್ವಿಸ್ಟ್ ಅಂಡ್ ಟರ್ನ್ ಸಿಗಲಿದೆ. ಈ ವಿಭಿನ್ನ ಪ್ರಯತ್ನಕ್ಕೆ ರೆಸ್ಪಾನ್ಸ್ ಹೇಗೆ ಸಿಗುತ್ತೆ? ಅನ್ನೋದೇ ಕುತೂಹಲ.
ಫಿನಾಲೆಯಲ್ಲಿ ಭಾರೀ ಎಲಿಮಿನೇಷನ್
ಮಿಡ್ ಸೀಸನ್ ಫಿನಾಲೆ ಸುಮ್ಮನೆ ಮನರಂಜನೆಗಷ್ಟೇ ನಡೆಸುತ್ತಿರೋದಲ್ಲ. ಈ ಫಿನಾಲೆಯಲ್ಲಿ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಇರುವ 17 ಮಂದಿ ಸ್ಪರ್ಧಿಗಳಲ್ಲಿ ಬಹಳಷ್ಟು ಮಂದಿ ಎಲಿಮಿನೇಟ್ ಆಗುತ್ತಾರೆ. ಕಳೆದ ಎರಡು ವಾರಗಳಿಂದಲೂ ಬಿಗ್ ಬಾಸ್ ಮನೆಯೊಳಗಿರುವ ಸದಸ್ಯರಿಗೆ ಕಿಚ್ಚ ಸುದೀಪ್ ಎಚ್ಚರಿಕೆಯನ್ನು ನೀಡುತ್ತಲೇ ಇದ್ದರು. ಈಗ ಬಿಗ್ ಎಲಿಮಿನೇಷನ್ ವೀಕ್ ಬಂದೇ ಬಿಟ್ಟಿದೆ. ಈ ಹಂತದಲ್ಲಿ ಸಾಕಷ್ಟು ಸದಸ್ಯರು ಎಲಿಮಿನೇಟ್ ಆಗುತ್ತಾರೆ. ಹಾಗೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಇನ್ನೊಂದಿಷ್ಟು ಮಂದಿ ಎಂಟ್ರಿ ಕೊಡುತ್ತಾರೆ.
ವಿನ್ನರ್ ಮತ್ತು ಬಹುಮಾನ
ಈ ಮಿಡ್ ಸೀಸನ್ ಫಿನಾಲೆಯನ್ನು ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡುವುದಕ್ಕಷ್ಟೇ ಅಲ್ಲ. ಈ ಫಿನಾಲೆಯಲ್ಲಿ ಒಬ್ಬ ವಿನ್ನರ್ ಹೆಸರನ್ನು ಘೋಷಣೆ ಮಾಡಲಾಗುತ್ತೆ. ಅವರಿಗೆ ಬಹುಮಾನ ಕೂಡ ನೀಡಲಾಗುತ್ತೆ. ಫಿನಾಲೆ ಗೆದ್ದವರಿಗೆ ₹50 ಲಕ್ಷ ಬಹುಮಾನ ನೀಡಲಾಗುತ್ತೆ. ಅದೇ ಮಿಡ್ ಸೀಸನ್ ಫಿನಾಲೆಯಲ್ಲಿ ಗೆದ್ದವರಿಗೆ ಎಷ್ಟು ಬಹುಮಾನ ಕೊಡಬೇಕು? ಅನ್ನೋ ಚರ್ಚೆ ಇನ್ನೂ ನಡೆಯುತ್ತಿದೆ. ಶೀಘ್ರದಲ್ಲಿಯೇ ಬಹುಮಾನದ ಮೊತ್ತವನ್ನು ಘೋಷಿಸಲಾಗುತ್ತೆ.
ಯಾವಾಗ? ಎಷ್ಟೊತ್ತಿಂದ?
ಈ ವೀಕೆಂಡ್‌ನಲ್ಲಿ ವೀಕ್ಷಕರಿಗೆ ಭರಪೂರ ಮನರಂಜನೆ ಸಿಗೋದು ಕನ್ಫರ್ಮ್. ಅಕ್ಟೋಬರ್ 18 ಹಾಗೂ 19 ಈ ಎರಡು ದಿನ ಈ ಮಿಡ್ ಸೀಸನ್ ಫಿನಾಲೆ ನಡೆಯಲಿದೆ. ಇದರಲ್ಲಿ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಹಾಗೂ ಊಹೆನೇ ಮಾಡದ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ಆಟಗಳನ್ನು ಆಡುವುದರ ಜೊತೆಗೆ ಸ್ಪರ್ಧಿಗಳೊಂದಿಗೆ ಬೆರೆತು ಮನರಂಜನೆಯನ್ನು ನೀಡಲಿದ್ದಾರೆ. ವೀಕೆಂಡ್‌ನಲ್ಲಿ ಒಟ್ಟು 6 ಗಂಟೆಗಳ ಕಾಲ ವೀಕ್ಷಕರಿಗೆ ಮನರಂಜನೆ ಸಿಗಲಿದೆ.


Click it and Unblock the Notifications











