BBK 12: ಮಿಡ್ ವೀಕ್ ಫಿನಾಲೆಯಲ್ಲಿ ಮಂಜು ಭಾಷಿಣಿ, ಅಶ್ವಿನಿ ಹೊರಕ್ಕೆ; ಒಳಗೆ ಹೋಗೋರು ಯಾರು?
ಬಿಗ್ ಬಾಸ್ ಕನ್ನಡ 12 ಮಿಡ್ ವೀಕ್ ಫಿನಾಲೆಯ ಮೊದಲನೇ ದಿನ ಯಶಸ್ವಿಯಾಗಿ ನಡೆದಿದೆ. ನಾಲ್ಕೈದು ಮಂದಿ ಮೂರನೇ ವಾರ ಲಿಮಿನೇಟ್ ಆಗಬಹುದೆಂಬ ನಿರೀಕ್ಷೆಯಿತ್ತು. ಕಿಚ್ಚ ಸುದೀಪ್ ಹೇಳಿದಂತೆ ಮಾಸ್ ಎಲಿಮಿನೇಷನ್ ಅದರೂ ಆಗಬಹುದೆಂದು ಸುಳಿವು ನೀಡಿದ್ದರು. ಆದರೆ, ವೀಕ್ಷಕರಿಗೂ ಇಲ್ಲೂ ಟ್ವಿಸ್ಟ್ ಸಿಕ್ಕಿದೆ. ಮಿಡ್ ನೈಟ್ ಫಿನಾಲೆಯಲ್ಲಿ ಕೇವಲ ಇಬ್ಬರನ್ನಷ್ಟೇ ಎಲಿಮಿನೇಷನ್ ಮಾಡಲಾಗಿದೆ.
ಇಂದು (ಅಕ್ಟೋಬರ್ 18) ಸುಮಾರು ಮೂರು ಗಂಟೆಗಳ ಕಾಲ ನಡೆದ ಶೋನಲ್ಲಿ ಎಲಿಮಿನೇಷನ್ ಹೈಲೈಟ್ ಆಗಿತ್ತು. ಕಾರ್ಯಕ್ರಮದ ಅಂತ್ಯದಲ್ಲಿ ಎಲಿಮಿನೇಟ್ ಆಗುವವರ ಹೆಸರನ್ನು ರಿವೀಲ್ ಮಾಡುವುದಾಗಿ ಹೇಳಿದ್ದರು. ನಿರೀಕ್ಷೆ ಮಾಡಿದಂತೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಅವರಲ್ಲಿ ಕಿರುತೆರೆ ನಟಿ ಮಂಜು ಭಾಷಿಣಿ ಒಬ್ಬರಾದರೆ, ಇನ್ನೊಬ್ಬರು ಅಶ್ವಿನಿ.

ಡಬಲ್ ಎಲಿಮಿನೇಷನ್ ಮೂಲಕ ಬಿಗ್ ಬಾಸ್ ಮನೆಯಿಂದ ಇಬ್ಬರು ಹೊರ ಬಿದ್ದಿದ್ದಾರೆ. ವಿಶೇಷ ಅಂದರೆ, ಬಿಗ್ ಬಾಸ್ ಮನೆಯೊಳಗೆ ಇಬ್ಬರೂ ಪ್ರತ್ಯೇಕ ಜೋಡಿಯೊಂದಿಗೆ ಜಂಟಿಯಾಗಿಯೇ ಒಳಗೆ ಹೋಗಿದ್ದರು. ಬಿಗ್ ಬಾಸ್ ಮನೆಯೊಳಗೆ ಅಶ್ವಿನಿ ಇನ್ನೂ ಹೆಚ್ಚು ದಿನಗಳು ಇರಬಹುದೆಂಬ ನಿರೀಕ್ಷೆಯಿತ್ತು. ಆದರೆ, ನಿರೀಕ್ಷೆ ಮಾಡಿದ್ದಕ್ಕಿಂತ ಮುನ್ನವೇ ಹೊರ ಬಂದಿದ್ದಾರೆ. ಇನ್ನು ಮಂಜು ಭಾಷಿಣಿ ಮನೆಯೊಳಗೆ ಡಾಮಿನೇಟ್ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಅದು ಹುಸಿಯಾಗಿದೆ.
ಎಲಿಮಿನೇಷನ್‌ಗೆ ಕಾರಣವೇನು?
ಬಿಗ್ ಬಾಸ್ ಆರಂಭ ಆಗಿ ಮೂರು ವಾರಗಳಾಗಿದ್ದರೂ, ಮಂಜು ಭಾಷಿಣಿ ಮನೆಯೊಳಗೆ ಹೊಂದಿಕೊಳ್ಳುವುದಕ್ಕೆ ಪರದಾಡಿದ್ದರು. ಟಾಸ್ಕ್‌ಗಳಲ್ಲಿ ಕಷ್ಟ ಪಡುತ್ತಿದ್ದರು. ಇನ್ನೊಂದು ಕಡೆ ಮನೆಯವರ ಮೈಂಡ್ ಗೇಮ್ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾದರು ಎಂಬ ಅಭಿಪ್ರಾಯಗಳು ಹೊರ ಬೀಳುತ್ತಿವೆ. ಇನ್ನು ಅಶ್ವಿನಿ ಅಗ್ರೇಸಿವ್ ಆಗಿದ್ದರೆ ಅಂತ ಅನಿಸಿದ್ದರೂ, ಅದು ಮೂರು ವಾರಗಳಲ್ಲಿ ಕಂಡಿದ್ದು ಒಂದೆರಡ ಬಾರಿ ಮಾತ್ರ. ಹೀಗಾಗಿ ಉಳಿದ ಸ್ಪರ್ಧಿಗಳಿಂದ ಹಿಂದೆ ಬಿದ್ದಿದ್ದರು.
ಇವರ ಸ್ಥಾನಕ್ಕೆ ಬರೋದ್ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12ರ ಇಬ್ಬರು ಮನೆಯಿಂದ ಹೊರ ಬಿದ್ದಿರೋದೇನೋ ನಿಜ. ಈಗ ವೈಲ್ಡ್ ಕಾರ್ಡ್ ಎಂಟ್ರಿ ಕೊಡುವವರು ಯಾರು? ಅನ್ನೋ ಕುತೂಹಲ ಹುಟ್ಟಿಕೊಂಡಿದೆ. ಈಗಾಗಲೇ ಇಬ್ಬರ ಹೆಸರುಗಳು ಕೇಳಿ ಬರುತ್ತಿವೆ. ಅದರಲ್ಲಿ ಕ್ವಾಟ್ಲೆ ಕಿಚನ್ ವಿನ್ನರ್ ಹಾಗೂ 'ಕಾಂತಾರ ಚಾಪ್ಟರ್ 1' ಸಿನಿಮಾ ನಟಿ ರಾಘವೇಂದ್ರ ಎಂಟ್ರಿ ಕೊಡುತ್ತಿದ್ದಾರೆಂಬ ಗುಲ್ಲೆದ್ದಿದೆ. ಹಾಗೇ ಇನ್ನೊಬ್ಬರು ನಟಿಯಾಗಿ, ಮಾಡಲ್ ಆಗಿ ಗುರುತಿಸಿಕೊಂಡಿರುವ ರಿಚಾ ಗೌಡ ಎಂಟ್ರಿ ಕೊಡುತ್ತಿದ್ದರೆಂಬ ಸುದ್ದಿನೂ ಇದೆ. ಸದ್ಯಕ್ಕೆ ಈ ಎರಡೂ ಹೆಸರುಗಳು ಹೊರಗಡೆ ಹರಿದಾಡುತ್ತಿದ್ದು, ಅಧಿಕೃತವಾಗಿ ಗೊತ್ತಾಗಲಿದೆ.
ಟ್ವಿಸ್ಟ್ ಮೇಲೆ ಟ್ವಿಸ್ಟ್
ಈ ಬಾರಿ ಬಿಗ್ ಬಾಸ್ ಕನ್ನಡದ ಫಾರ್ಮೆಟ್ ಕೊಂಚ ಬದಲಾಗಿದೆ. 11 ಸೀಸನ್‌ಗಳಲ್ಲಿ ನಡೆದಂತೆ ಈ ಸೀಸನ್ ನಡೆಯುತ್ತಿಲ್ಲ. 12ನೇ ಸೀಸನ್ ವಿಭಿನ್ನವಾಗಿದೆ. ಮೊದಲ ದಿನವ ಎಲಿಮಿನೇಷನ್, ಮಿಡ್ ಸೀಸನ್ ಫಿನಾಲೆ, ವೈಲ್ಡ್ ಕಾರ್ಡ್ ಎಂಟ್ರಿ ಸೇರಿದಂತೆ ಬಿಗ್ ಬಾಸ್ ಮನೆಯಲ್ಲಿ ಬದಲಾವಣೆಗಳ ಸುರಿಮಳೆಯೇ ಆಗುತ್ತಿದೆ. ಒಂದು ರೀತಿಯಲ್ಲಿ ಇದು ಉತ್ತಮವೇ. ಒಂದೇ ತರನಾದ ಶೋ ಅನ್ನು ನೋಡಿದ್ದವರಿಗೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಬಿಗ್ ಬಾಸ್ ನೋಡುವುದಕ್ಕೆ ಸಿಗುತ್ತಿದೆ.


Click it and Unblock the Notifications











