ಶಿವಣ್ಣ-ಗೀತಕ್ಕನ ಕಾಲಿಗೆ ಮುಟ್ಟಿ ಆಶೀರ್ವಾದ ಪಡೆದ ಬಿಗ್ ಬಾಸ್ ವಿನ್ನರ್; ಗಿಲ್ಲಿ ನಟಿಸುತ್ತಿರೋ ಶಿವಣ್ಣನ ಸಿನಿಮಾ ಯಾವುದು?

ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ವೀಕ್ಷಕರು ಬಯಸಿದಂತೆ ಗಿಲ್ಲಿ ನಟ 12ನೇ ಸೀಸನ್‌ನ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಬಹುಶ: ಇದೇ ಮೊದಲ ಬಾರಿಗೆ ಬಿಗ್ ಬಾಸ್ ವಿನ್ನರ್ ವಿಷಯದಲ್ಲಿ ವೀಕ್ಷಕರ ಲೆಕ್ಕಾಚಾರ ಸರಿಯಾಗಿದೆ. ಇನ್ನೊಂದು ಕಡೆ ಶಿವಣ್ಣ ಕೂಡ ಈ ಬಾರಿ ಬಿಗ್ ಬಾಸ್ ಗೆಲ್ಲೋದು ಗಿಲ್ಲಿಯೇ ಎಂದು ಹೇಳಿದ್ದರು. ಅವರು ನುಡಿದಂತೆ ಗಿಲ್ಲಿ ಬಿಗ್ ಬಾಸ್ ಅನ್ನು ಗೆದ್ದು ಬೀಗುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ 12 ಅನ್ನು ಗೆದ್ದ ಬಳಿಕ ಗಿಲ್ಲಿ ನಟ ನೇರವಾಗಿ ಶಿವಣ್ಣನ ಮನೆಗೆ ತೆರಳಿದ್ದಾರೆ. ಗಿಲ್ಲಿ ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಶಿವಣ್ಣ ಕೂಡ ಅವರ ಫ್ಯಾನ್ ಆಗಿದ್ದರು. ಹೀಗಾಗಿ ನೇರವಾಗಿ ನಾಗಾವರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ಮನೆಗೆ ತೆರಳಿ ಅವರ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Bigg Boss Kannada 12 Winner Gilli Nata Touches Shivanna s Feet Seeks Blessings Video Goes Viral

ಬಿಗ್ ಬಾಸ್‌ಗೂ ಮುನ್ನವೇ ಗಿಲ್ಲಿಯ ಪ್ರತಿಭೆಯನ್ನು ಶಿವಣ್ಣ ನೋಡಿದ್ದರು. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಕಾಮಿಡಿ ಕಿಲಾಡಿಗಳು ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಗಿಲ್ಲಿ ನಟ ಪರ್ಫಾಮೆನ್ಸ್ ನೀಡಿದ್ದರು. ಶಿವಣ್ಣ ಅತಿಥಿಯಾಗಿರುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಪ್ರಾಪರ್ಟಿ ಕಾಮಿಡಿ ಮಾಡುವ ಮೂಲಕ ಸೆಂಚುರಿ ಸ್ಟಾರ್ ಮನಗೆದ್ದಿದ್ದರು. ಅಲ್ಲಿ ಗಿಲ್ಲಿಯ ಟ್ಯಾಲೆಂಟ್ ನೋಡಿದ್ದ ಶಿವಣ್ಣ ಮೆಚ್ಚುಗೆಯನ್ನೂ ಸೂಚಿಸಿದ್ದರು.

ಬಿಗ್ ಬಾಸ್ ಫಿನಾಲೆಗೂ ಮುನ್ನವೇ ಶಿವಣ್ಣನ ಬಳಿ ಪ್ರತಿಕ್ರಿಯೆ ಕೇಳಲಾಗಿತ್ತು. ಆ ವೇಳೆ ಕೂಡ ಶಿವರಾಜ್‌ಕುಮಾರ್ ಹಿಂದೆ-ಮುಂದೆ ಯೋಚಿಸದೆ ಗಿಲ್ಲಿನೇ ಬಿಗ್ ಬಾಸ್ ಗೆಲ್ಲೋದು ಎಂದಿದ್ದರು. ಅವರು ನುಡಿದಂತೆಯೇ ಗಿಲ್ಲಿ ನಟ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ 12ನೇ ಸೀಸನ್ ದಾಖಲೆ ವೋಟ್‌ಗಳನ್ನು ಗೆಲ್ಲುವ ಮೂಲಕ ಗೆದ್ದು ಬಂದಿದ್ದಾರೆ. ಹೀಗಾಗಿ ಮೊದಲು ಶಿವಣ್ಣನ ಮನೆಗೆ ಭೇಟಿ ನೀಡಿ ಶುಭ ಕೋರಿದ್ದಾರೆ.

ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತು ಜೊತೆ ಗಿಲ್ಲಿ ನಟ ಶಿವಣ್ಣನ ಮನೆಗೆ ವಿಸಿಟ್ ಹಾಕಿದ್ದರು. ಈ ವೇಳೆ ಶಿವಣ್ಣ ಹಾಗೂ ಗೀತಕ್ಕ ಇಬ್ಬರ ಕಾಲು ಮುಟ್ಟಿ ನಮಸ್ಕರಿಸಿದರು. ಬಳಿಕ ಕೇಕ್ ಕಟ್ ಮಾಡಿ ಗಿಲ್ಲಿಗೆ ಶಿವಣ್ಣ ತಿನಿಸಿ, ಒಂದಿಷ್ಟು ಹೊತ್ತುಗಳ ಕಾಲ ಮಾತುಕತೆ ನಡೆಸಿದರು. ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಇಬ್ಬರ ಜೊತೆಗೂ ಕೆಲ ಹೊತ್ತು ಮಾಡಿ, ಅಲ್ಲಿಂದ ಹೊರಟಿದ್ದಾರೆ.

ಇನ್ನು ಶಿವರಾಜ್‌ಕುಮಾರ್ ಒಪ್ಪಿಕೊಂಡಿರುವ ಹೊಚ್ಚ ಹೊಸ ಸಿನಿಮಾದಲ್ಲಿ ಗಿಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ಶಿವಣ್ಣನ ಜೊತೆ ರವಿಚಂದ್ರನ್ ಸೇರಿದಂತೆ ದಿಗ್ಗಜರೇ ನಟಿಸುತ್ತಿದ್ದಾರೆ. ಹಾಗೇ ಈ ಸಿನಿಮಾಗೆ ತಮಿಳಿನ ಪ್ರಮುಖ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಗಿಲ್ಲಿ ನಟ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಅಂದ್ಹಾಗೆ, ಬಿಗ್ ಬಾಸ್‌ಗೆ ಹೋಗುವುದಕ್ಕೂ ಮುನ್ನವೇ ಶಿವಣ್ಣನ ಈ ಹೊಚ್ಚ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟು ಮನೆಯೊಳಗೆ ಹೋಗಿದ್ದರು ಎನ್ನಲಾಗಿದೆ. ಬಿಗ್ ಬಾಸ್ ಗೆದ್ದು ಹೊರ ಬಂದ್ಮೇಲೆ ಗಿಲ್ಲಿ ಪಾತ್ರಕ್ಕೆ ಇನ್ನಷ್ಟು ಮಹತ್ವವನ್ನು ನೀಡುವ ಸಾಧ್ಯತೆಯಿದೆ ಎಂದು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಇನ್ನು ಗಿಲ್ಲಿ ಬಿಗ್ ಬಾಸ್‌ ಗೆದ್ದು ಹೊರ ಬಂದಿದ್ದು ಇನ್ನಷ್ಟು ಪ್ರಾಜೆಕ್ಟ್‌ಗಳನ್ನು ಸಹಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

More from Filmibeat

English summary
Bigg Boss Kannada 12 Winner Gilli Nata Touches Shivanna’s Feet, Seeks Blessings Video Goes Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X