'ಬಿಗ್ ಬಾಸ್': ಎಲ್ಲ ಗೊಂದಲಗಳಿಗೆ ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್
Recommended Video

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹನ್ನೊಂದನೇ ವಾರ ಆದ ಟ್ವಿಸ್ಟ್ ಗಳ ಬಗ್ಗೆ ಹಾಗೂ ನಾಮಿನೇಷನ್ ಎಂಬ ಅಗ್ನಿಪರೀಕ್ಷೆಯಿಂದ ದಿವಾಕರ್ ಅವರನ್ನ 'ಬಿಗ್ ಬಾಸ್' ಬಚಾವ್ ಮಾಡಿದರ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ''ಇದು ಪಕ್ಷಪಾತ ಮಾಡಿದಂತೆ ಅಲ್ವಾ 'ಬಿಗ್ ಬಾಸ್'.!? ಕ್ಲಾರಿಟಿ ಕೊಡಿ..'' ಎಂಬ ಶೀರ್ಷಿಕೆ ಅಡಿ ಲೇಖನ ಪ್ರಕಟಿಸಿ, ಪ್ರಶ್ನಿಸಿತ್ತು.
ಈ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಕ್ಲಾರಿಟಿ ಕೊಟ್ಟರು. ''ಕಳೆದ ವಾರ ನಡೆದಿದ್ದು ಒಂದೇ ಎಲಿಮಿನೇಷನ್, ಡಬಲ್ ಎಲಿಮಿನೇಷನ್ ಅಲ್ಲ. ದಿವಾಕರ್ ಅವರಿಗೆ ಸೆಕೆಂಡ್ ಚಾನ್ಸ್ ಕೊಡಲಾಗಿಲ್ಲ'' ಎಂದು ಸುದೀಪ್ ಸ್ಪಷ್ಟ ಪಡಿಸಿದರು,
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಏನಂತ ಕ್ಲಾರಿಟಿ ಕೊಟ್ಟರು ಎಂಬುದರ ಬಗ್ಗೆ ಅವರ ಮಾತುಗಳಲ್ಲೇ ಓದಿರಿ..

ಡಬಲ್ ಎಲಿಮಿನೇಷನ್ ಅಲ್ಲ.!
''ಹೋದ ವಾರ ನಡೆದಿದ್ದು ಡಬಲ್ ಎಲಿಮಿನೇಷನ್ ಅಂತ ಎಲ್ಲರೂ ಅಂದುಕೊಂಡಿದ್ದರು. ಆದ್ರೆ, ಅದು ಹಾಗಾಗಿಲ್ಲ. ಅಲ್ಲಿ ನಡೆದಿದ್ದು ನಿಮ್ಮ ವೋಟ್ ಪ್ರಕಾರ ಒಂದೇ ಒಂದು ಎಲಿಮಿನೇಷನ್'' - ಸುದೀಪ್

ಟ್ವಿಸ್ಟ್ ಅಷ್ಟೇ.!
''ಹಾಗಾದ್ರೆ, ದಿವಾಕರ್ ಹೊರಗೆ ಬಂದಿದ್ದು ಯಾಕೆ ಅಂದ್ರೆ ಅದು ಟ್ವಿಸ್ಟ್ ಅಷ್ಟೇ. ಟ್ವಿಸ್ಟ್ ಕೊಟ್ಟಿದ್ದು ವೀಕ್ಷಕರಿಗಲ್ಲ, ಒಳಗಡೆ ಇರುವವರಿಗೆ ಮಾತ್ರ'' - ಸುದೀಪ್

ಯಾರಿಗೂ ಗೊತ್ತಿಲ್ಲ.!
''ಸೀಕ್ರೆಟ್ ರೂಮ್ ನಲ್ಲಿ ಇದ್ದ ಜಯಶ್ರೀನಿವಾಸನ್ ಎಲಿಮಿನೇಟ್ ಆದರು. ಆದ್ರೆ, ಅವರು ಔಟ್ ಆಗಿರುವ ಸಂಗತಿ ಸಮೀರಾಚಾರ್ಯ ಅವರಿಗೂ ಗೊತ್ತಿರಲಿಲ್ಲ. ಜಯಶ್ರೀನಿವಾಸನ್ ಔಟ್ ಆಗುವ ಮುನ್ನ ಸಮೀರಾಚಾರ್ಯ ಅವರನ್ನ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸಲಾಯ್ತು'' - ಸುದೀಪ್

ಸೆಕೆಂಡ್ ಚಾನ್ಸ್ ಅಲ್ಲ
''ಟ್ವಿಸ್ಟ್ ಇರಲಿ ಅಂತ ಸೀಕ್ರೆಟ್ ರೂಮ್ ಒಳಗೆ ಒಬ್ಬರನ್ನ ತರಬೇಕಿತ್ತು. ಹಾಗೆ ಮಾಡುವ ಮುನ್ನ 'ಬಿಗ್ ಬಾಸ್' ಮನೆಯೊಳಗಿನಿಂದ ಒಬ್ಬರನ್ನ ಎಲಿಮಿನೇಟ್ ಮಾಡುವ ಟ್ವಿಸ್ಟ್ ಬೇಕಿತ್ತು. ಟ್ವಿಸ್ಟ್ ಪ್ರಕಾರ, ದಿವಾಕರ್ ಹೊರಗೆ ಬಂದರು. ಸೀಕ್ರೆಟ್ ರೂಮ್ ನಲ್ಲಿದ್ದು ವಾಪಸ್ ಹೋದರು. ಇಷ್ಟು ಬಿಟ್ಟರೆ, ದಿವಾಕರ್ ಔಟ್ ಆಗಿಲ್ಲ. ಇದು ಅವರಿಗೆ ಕೊಟ್ಟ ಸೆಕೆಂಡ್ ಚಾನ್ಸ್ ಕೂಡ ಅಲ್ಲ. ಈ ಬಗ್ಗೆ ಕ್ಲಾರಿಟಿ ಕೊಡಬೇಕಿತ್ತು. ಕ್ಲಾರಿಟಿ ಕೊಡಬೇಕು ಅನಿಸ್ತು. ಕೊಟ್ವಿ. ಅಷ್ಟೇ'' - ಸುದೀಪ್

ಪಕ್ಷಪಾತದ ಬಗ್ಗೆ ಮಾತನಾಡಿಲ್ಲ
ಒಂದು ವಾರ ಸೀಕ್ರೆಟ್ ರೂಮ್ ನಲ್ಲಿ ಇದ್ದ ದಿವಾಕರ್, ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗಿ ಆಗದೆ, ವೀಕ್ಷಕರ ಬೆಂಬಲದ ಅವಶ್ಯಕತೆ ಇಲ್ಲದೆ 'ಬಿಗ್ ಬಾಸ್' ಕೃಪೆಯಿಂದ ಸೇಫ್ ಆಗಿದ್ದಾರೆ. ನಾಮಿನೇಷನ್ ಎಂಬ ಅಗ್ನಿಪರೀಕ್ಷೆಯಿಂದ ದಿವಾಕರ್ ಅವರನ್ನ ಬಚಾವ್ ಮಾಡಿದ 'ಬಿಗ್ ಬಾಸ್', 'ಪಕ್ಷಪಾತ'ದ ಬಗ್ಗೆ ಮಾತ್ರ ಸ್ಪಷ್ಟನೆ ಕೊಟ್ಟಿಲ್ಲ.


Click it and Unblock the Notifications