»   » ಇದು ಪಕ್ಷಪಾತ ಮಾಡಿದಂತೆ ಅಲ್ವಾ 'ಬಿಗ್ ಬಾಸ್'.!? ಕ್ಲಾರಿಟಿ ಕೊಡಿ..

ಇದು ಪಕ್ಷಪಾತ ಮಾಡಿದಂತೆ ಅಲ್ವಾ 'ಬಿಗ್ ಬಾಸ್'.!? ಕ್ಲಾರಿಟಿ ಕೊಡಿ..

Posted By:
Subscribe to Filmibeat Kannada

ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯಬೇಕು... ತಮ್ಮ ಇಷ್ಟದ ಸ್ಪರ್ಧಿಗಳಿಗೆ ಜನ ವೋಟ್ ಮಾಡಬೇಕು... ಅತಿ ಕಡಿಮೆ ಎಸ್.ಎಂ.ಎಸ್ ಪಡೆದವರು ಎಲಿಮಿನೇಟ್ ಆಗಬೇಕು. ಇದು 'ಬಿಗ್ ಬಾಸ್' ಕಾರ್ಯಕ್ರಮದ ನಿಯಮ.

'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದವರು ಮಾತ್ರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗಿರುತ್ತಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಕ್ಯಾಪ್ಟನ್ ಹೆಸರು ಹಾಗೂ ತಮ್ಮ ತಮ್ಮ ಹೆಸರುಗಳನ್ನ ತೆಗೆದುಕೊಳ್ಳಬಾರದು ಎಂಬುದು ಕೂಡ 'ಬಿಗ್ ಬಾಸ್' ಮಾಡಿರುವ ನಿಯಮವೇ.!

'ಬಿಗ್ ಬಾಸ್' ಸ್ಪರ್ಧೆಯಲ್ಲಿ ಯಾರ್ಯಾರು ಇರುತ್ತಾರೋ, ಅವರೆಲ್ಲರೂ ನಾಮಿನೇಷನ್ ಎಂಬ ಪರೀಕ್ಷೆಯನ್ನ ಎದುರಿಸಲೇಬೇಕು. ಹೀಗಿದ್ದರೂ, ಈ ನಾಮಿನೇಷನ್ ಎಂಬ ಅಗ್ನಿಪರೀಕ್ಷೆಯಿಂದ ದಿವಾಕರ್ ಅವರನ್ನ 'ಬಿಗ್ ಬಾಸ್' ಬಚಾವ್ ಮಾಡಿದ್ದಾರೆ.

ದಿವಾಕರ್ ಅವರನ್ನ ಸೀಕ್ರೆಟ್ ರೂಮ್ ನಲ್ಲಿ ಇರಿಸಿ, ಬಾಕಿ ಸ್ಪರ್ಧಿಗಳನ್ನ ನಾಮಿನೇಷನ್ ಗೆ ದೂಕಿರುವ 'ಬಿಗ್ ಬಾಸ್' ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದಂತೆ ಆಗ್ಲಿಲ್ವಾ.? ಮುಂದೆ ಓದಿರಿ...

ಕಳೆದ ಶನಿವಾರ ನಡೆಯಿತು ಡಬಲ್ ಎಲಿಮಿನೇಷನ್.!

ಅದಾಗಲೇ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಸೀಕ್ರೆಟ್ ರೂಮ್ ನಲ್ಲಿ ಇದ್ದ ಕಾರಣ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್' ಮನೆಯ ಸದಸ್ಯರು ಹಾಗೂ ಸೀಕ್ರೆಟ್ ರೂಮ್ ನಲ್ಲಿ ಇದ್ದ ಸದಸ್ಯರ ಜೊತೆ ಪ್ರತ್ಯೇಕವಾಗಿ ಪಂಚಾಯತಿ ನಡೆಸಿದರು ಸುದೀಪ್. ವಾರದ ಇಡೀ ಕಥೆಯನ್ನು ಇಟ್ಟುಕೊಂಡು ಪಂಚಾಯತಿ ನಡೆಸಿದ ಬಳಿಕ ಸೀಕ್ರೆಟ್ ರೂಮ್ ನಲ್ಲಿ ಇದ್ದ ಜಯಶ್ರೀನಿವಾಸನ್ ಅವರನ್ನ ಹೊರಗೆ ಕರೆದರು (ಔಟ್ ಮಾಡಿದರು) ಸುದೀಪ್. ಸಾಲದಕ್ಕೆ 'ಬಿಗ್ ಬಾಸ್' ಮೇನ್ ಹೌಸ್ ನಿಂದ ದಿವಾಕರ್ ಅವರನ್ನ ಎಲಿಮಿನೇಟ್ ಮಾಡಿದರು.

ಹೊರಗೆ ಹೋಗಿದ್ದು ಜಯಶ್ರೀನಿವಾಸನ್ ಮಾತ್ರ.!

ಇದ್ದಕ್ಕಿದ್ದಂತೆ 'ಬಿಗ್ ಬಾಸ್' ಮನೆಯಿಂದ ನಾಪತ್ತೆ ಆದ ಜಯಶ್ರೀನಿವಾಸನ್ ಪ್ರತ್ಯಕ್ಷ ಆಗಿದ್ದು ಸೀಕ್ರೆಟ್ ರೂಮ್ ನಲ್ಲಿ. ನಂತರ 'ಮಧ್ಯರಾತ್ರಿ ಎಲಿಮಿನೇಷನ್ ಚಮಕ್' ಕೊಟ್ಟು ಸಮೀರಾಚಾರ್ಯ ಅವರನ್ನೂ ಸೀಕ್ರೆಟ್ ರೂಮ್ ಗೆ ಕಳುಹಿಸಲಾಯ್ತು. ಬಳಿಕ 'ಬಿಗ್ ಬಾಸ್' ಮೇನ್ ಹೌಸ್ ಗೆ ಸಮೀರಾಚಾರ್ಯ ಮರಳಿದರು. ಇತ್ತ ಜಯಶ್ರೀನಿವಾಸನ್ ಔಟ್ ಆದರು.

ದಿವಾಕರ್ ಎಲಿಮಿನೇಷನ್ ನಾಮಕಾವಸ್ತೆಯೋ.? ನಿಜವೋ.?

ಜಯಶ್ರೀನಿವಾಸನ್ ಸೀಕ್ರೆಟ್ ರೂಮ್ ನಲ್ಲಿ ಇದ್ದರು ಎಂಬ ಸತ್ಯ ಸಮೀರಾಚಾರ್ಯ ಅವರನ್ನ ಬಿಟ್ಟರೆ ಇನ್ಯಾರಿಗೂ ಗೊತ್ತಿಲ್ಲ. ಹಾಗ್ನೋಡಿದ್ರೆ, ಜಯಶ್ರೀನಿವಾಸನ್ ಔಟ್ ಆಗಿರುವ ವಿಷಯ ಸಮೀರಾಚಾರ್ಯ ಅವರಿಗೂ ಗೊತ್ತಿಲ್ಲ. ಅವರಿಗೆ ಮಾತ್ರ ಅಲ್ಲ, ಯಾವ ಸ್ಪರ್ಧಿಯ ಅರಿವಿಗೂ ಬಂದಿಲ್ಲ. ಇತ್ತ ''ಜಯಶ್ರೀನಿವಾಸನ್ ಏನಾದರು?'' ಎಂಬ ಪ್ರಶ್ನೆ ಎಲ್ಲ ಸ್ಪರ್ಧಿಗಳ ತಲೆಯಲ್ಲೂ ಕೊರೆಯುತ್ತಿರುವಾಗಲೇ, ದಿವಾಕರ್ ಅವರನ್ನ ಔಟ್ ಮಾಡಲಾಯ್ತು. ಹೀಗಾಗಿ ದಿವಾಕರ್ ಅವರ ಎಲಿಮಿನೇಷನ್ ನಾಮಕಾವಸ್ತೆಯೋ.? ಅಥವಾ ನಿಜವೋ.? ಎಂಬ ಕ್ಲಾರಿಟಿ ವೀಕ್ಷಕರಿಗೂ ಸಿಕ್ಕಿಲ್ಲ. ಈ ಬಗ್ಗೆ 'ಬಿಗ್ ಬಾಸ್' ಕ್ಲಾರಿಟಿ ಕೊಡಲೇಬೇಕು.

ಯಾವುದು ಸತ್ಯ.? ಕ್ಲಾರಿಟಿ ಕೊಡಿ

ಅತ್ತ ಜಯಶ್ರೀನಿವಾಸನ್ ಅವರನ್ನ ಔಟ್ ಮಾಡಿ, ಇತ್ತ ಎಲ್ಲ ಸ್ಪರ್ಧಿಗಳ ತಲೆಗೆ ಹುಳ ಬಿಡಲು ದಿವಾಕರ್ ಅವರನ್ನ ಎಲಿಮಿನೇಟ್ ಮಾಡಿದಂತೆ ಮಾಡಿ, ಅವರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸಲಾಯ್ತಾ.? ಅಥವಾ ಸೀಕ್ರೆಟ್ ರೂಮ್ ಗೆ ದಿವಾಕರ್ ರನ್ನ ಕಳುಹಿಸಬೇಕು ಅಂತಲೇ ಎಲಿಮಿನೇಷನ್ ಡ್ರಾಮಾ ನಡೆಯಿತಾ.? ಗೊತ್ತಿಲ್ಲ.!

ದಿವಾಕರ್ ಔಟ್ ಆಗುವ ಸ್ಪರ್ಧಿಯೇ.?

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗಿನಿಂದಲೂ, ಕಾಮನ್ ಮ್ಯಾನ್ ಸ್ಪರ್ಧಿಗಳಿಗೆ ವೀಕ್ಷಕರ ಬೆಂಬಲ ಹೆಚ್ಚಿದೆ. ಹೀಗಾಗಿ, ದಿವಾಕರ್ ಎಲಿಮಿನೇಟ್ ಆಗುವ ಸ್ಪರ್ಧಿ ಅಲ್ಲವೇ ಅಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.

ಸ್ಪಷ್ಟನೆ ಸಿಕ್ಕಿಲ್ಲ

ದಿವಾಕರ್ ಅವರನ್ನ ನಿಜವಾಗಲೂ ಎಲಿಮಿನೇಟ್ ಮಾಡಿ, ಸೆಕೆಂಡ್ ಚಾನ್ಸ್ ಕೊಟ್ಟು ಸೀಕ್ರೆಟ್ ರೂಮ್ ಒಳಗೆ ಕಳುಹಿಸಲಾಗಿದ್ಯಾ.? ಈ ಬಗ್ಗೆ 'ಬಿಗ್ ಬಾಸ್' ಆಗಲಿ, ಸುದೀಪ್ ಆಗಲಿ ಸ್ಪಷ್ಟನೆ ಕೊಟ್ಟಿಲ್ಲ. ಅಷ್ಟಕ್ಕೂ, ಸುದೀಪ್ ಇದ್ದ ವೇದಿಕೆ ಮೇಲೆ ದಿವಾಕರ್ ಬರಲೇ ಇಲ್ಲ.

ದಿವಾಕರ್ ರನ್ನ ಬಚಾವ್ ಮಾಡಿದ್ರಾ 'ಬಿಗ್ ಬಾಸ್'.?

ಒಂದು ವೇಳೆ ಸೆಕೆಂಡ್ ಚಾನ್ಸ್ ಕೊಟ್ಟಿದ್ದರೆ ಓಕೆ. ಆದ್ರೆ, ಆ ಬಗ್ಗೆ ಉಲ್ಲೇಖಿಸದೇ, ಸುಮ್ಮನೆ ದಿವಾಕರ್ ಅವರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸಿ, ಅವರನ್ನ ನಾಮಿನೇಷನ್ ನಿಂದ 'ಬಿಗ್ ಬಾಸ್' ಬಚಾವ್ ಮಾಡಿದಂತೆ ಕಾಣುತ್ತಿಲ್ವಾ.?

ವೀಕ್ಷಕರ ಬೆಂಬಲದ ಅವಶ್ಯಕತೆಯೇ ಇಲ್ಲ

ಸ್ಪರ್ಧೆಯಲ್ಲಿ ಇನ್ನೂ ದಿವಾಕರ್ ಇದ್ದ ಮೇಲೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗಿ ಆಗಲೇ ಬೇಕು. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಇರುವ ಸ್ಪರ್ಧಿಗಳ ಪ್ರಕಾರ, ದಿವಾಕರ್ ಔಟ್ ಆಗಿದ್ದಾರೆ. ಇತ್ತ ಸೀಕ್ರೆಟ್ ರೂಮ್ ನಲ್ಲಿ ಇದ್ದು ಕೊಂಡು ಎಲ್ಲ ಆಟ ನೋಡುತ್ತಿರುವ ದಿವಾಕರ್ ಒಂದು ವಾರ ವೀಕ್ಷಕರ ಬೆಂಬಲದ ಅವಶ್ಯಕತೆ ಇಲ್ಲದೇ ಸೇಫ್ ಆಗಿರುವಂತಿದೆ.

ಎರಡು ವಾರ ದಿವಾಕರ್ ಕೆಮ್ಮಂಗಿಲ್ಲ

ನಾಮಿನೇಷನ್ ನಿಂದ ಬಚಾವ್ ಆಗಿರುವ ಕಾರಣ ಈ ವಾರ ಪೂರ ಹಾಗೂ ಮುಂದಿನ ಶನಿವಾರದವರೆಗೂ 'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಇರುವುದು ಪಕ್ಕಾ.

ಇದು ಪಕ್ಷಪಾತ ಮಾಡಿದಂತೆ ಅಲ್ಲವೇ.?

ಒಬ್ಬ ಸ್ಪರ್ಧಿಯನ್ನ ಸೀಕ್ರೆಟ್ ರೂಮ್ ನಲ್ಲಿ ಇರಿಸಿ, ಇತರೆ ಸ್ಪರ್ಧಿಗಳಿಗೆ ಆ ಸ್ಪರ್ಧಿಯನ್ನ ನಾಮಿನೇಟ್ ಮಾಡುವ ಅವಕಾಶ ಕಲ್ಪಿಸದೇ, ಸುಮ್ಮನೆ ಸೇಫ್ ಮಾಡಿದರೆ ಅದು ಪಕ್ಷಪಾತ ಮಾಡಿದಂತೆ ಅಲ್ಲವೇ.?

ನಾಮಿನೇಟ್ ಆದ್ಮೇಲೆ ಆಗಿದ್ದರೆ...

ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ದಿವಾಕರ್ ಗೆ ಬಿಟ್ಟರೆ ಇಂತಹ ಸೂಪರ್ ಚಾನ್ಸ್ ಯಾರಿಗೂ ಸಿಕ್ಕಿಲ್ಲ. ಅಂದ್ಹಾಗೆ, ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಸೀಕ್ರೆಟ್ ರೂಮ್ ಗೆ ಕಾಲಿಟ್ಟಿದ್ದು ನಾಮಿನೇಟ್ ಆದ್ಮೇಲೆ.

'ಬಿಗ್ ಬಾಸ್' ನಡೆ ಸರಿಯೇ.?

'ಬಿಗ್ ಬಾಸ್' ಕುರಿತ ಈ ನಡೆ ಬಗ್ಗೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ..

English summary
Bigg Boss Kannada 5: Week 12: Is Bigg Boss favouring Diwakar.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X