'ದಯವಿಟ್ಟು ನನ್ನ ಮನೆಗೆ ಕಳುಹಿಸಿ' ಎಂದು ಮನವಿ ಮಾಡಿಕೊಂಡ ಜಯಶ್ರೀ.!

Recommended Video

Bigg Boss Kannada Season 6: ದಯವಿಟ್ಟು ನನ್ನ ಮನೆಗೆ ಕಳುಹಿಸಿ' ಎಂದು ಮನವಿ ಮಾಡಿಕೊಂಡ ಜಯಶ್ರೀ.!

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಪ್ರಬಲ ಸ್ಪರ್ಧಿ ಆಗಿ ಕಾಣಿಸಿಕೊಂಡಿರುವವರ ಪೈಕಿ ಕಿರುತೆರೆ ನಟಿ ಜಯಶ್ರೀ ಕೂಡ ಒಬ್ಬರು. ಹೀಗಿದ್ದರೂ, ಈ ವಾರ ಜಯಶ್ರೀ ಟಾರ್ಗೆಟ್ ಆಗಿದ್ದಾರೆ.

'ಬಿಗ್ ಬಾಸ್ ವಿಶ್ವವಿದ್ಯಾನಿಲಯ' ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಜಯಶ್ರೀಗೆ 'ಕಳಪೆ' ಹಣೆಪಟ್ಟಿ ನೀಡಿ ಜೈಲಿಗೆ ಕಳುಹಿಸಲಾಗಿದೆ. ಈ ಬಗ್ಗೆ ಬೇಸರ ಒಂದ್ಕಡೆ ಇದ್ದರೆ, ಇನ್ನೊಂದು ಕಡೆ ಆಂಡ್ರ್ಯೂ ಬಾಯಿಗೆ ಸಿಲುಕಿ ಜಯಶ್ರೀ ಹೈರಾಣಾಗಿದ್ದಾರೆ.

ತೀವ್ರ ಮನನೊಂದಿರುವ ಜಯಶ್ರೀ, ''ಪ್ಲೀಸ್ ನನ್ನ ಮನೆಗೆ ಕಳುಹಿಸಿ. ನನಗೆ ಇಲ್ಲಿ ಸಹಿಸಲು ಆಗುತ್ತಿಲ್ಲ'' ಎಂದು ಕಣ್ಣೀರು ಹಾಕುತ್ತಾ 'ಬಿಗ್ ಬಾಸ್' ಬಳಿ ಮನವಿ ಮಾಡಿದ್ದಾರೆ. ಮುಂದೆ ಓದಿರಿ...

'ಬಿಗ್ ಬಾಸ್' ಕೊಟ್ಟ ವಿಶೇಷ ಚಟುವಟಿಕೆ

'ಬಿಗ್ ಬಾಸ್' ಕೊಟ್ಟ ವಿಶೇಷ ಚಟುವಟಿಕೆ

ಮನೆಯ ಸದಸ್ಯರಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದೇ 'ಇವರೇ ಅವರು'. ಇದರ ಅನುಸಾರ, ''ಯಾವ ಒಬ್ಬ ಮನೆಯ ಸದಸ್ಯ ತಮ್ಮ ಆತ್ಮೀಯ ಗೆಳೆಯನ ಗರ್ಲ್ ಫ್ರೆಂಡ್ ನ ಪಟಾಯಿಸುತ್ತಾರೆ.?'' ಎಂಬ ಪ್ರಶ್ನೆಗೆ ಜಯಶ್ರೀ ಉತ್ತರ ಕೊಡಬೇಕಿತ್ತು.

'ಬಿಗ್ ಬಾಸ್' ಮನೆಯ ರಿಮೋಟ್ ಗ್ಯಾಂಗ್ ನಲ್ಲಿ ಸದ್ಯದಲ್ಲೇ ಒಡಕು ಮೂಡೋದು ಪಕ್ಕಾ.!

ಜಯಶ್ರೀ ಕೊಟ್ಟ ಉತ್ತರ ಏನು.?

ಜಯಶ್ರೀ ಕೊಟ್ಟ ಉತ್ತರ ಏನು.?

''ನನಗೆ ಗೊತ್ತಿರುವುದು ಒಂದೇ ಸ್ಟೋರಿ. ಅದರಲ್ಲಿ ಗರ್ಲ್ ಫ್ರೆಂಡ್-ಬಾಯ್ ಫ್ರೆಂಡ್ ತರಹ ಏನೂ ಇಲ್ಲ. ಆದರೂ ಆಂಡಿಗೆ ಕೊಡುವೆ. ರಾಕೇಶ್-ಅಕ್ಷತಾ ಫ್ರೆಂಡ್ ಶಿಪ್ ನಲ್ಲಿ ಅಡ್ವಾನ್ ಟೇಜ್ ತಗೊಂಡು ಅಕ್ಷತಾ ಜೊತೆ ಆಂಡಿ ಕ್ಲೋಸ್ ಆಗಿದ್ದಾರೆ'' ಎಂದು ಜಯಶ್ರೀ ಉತ್ತರಿಸಿದರು.

ಬೇಸರಗೊಂಡ ಆಂಡಿ

ಬೇಸರಗೊಂಡ ಆಂಡಿ

''ಅಷ್ಟು ಖರಾಬ್ ಆಗಿ, ಚೀಪ್ ಆಗಿ ಯೋಚಿಸುವುದು ನನಗೆ ಬರಲ್ಲ. ರಾಕೇಶ್-ಅಕ್ಷತಾ ನಡುವಿನ ಸಂಬಂಧದ ಬಗ್ಗೆ ಜಯಶ್ರೀ ತಪ್ಪಾಗಿ ಮಾತನಾಡಿದ್ದಾರೆ. ಅವರೂ ಒಬ್ಬ ಹೆಣ್ಣಾಗಿ, ಇನ್ನೊಬ್ಬ ಹೆಣ್ಣಿನ ಬಗ್ಗೆ ಡ್ಯಾಮೇಜ್ ಆಗುವ ಹಾಗೆ ಮಾತನಾಡಿದ್ದಾರೆ'' ಅಂತ ಆಂಡಿ ಹೇಳುತ್ತಿದ್ದ ಹಾಗೆ ಜಯಶ್ರೀ ಸಿಡಿಮಿಡಿಗೊಂಡರು.

ಜಯಶ್ರೀ ನೀಡಿದ ಸ್ಪಷ್ಟನೆ

ಜಯಶ್ರೀ ನೀಡಿದ ಸ್ಪಷ್ಟನೆ

''ಅವರಿಬ್ಬರ ಸಂಬಂಧ ಹಾಗಿಲ್ಲ ಅಂತ ನಾನು ಹೇಳಿದ್ದೇನೆ'' ಅಂತ ಪದೇ ಪದೇ ಜಯಶ್ರೀ ಸ್ಪಷ್ಟನೆ ನೀಡುತ್ತಿದ್ದರು. ಆದರೂ ಆಂಡಿ ಸುಮ್ಮನಾಗಲಿಲ್ಲ. ಆಗ ಜಯಶ್ರೀ ಕಣ್ಣೀರಿಡಲು ಶುರು ಮಾಡಿದರು.

ಮನೆಗೆ ಕಳುಹಿಸಿ

ಮನೆಗೆ ಕಳುಹಿಸಿ

''ನನಗೆ ಇಲ್ಲಿ ಇರಲು ಆಗುತ್ತಿಲ್ಲ. ಪ್ಲೀಸ್ ನನ್ನ ಮನೆಗೆ ಕಳುಹಿಸಿ. ತುಂಬಾ ಉಸಿರು ಕಟ್ಟುತ್ತಿದೆ. ನಾನು ಸೆಲ್ಫ್ ಎಲಿಮಿನೇಟ್ ಆಗುವೆ. ನನಗೆ ಇನ್ನೂ ಸಹಿಸಲು ಆಗಲ್ಲ'' ಅಂತ ಕಣ್ಣೀರು ಸುರಿಸುತ್ತಾ 'ಬಿಗ್ ಬಾಸ್'ಗೆ ಜಯಶ್ರೀ ಮನವಿ ಮಾಡಿದರು.

ನವೀನ್ ಅಭಿಪ್ರಾಯ ಏನು.?

ನವೀನ್ ಅಭಿಪ್ರಾಯ ಏನು.?

''ಪ್ರಶ್ನೆ ಅಷ್ಟೊಂದು ಕಾಂಪ್ಲೀಕೇಟ್ ಆಗಿ ಇರಲಿಲ್ಲ. ಆದ್ರೆ, ಏನೋ ಹೇಳಲು ಹೋಗಿ ನೀವೇ ಸಿಕ್ಕಿ ಹಾಕಿಕೊಂಡ್ರಿ'' ಅಂತ ಜಯಶ್ರೀಗೆ ನವೀನ್ ಹೇಳಿದರು.

More from Filmibeat

English summary
Bigg Boss Kannada 6: Day 60: Jayashree wants to quit the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X