For Quick Alerts
  ALLOW NOTIFICATIONS  
  For Daily Alerts

  BBK9:ಬರ್ತ್ ನಂಬರ್ 4 ಆದ್ರೆ ರಾಕೇಶ್‌ಗೆ ಟ್ರೈ ಮಾಡಬಹುದು..!

  |

  ಬಿಗ್ ಬಾಸ್ ಮನೆಯಲ್ಲಿ ಗುರೂಜಿಗೆ ರಾಕೇಶ್ ಮದುವೆಯದ್ದೇ ಚಿಂತೆಯಾಗಿದೆ. ಹೀಗಾಗಿ ಇಂದು ಪಕ್ಕದಲ್ಲಿ ಕೂರಿಸಿಕೊಂಡು ತಮ್ಮ ನಂಬರ್ ಪ್ರಕಾರ ಯಾವ ಹೆಣ್ಣು ಆಗಿ ಬರುತ್ತೆ ಎಂಬುದನ್ನು ಹೇಳಿಕೊಡುತ್ತಿದ್ದಾರೆ. ರಾಕೇಶ್ ಕೂಡ ತುಂಬಾ ಡೀಪ್ ಆಗಿ ಮಾತುಗಳನ್ನು ಕೇಳುತ್ತಿದ್ದಾರೆ.

  ರಾಕೇಶ್ ಹಾಗೂ ಅಮೂಲ್ಯ ನಡುವೆ ಏನೋ ನಡೆಯುತ್ತಿದೆ ಎಂಬುದನ್ನಂತು ತಿಳಿಯುವ ಕುತೂಹಲ ಗುರೂಜಿಯದ್ದು. ಆ ಬಗ್ಗೆ ಅದಾಗಲೇ ಇಬ್ಬರ ನಡುವೆ ಕೂತು ಮಾತಿಗೆ ಮಾತು ಬೆಳೆಸುತ್ತಾ ದೊಡ್ಡ ಗಲಾಟೆಯನ್ನೇ ಮಾಡಿದ್ದರು. ಈಗ ಬೇರೆ ಅದ್ಯಾವುದನ್ನು ಬಾಯಿ ಬಿಡಿಸುವ ಹರಸಾಹಸ ಎಂಬುದು ಮಾತ್ರ ಗೊತ್ತಾಗಲಿಲ್ಲ.

  BBK9 : ಬಿಗ್ ಬಾಸ್‌ನಲ್ಲಿ ಹಳೆ ಫರೆಂಡ್ ಕಂಡು ಫುಲ್ ಖುಷಿಯಾದ ದಿವ್ಯಾ ಉರುಡುಗ!BBK9 : ಬಿಗ್ ಬಾಸ್‌ನಲ್ಲಿ ಹಳೆ ಫರೆಂಡ್ ಕಂಡು ಫುಲ್ ಖುಷಿಯಾದ ದಿವ್ಯಾ ಉರುಡುಗ!

   ರಾಕೇಶ್‌ಗಾಗಿ ಹೆಣ್ಣು ಹುಡುಕುತ್ತಿರುವ ಅಮೂಲ್ಯ

  ರಾಕೇಶ್‌ಗಾಗಿ ಹೆಣ್ಣು ಹುಡುಕುತ್ತಿರುವ ಅಮೂಲ್ಯ

  ಲವ್ ಬರ್ಡ್ಸ್ ರೀತಿ ಕಾಣಿಸಿಕೊಂಡಿದ್ದ ರಾಕೇಶ್ ಹಾಗೂ ಅಮೂಲ್ಯ, ಇದೀಗ ಅಮ್ಮ ಮಗನ ಡ್ರಾಮಾ ಶುರು ಮಾಡಿಕೊಂಡಿದ್ದಾರೆ. ರಾಕೇಶ್‌ನನ್ನು ಪಾಪು ಎನ್ನುವ ಅಮೂಲ್ಯ, ಎಲ್ಲಾ ವಿಚಾರದಲ್ಲೂ ಪಾಪು ನೋಡಿಕೊಂಡಂತೆ ನೋಡಿಕೊಳ್ಳುತ್ತಾರೆ. ತಲೆ ಬಾಚುವುದಿರಲಿ, ಊಟ ಮಾಡಿಸುವುದಿರಲಿ ಅದೆಲ್ಲಕ್ಕೂ ಮೀರಿದ್ದು ಮಗನಿಗಾಗಿ ಹೆಣ್ಣು ಹುಡುಕುವ ಉಸಾಬರಿಯನ್ನು ವಹಿಸಿಕೊಂಡಿದ್ದಾರೆ. ಆದ್ರೆ ಅಮೂಲ್ಯರನ್ನು ಮೀರಿ ಗುರೂಜಿಯಿಂದ ಹೆಣ್ಣು ಹುಡುಕುವ ಕೆಲಸ ನಡೆಯುತ್ತಿದೆ.

   ರಾಕಿಗೆ ಬೇಕು ಈ ಬರ್ತ್ ಡೇಟ್

  ರಾಕಿಗೆ ಬೇಕು ಈ ಬರ್ತ್ ಡೇಟ್

  ಆರ್ಯವರ್ಧನ್ ಗುರೂಜಿ ಹೇಳಿಕೇಳಿ ನಂಬರ್ ಅಂದ್ರೆ ನಾನು.. ನಾನು ಅಂದ್ರೆ ನಂಬರ್ ಎಂದುಕೊಂಡೆ ಸಂಖ್ಯಾಶಾಸ್ತ್ರದಲ್ಲಿ ಫುಲ್ ಹೆಸರು ಮಾಡಿರುವವರು. ಬಿಗ್ ಬಾಸ್ ಮನೆಯಲ್ಲೂ ಆಗಾಗ ಸಂಖ್ಯಾ ಶಾಸ್ತ್ರವನ್ನು ಉಪಯೋಗಿಸುತ್ತಾರೆ. ಈಗ ರಾಕೇಶ್ ವಿಚಾರಕ್ಕೆ ಸಂಖ್ಯಾಶಾಸ್ತ್ರದ ಮೂಲಕ ಮದುವೆಯಾಗುವುದಕ್ಕೆ ಸಲಹೆ ನೀಡುತ್ತಿದ್ದಾರೆ. "ನೀನು ತುಂಬಾ ಚೆನ್ನಾಗಿ ಮಾತಾನಾಡುತ್ತೀಯ. ನಿಮ್ಮ ವಯಸ್ಸಿನವರಿಗೆ ನೀನು ಬೆಸ್ಟ್ ಹುಡುಗ ಆಗುತ್ತೀಯಾ. ಈಗ ಒಳ್ಳೆ ಟೈಮ್ ಬಂದಿದೆ ಮದುವೆಯಾಗು. ಅಡುಗೆ ಎಲ್ಲಾ ತಲೆ ಕೆಡಿಸಿಕೊಳ್ಳಬೇಡ. ಟೆಕ್ನಾಲಜಿ ಇದೆ ಮಾಡಿಕೊಳ್ಳುತ್ತಾರೆ. ನಿಂಗೆ ಮದುವೆಯಾಗಬೇಕು ಅಷ್ಟೇ. ಗುಣ ಎಲ್ಲಾ ಅವಳ ಜಾತಕ ನೋಡಿ ಡಿಸೈಡ್ ಆಗುವುದು. ನಿನ್ನ ಜಾತಕದಲ್ಲಿ ಏನಾಗುತ್ತೆ ನೋಡು. ನನಗೆ ಮದುವೆಯಾಗಬೇಕಾದರೆ ಗುಣ ಗಿಣ ಅಂತ ನೋಡಲಿಲ್ಲ. ನಂಗೆ ಅನ್ಸುತ್ತೆ ಬೆಸ್ಟ್ ಆಫ್ಶನ್ ಸಿಗುತ್ತೆ. ವಿಶಾಕ ನಕ್ಷತ್ರ. ಒಳ್ಳೆ ಟೈಮು" ಎಂದಿದ್ದಾರೆ.

   ರಾಕಿ ಇಲ್ಲಿ ಮಾತ್ರನಾ ಮಾತನಾಡುವುದು

  ರಾಕಿ ಇಲ್ಲಿ ಮಾತ್ರನಾ ಮಾತನಾಡುವುದು

  ಇನ್ನು ರಾಕಿ ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ತಾಳ್ಮೆ ಇರುವಂತ ಮನುಷ್ಯ. ಮಾತು ಸ್ವಲ್ಪ ಕಡಿಮೆಯೇ. ಆದರೂ ಗುರೂಜಿಗೆ ಆ ಮಾತುಗಳೆ ಜಾಸ್ತಿಯಾಗಿದೆಯಂತೆ. ಹೆಚ್ಚು ಮಾತನಾಡುವ ಹುಡುಗಿ ಬಗ್ಗೆ ಗುರೂಜಿ ಹೇಳಿದ್ದು ಹೀಗೆ, "ಹೆವಿ ಮಾತನಾಡುವ ಹುಡುಗಿಯನ್ನು ನೀನು ನೋಡಬೇಡ. ಯಾಕಂದ್ರೆ ನಿನಗೆ ಅದು ಆಗಲ್ಲ. ನೀನು ಹೆವಿ ಸ್ಲೋ ಆಗಿ ಹೋಗುತ್ತಿಯಾ. ನಿಂಗೆ 1ನೇ ನಂಬರ್‌ನಲ್ಲಿ ಹುಟ್ಟಿದವರು ಆಗುತ್ತೆ. 4ನೇ ನಂಬರ್‌ನಲ್ಲಿ ಹುಟ್ಟಿದವರು ಬೆಸ್ಟ್. ಅವರು ಹೆವಿ ಸ್ಲೋ ನಂಬರ್ ಇರುವವರನ್ನು ಆಗು. ನೀನು ಬಿಗ್ ಬಾಸ್ ಮನೆಯಲ್ಲಷ್ಟೇ ಮಾತನಾಡ್ತಾ ಇದ್ದೀಯಾ. ಹೊರಗೆ ಮಾತನಾಡುವುದಿಲ್ಲ" ಎಂದಿದ್ದಾರೆ.

   ರಾಕಿ ಬಯಸಿದ ಹುಡುಗಿ ಬೇಡವಂತೆ..!

  ರಾಕಿ ಬಯಸಿದ ಹುಡುಗಿ ಬೇಡವಂತೆ..!

  ರಾಕಿಗೂ ತನ್ನ ಕನಸಿನ ಹುಡುಗಿ ಬಗ್ಗೆ ಹೇಳುತ್ತಾ ಇದ್ದರು "ಅಡುಗೆ ಎಲ್ಲಾ ಚೆನ್ನಾಗಿ ಮಾಡುವವಳನ್ನು ಮದುವೆಯಾಗ್ಲಾ. ಬಟ್ ಯಾವ ಥರದ ಹುಡುಗಿಯನ್ನು ಮದುವೆಯಾಗುವುದು. ಯಾವ ಥರದ ಗುಣ. ಹೆವಿ ಮಾತನಾಡುವವಳನ್ನು ಆಗಲ್ಲ. ಇಲ್ಲ ಸೈಲೆಂಟ್ ಆಗಿರುವವಳನ್ನು ಮದುವೆ ಆಗ್ಲಾ" ಎಂದು ಕೇಳಿದ್ದಾರೆ.

  English summary
  Bigg Boss Kannada December 22nd Episode Written Update. Here is the details about Guruji Suggestions for Rakesh Adiga.
  Friday, December 23, 2022, 6:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X