For Quick Alerts
  ALLOW NOTIFICATIONS  
  For Daily Alerts

  BBK9: ಆರ್ಯವರ್ಧನ್ ಗೊತ್ತಿದ್ದು ಮಾಡಿದ ತಪ್ಪಿಗೆ ಮನೆಮಂದಿಗೆಲ್ಲಾ ಶಿಕ್ಷೆ..!

  |

  ಬಿಗ್ ಬಾಸ್ ಮನೆ ಈಗ ಕಾಡಿನ ಮನೆಯಾಗಿದೆ. ಕಾಡಿನ ಒಳಗೆ ವಾಸ ಮಾಡುವ ಮಂದಿ, ಸೌಕರ್ಯಗಳನ್ನು ಪಡೆಯಬೇಕು ಎಂದರೆ ಟಾಸ್ಕ್ ಗಳನ್ನು ಗೆಲ್ಲಲೇಬೇಕಾಗಿದೆ. ಬಿಗ್ ಬಾಸ್ ನೀಡುವ ಟಾಸ್ಕ್‌ಗಳನ್ನು ಯಾರು ಅಂದಾಜಿಸುವಂತಿಲ್ಲ. ಇಂಥದ್ದೇ ಟಾಸ್ಕ್ ನೀಡುತ್ತಾರೆ ಎಂದುಕೊಳ್ಳುವ ಹಾಗಿಲ್ಲ. ನೋಡುವುದಕ್ಕೆ ಸುಲಭವಿದ್ದರೂ, ಆಡುವುದಕ್ಕೆ ಕಷ್ಟ ಸಾಧ್ಯವಾದಂತ ಟಾಸ್ಕ್.

  ಬಿಗ್ ಬಾಸ್ ಟಾಸ್ಕ್ ನೀಡಿದ ಮೇಲೆ ಅದಕ್ಕೆ ನಿಯಮಗಳನ್ನು ನೀಡುತ್ತಾರೆ. ಆ ನಿಯಮಗಳನ್ನು ಮೀರುವ ಹಾಗಿಲ್ಲ. ನಿಯಮ ಮೀರಿ ಆಟವಾಡಿದರೆ ಆ ಆಟ ಗೆದ್ದರೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಆರ್ಯವರ್ಧನ್ ಟಾಸ್ಕ್ ಎಂದರೆ ಯಾವಾಗಲೂ ಮುಂದಿರುವವರು, ಈಗ ಮಾಡಿದ ಅವಾಂತರಕ್ಕೆ ಮನೆ ಮಂದಿ ಕೋಪಕ್ಕೆ ತುತ್ತಾಗಿದ್ದಾರೆ.

  BBK9: ಕಾಡಿನ ಊಟ ಉಂಡು ಹೌಹಾರಿದ ಮನೆ ಮಂದಿ: ರೂಪೇಶ್ ಗೋಳೋ ಕೇಳೋರಿಲ್ಲ..!BBK9: ಕಾಡಿನ ಊಟ ಉಂಡು ಹೌಹಾರಿದ ಮನೆ ಮಂದಿ: ರೂಪೇಶ್ ಗೋಳೋ ಕೇಳೋರಿಲ್ಲ..!

  ಸೌಕರ್ಯ ಪಡೆಯಲು ನಟ್ ಬಿಚ್ಚುವ ಟಾಸ್ಕ್

  ಸೌಕರ್ಯ ಪಡೆಯಲು ನಟ್ ಬಿಚ್ಚುವ ಟಾಸ್ಕ್

  ಆರ್ಯವರ್ಧನ್ ಓಟಿಟಿಯಿಂದ ಟಿವಿ ಸೀಸನ್‌ಗೆ ಬಂದವರು. ಅಲ್ಲಿಂದ ಇಲ್ಲಿಯ ತನಕ ಟಾಸ್ಕ್‌ನಲ್ಲಿ ಅದ್ಭುತವಾಗಿ ಆಡುತ್ತಾರೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಆರ್ಯವರ್ಧನ್ ಆಡಲಿ ಎಂದೇ ಎಲ್ಲರೂ ಒಪ್ಪಿದ್ದಾರೆ. ಆದರೆ ಅತಿಯಾದ ಎಕ್ಸೈಟ್ಮೆಂಟೋ ಏನೋ, ಆರ್ಯವರ್ಧನ್ ಆಡಿದ ರೇಂಜಿಗೆ ಆಟದಿಂದ ಹೊರಗುಳಿಯಬೇಕಾಯಿತು. ಆಟ ಆಡಿದರು ಅದು ಪ್ರಯೋಜನವಾಗಲಿಲ್ಲ.

  BBK9: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರ ಸುಳಿವು ನೀಡಿದ್ದು ಆಕೆಯ ನೇಲ್ ಪಾಲಿಶ್, ಉಂಗುರ!BBK9: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರ ಸುಳಿವು ನೀಡಿದ್ದು ಆಕೆಯ ನೇಲ್ ಪಾಲಿಶ್, ಉಂಗುರ!

  ಆಡುವ ಬರದಲ್ಲಿ ಗುರೂಜಿ ಆಡಿದ್ದೇ ಬೇರೆ..!

  ಆಡುವ ಬರದಲ್ಲಿ ಗುರೂಜಿ ಆಡಿದ್ದೇ ಬೇರೆ..!

  ಸ್ವಿಮ್ಮಿಂಗ್ ಪೂಲ್‌ನಲ್ಲಿ ಒಂದು ಮರದ ತುಂಡುಗಳಿಗೆ ನಟ್ಟು ಹಾಕಲಾಗಿತ್ತು. ಆ ನಟ್ಟನ್ನು ಬರಿಗೈನಲ್ಲಿ ತೆಗೆಯಬೇಕಾಗಿತ್ತು. ಆದ್ರೆ ಆರ್ಯವರ್ಧನ್ ಗುರೂಜಿ ಬಟ್ಟೆಯಲ್ಲಿ ನಟ್ಟು ತೆಗೆಯುವುದಕ್ಕೆ ಪ್ರಯತ್ನ ಮಾಡಿದರು. ಆಗ ರೂಪೇಶ್ ಶೆಟ್ಟಿ, ಅನುಪಮಾ ಗೌಡ ಇಬ್ಬರು ಹೇಳಿದರು ಆರ್ಯವರ್ಧನ್ ಕೇಳುವುದಕ್ಕೆ ಸಿದ್ಧವಿರಲಿಲ್ಲ. ತಾವೂ ಬೇಕಾದ ರೀತಿಯಲ್ಲಿಯೇ ಮಾಡುತ್ತಿದ್ದರು. ಜೊತೆಗೆ ಗೊಬ್ಬರಗಾಲ ಕೂಡ ಅದನ್ನೇ ಮಾಡುವುದಕ್ಕೆ ಶುರು ಮಾಡಿದ್ದರು. ಮನೆಯವರ ಕೋಪ ಒಂದು ಕಡೆ ಇದ್ದಾಗಲೇ ಬಿಗ್ ಬಾಸ್‌ನಿಂದ ವಾರ್ನಿಂಗ್ ಬಂದಿದೆ. ನೀವೂ ನಿಯಮ ಮೀರಿದ್ದೀರಿ, ಆಟವನ್ನು ಸೋತಿದ್ದೀರಿ ಎಂದು ಹೇಳಿದೆ.

  ತಪ್ಪು ಮಾಡಿದ್ದರು ಸಮರ್ಥನೆ ನೀಡಿದ ಆರ್ಯವರ್ಧನ್

  ತಪ್ಪು ಮಾಡಿದ್ದರು ಸಮರ್ಥನೆ ನೀಡಿದ ಆರ್ಯವರ್ಧನ್

  ಆರ್ಯವರ್ಧನ್ ಮೊದಲಿನಿಂದಾನೂ ಹಾಗೆಯೇ. ಯಾವತ್ತಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಈ ಬಾರಿಯೂ ಹಾಗೆ ಮಾಡಿದ್ದಾರೆ. ಮನೆಯವರೆಲ್ಲಾ ಹೇಳಿದರೂ ಕೇಳದೆ ಇದ್ದಾಗ, ಕೊನೆಯಲ್ಲಿ ಸೋತಾಗಲೂ ಸಮಾಧಾನದಿಂದ ಇಲ್ಲ. ಈಗ ನೀನು ಮಾತಾಡಬೇಡ ಎಂದು ರೂಪೇಶ್ ಶೆಟ್ಟಿಗೆ ಗದರಿದ್ದಾರೆ. ಆ ನಟ್ಟು ತುಂಬಾ ಟೈಟ್ ಇತ್ತು ಅದಕ್ಕೆ ಬಟ್ಟೆಯಲ್ಲಿ ಬಿಚ್ಚಿದೆ ಎಂದು ಸಮರ್ಥನೆ ಕೊಟ್ಟಿದ್ದಾರೆ. ಈಗ ನೋಡಿ ಹೇಳುವುದನ್ನು ನೀವೂ ಕೇಳುವುದಿಲ್ಲ, ನಿಮಗೆ ಇಷ್ಟ ಬಂದಂಗೆ ಆಡಿದ್ರಿ, ಈಗ ಏನಾಯ್ತು ಎಂದು ಮನೆಯವರೆಲ್ಲಾ ತರಾಟೆ ತೆಗೆದುಕೊಂಡಿದ್ದಾರೆ.

  ಗುರೂಜಿ ಕಲೆ ಬಗ್ಗೆ ರೂಪೇಶ ಶೆಟ್ಟಿ ಕಾಮಿಡಿ

  ಗುರೂಜಿ ಕಲೆ ಬಗ್ಗೆ ರೂಪೇಶ ಶೆಟ್ಟಿ ಕಾಮಿಡಿ

  ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ ಮೂವರು ಒಂದು ಕಡೆ ಮಲಗಿಕೊಂಡು ನಡೆದ ಟಾಸ್ಕ್ ಬಗ್ಗೆ ಮಾತನಾಡುತ್ತಾ ಕೂತಿದ್ದರು. ಆಗ ರೂಪೇಶ್ ಶೆಟ್ಟಿ ನೋಡಿದ ಒಂದು ಭಯಾನಕ ಸತ್ಯವನ್ನು ಹೊರಗೆ ಹಾಕಿದ್ದಾರೆ. ನೀರಿನ ಒಳಗಿರುವ ನಟ್ಟು ಬಿಚ್ಚುವುದಕ್ಕೆ ಆರ್ಯವರ್ಧನ್ ಗುರೂಜಿ ತಾವೂ ಹಾಕಿದ್ದ ಪ್ಯಾಂಟ್ ಅನ್ನೇ ಬಿಚ್ಚಿದ್ದರಂತೆ. ಬಳಿಕ ಆ ಪ್ಯಾಂಟ್ ಅನ್ನು ನೀರಿನಲ್ಲಿ ನಿಂತುಕೊಂಡೆ ತೊಟ್ಟುಕೊಂಡರಂತೆ. ಇದನ್ನು ಕೇಳಿದ ರಾಜಣ್ಣನಿಗೆ ಶಾಕ್ ಆಗಿದೆ. ಸತ್ಯ ಹೇಳಿದರು ಏನು ರಿಯಾಕ್ಷನ್ ಕೊಡದ ಗುರೂಜಿ "ಏನು ಮಾಡೋದಪ್ಪ ಈಗ ನಾವೂ ಆಟ ಸೋತಿದ್ದೀವಿ" ಅಂತ ಜಾರಿಕೊಂಡಿದ್ದಾರೆ.

  English summary
  Bigg Boss Kannada November 22nd Episode Written Update. Here is the details about Aryavardhan mistake.
  Wednesday, November 23, 2022, 23:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X