ನಮ್ರತಾ ಗೌಡಗೆ ರಾಜಕಾರಣಿಗಳ ಜೊತೆ ಡೇಟಿಂಗ್ ಮಾಡುವಂತೆ ಕಿರುಕುಳ; ಯಾರಿದು ರೋಷನ್?

'ನಾಗಿಣಿ 2' ಧಾರಾವಾಹಿ, ಬಿಗ್‌ಬಾಸ್ ಅಂತಹ ರಿಯಾಲಿಟಿ ಶೋನ ಜನಪ್ರಿಯರ ತಾರೆ ನಮ್ರತಾ ಗೌಡಗೆ ಕಿಡಿಗೇಡಿಯೊಬ್ಬ ಕಿರುಕುಳ ನೀಡಿದ್ದಾನೆ. ಈ ನಟಿಯ ಇನ್‌ಸ್ಟಾಗ್ರಾಂ ಖಾತೆಗೆ ಅಪರಿಚಿತ ವ್ಯಕ್ತಿಯೊಬ್ಬ ಬೇರೊಂದು ಹೆಸರಿನಲ್ಲಿ ಕೆಟ್ಟ ಸಂದೇಶಗಳನ್ನು ಕಳುಹಿಸಿದ್ದಾನೆ. ಇದು ಕಿರುತೆರೆ ನಟಿಯ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಸೆಲೆಬ್ರೆಟಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ಕೊಡುವುದು ಹೊಸ ವಿಷಯವೇನೂ ಅಲ್ಲ. ಅದ್ಯಾವಾಗ ಸೋಶಿಯಲ್ ಮೀಡಿಯಾ ಕ್ರೇಜ್ ಹೆಚ್ಚಾಯಿತೋ ಅಲ್ಲಿಂದ ಕಿಡಿಗೇಡಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಲೇ ಇದ್ದಾರೆ. ನಟಿಯರಿಗೆ ಅಶ್ಲೀಲ ಹಾಗೂ ಅಸಭ್ಯ ಸಂದೇಶಗಳನ್ನು ಕಳುಹಿಸಿ ಟಾರ್ಚರ್ ಕೊಡುತ್ತಿದ್ದಾರೆ. ಇಂತಹ ಸಾಕಷ್ಟು ಪ್ರಕರಣಗಳು ಈಗಾಗಲೇ ಬಂದು ಹೋಗಿವೆ. ಅದರಲ್ಲಿ ಇತ್ತೀಚೆಗಿನ ನಮ್ರತಾ ಗೌಡ ಪ್ರಕರಣ ಕೂಡ ಒಂದು.

Bigg Boss Kannada fame Namratha Gowda was angry at the miscreant who had harassed her to date politicians

ಬಿಗ್‌ ಬಾಸ್ ಕನ್ನಡ ಖ್ಯಾತಿಯ ಈ ನಟಿಗೆ ಕಿಡಿಗೇಡಿಯೊಬ್ಬ ಎರಡು ಮೂರು ಬಾರಿ ಇನ್‌ಸ್ಟಾಗ್ರಾಂನಲ್ಲಿ ಸಂದೇಶವನ್ನು ಕಳುಹಿಸಿದ್ದಾನೆ. ಇದು ನಮ್ರತಾ ಗೌಡಗೆ ಕಿರಿಕಿರಿಯನ್ನುಂಟು ಮಾಡಿದೆ. ಅದಕ್ಕೆ ಕಾರಣ ರಾಜಕಾರಣಿ ಜೊತೆ ಡೇಟಿಂಗ್ ಮಾಡುವಂತೆ ಆ ಕಿಡಿಗೇಡಿ ಪದೇ ಪದೆ ಮೆಸೇಜ್ ಅನ್ನು ಕಳುಹಿಸಿದ್ದಾನೆ. ಅಷ್ಟಕ್ಕೂ ನಮ್ರತಾಗೆ ಕಳುಹಿಸಿದ ಸಂದೇಶದಲ್ಲಿ ಏನಿದೆ? ಕಿಡಿಗೇಡಿ ಯಾರು? ಅನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ನಮ್ರತಾ ಗೌಡಗೆ ಕಿರುಕುಳ

ಸೋಶಿಯಲ್ ಮೀಡಿಯಾದಲ್ಲಿ ನಟಿಯರ ಇನ್‌ಸ್ಟಾಗ್ರಾಂ ಖಾತೆಗಳಿಗೆ ಹೋಗಿ ಸಂದೇಶ ಕಳುಹಿಸುವುದು. ಕೆಟ್ಟದಾಗಿ ಕಮೆಂಟ್‌ಗಳನ್ನು ಮಾಡುವುದು, ಅಶ್ಲೀಲ ಪದಗಳನ್ನು ಬಳಸುವುದು, ಫೋಟೋಗಳನ್ನು ಕಳುಹಿಸುವುದನ್ನು ಕಿಡಿಗೇಡಿಗಳು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ನಟಿಯರು ಇಂತಹ ಸಂದೇಶಗಳಿಗೆ ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಆದರೆ, ನಮ್ರತಾ ಗೌಡ ಈ ಸಂದೇಶಗಳು ಸಿಕ್ಕಾಪಟ್ಟೆ ಕೋಪ ತರಿಸಿವೆ. ಹೀಗಾಗಿ ಸ್ಕ್ರೀನ್ ಶಾಟ್ ತೆಗೆದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿ, ರೋಷನ್ ಎಂಬುವ ಕಿಡಿಗೇಡಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

Bigg Boss Kannada fame Namratha Gowda was angry at the miscreant who had harassed her to date politicians

ಡೇಟಿಂಗ್ ಸಂದೇಶದಲ್ಲಿ ಏನಿದೆ?

ನಮ್ರತಾ ಗೌಡಗೆ ನಟಿ ಪದೇ ಪದೆ ಟಾರ್ಚರ್ ಕೊಟ್ಟಿದ್ದಾನೆ. ಹಲವು ಬಾರಿ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಕಳುಹಿಸಿದ್ದಾನೆ. ತನಗೆ ರಾಜಕಾರಣಿಗಳು ಹಾಗೂ ವಿಐಪಿಗಳೊಂದಿಗೆ ಸಂಪರ್ಕವಿದ್ದು, ಅವರೊಂದಿಗೆ ಪೇಯ್ಡ್ ಡೇಟಿಂಗ್ ಅನ್ನು ಅರೇಂಜ್ ಮಾಡುತ್ತೇನೆ. ನೀವು ರಾಜಕಾರಣಿಗಳ ಜೊತೆ ಡೇಟಿಂಗ್ ಮಾಡಿ ಎಂದು ಎರಡು ಮೂರು ಬಾರಿ ಸಂದೇಶವನ್ನು ಕಳುಹಿಸಿದ್ದಾನೆ. ಮೊದಲೆರಡು ಮೆಸೇಜ್ ಅನ್ನು ನಿರ್ಲಕ್ಷ್ಯ ಮಾಡಿದ್ದ ನಟಿ ನಂತರ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಸಂದೇಶದಲ್ಲಿ ಏನಿದೆ?

"ಹಾಯ್.. ನಾನು ಹಲವು ರಾಜಕೀಯ ಮುಖಂಡರು ಹಾಗೂ ವಿಐಪಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅವರಿಗೆ ನಾನು ಪೇಯ್ಡ್ ಡೇಟಿಂಗ್ ಅನ್ನು ಅರೇಂಜ್ ಮಾಡುತ್ತೇನೆ. ಇದು ತುಂಬಾನೇ ರಹಸ್ಯವಾಗಿರುತ್ತೆ. ನೀವು ನಿಮ್ಮ ಪರ್ಸನಲ್ ನಂಬರ್ ಅನ್ನು ಶೇರ್ ಮಾಡುವ ಅಗತ್ಯವಿಲ್ಲ. ಹಾಗೇ ಫೋಟೊಗಳನ್ನು ಹಂಚಿಕೊಳ್ಳುವ ಅಗತ್ಯ ಕೂಡ ಇಲ್ಲ. ದೊಡ್ಡ ಮೊತ್ತವನ್ನು ಪಾವತಿಸಲಾಗುತ್ತದೆ. 200% ಎಲ್ಲವೂ ಖಾಸಗಿಯಾಗಿರುತ್ತೆ. ನಿಮಗೆ ಇಷ್ಟವಿದ್ದಲ್ಲಿ ಮಾಹಿತಿ ಹಂಚಿಕೊಳ್ಳಿ ಎಂದು ಎರಡೆರಡು ಬಾರಿ ಸಂದೇಶವನ್ನು ಕಳುಹಿಸಿದ್ದಾನೆ.

Take a Poll

ನಮ್ರತಾ ಗೌಡ ಎಚ್ಚರಿಕೆ

ಈ ಸ್ಕ್ರೀನ್ ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿ ಕಿಡಿಗೇಡಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಮ್ರತಾ ಶೇರ್ ಮಾಡಿರುವ ಸ್ಕ್ರೀನ್ ಶಾಟ್‌ನಲ್ಲಿ ರೋಷನ್ ಎಂಬ ಹೆಸರು ಕಾಣಿಸುತ್ತಿದೆ. ಅಸಲಿಗೆ ಆ ಕಿಡಿಗೇಡಿಯ ನಿಜವಾದ ಹೆಸರು ರೋಷನ್? ಅಥವಾ ಬೇರೆ ಇದೆಯೇ ಎಂಬುದಕ್ಕೆ ಇನ್ನೂ ಸ್ಪಷ್ಟತೆ ಕೊಟ್ಟಿಲ್ಲ. ಅಲ್ಲದೆ ಈ ಸಂಬಂಧ ನಮ್ರತಾ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರಾ? ಅನ್ನೋದು ಗೊತ್ತಾಗಿಲ್ಲ. ಇಂತಹ ಸಂದೇಶಗಳು ಬರುತ್ತಲೇ ಇರುತ್ತವೆ. ಅದನ್ನು ನಿರ್ಲಕ್ಷ್ಯ ಮಾಡುತ್ತಿರುತ್ತಾರೆ. ಆದರೆ, ಈ ಬಾರಿ ನಮ್ರತಾ ಗೌಡ ಕಿಡಿಗೇಡಿಯ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ.

More from Filmibeat

English summary
Bigg Boss Kannada fame Namratha Gowda was angry at the miscreant who had harassed her to date politicians;
Read more about: namratha harassment actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X