"ಇವತ್ತು ವಿಡಿಯೋ ಚೆನ್ನಾಗಿದೆ"; ನಿವೇದಿತಾ ಗೌಡ ಹೊಸ ರೀಲ್‌ನಲ್ಲಿ ಅಂತಹದ್ದೇನಿದೆ?

ಸ್ಯಾಂಡಲ್‌ವುಡ್‌ನ ಬಾರ್ಬಿ ಡಾಲ್ ಅಂತಾನೇ ಜನಪ್ರಿಯರಾಗಿರುವ ನಿವೇದಿತಾ ಗೌಡ ಈಗ ರೀಲ್ಸ್‌ನಲ್ಲಿ ಮುಳುಗಿ ಹೋಗಿದ್ದಾರೆ. ಅದರಲ್ಲೂ ಹೊಸ ವರ್ಷದ ಸಂಭ್ರಮದಲ್ಲಿ ವಿದೇಶಕ್ಕೆ ಹೋಗಿದ್ದರೋ ಅಲ್ಲಿಂದ ನಿವೇದಿತಾ ಗೌಡ ಮಾಡುವ ಒಂದೊಂದು ರೀಲ್ಸ್ ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಪಡೆದುಕೊಳ್ಳುತ್ತೆ. ನೆಟ್ಟಿಗರು ಬೈಯ್ಯುತ್ತಲೇ ವಿಡಿಯೋ ನೋಡುತ್ತಿದ್ದಾರೆ. ಆ ಮಟ್ಟಿಗೆ ನಿವೇದಿತಾ ರೀಲ್ಸ್ ಫೇಮಸ್ ಆಗಿದೆ.

ನಿವೇದಿತಾ ಈ ಹಿಂದೆ ಕೂಡ ರೀಲ್ಸ್ ಮಾಡುತ್ತಿದ್ದರು. ಆಗಲೂ ನೆಟ್ಟಿಗರು ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಿದ್ದರು. ಅದ್ಯಾವಾಗ ಚಂದನ್ ಶೆಟ್ಟಿಯಿಂದ ವಿಚ್ಚೇದನ ಪಡೆದರೋ ಅಲ್ಲಿಂದ ನಿವೇದಿತಾ ಗೌಡ ಯಾವುದೇ ವಿಡಿಯೋ ಮಾಡಿದರೂ ಉರಿದು ಬೀಳುತ್ತಿದ್ದಾರೆ. ಅದರೆ ನಿವೇದಿತಾ ಕಾಮೆಂಟ್‌ಗಳಿಗೆಲ್ಲ ಕ್ಯಾರೇ ಅನ್ನುತ್ತಿಲ್ಲ. ತನ್ನಿಷ್ಟದಂತೆ ವಿಡಿಯೋಗಳನ್ನು ಮಾಡುತ್ತಿದ್ದಾರೆ.

Bigg Boss Kannada fame Niveditha Gowda new instagram reel with red saree is trending

ಇತ್ತೀಚೆಗೆ ಸ್ವಲ್ಪ ಗ್ಲಾಮರ್ ಆಗಿ ವಿಡಿಯೋಗಳನ್ನು ಮಾಡುತ್ತಿದ್ದರು. ಅದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ರೀಗ ಕೆಂಪು ಸೀರೆಯುಟ್ಟು ಹಿಂದಿ ಹಾಡಿಗೆ ರೀಲ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿದ್ದಾರೆ. ನೆಗೆಟಿವ್ ಕಾಮೆಂಟ್‌ಗಳು ಕೂಡ ಕಮ್ಮಿಯಾಗಿವೆ. ನಿವೇದಿತಾ ಅವರನ್ನು ಹೊಗಳಿ ಮಾಡಿರುವ ಕಾಮೆಂಟ್‌ಗಳು ವಿಡಿಯೋದಷ್ಟೇ ಮಜವಾಗಿವೆ.

ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡೋದು ಹೊಸತೇನಲ್ಲ. ರೀಲ್ಸ್‌ನಿಂದಲೇ ಫೇಮಸ್ ಆಗಿರುವ ನಿವೇದಿತಾ ಈಗ ರಿಯಾಲಿಟಿ ಶೋ, ಸಿನಿಮಾ ಅಂತ ಬ್ಯುಸಿಯಾಗಿದ್ದಾರೆ. ನಟನೆಯಿಂದಲೇ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಇತ್ತೀಚೆಗೆ ಮಾಡರ್ನ್ ಡ್ರೆಸ್‌ನಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದಾಗ ನೆಟ್ಟಿಗರು ಇದೇ ಕಾರಣಕ್ಕೆ ಚಂದನ್ ಶೆಟ್ಟಿಯಿಂದ ವಿಚ್ಚೇದನ ಪಡೆದಿದ್ದಾ? ಎಂದು ಪ್ರಶ್ನೆ ಮಾಡಿದ್ದರು. ಆದರೆ, ಅದ್ಯಾವುದನ್ನೂ ತಲೆಗೆ ಹಾಕಿಕೊಂಡಿಲ್ಲ. ತನಗನಿದಂತೆ ರೀಲ್ಸ್ ಮಾಡುತ್ತಿದ್ದರು.

ಈಗ ನಿವೇದಿತಾ ಗೌಡ ಉಟ್ಟಿರುವ ಕೆಂಪು ಬಣ್ಣದ ಸೀರೆಯ ಮೇಲೆ ಎಲೆಗಳ ಚಿತ್ತಾರವಿದೆ. ಅದಕ್ಕೆ ಸರಿ ಹೊಂದುವ ಬ್ಲೌಸ್. ಅದಕ್ಕೆ ಜೂ.ಎನ್‌ಟಿಆರ್ ನಟನೆಯ 'ದೇವರ ಪಾರ್ಟ್ 1' ಸಿನಿಮಾದ ಚುಟ್ಟುಮಲ್ಲೆ ಸೂಪರ್ ಹಿಟ್ ಸಾಂಗ್ ಹಾಕೊಂಡು ಮೈ ಬಳುಕಿಸಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನಸ್ಸು ಗೆದ್ದಿದೆ. ಮೈ ತುಂಬಾ ಬಟ್ಟೆ ಹಾಕೊಂಡು ವಿಡಿಯೋ ಮಾಡಿದ್ದೀಯ ಎಂದು ಕಾಮೆಂಟ್ ಮಾಡಿ ಖುಷಿ ಪಟ್ಟಿದ್ದಾರೆ. ಇನ್ನು ಕೆಲವರು ಡಿಸೈನ್.. ಡಿಸೈನ್ ಆಗಿ ಮಸ್ತ್‌ ಆಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಏನೆಲ್ಲ ಕಾಮೆಂಟ್ ಮಾಡಿದ್ದಾರೆ ಅನ್ನೋದನ್ನು ನೋಡುವುದಾದರೆ..

ನೆಟ್ಟಿಗರೊಬ್ಬರು "ಗಂಗಾ ನಾಗವಲ್ಲಿ ಆಗಿ ಬದಲಾಗಿದ್ದು ನೋಡಿದ್ದೆ.. ನಿವೇದಿತಾ ಮೈ ತುಂಬಾ ಬಟ್ಟೆ ಹಾಕಿದ್ದು ಇವತ್ತೇ ನೋಡ್ತಿರೋದು" ಎಂದು ಕಾಮೆಂಟ್ ಮಾಡಿದ್ದಾರೆ. ಅದೇ ಇನ್ನೊಬ್ಬ ನೆಟ್ಟಿಗರು " ಈ ಸಲ ಗಣೇಶನ ನೀರಿಗೆ ಬಿಡ್ಬೇಕಾದ್ರೆ ನನ್ನನ್ನು ಸೇರ್ಸಿ ತಳ್ಳಿ ಬಿಡ್ರಪ್ಪ" ಎಂದು ನಿವೇದಿತಾ ಗೌಡ ಕಾಲೆಳೆದಿದ್ದಾರೆ. ಮತ್ತೊಬ್ಬರು "ಇವತ್ತು ವಿಡಿಯೋ ಚೆನ್ನಾಗಿದೆ" ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಅದೇ ಇನ್ನೊಬ್ಬರು "ಈಗ ಈ ಹಾಡಿಗೆ ಒಂದು ಕಳೆ ಬಂತು" ಎಂದಿದ್ದರೆ, ಹಾಗೇ "ಕನ್ನಡ ಹಾಡಿಗೆ ರೀಲ್ಸ್ ಮಾಡು" ಎಂದು ಕಾಮೆಂಟ್ ಮಾಡಿದ್ದಾರೆ.

ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿರುವ ನಿವೇದಿತಾ ಗೌಡ ರಿಯಾಲಿಟಿ ಶೋದಲ್ಲಿ ಭಾಗವಹಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಬಾಯ್ಸ್ Vs ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ತೆಲುಗು ಸಿನಿಮಾ ಕೂಡ ನಡೆಯುತ್ತಿದೆ. ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಟಿಸಿರುವ ಸಿನಿಮಾ ಕೂಡ ಬಿಡುಗಡೆಯಾಗಬೇಕಿದೆ. ರೀಲ್ಸ್ ಜೊತೆ ತನ್ನ ವೃತ್ತಿ ಬದುಕಿನ ಬಗ್ಗೆನೂ ಗಮನ ಹರಿಸುತ್ತಿದ್ದಾರೆ.

More from Filmibeat

English summary
Bigg Boss Kannada fame Niveditha Gowda new instagram reel with red saree is trending;
Read more about: niveditha gowda social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X