For Quick Alerts
  ALLOW NOTIFICATIONS  
  For Daily Alerts

  BBK9: ಮನೆಯವರ ಒಮ್ಮತದ ನಿರ್ಧಾರ ಒಪ್ಪದ ರೂಪೇಶ್ ರಾಜಣ್ಣ..!

  |

  ರೂಪೇಶ್ ರಾಜಣ್ಣನಿಂದ ಕಿರಿಕಿರಿ ಹೆಚ್ಚಾಗುತ್ತಿದೆ. ಮನೆ ಮಂದಿಗೆಲ್ಲಾ ಸಾಕಪ್ಪ ಸಾಕು ಎನ್ನುವಂತೆ ಮಾಡುತ್ತಿದ್ದಾರೆ. ರಿಯಲ್ ಮತ್ತು ಫೇಕ್ ಟಾಸ್ಕ್ ಆದ ಬಳಿಕ ರಾಜಣ್ಣ ರೆಬಲ್ ಆಗಿ ಬಿಟ್ಟಿದ್ದಾರೆ. ಮನೆಯವರನ್ನು ಕಿಚಾಯಿಸುವ ಭರದಲ್ಲಿ ಎಲ್ಲರ ಮನಸ್ಸಿಗೆ ನೋವುಂಟು ಮಾಡುತ್ತಿದ್ದಾರೆ. ಇದೀಗ ರಾಕೇಶ್ ಕೋಪಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

  ಫೇಕ್ ಅಂಡ್ ರಿಯಲ್ ವಿಚಾರದಲ್ಲಿ ರಾಜಣ್ಣ ಹೇಳಿದ ವಿಚಾರ ಯಾರಿಗೂ ಸರಿ ಕಾಣಲಿಲ್ಲ. ಅದೇ ಕಾರಣಕ್ಕೆ ಇಡೀ ಮನೆ ಮಂದಿ ಒಂದಾಗಿದ್ದರು. ರಾಜಣ್ಣನ ವಿರುದ್ಧ ನಿಂತಿದ್ದರು. ಕೊನೆಗೆ ಒಂದೇ ಮನೆಯಲ್ಲಿ ಇರಬೇಕಾದವರು ಎಂದು ಟಾಸ್ಕ್ ಆದ ಮೇಲೆ ಎಲ್ಲರೂ ರಾಜಣ್ಣನಿಗೆ ಹಗ್ ಕೊಟ್ಟರು. ಆದ್ರೆ ಮತ್ತೆ ರಾಜಣ್ಣನಿಂದ ಅದೇ ಚಾಳಿ ಶುರುವಾಗಿದೆ.

  ರಾಜಣ್ಣನ ನಡೆಗೆ ಬೇಸರಗೊಂಡ ರಾಕೇಶ್

  ರಾಜಣ್ಣನ ನಡೆಗೆ ಬೇಸರಗೊಂಡ ರಾಕೇಶ್

  ಎರಡು ಟೀಂ ಮಾಡಲಾಗಿದೆ. ಅದರಲ್ಲಿ ಒಂದು ಟೀಂನಲ್ಲಿ ರಾಕೇಶ್, ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ, ಅನುಪಮಾ ಗೌಡ ಇದ್ದಾರೆ. ಅವರು ಇಬ್ಬರ ಹೆಸರನ್ನು ಚರ್ಚಿಸಿ ಹೇಳಬೇಕಿತ್ತು. ಆಗ ಎಲ್ಲರೂ ಚರ್ಚಿಸಿ ಅರುಣ್ ಸಾಗರ್ ಹಾಗೂ ದಿವ್ಯಾ ಹೆಸರನ್ನು ಸೂಚಿಸಿದರು. ಈ ಬಗ್ಗೆ ಮಾತನಾಡಿದ ರಾಕೇಶ್, ನಾವೆಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದೇವೆ. ಅರುಣ್ ಸಾಗರ್ ಹಾಗೂ ದಿವ್ಯಾ ಉರುಡುಗ ಹೆಸರನ್ನು ತೆಗೆದುಕೊಳ್ಳುತ್ತೇವೆ ಎಂದಾಗ, ಮಧ್ಯೆ ಪ್ರವೇಶಿಸಿದ ರಾಜಣ್ಣ, ಇದಕ್ಕೆ ನನ್ನ ಒಮ್ಮತವಿಲ್ಲ. ಅರುಣ್ ಸಾಗರ್ ಹೆಸರು ಸೂಚಿಸಲ್ಲ ಎಂದಿದ್ದಾರೆ.

  ರಾಜಣ್ಣನ ಹೇಳಿಕೆಯಿಂದ ಹೊತ್ತಿಕೊಂಡ ಬೆಂಕಿ

  ರಾಜಣ್ಣನ ಹೇಳಿಕೆಯಿಂದ ಹೊತ್ತಿಕೊಂಡ ಬೆಂಕಿ


  ಹೀಗೆ ಎಲ್ಲರೂ ಹೇಳಿದ ಮಾತಿಗೆ ರಾಜಣ್ಣ ನೋ ಎಂದಾಗ ಅಲ್ಲಿ ಒಂದಷ್ಟು ಚರ್ಚೆಗಳು, ಮನ:ಸ್ತಾಪಗಳು ಮೂಡಿದ್ದವು. ಆ ಒಮ್ಮತಕ್ಕೆ ಈ ನಾಲ್ಕು ಜನರ ಹೆಸರಿದೆ. ಅರುಣ್ ಅವರ ಹೆಸರು ನಾನು ತೆಗೆದುಕೊಳ್ಳುತ್ತಿಲ್ಲ ಎಂದಿದ್ದಾರೆ. ಆ ವೇಳೆ ರಾಕೇಶ್ ಬೇಸರ ಮಾಡಿಕೊಂಡಿದ್ದು, ಸುಮ್ಮನೆ ಒಬ್ಬರೇ ಒಳ್ಳೆಯವರಾಗುವುದು ಬೇಕಾಗಿಲ್ಲ. ಎಲ್ಲರೂ ಒಪ್ಪಿಕೊಂಡಿದ್ದಾದ ಮೇಲೆ ಅವರದ್ದು ಈ ಮಾತು ಬಂದಿದ್ದಕ್ಕೆ ಇಡೀ ಟೀಂ ಬೇಸರ ಮಾಡಿಕೊಂಡಿದೆ.

  ರಾಜಣ್ಣನ ಮಾತು ಕಂಟ್ರೋಲ್ ತಪ್ಪುತ್ತಿದೆಯಾ..?

  ರಾಜಣ್ಣನ ಮಾತು ಕಂಟ್ರೋಲ್ ತಪ್ಪುತ್ತಿದೆಯಾ..?

  ಬಿಗ್ ಬಾಸ್ ಮನೆಯಲ್ಲಿ ಬರ ಬರುತ್ತಾ ಸಲಿಗೆ ಬೆಳೆದವರ ನಡುವೆ ಸ್ನೇಹವೂ ಬೆಳೆಯುತ್ತದೆ. ಆಗ ಸಿಂಗಿಲರ್ ಪದಗಳಲ್ಲಿಯೇ ಮಾತು ಕತೆಗಳು ನಡೆಯುತ್ತವೆ. ಸಲುಗೆ ಇಲ್ಲದವರ ನಡುವೆ ಈಗಲೂ ಹೋಗಿ ಬನ್ನಿ ಅಂತಾನೆ ಮಾತುಕತೆ ನಡೆಯುತ್ತದೆ. ಆದರೆ ರೂಪೇಶ್ ರಾಜಣ್ಣ ವಿಚಾರದಲ್ಲಿ ಬೆಲೆ ಕೊಡಲಿಲ್ಲ ಎಂಬುದೇ ಮನೆಯವರ ನಡುವೆ ಜಗಳಕ್ಕೆ ಕಾರಣವಾಗಿದೆ. ಲಾಸ್ಟ್ ಟೈಮ್ ಅಮೂಲ್ಯ ಕೂಡ ರಾಜಣ್ಣ ಅವರಿಗೆ ಸಲಹೆ ನೀಡಿದ್ದರು. ನಾವೂ ಹೇಗೆ ನಿಮಗೆ ಬೆಲೆ ಕೊಡುತ್ತಿವೋ, ಅದೇ ರೀತಿ ನೀವೂ ಬೆಲೆ ಕೊಡಿ ಎಂದಿದ್ದರು. ಈಗ ರಾಕೇಶ್ ಕೂಡ ಅದನ್ನೇ ಹೇಳಿದ್ದಾರೆ. ನೀನು-ಗೀನೂ ಬೇಡ ಮೊದಲು ಮರ್ಯಾದೆ ಕೊಟ್ಟು ಮಾತನಾಡಿ ಎಂದಿದ್ದಾರೆ.

  ರಾಜಣ್ಣನ ನಡೆಗೆ ಗುರೂಜಿ ಕೂಡ ಬೇಸರ

  ರಾಜಣ್ಣನ ನಡೆಗೆ ಗುರೂಜಿ ಕೂಡ ಬೇಸರ

  ರಾಜಣ್ಣ ವಿಚಿತ್ರವಾಗಿ ನಡೆದುಕೊಳ್ಳುತ್ತಿರುವುದು ಇದು ಮೊದಲೇನು ಅಲ್ಲ. ರಾತ್ರಿ ಆರ್ಯವರ್ಧನ್ ಗುರೂಜಿ ಬಳಿಯೂ ಹೀಗೆ ನಡೆದುಕೊಂಡಿದ್ದರು. ಗುರೂಜಿ ಏನನ್ನೋ ಮಾತನಾಡುತ್ತ ಇದ್ದಾಗ ಬಂದ ರಾಜಣ್ಣ, ಏನೋ ಹೇಳಬೇಕು ಎಂದರು. ಇದು ನನ್ನ ಪರ್ಸನಲ್. ನಿನ್ನ ಕಾಲು ಹಿಡಿದು ಕೇಳ್ತೀನ್ರಿ ಸುಮ್ಮನೆ ಇದ್ದು ಬಿಡಿ ಎಂದು ಗುರೂಜಿ ಹೇಳಿದರೂ ಮಾತನಾಡುವುದಕ್ಕೆ ಬಂದರು. ಅಲ್ಲಿ ಜಗಳವೇ ನಡೆದಿತ್ತು. ರೂಪೇಶ್ ಶೆಟ್ಟಿ ಸೇರಿದಂತೆ ಅಲ್ಲಿದ್ದವರೆಲ್ಲ ಸೇರಿ, ಅವರು ನಿಮ್ಮ ಕಾಲಿಗೆ ಬೀಳುತ್ತೀನಿ ಎಂದರು ಬಿಡದೆ ಹಾಗೆ ನಡೆದುಕೊಂಡಿದ್ದೀರ ಎಂದು ರಾಜಣ್ಣ‌ನ ಬಾಯಿ ಮುಚ್ಚಿಸಿದ್ದರು.

  English summary
  Bigg Boss Kannada November 10th Episode Written Update. Here is the details about Rakesh and Roopesh Rajanna War,Know More.
  Thursday, November 10, 2022, 23:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X