BBK 10: ಬಿಗ್ ಬಾಸ್ ಮನೆಯೊಳಗೆ 4ನೇ ಸ್ಪರ್ಧಿಯಾಗಿ ಹರಹರ ಮಹಾದೇವ್ ನಟ ವಿನಯ್ ಎಂಟ್ರಿ

ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಸ್ಪರ್ಧಿಗಳು ಹೋಗುತ್ತಾರೆ ಅನ್ನೋದನ್ನು ನೋಡುವುದಕ್ಕೆ ವೀಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಮೊದಲ ಸ್ಪರ್ಧಿಯಾಗಿ 'ನಾಗಿಣಿ' ಧಾರಾವಾಹಿಯ ನಟಿ ನಮ್ರತಾ ಗೌಡ ಎಂಟ್ರಿ ಕೊಟ್ಟಿದ್ದಾಗಿದೆ. ಇವರ ಹಿಂದೇನೆ ಮತ್ತೊಬ್ಬ ಕಿರುತೆರೆ ನಟ ಸ್ನೇಹಿತ್ ಗೌಡನೂ ಎಂಟ್ರಿ ಕೊಟ್ಟಿದ್ದಾಗಿದೆ.

ಮೂರನೇ ಸ್ಪರ್ಧಿಯಾಗಿ ರಾಪರ್ ಇಶಾನಿ ಪ್ರವೇಶ ಮಾಡಿದ್ದಾರೆ. ಇನ್ನು ನಾಲ್ಕನೇ ಸ್ಪರ್ಧಿಯಾಗಿ ಯಾರು ಅನ್ನೋ ಪ್ರಶ್ನೆಗೆ ಉತ್ತರನೂ ಸಿಕ್ಕಿದೆ. ಮತ್ತೊಬ್ಬ ನಟ ವಿನಯ್ ಗೌಡ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

Bigg Boss Kannada Season 10: 4th Contestant Vinay Gowda profile

ವಿನಯ್ ಗೌಡ ಕಿರುತೆರೆಯ ಜನಪ್ರಿಯ ನಟ. 'ಹರ ಹರ ಮಹಾದೇವ' ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದಾರೆ. ಪೌರಾಣಿಕ ಧಾರಾವಾಹಿ ವಿನಯ್ ಗೌಡಗೆ ಒಂದೊಳ್ಳೆ ಹೆಸರು ನೀಡಿತ್ತು. ಆ ಬಳಿಕ ಕಿರುತೆರೆ, ಟಿವಿ ಶೋ ಸೇರಿದಂತೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

'ಬಯಸದೆ ಬಳಿ ಬಂದೆ','ಮರಳಿ ಮನಸಾಗಿದೆ','ನಮ್ಮ ಲಚ್ಚಿ','ನಂದಿನಿ' ಅಂತಹ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿನಯ್ ಗೌಡ ದೊಡ್ಡ ಮಟ್ಟದ ಫಾನ್ ಫಾಲೋವಿಂಗ್ ಇದೆ. ಸುಮಾರು 17 ಮಂದಿ ಸ್ಪರ್ಧಿಗಳಲ್ಲಿ ವಿನಯ್ ಗೌಡ 4ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಈ ಬಾರಿ ಹ್ಯಾಪಿ ಬಿಗ್‌ ಬಾಸ್ ಟ್ಯಾಗ್‌ಲೈನ್‌ನಲ್ಲಿ ಆರಂಭಗೊಂಡಿರೋ ಈ ಶೋನಲ್ಲಿ ವಿನಯ್ ಗೌಡ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಾರಾ? ಅನ್ನೋ ಪ್ರಶ್ನೆಯಂತೂ ಕಾಡುತ್ತಿದೆ. ಫಿಟ್ನೆಸ್ ಫ್ರೀಕ್ ಆಗಿರೋ ವಿನಯ್ ಗೌಡ ವೃತ್ತಿ ಬದುಕಿನಲ್ಲೂ ಯಶಸ್ಸನ್ನು ಕಂಡುಕೊಂಡಿದ್ದಾರೆ.

ಬಿಗ್ ಬಾಸ್ ವೇದಿಕೆ ಮೇಲೆ ವಿನಯ್ ಗೌಡ ತಮ್ಮ ಹಾಗೂ ತಂದೆಯ ನಡುವಿನ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ. " ತಂದೆ ಕೆಟ್ಟವರಲ್ಲ ಪರಿಸ್ಥಿತಿ ಕೆಟ್ಟದು. ಅಮ್ಮ ಬೇರೆಯವರನ್ನು ಮದುವೆಯಾದ್ರು. ಮತ್ತೆ ಅಪ್ಪನ ಲೈಫ್‌ನಲ್ಲಿ ಹೆಣ್ಣು ಬರಲೇ ಇಲ್ಲ. ಆ ಕೋಪವೆನ್ನ ನನ್ನ ಮೇಲೆ ಹಾಕುತ್ತಿದ್ದರು. ಹಾಗಾಗಿ ನನ್ನ ಮಗನಿಗೆ ಆ ನೋವು ಬಾರದಂತೆ ಇರಲು ಬಿಟ್ಟಿದ್ದೇನೆ" ಎಂದು ವೇದಿಕೆ ಮೇಲೆ ಹೇಳಿದ್ದಾರೆ.

ಇದೇ ವೇಳೆ ವೇದಿಕೆ ಮೇಲೆ ಸ್ವಚ್ಚತೆ ವಿಚಾರದಲ್ಲಿ ತುಂಬಾನೇ ಭಯ ಹುಟ್ಟಿಸಿದ್ದಾರೆ. ಅಲ್ಲದೆ ಬಿಗ್ ಬಾಸ್ ಮನೆಗೆ ಹೋಗಿ ಬಂದವರು ತೂಕ ಇಳಿಸಿಕೊಂಡು ಬರುತ್ತಾರೆ ಎಂದು ಹೇಳಿದ್ದಾರೆ. ಸದ್ಯ 90 ಕೆಜಿ ಇರುವ ವಿನಯ್ ಗೌಡ ಎಷ್ಟು ಕೆಜಿ ಇಳಿಸಿಕೊಂಡು ಬರುತ್ತಾರೆ ಅನ್ನೋ ಕುತೂಹಲವಿದೆ.

More from Filmibeat

English summary
Bigg Boss Kannada Season 10: 4th Contestant Vinay Gowda profile and life style:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X