BBK 10-TRP: ಎಲ್ಲಾ ಧಾರಾವಾಹಿಗಳ ದಾಖಲೆ ಪುಡಿಪುಡಿ ಮಾಡಿತಾ ಬಿಗ್‌ಬಾಸ್? ಟಿಆರ್‌ಪಿ ಅಸಲಿ ಆಟ ಈಗ ಶುರು..!
ಬಿಗ್ ಬಾಸ್ ಬಂತಂದ್ರೆ ಕಿರುತೆರೆ ವೀಕ್ಷಕರಿಗೆ ಹಬ್ಬ. ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ನೋಡಲು ವೀಕ್ಷಕರು ತುದಿಗಾಲಲ್ಲಿ ನಿಂತಿರುತ್ತಾರೆ. ಕೆಲವರಿಗೆ ಬಿಗ್ ಬಾಸ್ ಮನೆಯೊಂದು ವಂಡರ್ ಹೌಸ್‌ನಂತೆ ಕಾಣಿಸುತ್ತೆ. ಅದರಲ್ಲೂ ಸಲ ಬಿಗ್ ಬಾಸ್ ನಿಜಕ್ಕೂ ವಿಶೇಷ. ಸೀಸನ್ 10 ಅನ್ನೋದು ಒಂದೆಡೆಯಾದರೆ, ಇನ್ನೊಂದು ಕಡೆ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ವೀಕ್ಷಕರ ಮುಂದೆ ಬಂದಿದೆ.
ಕಿರುತೆರೆಯಲ್ಲಿ ಪ್ರಸಾರ ಆಗುವ ರಿಯಾಲಿಟಿ ಶೋಗಳು ಸಿನಿಮಾಗಳಿಗೆ ಕಾಂಪಿಟೇಷನ್ ಕೊಡುತ್ತಿವೆ. ಬಿಗ್ ಬಜೆಟ್‌ನಲ್ಲಿ ಸೆಟ್ ಹಾಕಿ ರಿಯಾಲಿಟಿ ಶೋ ಮಾಡುತ್ತಿವೆ. ಇದರಲ್ಲಿ ಬಿಗ್ ಬಾಸ್ ಕೂಡ ಒಂದು. ಈ ಬಾರಿ ಸೀಸನ್ 10 ಆಗಿದ್ದರಿಂದ ಮನೆ ಕೂಡ ಬದಲಾಗಿದೆ. ಹೊಸದಾಗಿ ವಿನ್ಯಾಸಗೊಂಡು ವೀಕ್ಷಕರನ್ನು ಸೆಳೆಯುತ್ತಿದೆ.

ಈ ಕಾರಣಕ್ಕೆ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಮೊದಲ ವಾರ ಎಷ್ಟು ಟಿಆರ್‌ಪಿ ಗಳಿಸಬಹುದು ಎಂಬ ಕುತೂಹಲ ಕಿರುತೆರೆ ವಲಯದಲ್ಲಿ ಇದ್ದೇ ಇತ್ತು. ಆ ಕುತೂಹಲಕ್ಕೀಗ ಬ್ರೇಕ್ ಬಿದ್ದಿದೆ. ಆರಂಭದಲ್ಲಿ ಈ ರಿಯಾಲಿಟಿ ಶೋಗೆ ವೀಕ್ಷಕರು ಯಾವ ರೀತಿ ರೆಸ್ಪಾನ್ಸ್ ಕೊಟ್ಟಿದ್ದಾರೆ? ಎಷ್ಟು ಟಿಆರ್‌ಪಿ ಬಂದಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಎರಡನೇ ವಾರದಲ್ಲಿ ಬಿಗ್ ಬಾಸ್ ಸೀಸನ್ 10
ಅಕ್ಟೋಬರ್ 8ರಂದು ಬಿಗ್ ಬಾಸ್ ಕನ್ನಡ ಸೀಸನ್ 10 ಅದ್ಧೂರಿಯಾಗಿ ಆರಂಭಗೊಂಡಿತ್ತು. ಕಿಚ್ಚ ಸುದೀಪ್ ನಿರೂಪಕರಾಗಿ ತಮ್ಮ ಶೈಲಿಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಚಾಲನೆ ನೀಡಿದ್ದರು. ಕಳೆದ ಕೆಲವು ಸೀಸನ್‌ಗೆ ಹೋಲಿಸಿದರೆ ಈ ಬಾರಿ ಗ್ರ್ಯಾಂಡ್ ಓಪನಿಂಗ್ ಅನ್ನು ಒಂದೇ ದಿನಕ್ಕೆ ಮೀಸಲಾಗಿ ಇಡಲಾಗಿತ್ತು. ಒಂದೇ ದಿನದಲ್ಲೇ 17 ಮಂದಿಯನ್ನು ಮನೆಯೊಳಗೆ ಕಳುಹಿಸಿಕೊಡಲಾಗಿತ್ತು. ಅವರಲ್ಲಿ ಒಬ್ಬರು ಈಗಾಗಲೇ ಎಲಿಮಿನೇಟ್ ಆಗಿದ್ದಾರೆ.
ಮೊದಲ ದಿನ ಬಿಗ್‌ಬಾಸ್ ಟಿಆರ್‌ಪಿ ಎಷ್ಟು?
ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ದಿನದಿಂದಲೇ ಶುಭಾರಂಭ ಮಾಡಿದೆ. ಅಕ್ಟೋಬರ್ 8 ಭಾನುವಾರ ಸಂಜೆ 6 ಗಂಟೆಯಿಂದ ಬಿಗ್ ಬಾಸ್ ಪ್ರಚಾರ ಆರಂಭ ಆಗಿತ್ತು. ಮೊದಲ ದಿನವೇ ಬಿಗ್ ಬಾಸ್ ರಿಯಾಲಿಟಿ ಶೋಗೆ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಮೊದಲ ದಿನ ಬಿಗ್ ಬಾಸ್‌ಗೆ ಸುಮಾರು 7.1 ಟಿಆರ್‌ಪಿ ಲಭಿಸಿದೆ. ಈ ಮೂಲಕ ಮತ್ತೆ ಕಲರ್ಸ್ ಕನ್ನಡಕ್ಕೆ ಹೊಸ ಇಮೇಜ್ ಸಿಕ್ಕಂತಾಗಿದೆ.

ಒಂದೊಂದು ಟೈಮಿಂಗ್‌ನಲ್ಲಿ ಒಂದೊಂದು ರೇಟಿಂಗ್
ಬಿಗ್ ಬಾಸ್ ಕನ್ನಡ ಸೀಸನ್ 10 ಒಂದೊಂದು ಟೈಮಿಂಗ್‌ನಲ್ಲೂ ಒಂದೊಂದು ರೇಟಿಂಗ್ ಪಡೆದುಕೊಂಡಿದೆ. ಸಂಜೆ 6 ಗಂಟೆ ಸಮಯಕ್ಕೆ 7.1 ಟಿಆರ್‌ಪಿ ರೇಟಿಂಗ್ ಬಂದಿದ್ದರೆ. ಅದೇ ರಾತ್ರಿ 9.30ಕ್ಕೆ 5.7 ಟಿಆರ್‌ಪಿ ಸಿಕ್ಕಿದೆ. ಹಾಗೇ 11.30ಕ್ಕೆ 1.8 ಆರ್‌ಪಿ ಬಂದಿದ್ದರೆ, ಅದೇ ಸಂಜೆ 7.30ಕ್ಕೆ 1.4 ರೇಟಿಂಗ್ ಒಂದು ಎಪಿಸೋಡ್‌ಗೆ ಬಂದಿದೆ. ಹೀಗಾಗಿ ಒಂದೊಂದು ಟಿಮಿಂಗ್‌ನಲ್ಲಿ ಮತ್ತೊಂದು ರೇಟಿಂಗ್ ಬಂದಿರೋದು ವಿಶೇಷ.
ಪ್ರಮುಖ ಧಾರಾವಾಹಿಗಳಿಗೆ ಆತಂಕ
ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋಯಿಂದ ಪ್ರಮುಖ ಧಾರಾವಾಹಿಗಳು ಆತಂಕದಲ್ಲಿವೆ. ಭಾಗ್ಯಲಕ್ಷ್ಮಿ ಧಾರಾವಾಹಿಗೆ 6.3 ಪಾಯಿಂಟಿಗೆ ಸಿಕ್ಕದರೆ. ಅದೇ , ಲಕ್ಷ್ಮಿಭಾರಮ್ಮ 5.7 ರೇಟಿಂಗ್ ಬಂದಿದೆ. ಇನ್ನೊಂದು ಜೀ ಕನ್ನಡದಲ್ಲಿ ರಿಯಲಿಟಿ ಶೋ 'ಸರೆಗಮಪ' 8.2 ರೇಟಿಂಗ್ ಪಡೆದುಕೊಂಡಿದೆ. ಹಾಗೇ 'ಪುಟ್ಟಕ್ಕನ ಮಕ್ಕಳು' 9 ರೇಟಿಂಗ್, 'ಸೀತಾರಾಮ' 7.2 ರೇಟಿಂಗ್ ಗಳಿಸಿ ಬಿಗ್ ಬಾಸ್‌ಗಿಂತ ಮುಂದಿದೆ.


Click it and Unblock the Notifications











