Bigg Boss Kannada: ಕಿಚ್ಚನ 'ವಾರದ ಕಥೆ'.. 'ಸೂಪರ್ ಸಂಡೇ'ಗೆ ಭರ್ಜರಿ ರೆಸ್ಪಾನ್ಸ್.. ಈ ವಾರವೂ ನಂ 1

ಬಿಗ್ ಬಾಸ್ ಕನ್ನಡ ಸೀಸನ್ 10 ಈ ಬಾರಿ ಹೆಚ್ಚು ಚರ್ಚೆಯಾಗುತ್ತಿದೆ. ಮನೆಯೊಳಗಿರುವ ಸದಸ್ಯರಿಂದ ಈ ಮಟ್ಟಿಗೆ ಚರ್ಚೆಯಾಗುತ್ತಿಯೋ, ಅಥವಾ ಮನೆಯಿಂದ ಹೊರಗಿರುವ ಅವರ ಇಮೇಜ್‌ಗೆ ಈ ಮಟ್ಟಿಗೆ ಚರ್ಚೆ ಆಗ್ತಿರೋ ಗೊತ್ತಿಲ್ಲ. 'ಬಿಗ್ ಬಾಸ್ ಕನ್ನಡ ಸೀಸನ್ 10' ಕಲರ್ಸ್ ಕನ್ನಡಕ್ಕೆ ಈ ಬಾರಿ ಯಶಸ್ವಿ ರಿಯಾಲಿಟಿ ಶೋ ಅಂತ ಸಾಬೀತಾಗಿದೆ.

ಬಿಗ್ ಬಾಸ್ ಕನ್ನಡ ಅಭಿಮಾನಿಗಳು 'ಸೀಸನ್ 10' ಬಗ್ಗೆ, ಮನೆಯೊಳಗಿರುವ ಸ್ಪರ್ಧಿಗಳ ಬಗ್ಗೆ ಅಷ್ಟೇ ಓಪನ್ ಆಗಿ ಚರ್ಚೆ ಮಾಡುತ್ತಿದ್ದಾರೆ. ಅದೇ ಇನ್ನೊಂದು ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳಿಗೆ ನೀಡಿರುವ ಟಾಸ್ಕ್, ಅವರ ವರ್ತನೆಗಳನ್ನು ಗಮನಿಸಲಾಗುತ್ತಿದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 ವೀಕ್ಷಕರನ್ನು ಸೆಳೆದಿಟ್ಟುಕೊಂಡಿದೆ.

Bigg Boss Kannada Season 10 and serials TRP in list in November 17th report

ಕಳೆದ ಎರಡು ವಾರಗಳಿಂದ 'ಬಿಗ್ ಬಾಸ್ ಕನ್ನಡ ಸೀಸನ್ 10' ಭರ್ಜರಿ ಟಿಆರ್‌ಪಿ ಗಳಿಸುತ್ತಿದೆ. ಕಳೆದ ವಾರ ಕೂಡ ನಂ 1 ಸ್ಥಾನದಲ್ಲಿತ್ತು. ಈ ವಾರ ಬಂದಿರೋ ಟಿಆರ್‌ಪಿ ಪಟ್ಟಿಯಲ್ಲೂ ಬಿಗ್ ಬಾಸ್ ಕನ್ನಡ ಸೀಸನ್ 10 ಟಾಪ್‌ನಲ್ಲಿದೆ. ಅದೂ 'ವಾರದ ಕಥೆ ಕಿಚ್ಚನ ಜೊತೆ' ಹಾಗೂ 'ಸೂಪರ್ ಸಂಡೇ ವಿಥ್ ಸುದೀಪ' ಎರಡೂ ಶೋಗಳು ಅತೀ ಹೆಚ್ಚು ಟಿಆರ್‌ಪಿ ಗಳಿಸಿವೆ. ಹಾಗಿದ್ದರೆ, ಉಳಿದ ಟಾಪ್ ಧಾರಾವಾಹಿಗಳ ಕಥೆ ಏನಾಗಿದೆ? ತಿಳಿಯಲು ಮುಂದೆ ಓದಿ..

'ಸೂಪರ್ ಸಂಡೇ'ಗೆ ಸೂಪರ್ ರೆಸ್ಪಾನ್ಸ್

ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ನೋಡುವುದಕ್ಕೆ ವೀಕ್ಷಕರು ಕಾದು ಕೂತಿರುತ್ತಾರೆ ಅನ್ನೋದಕ್ಕೆ ಈ ವಾರದ ಟಿಆರ್‌ಪಿ ಲಿಸ್ಟ್ ಸಾಕ್ಷಿ. ಭಾನುವಾರ 9 ಗಂಟೆಯಿಂದ ಪ್ರಸಾರ ಆಗುವ ಬಿಗ್ ಬಾಸ್ ಶೋ 'ಸೂಪರ್ ಸಂಡೇ ವಿಥ್ ಸುದೀಪ' ಈ ವಾರದ ಟಾಪ್ ಟಿಆರ್‌ಪಿ ಪ್ರೋಗ್ರಾಂ. 9.6 ಟಿಆರ್‌ಪಿ ಗಳಿಸಿಕೊಂಡು ಟಾಪ್ ಸ್ಥಾನದಲ್ಲಿದೆ. ಇನ್ನು ಹಾಗೇ ಎರಡನೇ ಸ್ಥಾನದಲ್ಲೂ ಕಿಚ್ಚ ಶನಿವಾರ ನಡೆಸಿಕೊಡುವ 'ವಾರದ ಕಥೆ ಕಿಚ್ಚನ ಜೊತೆ' ಇದೆ. ಈ ಶೋಗೆ 8.5 ಟಿಆರ್‌ಪಿ ರೇಟಿಂಗ್ ಸಿಕ್ಕಿದೆ. ಈ ಮೂಲಕ ಸತತ ಎರಡು ವಾರಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 10 ಟಾಪ್‌ನಲ್ಲಿದೆ.

Bigg Boss Kannada Season 10 and serials TRP in list in November 17th report

ವಿವಾದ.. ಟಾಸ್ಕ್.. ಸ್ಪರ್ಧಿಗಳೇ ಹೈಲೈಟ್

ಈ ಬಾರಿಯ ಬಿಗ್ ಬಾಸ್ ವೀಕ್ಷಕರನ್ನು ಸೆಳೆಯುತ್ತಿದೆ ಅನ್ನೋದನ್ನು ಟಿಆರ್‌ಪಿ ಲಿಸ್ಟ್ ಸಾಬೀತು ಮಾಡಿದೆ. ಕಿಚ್ಚ ಸುದೀಪ್ ಬಂದು ಹೋಗುವ ಎರಡು ದಿನಗಳ ಟಿಆರ್‌ಪಿಯನ್ನು ಹೊರತು ಪಡಿಸಿದರೆ, ವಾರದ ಉಳಿದ ದಿನಗಳಲ್ಲಿ ಶೋಗಳಿಗೆ 7.4 ರೇಟಿಂಗ್ ಬಂದಿದೆ. ಬಿಗ್ ಬಾಸ್ ಮನೆಯೊಳಗೆ ನೀಡಲಾಗುತ್ತಿರುವ ಟಾಸ್ಕ್, ವಿವಾದಗಳು ಹಾಗೂ ಈ ಬಾರಿ ಆಯ್ಕೆಯಾಗಿರುವ ಸ್ಪರ್ಧಿಗಳೇ ಹೈಲೈಟ್ ಎಂದು ಚರ್ಚೆಯಾಗುತ್ತಿದೆ.

ಧಾರಾವಾಹಿಗಳಲ್ಲಿ ಪುಟ್ಟಕ್ಕನೇ ನಂಬರ್ 1

ಎರಡು ವಾರಗಳ ಹಿಂದೆ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಟಾಪ್ ಸ್ಟಾಟ್‌ನಲ್ಲಿ ಇರುತ್ತಿತ್ತು. ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಧಾರಾವಾಹಿಗೆ ವೀಕ್ಷಕರು ಫಿದಾ ಆಗಿದ್ದರು. ಈಗ ಈ ಸೀರಿಯಲ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ 8.3 ಟಿಆರ್‌ಪಿ ಸಿಕ್ಕಿದೆ. 'ಗಟ್ಟಿಮೇಳ' 7.5, 'ಅಮೃತಧಾರೆ' 7.2 ರೇಟಿಂಗ್ ಜೀ ಕನ್ನಡದ ಟಾಪ್ ಸೀರಿಯಲ್ ಎನಿಸಿಕೊಂಡಿದೆ.

ಯಾವೆಲ್ಲ ಧಾರಾವಾಹಿ ಟಿಆರ್‌ಪಿ ಹೇಗಿದೆ?

ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮಿ' ಧಾರಾವಾಹಿಗೆ 6.7, 'ಕೆಂಡಸಂಪಿಗೆ' ಹಾಗೂ 'ರಾಮಾಚಾರಿ'ಗೆ 6 ರೇಟಿಂಗ್ ಬಂದಿದ್ರೆ, ಅದೇ 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ಗೆ 5.6 ರೇಟಿಂಗ್ ಬಂದಿದೆ. ಇನ್ನು ಸ್ಟಾರ್ ಸುವರ್ಣದಲ್ಲಿ ಭಕ್ತ ಪ್ರಧಾನ ಧಾರಾವಾಹಿಗಳಿಗೆ ಸಿಗುತ್ತಿರೋ ಮೆಚ್ಚುಗೆ ಮುಂದುವರೆದಿದೆ. 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' 5.3, 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ'ಗೆ 5.2, 'ನೀನಾದೆ ನಾ' 4.2 ರೇಟಿಂಗ್ ಸಿಕ್ಕಿದೆ.

More from Filmibeat

English summary
Bigg Boss Kannada Season 10 again became no 1 reality show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X