BBK 10: "ಇನ್ನೊಬ್ರ ಲೈಫ್ ನೋಡಿ ಮಜಾ ತಗೋತಿರಾ ಅಂದ್ರು..ಟಾಪ್ 5ಗೆ ಬರೋರು ಇವ್ರೇ"-ಭಾಗ್ಯಶ್ರೀ

ವೀಕೆಂಡ್ ಬಂತು ಅಂದ್ರು ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಬರ್ತಾರೆ ಅನ್ನೋ ಕುತೂಹಲ ಗರಿಗೆದರುತ್ತೆ. ಮನೆಯೊಳಗೆ ಇರುವ ಸ್ಪರ್ಧಿಯ ಅಭಿಮಾನಿಗಳಿಗೆ ಟೆನ್ಷನ್ ಆಗುತ್ತೆ. ಎಲಿಮಿನೇಟ್ ಆಗಿರೋರಿಗೆ ಭಯ ಆಗುತ್ತೆ. ಈ ಬಾರಿ ಡಬಲ್ ಎಮಿಲಿನೇಷನ್ ಆಗಿದ್ದು ಟೆನ್ಷನ್ ಹೆಚ್ಚಿಸಿದೆ.

ಈ ವಾರ ಎರಡನೇ ಎಲಿಮಿನೇಷನ್ ಆಗಿದ್ದು ಭಾಗ್ಯಶ್ರೀ. ಕಳೆದ ವಾರಕ್ಕೆ ಭಾಗ್ಯಶ್ರೀಯ ಬಿಗ್‌ಬಾಸ್ ಪ್ರಯಾಣ ಕೊನೆಗೊಂಡಿದೆ. ಒಂದೆರಡು ಬಾರಿ ಬಿಗ್ ಬಾಸ್ ಮನೆಯಿಂದ ಇವರೇ ಹೊರ ಹೋಗುತ್ತಾರೆ ಅಂದಾಗ್ಲೆಲ್ಲ ಭಾಗ್ಯಶ್ರೀ ಉಳಿದುಕೊಂಡಿದ್ದಾರೆ. ಇಷ್ಟು ದಿನ ಅವರಿಗೆ ಅದೃಷ್ಟ ಕೈ ಹಿಡಿದಿದೆ ಅಂತಲೇ ವೀಕ್ಷಕರು ಅಭಿಪ್ರಾಯ ಪಟ್ಟಿದ್ದೂ ಇದೆ.

bigg-boss-kannada-10-bhagyashree-interview

ಬಿಗ್ ಬಾಸ್‌ನಿಂದ ಭಾಗ್ಯಶ್ರೀ ಹೊರಬರುವುದಕ್ಕೆ ಕಾರಣವೇನು? ಮನೆಯೊಳಗೆ ಅವರ ಬದುಕು ಹೇಗಿತ್ತು? ಮನೆಯೊಂದಿಗೆ ಹೊರ ಬರೋಕೆ ಏನು ಕಾರಣ? ಕೊನೆಯಲ್ಲಿ ಬಿಗ್ ಬಾಸ್ ಮನೆಯೊಳಗೆ ಟಾಪ್ 5ನಲ್ಲಿರುವ ಸ್ಪರ್ಧಿ ಯಾರು? ಅನ್ನೋದನ್ನು ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

"ಇದು ಕೊನೆ ಅಲ್ಲ ಹೊಸ ಆರಂಭ"

ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಭಾಗ್ಯಶ್ರೀ ನೀಡಿದ ಸಂದರ್ಶನದಲ್ಲಿ ಕೆಲವು ಪ್ರಮುಖ ವಿಚಾರಗಳನ್ನು ಹೊರ ಹಾಕಿದ್ದಾರೆ. "ಬಿಗ್‌ಬಾಸ್‌ ಮನೆಯಿಂದ ಜಸ್ಟ್ ಹೊರಗೆ ಬಂದಿದ್ದೀನಿ. ಇದು ಕೊನೆ ಅಂತ ಖಂಡಿತವಾಗಲೂ ಹೇಳೋದಿಲ್ಲ. ಅಲ್ಲಿ ತೆಗೆದುಕೊಂಡಿರುವ ಅನುಭವಗಳು ನನ್ನ ಜೀವನದಲ್ಲಿ ಹೊಸ ಪ್ರಾರಂಭ ಅಂತಲೇ ಹೇಳ್ತೀನಿ. ಮನೆಯಿಂದ ಹೊರಗಡೆ ಬರ್ತೀನಿ ಅಂತ ನಿರೀಕ್ಷೆ ಮಾಡಿದ್ದೆ. ಎಲ್ರೂ ನನ್ನ ನೋಡ್ತಿದ್ದ ರೀತಿ ಹೇಗಿತ್ತು." ಎಂದು ಹೇಳಿದ್ದಾರೆ.

"ಯಾರ ಗುಂಪು ಸೇರಲು ಇಷ್ಟವಿರಲಿಲ್ಲ"

ಭಾಗ್ಯಶ್ರೀ ಬಿಗ್ ಬಾಸ್ ಮನೆಯಲ್ಲಿ ಗುಂಪಿಗೆ ಸೇರದ ಪದದ ಹಾಗೆ ಇದ್ರಾ? ಈ ಬಗ್ಗೆ ಭಾಗ್ಯಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. "ಯಾರ ಗುಂಪಿನಲ್ಲಿಯೂ ಪರ್ಟಿಕ್ಯೂಲರ್ ಆಗಿ ಸೇರಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ನಾನು ಸೀರೆ ಉಟ್ಕೊಂಡು ಆರಾಮಾಗಿ ದೇವರ ಪೂಜೆ ಮಾಡ್ಕೊಂಡು ಹಾಡು ಹಾಡ್ಕೊಂಡು ಇರ್ತೀನಿ ಅನ್ನೊ ಕಾರಣಕ್ಕೋ ಏನೋ ಗೊತ್ತಿಲ್ಲ. ಅಮ್ಮ ಅಂತ ಕರ್ಕೊಂಡು, ಬೇರೆ ಥರ ಮಾತುಕತೆಗೆ ಅಲ್ಲ ಎಂದು ಅವರೇ ಅವಾಯ್ಡ್ ಮಾಡ್ತಿದ್ರು. ನಾನು ಅವರ ಜೊತೆಗೆ ಸೇರಲು ಯತ್ನಿಸಿದಾಗಲೆಲ್ಲ, ಇವ್ರು ಫೇಕಾ? ಸುಮ್ನೆ ನಮ್ ಜೊತೆ ಮಿಂಗಲ್ ಆಗೋಕೆ ಟ್ರೈ ಮಾಡ್ತಿದ್ದಾರಾ ಅಂತೆಲ್ಲ ಮಾತು ಬರ್ತಿತ್ತು." ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ಇನ್ನೊಬ್ಬರ ಲೈಫನ್ನು ನೋಡಿ ಮಜಾ ತಗೆದುಕೊಳ್ತೀರಾ ಅಂದ್ರು"

ಭಾಗ್ಯಶ್ರೀ ದೀಪವಾಳಿ ಹಬ್ಬಕ್ಕೆ ಮಗನಿಂದ ಸರ್ಪೈಸ್‌ ಲೆಟರ್ ಬರತ್ತೆ ಅಂತ ನಿರೀಕ್ಷೆ ಮಾಡಿದ್ದರು. ಮೊದಲ ಟಾಸ್ಕ್‌ನಲ್ಲಿ ಅವರಿಗೆ ಲೆಟರ್ ಬರಲ್ಲ ಅಂತ ಗೊತ್ತಾದಾಗ ತುಂಬಾನೇ ಡಲ್ ಆಗಿದ್ದರು. ಮರುದಿನ ಫುಲ್ ಸೈಲೆಂಟ್ ಆಗಿದ್ದರು. "ನನಗೆ ನೋವಿದ್ರೂ ಕೂಡ ಅದರಿಂದ ಹೊರಗೆ ಬರಲು ಟ್ರೈ ಮಾಡ್ತಿದ್ದೆ. ಆ ಥರ ಹೋಗಿ ಟ್ರೈ ಮಾಡಿದ್ದಕ್ಕೇ ಸ್ನೇಹಿತ್ ಡೇಟ್ ವಿಚಾರಕ್ಕೆ ಅಲ್ಲೊಂದು ಕ್ಲಾಶ್ ಆಯ್ತು. ನಾನೇನೋ ಆ ಲೆಟರ್ ಸಿಗಲಿಲ್ಲ ಎನ್ನುವ ನೋವನ್ನು ಮರೆಯೋದಕ್ಕೆ ಅಲ್ಲಿ ಹೋಗಿ ಮಾತಾಡಿದ್ದಕ್ಕೆ ನೀವೇನು ಇನ್ನೊಬ್ಬರ ಲೈಫನ್ನು ನೋಡಿ ಮಜಾ ತಗೊಳ್ತಿದ್ದೀರಾ ಅಂತ ಮಾತು ಬಂತು. ಅದರಿಂದ ಮತ್ತೆ ಹರ್ಟ್ ಆದೆ." ಎಂದಿದ್ದಾರೆ.

bigg-boss-kannada-10-bhagyashree-interview

ಬಿಗ್ ಬಾಸ್ ಮನೆಯಲ್ಲಿ ಫೇಕ್ ಯಾರು?

ಭಾಗ್ಯಶ್ರೀಯವರಿಗೆ ಮನೆಯೊಳಗಿರುವ ಸ್ಪರ್ಧಿಗಳಲ್ಲಿ ಫೇಕ್ ಅಂತ ಯಾರು ಅನಿಸುತ್ತೆ? ಅನ್ನೋ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಒಬ್ಬರೇ ಇದ್ದಾರೆ ಅಂತ ಅನಿಸೋದಿಲ್ಲ. ಕೆಲವೊಮ್ಮೆ ಕಾರ್ತಿಕ್ ನೋಡಿದಾಗ ಫೇಕ್ ಅನಿಸುತ್ತೆ. ಇನ್ನೊಮ್ಮೆ ವಿನಯ್ ಫೇಕ್ ಅನಿಸುತ್ತೆಂದು ಭಾಗ್ಯಶ್ರೀ ಹೇಳಿದ್ದಾರೆ.

ಟಾಪ್ 5ನಲ್ಲಿ ಇರೋರು ಯಾರು?

ಬಿಗ್‌ಬಾಸ್ ಮನೆಯಿಂದ ಹೊರ ಬಂದಿರೋ ಭಾಗ್ಯಶ್ರೀ ಅವರ ಪ್ರಕಾರ ಟಾಪ್‌ 5ಗೆ ಬರೋ ಸ್ಪರ್ಧಿಗಳೂ ಯಾರು ಅನ್ನೋದನ್ನು ಸೂಚಿಸಿದ್ದಾರೆ. "ಟಾಪ್‌ ಫೈವ್‌ನಲ್ಲಿ ಮೈಕಲ್, ಕಾರ್ತಿಕ್, ವಿನಯ್, ತುಕಾಲಿ ಸಂತೋಷ್, ಪ್ರತಾಪ್ ಇರ್ತಾರೆ ಅನ್ಸುತ್ತೆ. ಕಾರ್ತಿಕ್‌ಗೆ ಎಲ್ಲ ಅರ್ಹತೆ ಇವೆ. ಅವರು ಓವರ್‍‌ ಸ್ಮಾರ್ಟ್‌ನೆಸ್ ತೋರಿಸುವುದು ಕಡಿಮೆ ಮಾಡಿದರೆ ವಿನ್ ಆಗಬಹುದು." ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ಎಲಿಮಿನೇಟ್ ಯಾರು?

ಮುಂದಿನವಾರ ತಮ್ಮ ಜಾಗದಲ್ಲಿ ನೀತು ಇರುತ್ತಾರೆಂದು ಭಾಗ್ಯಶ್ರೀ ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ "ಬಿಗ್‌ಬಾಸ್‌ ಅಂದ್ರೆ ಬಿಗ್‌ಬಾಸ್ ಅಷ್ಟೆ. ಅಲ್ಲಿನ ಎಲ್ಲವನ್ನೂ ಮಿಸ್ ಮಾಡಿಕೊಳ್ತೀನಿ. ಬೆಳಗಿನ ಸಾಂಗ್, ಪ್ರತಿಕ್ಷಣ ಧರಿಸಿರುತ್ತಿದ್ದ ಮೈಕ್ ಮಿಸ್ ಮಾಡ್ಕೊತೀನಿ. ಬಿಗ್‌ಬಾಸ್ ಧ್ವನಿಯನ್ನಂತೂ ತುಂಬ ಮಿಸ್ ಮಾಡ್ಕೋತೀನಿ." ಎಂದು ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

More from Filmibeat

English summary
Bigg Boss Kannada Season 10: Bhagyashree says the next elimination will be Neethu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X