BBK 10: "ಬಿಗ್‌ಬಾಸ್‌ನಲ್ಲಿ ರಿಜೆಕ್ಟ್ ಆಗಿದ್ದು ಮನಸ್ಸಿನ ಮೇಲೆ ಪ್ರಭಾವ ಬೀರಿದೆ" ಚಿತ್ರಾಲ್ ರಂಗಸ್ವಾಮಿ
ಬಿಗ್‌ಬಾಸ್ ಕನ್ನಡ ಸೀಸನ್ 10 ಭರ್ಜರಿಯಾಗಿ ಆರಂಭ ಆಗಿದೆ. ಮನೆಯೊಳಗೆ ಎಂಟ್ರಿ ಕೊಟ್ಟಿರೋ ಸ್ಪರ್ಧಿಗಳು ಈಗತಾನೇ ಸೆಟಲ್ ಆಗಿದ್ದಾರೆ. ಹೊಸ ಆಟ ಶುರು ಮಾಡಿದ್ದಾರೆ. ಕೆಲವರು ಜೋಡಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ನೋಡುವ ವೀಕ್ಷಕರಿಗೂ ಈ ಬಾರಿಯ ಬಿಗ್ ಬಾಸ್ ಇಂಟ್ರೆಸ್ಟಿಂಗ್ ಅಂತ ಅನಿಸುತ್ತಿದೆ.
ಆದರೆ, ಬಿಗ್ ಬಾಸ್ ಆರಂಭವಾದ ವೇಳೆ ಕೆಲವು ಸ್ಪರ್ಧಿಗಳು ರಿಜೆಕ್ಟ್ ಆಗಿದ್ದರು. ಈ ಬಾರಿ ಆಡಿಯನ್ಸ್ ವೋಟಿಂಗ್ ಇದ್ದಿದ್ದರಿಂದ ಕೆಲವರನ್ನು ರಿಜೆಕ್ಟ್ ಆಗಿದ್ದರು. ಇದರಲ್ಲಿ ನಟಿ ಹಾಗೂ ಬಾಡಿಬಿಲ್ಡರ್ ಚಿತ್ರಾಲ್ ರಂಗಸ್ವಾಮಿ ಕೂಡ ಒಬ್ಬರು.

ಬಿಗ್ ಬಾಸ್‌ನಲ್ಲಿ ರಿಜೆಕ್ಟ್ ಆಗಿದ್ದರಿಂದ ಚಿತ್ರಾಲ್ ರಂಗಸ್ವಾಮಿ ಗರಂ ಆಗಿದ್ದಾರೆ. ಬಿಗ್ ಬಾಸ್‌ಗೆ ಆಯ್ಕೆ ಮಾಡುವಾಗ ಹೇಳಿದ್ದೇ ಒಂದು. ಆ ಮೇಲೆ ನಡೆದುಕೊಂಡಿದ್ದೇ ಒಂದು ಎಂದು ಫಿಲ್ಮ್ ಬೀಟ್ ಜೊತೆ ಆಕ್ರೋಶವನ್ನು ಹೊರ ಹಾಕಿದ್ದಾರೆ. ಚಿತ್ರಾಲ್ ರಂಗಸ್ವಾಮಿಯ ಫಿಲ್ಮಿಬೀಟ್ ಸಂದರ್ಶನದ ಕೆಲವು ಅಂಶಗಳು ಇಲ್ಲಿವೆ.
"ನನಗೆ 38 ಪರ್ಸೆಂಟ್ ಬಂದ ತಕ್ಷಣ ನನ್ನ ಮೈಂಡ್ ಬ್ಲಾಂಕ್ ಆಯ್ತು. ಅದನ್ನು ನಾನು ಒಪ್ಪಿಕೊಳ್ಳುವುದಕ್ಕೆ ರೆಡಿಯಿರಲಿಲ್ಲ. ಇದರನ್ನು ರಿಜೆಕ್ಷನ್ ಅಂತ ತೆಗೆದುಕೊಳ್ಳುವುದಿಲ್ಲ. ಯಾಕಂದ್ರೆ, ಇದೂವರೆಗೂ ನಾನು ಸಾಕಷ್ಟು ರಿಜೆಕ್ಷನ್ ಅನ್ನು ಫೇಸ್ ಮಾಡಿದ್ದೇನೆ. ಸೀರಿಯಲ್ ಆಡಿಷನ್‌ಗೆ ಹೋಗುತ್ತೇವೆ. ಚಾನೆಲ್‌ನಿಂದ ರಿಜೆಕ್ಟ್ ಆಯ್ತು ಅಂತ ಹೇಳುತ್ತಲೇ ಇರುತ್ತಾರೆ. ಹಾಗಾಗಿ ಇದೇನು ದೊಡ್ಡ ರಿಜೆಕ್ಷನ್ ಅಂತ ಅನಿಸಲಿಲ್ಲ." ಎಂದಿದ್ದಾರೆ ಚಿತ್ರಾಲ್ ರಂಗಸ್ವಾಮಿ.
"ಇದು ಟೆಲಿಕಾಸ್ಟ್ ಆಗುತ್ತೆ ಅಂತಾನೂ ಗೊತ್ತಿರಲಿಲ್ಲ. ನಾನು ಸಂಬಂಧಪಟ್ಟ ವ್ಯಕ್ತಿಗೆ ಮೆಸೇಜ್ ಕೂಡ ಹಾಕಿದ್ದೀನಿ. ಆಡಿಷನ್ ರೀತಿ ಅಂತ ಹೇಳಿದ್ದರು ನನಗೆ. ಒಳಗೊಳಗೆ ಆಗೋ ರಿಜೆಕ್ಷನ್ ಅನ್ನು ಎದುರಿಸಬಹುದು. ಆದರೆ, ಇದು ಎಲ್ಲರಿಗೂ ಗೊತ್ತಾಗೋ ಹಾಗೆ ಆಯ್ತು. ಅದು ಸರಿಯಾಗಿದೆಯಾ? ಇಲ್ವಾ? ಅನ್ನೋದನ್ನು ಮಾತಾಡೋಕೆ ಇಷ್ಟ ಪಡಲ್ಲ. ಆದರೆ, ಇದು ನನ್ನ ಮಾನಸಿಕ ಸ್ಥಿತಿಯ ಮೇಲೆ ತುಂಬಾನೇ ಪ್ರಭಾವ ಬೀರಿದೆ." ಎನ್ನುತ್ತಾರೆ ಚಿತ್ರಾಲ್.

"ನಾನು ಎಷ್ಟೇ ಸ್ಟ್ರಾಂಗ್ ಆಗಿದ್ದರೂ, ಏನ್ ಮೇಡಂ ಯಾಕೆ ವೋಟ್ ಮಾಡಿಲ್ವ ಅಂತ ಕೇಳುತ್ತಾರೆ. ಎಲ್ಲರಿಗೂ ಅಲ್ಲಿ ಏನಾಯ್ತು ಅಂತ ವಿವರಿಸಿ ಹೇಳುವುದಕ್ಕೆ ಆಗುವುದಿಲ್ಲ. ಹಾಗಾಗಿ ನನಗೆ ಇದು ನನಗೆ ಮಾನಸಿಕವಾಗಿ ತುಂಬಾನೇ ಸಮಸ್ಯೆ ಕೊಟ್ಟಿದೆ." ಎಂದು ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.
"ಅಷ್ಟು ಜನಗಳ ಮಧ್ಯೆ ರಿಯಲಿಸ್ಟಿಕ್ ಆಗಿ ಮಾತಾಡುವವರು ಇರಬೇಕಿತ್ತು. ಹಿಂಗೂ ಇರಬಹುದು. ರಿಯಲ್ ಆಗಿ ಇರುವುದರಲ್ಲಿ ತಪ್ಪೇನಿದೆ? ಅನ್ನೋದನ್ನು ತೋರಿಸಬಹುದಿತ್ತು. ಇನ್ನೊಂದಿಷ್ಟು ಜನ ಹೆಣ್ಣು ಮಕ್ಕಳಿಗೆ ನಾನು ಹೇಳಿಕೊಳ್ಳದೆ ಇರುವ ಅನುಭವಗಳನ್ನು ಹೇಳಿ ಪ್ರೇರೆಪಣೆ ನೀಡಬಹುದಿತ್ತು. ಏನೇನೋ ವಿಷಯಗಳನ್ನು ಮೆಸೇಜ್ ಕೊಡಬಹುದಿತ್ತು. ಒಳ್ಳೊಳ್ಳೆ ಕಂಟೆಂಟ್ ಕೊಡುವವರನ್ನು ನೀವು ಮಿಸ್ ಮಾಡಿಕೊಂಡಿದ್ದೀರ ಬಿಗ್ ಬಾಸ್" ಎಂದು ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.
"ಜನಕ್ಕೆ ನಾನು ತುಂಬಾ ಚೆನ್ನಾಗಿ ಗೊತ್ತಿದ್ದೀನಿ. ಆದರೆ, ಮೈಕಲ್ ಯಾರು ಅಂತಾನೂ ಗೊತ್ತಿಲ್ಲ. ಅವರಿಗೆ ಹೇಗೆ ವೋಟ್ ಬಂತು ಅನ್ನೋದೂ ಗೊತ್ತಿಲ್ಲ. ಬಿಗ್ ಬಾಸ್ ನನ್ನಂಥಾ ಒಳ್ಳೆ ಸ್ಪರ್ಧಿಯನ್ನು ಮಿಸ್ ಮಾಡಿಕೊಂಡಿದ್ದಾರೆ. ಅವರಿಗೆ ಬೇಜಾರ ಆಗಬೇಕು. ನನಗೆ ಅಲ್ಲ. ಫಿಲ್ಟರ್ ಇಲ್ಲದೆ ಮಾತಾಡುತ್ತಿದ್ದೆ. ಎಲ್ಲಾ ಸೀಸನ್‌ನಲ್ಲೂ ಇಂತಹವರೊಬ್ಬ ಕಂಟೆಸ್ಟೆಂಟ್ ಇರುತ್ತಿದ್ದರು." ಎಂದು ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.


Click it and Unblock the Notifications











