Bigg Boss Kannada 10: ಈ ಬಾರಿ ಮಾಮೂಲಿ ಅಲ್ಲ.. ಸ್ಪೆಷಲ್ ಆಗಿರುತ್ತೆ ಕನ್ನಡ ಬಿಗ್ ಬಾಸ್.. ಏನದು?

ಸೆಲೆಬ್ರೆಟಿಗಳನ್ನೆಲ್ಲ ಒಂದು ಮನೆಯೊಳಗೆ ಒಟ್ಟಿಗೆ ಸೇರಿಸಿ, ಜಗತ್ತಿನ ಸಂಪರ್ಕವೇ ಇಲ್ಲದಂತೆ ಬದುಕುವಂತಹ ಟಾಸ್ಕ್ ಕೊಡುವ ಕಾರ್ಯಕ್ರಮವೇ ಬಿಗ್ ಬಾಸ್. ಆರಂಭದಲ್ಲಿ ಬಿಗ್ ಬಾಸ್ ಮೂಲ ಮಂತ್ರ ಇದೇ ಆಗಿತ್ತು. ಆದರೆ, ಒಂದೊಂದೇ ಸೀಸನ್‌ಗೆ ಬಿಗ್ ಬಾಸ್ ಬದಲಾಗುತ್ತಲೇ ಬಂದಿದೆ.

ಸೆಲೆಬ್ರೆಟಿಗಳ ಆಯ್ಕೆಯಲ್ಲಿ ಬದಲಾವಣೆಯಾಗಿದೆ. ಮನೆಯೊಳಗೆ ಕೊಡುವ ಟಾಸ್ಕ್ ಬಗ್ಗೆ ಬದಲಾವಣೆಯಾಗಿದೆ. ಹಾಗೇ ಟಾಸ್ಕ್‌ಗಳು ಕೂಡ ಬದಲಾವಣೆಯಾಗಿದೆ. ಈಗ ಕಲರ್ಸ್ ಕನ್ನಡ ಬಿಗ್ ಬಾಸ್ ಕನ್ನಡದ 10ನೇ ಸೀಸನ್‌ಗೆ ರೆಡಿಯಾಗುತ್ತಿದೆ. ಈ ಹಿಂದೆ ಬಂದ ಸೀಸನ್‌ಗಳಿಗಿಂತ ಈ ಬಾರಿ ವಿಶೇಷವಾಗಿರುತ್ತೆ ಅನ್ನೋದಕ್ಕೆ ಸಾಕ್ಷಿ ಸಿಕ್ಕಿದೆ.

bigg-boss-kannada-season-10-new-promo

ಬಿಗ್ ಬಾಸ್ ಸೀಸನ್ 10 ಸಮ್‌ಥಿಂಗ್ ಸ್ಪೆಷಲ್ ಆಗಿರುತ್ತೆ ಅನ್ನೋದಕ್ಕೆ ಕಲರ್ಸ್ ಕನ್ನಡ ಪ್ರೋಮೊ ಒಂದನ್ನು ರಿಲೀಸ್ ಮಾಡಿದೆ. ಈ ಫ್ರೋಮೊ ಬಿಗ್ ಬಾಸ್ ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಬಿಗ್ ಬಾಸ್ ಕನ್ನಡ 10 ಸಮ್‌ಥಿಂಗ್ ಸ್ಪೆಷಲ್

ಬಿಗ್ ಬಾಸ್ ಕನ್ನಡ ನೋಡಲು ಕಿರುತೆರೆ ವೀಕ್ಷಕರು ಕಾದು ಕೂತಿದ್ದಾರೆ. ಮೊದಲ ಸೀಸನ್‌ನಿಂದ ತಮ್ಮದೇ ವೀಕ್ಷಕರ ಬಳಗವನ್ನು ಹೊಂದಿರುವ ಬಿಗ್ ಬಾಸ್ ಕನ್ನಡ 10ನೇ ಸೀಸನ್‌ಗೆ ವಿಶೇಷವಾಗಿ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದೆ. ಸದ್ಯ ರಿಲೀಸ್ ಆಗಿರೋ ಪ್ರೋಮೊದಲ್ಲಿಯೇ ಸಮ್‌ಥಿಂಗ್ ಸ್ಪೆಷಲ್ ಎಂದು ಹೇಳಿದೆ. ಹೀಗಾಗಿ ಕಿರು ತೆರೆ ವೀಕ್ಷಕರಲ್ಲಿ ಕುತೂಹಲ ದುಪ್ಪಟ್ಟಾಗಿದೆ.

ಬಿಗ್ ಬಾಸ್ ಪ್ರೋಮೊದಲ್ಲಿ ಏನೇನಿದೆ?

ಇದೂವರೆಗೂ ಬಿಗ್ ಬಾಸ್ ಮನೆಯೊಳಗೆ ಕ್ಯಾಮರಾಗಳಿಂದ ಸ್ಪರ್ಧಿಗಳ ಚಲನ ವಲನಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ಅವರಿಗೆ ಟಾಸ್ಕ್‌ಗಳನ್ನು ನೀಡಲಾಗುತ್ತಿತ್ತು. ಆದ್ರೀಗ ಬಿಗ್ ಬಾಸ್ 10ನೇ ಸೀಸನ್‌ನಲ್ಲಿ ಮನೆಯೊಳಗಿನ ಕ್ಯಾಮರಾ, ಬೀದಿಗೆ ಬಂದಿದೆ. ರಸ್ತೆಯಲ್ಲಿ ಜನರು ಓಡಾಡುವುದನ್ನು ತೋರಿಸಲಾಗಿದೆ. ಹಾಗೇ ಕಟ್ಟಡಗಳಲ್ಲೂ ಸಿಸಿಟಿವಿ ಅಳವಡಿಸಿದ್ದನ್ನು ತೋರಿಸಲಾಗಿದೆ. ಅಲ್ಲದೆ ಕೊನೆಯಲ್ಲಿ ಸಮ್‌ಥಿಂಗ್ ಸ್ಪೆಷಲ್ ಎಂದು ಹೇಳಲಾಗಿದೆ.

ಪ್ರೋಮೊದಲ್ಲಿ ಕಿಚ್ಚ ಸುದೀಪ್ ಇಲ್ಲ

ಕಿಚ್ಚ ಸುದೀಪ್ ಹುಟ್ಟುಹಬ್ಬದಂದೇ ಬಿಗ್ ಬಾಸ್ ಸೀಸನ್ 10ರ ಮೊದಲ ಪ್ರೋಮೊವನ್ನು ರಿಲೀಸ್ ಮಾಡಲಾಗಿತ್ತು. ಆದರೆ, ಈ ಪ್ರೋಮೊದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿಲ್ಲ. ಕಳೆದ 10 ಸೀಸನ್‌ನಿಂದಲೂ ಸುದೀಪ್ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಈ ಬಾರಿ ಕಿಚ್ಚ ಸುದೀಪ್ ನಿರೂಪಣೆ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಸುದೀಪ್ ಪ್ರೋಮೊ ರಿಲೀಸ್ ಆಗುವ ಸಾಧ್ಯತೆಗಳು ಇವೆ.

ಈ ಬಾರಿ ಬಿಗ್ ಬಾಸ್ ಓಟಿಟಿ ಇಲ್ಲ

ಕಲರ್ಸ್ ಕನ್ನಡ ಮೂಲಗಳ ಪ್ರಕಾರ, ಈ ಬಾರಿ ಬಿಗ್ ಬಾಸ್ ಓಟಿಟಿ ಇರುವುದಿಲ್ಲ. ನೇರವಾಗಿ ಟಿವಿಗಾಗಿ ಬಿಗ್ ಬಾಸ್ ಆಗುತ್ತಿದೆ. ಕಳೆದ ಬಾರಿ ಮೊದಲು ಬಿಗ್ ಬಾಸ್ ಓಟಿಟಿ ಸೀಸನ್ ಆರಂಭಿಸಿ, ಆ ಬಳಿಕ ಬಿಗ್ ಬಾಸ್ ಸೀಸನ್ 9 ಅನ್ನು ಆರಂಭ ಮಾಡಲಾಗಿತ್ತು. ಆದರೆ, ಈ ಬಾರಿ ಒಟಿಟಿ 2ನೇ ಸೀಸನ್ ಅನ್ನು ಕೈ ಬಿಡಲಾಗಿದೆ.

More from Filmibeat

English summary
Bigg Boss Kannada Season 10 new promo out:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X