"ನಮ್ಮ ಅಪ್ಪನಿಗೇ ನಾನು ಹುಟ್ಟಿರೋದು..ನೀವ್ಯಾರಾದ್ರು ಹುಟ್ಟಿದ್ರೆ ಹೇಳಿ ಪಾಲು ಕೊಡ್ತೀನಿ"-ವರ್ತೂರು ಸಂತೋಷ್
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ವಿಭಿನ್ನ ಕ್ಷೇತ್ರದಿಂದ ಪರ್ಸನಾಲಿಟಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಕೃಷಿ ಕ್ಷೇತ್ರದಲ್ಲಿ ವರ್ತೂರು ಸಂತೋಷ್ ಅವರನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿಕೊಡಲಾಗಿತ್ತು. ಹಳ್ಳಿಕಾರ್ ತಳಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ವರ್ತೂರು ಸಂತೋಷ್ ವೇದಿಕೆ ಮೇಲೆ ಏರುತ್ತಿದ್ದಂತೆ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು.
ಅದರಲ್ಲೂ ಮೈ ತುಂಬಾ ಒಡವೆಗಳನ್ನು ಹಾಕಿಕೊಂಡು ಬಂದಿದ್ದ ವರ್ತೂರು ಸಂತೋಷ್ ಮೇಲೆ ಕೆಲವರು ಕಣ್ಣಿಟ್ಟಿದ್ದರು. ಕೃಷಿ ಕ್ಷೇತ್ರದಲ್ಲಿ ಇದ್ದರೂ ರಾಯಲ್ ಬದುಕುತ್ತಿರುವ ಬಗ್ಗೆ ವರ್ತೂರು ಸಂತೋಷ್ ಅದಾಗಲೇ ಹೇಳಿಕೊಂಡಿದ್ದರು. ಹೀಗಾಗಿ ಬಿಗ್‌ಬಾಸ್ ವೇದಿಕೆ ಏರುತ್ತಿದ್ದಂತೆ ಕೆಲವರು ಅಪ್ಪ ದುಡ್ಡಿನಲ್ಲಿ ಶೋಕಿ ಮಾಡುತ್ತಾನೆ ಅಂತ ಟೀಕಿಸಿದ್ದರು. ಅಂತಹವ್ರಿಗೆ ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ತಿರುಗೇಟು ಕೊಟ್ಟಿದ್ದಾರೆ.

ವರ್ತೂರು ಸಂತೋಷ್ ಶೋಕಿ ಮಾಡುತ್ತಾನೆ ಅಂದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಹಾಗೇ ಬಿಗ್‌ಬಾಸ್ ಮನೆಯೊಳಗಿದ್ದಾಗ ಕಿಚ್ಚ ಸುದೀಪ್ ಕೊಟ್ಟ ಪ್ರೀತಿ, ತನಿಷಾ ಜೊತೆಗಿನ ನಂಟಿನ ಬಗ್ಗೆನೂ ಮಾಹಿತಿಯನ್ನು ಬಣ್ಣದ ಜಗತ್ತು ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ರೈತ ಆಗಿದ್ದರೂ, ಅಪ್ಪನ ದುಡ್ಡಿನ ಶೋಕಿ ಮಾಡುತ್ತಾನೆ ಅನ್ನೋ ಟೀಕೆಗಳಿಗೆ ವರ್ತೂರು ಸಂತೋಷ್ ಖಡಕ್ ಆಗಿ ತಿರುಗೇಟು ಕೊಟ್ಟಿದ್ದಾರೆ. "ಕೆಲವರು ಅಂತಾರೆ, ಇವನ ಅಪ್ಪನ ದುಡ್ಡು ಇಟ್ಕೊಂಡು ಶೋಕಿ ಮಾಡ್ತಾನೆ ಅಂತ. ಹೌದಪ್ಪ, ನಮ್ಮ ಅಪ್ಪನಿಗೇ ನಾನು ಹುಟ್ಟಿರೋದು. ನೀವು ಯಾರಾದ್ರೂ ಹುಟ್ಟಿದ್ರೆ ಬಂದು ಕೇಳ್ರಿ. ನಮ್ಮಪ್ಪನಿಗೆ ಹುಟ್ಟಿದಿರಿ ಅಂದ್ರೆ ನಿಮಗೂ ಪಾಲು ಕೊಡ್ತೀನಿ. ನಮ್ಮಪ್ಪನಿಗೆ ನಾನೇ ಹುಟ್ಟಿರುವುದರಿಂದ ನಾನೇ ಶೋಕಿ ಮಾಡುತ್ತೇನೆ." ಎಂದು ಕಿಡಿಕಾರಿದ್ದಾರೆ.

ಇದರೊಂದಿಗೆ ಬಿಗ್‌ಬಾಸ್ ಮನೆಯಲ್ಲಿ ತನಿಷಾ ಜೊತೆ ವರ್ತೂರು ಸಂತೋಷ್ ಒಡನಾಟ ಚೆನ್ನಾಗಿತ್ತು. ಹೀಗಾಗಿ ಇಬ್ಬರ ನಡುವೆ ಸಂಥಿಂಗ್ ಏನೋ ನಡೀತಿದೆ ಅನ್ನೋ ಗುಸುಗುಸು ಎದ್ದಿತ್ತು. "ಸಿನಿಮಾ ಮಾಡಿರೋರೆಲ್ಲರೂ ಜೋಡಿ ಆಗುವುದಕ್ಕೆ ಆಗುತ್ತಾ? ಅದು ಒಂದು ಸ್ಕಿಟ್. ಒಳಗೆ ಇರುವಾಗ ಮಾಡಿದಂತಹ ಸ್ಟೋರಿ ಅಷ್ಟೇ. ನಮ್ಮಿಬ್ಬರಲ್ಲಿ ಫ್ರೆಂಡ್‌ಶಿಫ್ ಅಷ್ಟೇ. ಅದು ಬಿಟ್ಟರೆ ಬೇರೆ ಏನಾದ್ರೂ ಕಾಣಿಸ್ತಾ ನಿಮಗೆ? ಅದು ಪ್ಯೂರ್ ಫ್ರೆಂಡ್‌ಶಿಪ್ ಅಷ್ಟೇ. ಅದು ಬಿಟ್ಟು ಬೇರೆ ಏನೂ ಇಲ್ಲ." ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಇದೇ ವೇಳೆ ತಮ್ಮ ಬಗ್ಗೆ ಮಾತಾಡೋರಿಗೆ ಟಾಂಗ್ ಕೊಟ್ಟಿದ್ದಾರೆ. "ನನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡೋಕೆ ಕೆಲವು ಜೀವಿಗಳು ಹುಟ್ಟಿಕೊಂಡಿದ್ವಂತೆ. ಆ ಜೀವಿಗಳಿಗೆ ನನ್ನ ವ್ಯಕ್ತಿತ್ವದ ಬಗ್ಗೆ ಏನು ಗೊತ್ತು? ಒಂದು ಮೀಡಿಯಾದಲ್ಲಿ ಬಂತು. ನಾನು ನೋಡಿದ್ದೀನಿ. ಮಾಡಿದ್ದೀನಿ ಅಂದೋರು ಮೀಡಿಯಾದಲ್ಲಿ ಬಂದು ಸಾಕ್ಷಿ ಸಮೇತ ಏನು ಮಾಡಿದ್ದೀನಿ ಅನ್ನೋದನ್ನು ಹೇಳುವುದಕ್ಕೆ ಗೊತ್ತಿರಲ್ವಾ?" ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಗ್‌ಬಾಸ್ ಮನೆಯೊಳಗೆ ಇರುವಾಗ ಕಿಚ್ಚ ಸುದೀಪ್ ನೀಡಿದ ಬೆಂಬಲವನ್ನು ಸ್ಮರಿಸಿಕೊಂಡಿದ್ದಾರೆ. "ಸುದೀಪಣ್ಣ ನಮಗೆ ಅಷ್ಟೊಂದು ಪ್ರೀತಿ ಕೊಟ್ಟಿದ್ದಾರೆ. ಅಷ್ಟು ಜನ ಇದ್ದರೂ, ನಮ್ಮ ಮೇಲೆನೇ ಪ್ರೀತಿ ಕೊಟ್ಟಿದ್ದಾರೆ. ಅದಕ್ಕೆ ಅವರನ್ನು ರೇಸ್‌ಗೆ ಕರೆಸಿ, ನಮ್ಮ ರೈತರ ಪರವಾಗಿ ಅವರು ಇದ್ದಾರೆ ಅಂತ ತೋರಿಸಬೇಕು ಅಂತಿದೆ. ನಾನು ಮಾತಾಡಿದಾಗಲೆಲ್ಲ ನನ್ನನ್ನು ರೈತ ಅಂತ ಮಾತಾಡಿಸಿದ್ದಾರೆ. ಅದಕ್ಕೆ ನಾನು ಸುದೀಪಣ್ಣ ರೈತರ ಪರವಾಗಿ ಇದ್ದಾರೆ ಅಂತ ತೋರಿಸಬೇಕು. ಅದಕ್ಕೆ ನನಗೆ ಎಷ್ಟು ಆಗುತ್ತೋ ಅಷ್ಟು ಸುದೀಪಣ್ಣನಿಗೆ ಗೌರವ ಕೊಟ್ಟು ಸನ್ಮಾನ ಮಾಡಬೇಕು. ಹಾಗೇ ಧ್ರುವ ಅವರನ್ನೂ ಕರೆಸುತ್ತಿದ್ದೇವೆ." ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.


Click it and Unblock the Notifications











