ಡ್ರೋನ್ ಹಾರಿಸೋದು ನಿಲ್ಲಿಸಿ ಅಭಿಮಾನಿಯ ಆಟೋ ಏರಿದ ಪ್ರತಾಪ್; "ನೀನು ಚೆನ್ನಾಗಿರಪ್ಪ" ಎಂದ ನೆಟ್ಟಿಗರು!
ಬಿಗ್‌ಬಾಸ್ ಕನ್ನಡ ಸೀಸನ್ 10 ಅದ್ಧೂರಿಯಾಗಿ ಇತ್ತು. ಈ ಸೀಸನ್‌ಗೆ ಬಂದಿದ್ದ ಸ್ಪರ್ಧಿಗಳು ಕೂಡ ಅಷ್ಟೇ ಜೋಷ್‌ನಲ್ಲಿ ಆಟ ಆಡಿದ್ದರು. ಹ್ಯಾಪಿ ಬಿಗ್‌ಬಾಸ್ ಅಂತ ರಿಯಾಲಿಟಿ ಶೋ ಆರಂಭ ಮಾಡಿದ್ದರೂ, ಆಟ, ಕಿತ್ತಾಟ ಎಲ್ಲವೂ ಇದ್ದವು. ಬಿಗ್‌ಬಾಸ್ ಗೆಲ್ಲಲೇ ಬೇಕು ಅಂತ ಎಲ್ಲಾ ಸ್ಪರ್ಧಿಗಳೂ ಹಠಕ್ಕೆ ಬಿದ್ದು ಆಟ ಆಡಿದ್ದು ಇದೆ. ಇಂತಹವ್ರಲ್ಲಿ ಡ್ರೋನ್ ಪ್ರತಾಪ್ ಕೂಡ ಒಬ್ಬರು.
ಬಿಗ್‌ಬಾಸ್ ಮನೆಯೊಳಗೆ ಡ್ರೋನ್ ಪ್ರತಾಪ್ ಎಂಟ್ರಿ ಕೊಡುವುದಕ್ಕೂ ಮುನ್ನ ಇದ್ದ ಇಮೇಜ್ ಈಗ ಬದಲಾಗಿದೆ. ನೆಟ್ಟಿಗರಿಗೆ ಡ್ರೋನ್ ಪ್ರತಾಪ್ ಇಷ್ಟ ಆಗಿದ್ದಾರೆ. ಅದಕ್ಕೆ ಕೋಟಿ ಲೆಕ್ಕದಲ್ಲಿ ವೋಟ್ ಗಿಟ್ಟಿಸಿಕೊಂಡು ರನ್ನರ್ ಅಪ್ ಸ್ಥಾನದಲ್ಲಿ ನಿಂತಿದ್ದರು. ಈಗ ಬಿಗ್‌ಬಾಸ್ ಮುಗಿಸಿ ಹೊರ ಬಂದ್ಮೇಲೆ ಡ್ರೋನ್ ಪ್ರತಾಪ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.

ಡ್ರೋನ್ ಪ್ರತಾಪ್ ಬಿಗ್‌ಬಾಸ್ ರನ್ನರ್ ಅಪ್ ಆಗಿದ್ದು ಕೆಲವರಿಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಅದೇ ಇನ್ನೊಂದು ಕಡೆ ಬಿಗ್‌ಬಾಸ್ ಮನೆಯೊಳಗೆ ಪ್ರತಾಪ್ ನಡೆದುಕೊಂಡ ರೀತಿ ಕಂಡು ಮೆಚ್ಚಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಅದೇ ಕಾರಣಕ್ಕೆ ಸುಮಾರು ಎರಡು ಕೋಟಿಗೂ ಅಧಿಕ ವೋಟ್‌ಗಳನ್ನು ಪಡೆದಿದ್ದರು. ಈಗ ಹೊರ ಬಂದ್ಮೇಲೆ ಮತ್ತಷ್ಟು ಅಭಿಮಾನಿಗಳು ಡ್ರೋಪ್ ಪ್ರತಾಪ್ ಅನ್ನು ಇಷ್ಟ ಪಡುವುದಕ್ಕೆ ಶುರು ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಇಲ್ಲಿದೆ.
ಬಿಗ್‌ಬಾಸ್ ಮುಗಿಸಿ ಹೊರಬರುತ್ತಿದ್ದಂತೆ ಡ್ರೋನ್ ಪ್ರತಾಪ್‌ಗೆ ಮತ್ತಷ್ಟು ಜನರ ಪ್ರೀತಿ ಸಿಗುತ್ತಿದೆ. ಬಿಡುವು ಸಿಕ್ಕಾಗಲೆಲ್ಲಾ ಪ್ರತಾಪ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಅವರೊಂದಿಗೆ ಕೆಲವು ಸಮಯ ಕಳೆಯುತ್ತಿದ್ದಾರೆ. ಅವರ ಆಸೆಗಳಿಗೆ ಸ್ಪಂದಿಸುತ್ತಿದ್ದಾರೆ. ಬಿಗ್‌ಬಾಸ್‌ಗೂ ಮುನ್ನ ಪ್ರತಾಪ್ ಸ್ಥಿತಿ ಭಿನ್ನವಾಗಿತ್ತು. ಪ್ರತಾಪ್ ಅಭಿಮಾನಿಯೊಬ್ಬರು ಆಸೆಯೊಂದನ್ನು ವ್ಯಕ್ತಪಡಿಸಿದ್ದರು. ಅದನ್ನು ಡ್ರೋನ್ ಪ್ರತಾಪ್ ಈಡೇರಿಸಿದ್ದಾರೆ.
ಆಟೋ ಚಾಲಕನಾಗಿರುವ ಅಭಿಮಾನಿಯೊಬ್ಬರು ಡ್ರೋನ್ ಪ್ರತಾಪ್‌ಗೆ ತಮ್ಮ ಆಟೋವನ್ನು ಓಡಿಸುವಂತೆ ಮನವಿ ಮಾಡಿಕೊಂಡಿದ್ದರು. ಅವರ ಆಸೆಯಂತೆಯೇ ಡ್ರೋನ್ ಪ್ರತಾಪ್ ಆಟೋ ಓಡಿಸಿ ಆಸೆಯನ್ನು ಈಡೇರಿಸಿದ್ದಾರೆ. ಹಾಗೇ ರಾಜ್ಯದ ಎಲ್ಲಾ ಆಟೋ ಚಾಲಕರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿಸ ವೈರಲ್ ಆಗುತ್ತಿದೆ.
"ಆಟೋ ರಾಜ ಶಂಕ್ರಣ್ಣಂಗೆ ಜೈ.. ಯಾರೆಲ್ಲ ರಾಜ್ಯದ್ಯಾಂತ ಆಟೋ ಓಡಿಸುತ್ತೀರ.. ಎಲ್ಲರಿಗೂ ಓಳ್ಳೆಯದಾಗಲಿ.. ಚೆನ್ನಾಗಿರಿ ನೀವು.. ಅಣ್ಣ ಬಂದ್ಬಿಟ್ಟು. ಮಳವಳ್ಳಿಯವರು ಆಟೋ ಓಡಿಸುತ್ತಾರೆ ಪಾಪ.. ನನ್ನನ್ನು ನೋಡುವುದಕ್ಕೆ ಬಂದಿದ್ದಾರೆ. ಬಹಳ ಖುಷಿ ಆಯ್ತು ಅಣ್ಣ. ನನಗೂ ಆಟೋ ಎಲ್ಲಾ ಓಡಿಸುವುದನ್ನು ಕಲಿಸಿಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್." ಎಂದು ಅಭಿಮಾನಿಯನ್ನು ಭೇಟಿ ಮಾಡಿದ ಬಳಿಕ ಪ್ರತಾಪ್ ಹೇಳಿದ್ದಾರೆ.
ಈ ವಿಡಿಯೋ ನೋಡಿ ನೆಟ್ಟಿಗರು ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ನಮ್ಮನೆ ದೇವ್ರು ಬಾಸ್ ನೀವು", "ಎಲ್ಲಾ ತಾಲೂಕು ಎಲ್ಲಾ ಜಿಲ್ಲೆಯಲ್ಲೂ ನಿಮಗೆ ವೋಟ್ ಮಾಡಿದ್ದಾರೆ. ನಿಮಗೆ ವೋಟ್ ಮಾಡಿರವರು ತುಂಬಾ ಖುಷಿಪಡುತ್ತಾರೆ. ದಯವಿಟ್ಟು ಎಲ್ಲಾ ಜಿಲ್ಲೆ, ತಾಲೂಕುಗಳಿಗೂ ಭೇಟಿ ಕೊಡಿ." ಇನ್ನೊಬ್ಬರು ಮನವಿ ಮಾಡಿಕೊಂಡಿದ್ದಾರೆ. "ಪ್ರತಾಪ್ ಅವ್ರೇ, ನೀವು ಚೆನ್ನಾಗಿರಬೇಕು. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ" ಎಂದಿದ್ದಾರೆ. "ಪ್ರತಾಪ್ ನೀವು ತುಂಬಾ ಕ್ಯೂಟ್ ಆಗಿದ್ದೀರಾ. ನೀವು ಎಲ್ಲರಿಗೂ ಒಳ್ಳೆಯದ್ದನ್ನೇ ಬಯಸುತ್ತೀರ. ನೀವು ನೂರು ಕಾಲ ಸಂತೋಷವಾಗಿ ಖುಷಿಯಾಗಿರಬೇಕು." ಎಂದು ಹೇಳಿದ್ದಾರೆ.


Click it and Unblock the Notifications











