Exclusive-Bigg Boss 10: ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವರೇ.. ಇಲ್ಲಿದೆ ಕಂಪ್ಲೀಟ್ ಎಕ್ಸ್‌ಕ್ಲೂಸಿವ್ ಲಿಸ್ಟ್
ಇಂದು (ಅಕ್ಟೋಬರ್ 8) ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭ ಆಗುತ್ತಿದೆ. ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿರುವ ಈ ಶೋ ಈ ಬಾರಿ ವಿಶೇಷವಾಗಿರುತ್ತೆ. ಈ ಹಿಂದಿನ ಎಪಿಸೋಡ್‌ಗಿಂತ ವಿಭಿನ್ನವಾಗಿರುವ ಈ ಶೋನ ಸ್ಪರ್ಧಿಗಳು ಯಾರು ಅನ್ನೋದನ್ನು ನೋಡುವುದಕ್ಕೆ ಕುತೂಹಲದಿಂದ ಕಾದು ಕೂತಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಿರುವ ಸ್ಪರ್ಧಿಗಳ ಪಟ್ಟಿ ಕೆಲವು ದಿನಗಳ ಹಿಂದೆ ಓಡಾಡಿತ್ತು. ಕಿರುತೆರೆ, ಸಿನಿಮಾ, ಪತ್ರಕರ್ತರು, ಕ್ರೀಡಾ ಪಟುಗಳು ಸೇರಿದಂತೆ ಎಲ್ಲಾ ಕ್ಷೇತ್ರದಿಂದಲೂ ಪ್ರಮುಖ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತೆ.

ಈ ಬಾರಿ ಕೂಡ ಬಿಗ್ ಬಾಸ್ ಮನೆಯೊಳಗೆ ವಿಭಿನ್ನ ಮನ:ಸ್ಥಿತಿ ಸೆಲೆಬ್ರೆಟಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಾರೆ. ಸೀಸನ್ 10ರಲ್ಲಿ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿರುವ ಸ್ಪರ್ಧಿಗಳ ಎಕ್ಸ್‌ಕ್ಲೂಸಿವ್ ಅಸಲಿ ಪಟ್ಟಿ ಹೀಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಕನ್ನಡ ಕಿರುತೆರೆ ವೀಕ್ಷಕರಿಗೆ ವಿಶೇಷ ರಿಯಾಲಿಟಿ ಶೋ ಆಗಲಿದೆ. ಈ ಬಾರಿ ಸಾಕಷ್ಟು ವಿಶೇಷತೆಗಳನ್ನು ಹೊತ್ತು ಬರಲಿದೆ. ಈ ಹಿಂದಿನ 9 ಸೀಸನ್‌ಗಳಿಗೆ ಹೋಲಿಸಿದೆ ಈ ಸೀಸನ್ ವಿಶೇಷವಾಗಿರುತ್ತೆ. ಅಲ್ಲದೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯಿಂದ ಹಿಡಿದ ಅವರನ್ನು ಮನೆಯೊಳಗೆ ಕಳುಹಿಸುವ ಹಂತದವರೆಗೂ ಕಿರುತೆರೆ ವೀಕ್ಷಕರಿಗೆ ಸರ್ಪ್ರೈಸ್ ಹಾಕಿದೆ.
ಬಿಗ್ ಬಾಸ್ 10ರ ಸ್ಪರ್ಧಿಗಳ ಪಟ್ಟಿ ಇಲ್ಲಿದೆ
ದ್ರೋಣ್ ಪ್ರತಾಪ್
ಕಾರ್ತಿಕ್ ಮಹೇಶ್
ರಕ್ಷಕ್ ಬುಲೆಟ್
ವರ್ತೂರು ಸಂತೋಷ್ (ಹಳ್ಳಿಕಾರ್)
ಕಾಮಿಡಿ ಕಿಲಾಡಿ ಸಂತೋಷ್
ಸಂಗೀತ ಶೃಂಗೇರಿ (777 ಚಾರ್ಲಿ)
ಇಶಾನಿ
ಭಾಗ್ಯಶ್ರೀ (ನಟಿ)
ನಮೃತಾ ಗೌಡ (ನಾಗಿಣಿ 2)
ಸ್ನೇಕ್ ಶ್ಯಾಮ್ (ಉರಗ ರಕ್ಷಕ)
ಸ್ನೇಹಿತ್ ಗೌಡ
ತನಿಷಾ ಕುಪ್ಪಂಡ
ವಿನಯ್ ಗೌಡ
ನೀತು ವನಜಾಕ್ಷಿ
ಗೌರೀಶ್ ಅಕ್ಕಿ (ಪತ್ರಕರ್ತ)
ಚಾರ್ಲಿ


Click it and Unblock the Notifications











