BBK 10: "ಎಲ್ಲಿಗೆ ಹೊಡಿತಿನೋ ಗೊತ್ತಿಲ್ಲ".. ಸಂಗೀತಾ-ವಿನಯ್ ರಾಜಿಯಾಗುತ್ತಿದ್ದಂತೆ ಕಾರ್ತಿಕ್ ಜೊತೆ ಫೈಟ್‌

ಬಿಗ್ ಬಾಸ್ ಕನ್ನಡ ಸೀಸನ್ 10 ವೀಕ್ಷಕರಿಗೆ ಸಖತ್ ಇಂಟ್ರೆಸ್ಟಿಂಗ್ ಎನಿಸುತ್ತಿದೆ. ಅದಕ್ಕೆ ಕಾರಣ ಈ ಬಾರಿಯ ಸ್ಪರ್ಧಿಗಳು. ಬಿಗ್ ಬಾಸ್ ಮನೆಯೊಳಗೆ ಉಳಿದು ಕೊಳ್ಳಲು ಸರ್ಧಿಗಳೆಲ್ಲರೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಎರಡು ವಾರಗಳ ಬಳಿಕ ಕಿತ್ತಾಟ, ಜಗಳ, ಮಾತಿನ ಚಕಮಕಿ ಎಲ್ಲವೂ ನಡೆಯುತ್ತಿದೆ.

ಬಿಗ್ ಬಾಸ್ ಮನೆಯೊಳಗೆ ಸದ್ಯ 777 ಚಾರ್ಲಿ ನಟಿ ಸಂಗೀತ ಶೃಂಗೇರಿ ಗಮನ ಸೆಳೆಯುತ್ತಿದ್ದಾರೆ. ತನ್ನ ಸಹ ಸ್ಪರ್ಧಿ ವಿನಯ್ ಗೌಡ ಜೊತೆ ಕಿತ್ತಾಡಿಕೊಂಡಿದ್ದರು. ವಿನಯ್ ಹಾಗೂ ಸಂಗೀತಾ ನಡುವಿನ ಫೈಟ್‌ ಈ ಸಲದ ಬಿಗ್‌ಬಾಸ್‌ ಮನೆಯೊಳಗೆ ಸಾಕಷ್ಟು ಏರುಪೇರುಗಳನ್ನು ಸೃಷ್ಟಿಸಿತ್ತು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಬ್ಬರನ್ನೊಬ್ಬರು ಕೆಣಕುತ್ತಲೇ ಇದ್ದರು.

sangeetha-sringeri-karthik-vinay-fight

ಸಂಗೀತಾ ಶೃಂಗೇರಿ ಹಾಗೂ ವಿನಯ್ ನಡುವೆ ಕಿತ್ತಾಟ ಶುರುವಾಗಿದ್ದಾಗ ಕಾರ್ತಿಕ್ ನಟಿಯ ಬೆಂಬಲಕ್ಕೆ ನಿಂತಿದ್ದರು. ಇಬ್ಬರ ಕಿತ್ತಾಟದ ಬಳಿಕ ಸಂಗೀತಾ ಹಾಗೂ ವಿನಯ್ ಇಬ್ಬರೂ ರಾಜಿಯಾಗಿದ್ದಾರೆ. ಈ ಬೆನ್ನಲ್ಲೇ ಕಾರ್ತಿಕ್ ಹಾಗೂ ಸಂಗೀತಾ ನಡುವೆ ಫೈಟ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ಫೈಟ್‌ನ ಹಿನ್ನೆಲೆಯೇನು? ಈ ಘಟನೆಗಳನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ಪ್ರಸಾರ ಆಗುತ್ತಿದೆ.

ವಿನಯ್-ಸಂಗೀತಾ ರಾಜಿಯಾಗಿದ್ದೇಗೆ?

ಸಂಗೀತಾ ಶೃಂಗೇರಿ ಈ ಹಿಂದೆ ವಿನಯ್ ಮೇಲೆ 'ಥ್ರೆಟನಿಂಗ್' ಅನ್ನೋ ಪದವನ್ನು ಪ್ರಯೋಗಿಸಿದ್ದರು. ಅದಕ್ಕೆ ವಿನಯ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇಲ್ಲಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಆದ್ರೀಗ ಸಂಗೀತಾ ತಾವು ಬಳಸಿದ 'ಥ್ರೆಟನಿಂಗ್' ಎಂಬ ಪದವನ್ನು ಹಿಂಪಡೆದು ಕ್ಷಮೆ ಕೇಳಿದ್ದಾರೆ. ಇತ್ತ ವಿನಯ್ ಕೂಡ ಕ್ಷಮೆ ಕೇಳಿದ್ದು, "ನಿಮ್ಮನ್ನು ನೋಯಿಸುವ ಉದ್ದೇಶವಿರಲಿಲ್ಲ. ಇನ್ಮುಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡುವುದಿಲ್ಲ" ಎಂದು ಸಂಗೀತಾ ಬಳಿ ಕ್ಷಮೆ ಕೇಳಿದ್ದಾರೆ.

ವಿನಯ್-ಸಂಗೀತಾ ಜಗಳ ಸುಖಾಂತ್ಯ

ಸಂಗೀತಾ ಶೃಂಗೇರಿ ಹಾಗೂ ವಿನಯ್ ಇಬ್ಬರೂ ಪರಸ್ಪರ ಕ್ಷಮೆ ಕೇಳಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಹಗ್ ಮಾಡಿಕೊಳ್ಳುವ ಮೂಲಕ ತಮ್ಮಿಬ್ಬರ ಜಗಳಕ್ಕೆ ಅಂತ್ಯ ಹಾಡಿದ್ದಾರೆ. ಈ ಮೂಲಕ ಬಿಗ್‌ಬಾಸ್‌ ಮನೆಯೊಳಗೆ ನಡೆಯುತ್ತಿದ್ದ ಬಹುದೊಡ್ಡ ಜಗಳವೊಂದು ಸುಖಾಂತ್ಯ ಕಂಡಂತಾಗಿದೆ. ಇದರ ಹಿಂದೆನೇ ಒಟ್ಟಿಗೆ ಬೆಸ್ಟ್ ಫ್ರೆಂಡ್ಸ್ ಅಂತಿರುವ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಫೈಟ್ ಶುರುವಾಗಿತ್ತು.

sangeetha-sringeri-karthik-vinay-fight

ಕಾರ್ತಿಕ್ - ಸಂಗೀತಾ ನಡುವೆ ಫೈಟ್‌

ಕಾರ್ತಿಕ್ ಹಾಗೂ ಸಂಗೀತಾ ಇಬ್ಬರೂ ಕ್ಲೋಸ್ ಇದ್ದಾರೆ. ಹಾಗಂತ ದಿಢೀರನೇ ವೈರಿಗಳಂತೆ ಫೈಟ್ ಮಾಡುತ್ತಿಲ್ಲ. ಇಬ್ಬರದ್ದೂ ಕೋಳಿ ಜಗಳ. ಸ್ನೇಹ, ಸಲುಗೆಯಿಂದ ಹುಟ್ಟಿಕೊಂಡ ಫೈಟ್. ಇವರಿಬ್ಬರು ಪ್ರೀತಿಯಿಂದ ಕಿತ್ತಾಡುತ್ತಿರುವ ದೃಶ್ಯಗಳು ಬಿಗ್‌ಬಾಸ್ ನೋಡುವವರಿಗೆ ಖುಷಿ ಕೊಡುತ್ತಿದೆ. ಇಬ್ಬರ ತಮಾಷೆ ದೃಶ್ಯಗಳು ವೀಕ್ಷಕರಿಗೆ ಮಜಾ ಕೊಡುತ್ತಿವೆ. ಅಷ್ಟಕ್ಕೂ ಇಬ್ಬರ ನಡುವೆ ನಡೆದ ಆ ಘಟನೆಯೇನು? ಮುಂದೆ ಓದಿ..

"ಎಲ್ಲಿಗೆ ಹೊಡಿತಿನೋ ಗೊತ್ತಿಲ್ಲ"

ಬಿಗ್‌ಬಾಸ್ ಮನೆಯ ಹಾಲ್‌ನಲ್ಲಿ ನಿಂತಿದ್ದ ಕಾರ್ತಿಕ್ ಎದುರಿಗೆ ಬರುತ್ತಿದ್ದ ಸಂಗೀತಾಗೆ ಇದೆ ಕೊಟ್ಟು ಓಡುತ್ತಾರೆ. ಇಲ್ಲಿಂದ ಇಬ್ಬರ ನಡುವಿನ ತಮಾಷೆಯ ಫೈಟ್ ಆರಂಭ ಆಗುತ್ತೆ. ಸಂಗೀತಾ ಮುನಿಸಿನಿಂದ ಕಾರ್ತಿಕ್ ಕಡೆಗೆ ಓಡುತ್ತಾರೆ. ಕಾರ್ತಿಕ್ ಕೈ ಹಿಡಿದುಕೊಂಡು ತಾವೂ ತಿರುಗಿ ಒದೆಯುತ್ತಾ "ಎಲ್ಲಿಗೆ ಹೊಡಿತಿನೋ ಗೊತ್ತಿಲ್ಲ" ಎನ್ನುತ್ತಾರೆ. ಇಬ್ಬರ ನಡುವೆ ಹೀಗೆ ಒಂದು ಕಿತ್ತಾಟ ನಡೆದ ಬಳಿಕ ಸಂಗೀತಾ ಹೆಗಲ ಮೇಲೆ ಕೈ ಹಾಕಿ "ಬೇಜಾರಾಯ್ತಾ?" ಎಂದು ಕೇಳಲು ಹೋಗುತ್ತಾರೆ. ಹೀಗೆ ಪರಸ್ಪರ ತಮಾಷೆಯಾಗಿ, ಮಸ್ತ್ ಫೈಟ್ ಮಾಡುವ ದೃಶ್ಯವನ್ನು ಬಿಗ್ ಬಾಸ್ ಕ್ಯಾಮರಾ ಸೆರೆ ಹಿಡಿದಿದೆ. ಇದು 24 ಲೈವ್ ಕೊಡುತ್ತಿರುವ ಜಿಯೋ ಸಿನಿಮಾದಲ್ಲಿ ಪ್ರಸಾರ ಆಗುತ್ತಿದೆ.

More from Filmibeat

English summary
BBK 10: Sangeetha Sringeri, Vinay compramised. Karthik and Sangeetha Fight Started
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X