BBK10 Contestants Cash Price: ಫಿನಾಲೆಗೆ ಬಂದ 6 ಮಂದಿ ಸ್ಪರ್ಧಿಗಳಿಗೆ ಎಷ್ಟೆಷ್ಟು ಹಣ ಸಿಗುತ್ತೆ?
ಬಿಗ್ ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಕಿಚ್ಚ ಸುದೀಪ್ ನಿನ್ನೆಯಂತೆ (ಜನವರಿ 27) ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಮತ್ತೊಬ್ಬರ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ತುಕಾಲಿ ಸಂತೋಷ್ ಹಿಂದೆನೇ ವರ್ತೂರು ಸಂತೋಷ್ ಹೊರಬಂದಿದ್ದು, 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿದೆ.
ಇನ್ನು ಬಿಗ್‌ಬಾಸ್ ಮನೆಯಲ್ಲಿ ನಾಲ್ಕು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರು ಬಿಗ್‌ಬಾಸ್ ವಿನ್ನರ್ ಆಗಿತ್ತಾರೆ ಅನ್ನೋ ಕುತೂಹಲ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಅದಕ್ಕೂ ಮುನ್ನ ಕಿಚ್ಚ ಸುದೀಪ್ ಫಿನಾಲೆಗೆ ಬಂದಿರೋ ಸ್ಪರ್ಧಿಗಳಿಗೆ ಎಷ್ಟೆಷ್ಟು ಕ್ಯಾಶ್ ಪ್ರೈಸ್ ಸಿಗಲಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

5ನೇ ರನ್ನರ್ ಅಪ್ ತುಕಾಲಿ ಸಂತೋಷ್
ನಿನ್ನೆ (ಜನವರಿ 27) ನಡೆದ ಬಿಗ್‌ಬಾಸ್ ಕನ್ನಡ 10ರ ಫಿನಾಲೆಯಲ್ಲಿ 5ನೇ ರನ್ನರ್ ಅಪ್ ಆಗಿ ತುಕಾಲಿ ಸಂತೋಷ್ ಹೊರಬಂದಿದ್ದರು. ಇವರಿಗೆ ಪ್ರಾಯೋಜಕರಿಂದ ಎರಡು ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಕ್ಕಿದೆ. ಇವರ ಬಳಿಕ ಹೊರಬರುವ ಸ್ಪರ್ಧಿಗಳಿಗೆ ಕ್ಯಾಶ್ ಪ್ರೈಸ್‌ನಲ್ಲಿ ಏರಿಕೆಯಾಗುತ್ತದೆ.
4ನೇ ರನ್ನರ್ ಅಪ್ ವರ್ತೂರು ಸಂತೋಷ್
ಬಿಗ್‌ಬಾಸ್ ಕನ್ನಡ ಸೀಸನ್ 10ರ ಗ್ಯಾಂಡ್ ಫಿನಾಲೆ ಇಂದು (ಜನವರಿ 28) ನಡೆಯುತ್ತಿದೆ. ಈಗಾಗಲೇ ವರ್ತೂರು ಸಂತೋಷ್ 4ನೇ ರನ್ನರ್ ಅಪ್ ಆಗಿ ಹೊರಬಂದಿದ್ದಾರೆ. ಇವರಿಗೆ ತುಕಾಲಿ ಸಂತೋಷ್ ಅವರಷ್ಟೇ ಎರಡು ಲಕ್ಷ ರೂಪಾಯಿ ಹಣ ಸಿಕ್ಕಿದೆ. ಸದ್ಗುರು ಆಯುರ್ವೇದಿಕ್ ಕಡೆಯಿಂದ 2 ಲಕ್ಷ ರೂಪಾಯಿ ಹಣ ಸಿಕ್ಕಿದೆ.
3ನೇ ರನ್ನರ್ ಅಪ್
ಇನ್ನು ಮೂರನೇ ರನ್ನರ್ ಅಪ್ ಆಗಿ ಹೊರಬರೋರಿಗೆ ಬಿಗ್ ಬಾಸ್ ಕಡೆಯಿಂದ ಕ್ಯಾಶ್ ಪ್ರೈಸ್‌ನಲ್ಲಿ ಏರಿಕೆಯಾಗಲಿದೆ. ಮೂರನೇ ರನ್ನರ್ ಅಪ್‌ಗೆ ಈ ವೇದಿಕೆಯಲ್ಲಿ ತುಕಾಲಿ, ವರ್ತೂರು ಸಂತೋಷ್‌ಗಿಂತ ಎರಡು ಲಕ್ಷ ರೂಪಾಯಿ ಹೆಚ್ಚು ಹಣ ಸಿಗಲಿದೆ. ಇವರಿಗೆ 4 ಲಕ್ಷ ರೂಪಾಯಿ ಸಿಗಲಿದೆ.
2ನೇ ರನ್ನರ್ ಅಪ್
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಗಳಿಗೆ ಇಷ್ಟೊಂದು ಕ್ಯಾಶ್ ಪ್ರೈಸ್ ಸಿಗುತ್ತಿದೆ. ಎರಡನೇ ರನ್ನರ್ ಅಪ್ ಆಗಿ ಹೊರಬಂದವರಿಗೆ ಪ್ರಾಯೋಜಕರಿಂದ 7 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಗಲಿದೆ.
ಮೊದಲನೇ ರನ್ನರ್ ಅಪ್
ಇನ್ನು ಮೊದಲನೇ ರನ್ನರ್ ಅಪ್‌ಗೆ ಕ್ಯಾಶ್ ಪ್ರೈಸ್‌ನಲ್ಲಿ ಏರಿಕೆಯಾಗಿದೆ. ಇವರಿಗೆ ಸುಮಾರು 10 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಗಲಿದೆ. ಇಷ್ಟೇ ಅಲ್ಲದೆ ಇದರೊಂದಿಗೆ ಎಲೆಕ್ಟ್ರಿಕ್ ಬೈಕ್ ಕೂಡ ಸಿಗಲಿದೆ.
ಬಿಗ್ ಬಾಸ್ ವಿನ್ನರ್‌ಗೆ ಎಷ್ಟು ಪ್ರೈಸ್
ಬಿಗ್‌ಬಾಸ್ ವಿನ್ನರ್‌ಗೆ ಕಾನ್ಫಿಡೆಂಡ್ ಗ್ರೂಪ್ ಕಡೆಯಿಂದ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಬಹುಮಾನವಾಗಿ ಸಿಗಲಿದೆ. ಇದರೊಂದಿಗೆ ಎಲೆಕ್ಟ್ರಿಕ್ ಬೈಕ್ ಕೂಡ ಸಿಗಲಿದೆ. ಇಷ್ಟೇ ಅಲ್ಲದೆ, ಇನ್ನೂ ಚಿಕ್ಕಪುಟ್ಟ ಬಹುಮಾನಗಳು ಕೂಡ ಸಿಗಲಿವೆ.


Click it and Unblock the Notifications











