Bigg Boss Namratha: ತುಕಾಲಿ ಫೇಕ್.. ವಿನಯ್ ಅಣ್ಣ.. ಗೆಲ್ಲೋದೇ ಸಂಗೀತಾ; ಸ್ಪರ್ಧಿಗಳ ಬಗ್ಗೆ ಏನಂದ್ರು ನಮ್ರತಾ?
ಬಿಗ್ ಬಾಸ್ ಕನ್ನಡ ಸೀಸನ್ 10ರ ಕೊನೆಯ ವಾರದಲ್ಲಿ ನಮ್ರತಾ ಎಲಿಮಿನೇಟ್ ಆಗಿದ್ದರು. ಫಿನಾಲೆವರೆಗೂ ಉಳಿದುಕೊಳ್ಳುವ ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳಲ್ಲಿ ನಮ್ರತಾ ಕೂಡ ಇರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಅದರೆ, ಲೆಕ್ಕಾಚಾರವೆಲ್ಲವೂ ಉಲ್ಟಾ ಆಗಿತ್ತು.
ಈ ಸೀಸನ್‌ನ ಅಂತಿಮ ಏಳು ಸ್ಪರ್ಧಿಗಳಲ್ಲಿ ನಮ್ರತಾ ಕೂಡ ಒಬ್ಬರಾಗಿದ್ದರು. ಆದರೆ, ಈ ವಾರ ಮನೆಯಿಂದ ಹೊರಬಿದ್ದಿದ್ದಾರೆ. ಕಿಚ್ಚ ಸುದೀಪ್ "ಬಿಗ್‌ಬಾಸ್ ಈ ಸೀಸನ್‌ನಲ್ಲಿ ನಿಮ್ಮ ಕಾಂಟ್ರಿಬ್ಯೂಷನ್ ನಿಜಕ್ಕೂ ಮಹತ್ವದ್ದು. ನೀವು ಯಾರು ಎಂದು ನನಗೂ ತೋರಿಸಿಕೊಟ್ಟಿದ್ದೀರಿ" ಎಂಬ ಮೆಚ್ಚುಗೆಯ ಮಾತಗಳನ್ನು ಆಡಿದ್ದರು. ಈಗ ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಇಂಟ್ರೆಸ್ಟಿಂಗ್ ವಿಷಯಗಳನ್ನು ಹೊರಹಾಕಿದ್ದಾರೆ.

"ಎಲಿಮಿನೇಷನ್ ಬೇಜಾರಾಗಿದೆ"
ಬಿಗ್‌ಬಾಸ್ ಮನೆಯಿಂದ ನಮ್ರತಾ ಹೊರಬಂದಿದ್ದಕ್ಕೆ ಶಾಕ್ ಆಗಿದ್ದಾರೆ. ಹಾಗೇ ಅವರ ಸಾಧನೆಗೆ ಬಗ್ಗೆ ಹೆಮ್ಮೆನೂ ಇದೆ. "ಬಿಗ್‌ಬಾಸ್ ಹತ್ತನೇ ಸೀಸನ್‌ನ ಟಾಪ್ ಸೆವೆನ್ ಸ್ಪರ್ಧಿಗಳಲ್ಲಿ ಒಬ್ಬಳು ನಾನು. ನಿಜಕ್ಕೂ ಸಖತ್ ಬೇಜಾರಾಗ್ತಿದೆ. ಹತ್ತೊಂಬತ್ತು ಜನರಲ್ಲಿ ಏಳನೇ ಸ್ಥಾನದವರೆಗೂ ಬಂದಿರುವುದು ಖಂಡಿತ ಸುಲಭದ ಸಂಗತಿ ಅಲ್ಲ. ಮೂರು ದಿನಗಳ ಹಿಂದೆ ಹಳೆಯ ಸ್ಪರ್ಧಿಗಳೆಲ್ಲ ಬಂದು ಒಂದು ಬಾಂಬ್ ಹಾಕ್ತಾರೆ. ನಿಂಗೆ ಚಾನ್ಸ್ ಇಲ್ಲ ಅಂತ. ಆಗ ನನಗೆ ಓ ಎಂದು ನನ್ನ ಆತ್ಮವಿಶ್ವಾಸ ಕುಗ್ಗಲು ಶುರುವಾಯ್ತು. ಆದರೂ ನನ್ನನ್ನು ನಾನು ಸಂಭಾಳಿಸಿಕೊಂಡು ಆಟ ಆಡಲು ಶುರುಮಾಡಿದೆ. ಆದರೆ, ಈಗ ಮನೆಯಿಂದ ಹೊರಗೆ ಬಂದಿದ್ದು ನಿಜಕ್ಕೂ ಶಾಕ್ ಆಗಿದೆ." ಎಂದು ನಮ್ರತಾ ಹೇಳಿದ್ದಾರೆ.
"ಸಣ್ಣಪುಟ್ಟ ತಪ್ಪು ಮಾಡಿದ್ದೇನೆ"
"ಈ 106 ದಿನಗಳ ಪಯಣವನ್ನು ಸಣ್ಣದಾಗಿ ವಿವರಿಸಲು ಸಾಧ್ಯವೇ ಇಲ್ಲ. ಅದರಲ್ಲಿಯೂ ನನ್ನ ಜರ್ನಿ ನಿಜವಾಗಿಯೂ ಏರಿಳಿತದ ಪಯಣವಾಗಿತ್ತು. ಎಲ್ಲಿಂದಲೋ ಶುರುಮಾಡಿ ಎಲ್ಲಿಗೋ ಹೋಗಿ, ಕೆಳಗೆ ಇಳಿದು ಮತ್ತೆ ಮೇಲೆ ಏರಿ ಹೋದ ಜರ್ನಿ ನಂದು. ಬಿಗ್‌ಬಾಸ್ ಮನೆಯಲ್ಲಿ ನಾನು ಸಣ್ಣಪುಟ್ಟ ತಪ್ಪುಗಳನ್ನು ಮಾಡಿರಬಹುದು. ಆದರೆ, ಇವೆಲ್ಲ ಹೇಳುವ ಥರ, ಶಾಡೊ, ಇನ್‌ಪ್ಲ್ಯೂಯೆನ್ಸ್ ಎಲ್ಲ ಆಗಿಲ್ಲ. ನಾನು ನಿಜವಾದ ಸ್ನೇಹಿತರನ್ನು ಕಂಡುಕೊಂಡಿದ್ದೇನೆ." ಎಂದು ಸಂದರ್ಶನದಲ್ಲಿ ನಮೃತಾ ಹೇಳಿದ್ದಾರೆ.

ಸಂಗೀತಾ ನಂದು ಸಿಸ್ಟರ್‌ಹುಡ್
ಬಿಗ್‌ಬಾಸ್ ಮನೆಯಲ್ಲಿ ಕಳೆದ ದಿನಗಳು ಅದ್ಭುತವಾಗಿದ್ದವು ಎಂದು ಹೇಳಿಕೊಂಡಿದ್ದಾರೆ. ಮನೆಯೊಳಗೆ ಯಾರೂ ಕೆಟ್ಟವರಿಲ್ಲ. ಇದು ಸಾಧ್ಯವಿಲ್ಲದ ಪಯಣ. ಎಲ್ಲರ ಜೊತೆಗೂ ಸಂಪರ್ಕದಲ್ಲಿ ಇರಲು ಬಯಸುತ್ತೇನೆ ಎಂದಿದ್ದಾರೆ. "ನನ್ನ-ಸಂಗೀತಾ ನಡುವಿನ ಫ್ರೆಂಡ್‌ಷಿಪ್ ಅನ್ನು ಒಂದೇ ಪದದಲ್ಲಿ ಹೇಳಬೇಕು ಅಂದರೆ ಸಿಸ್ಟರ್‌ಹುಡ್. ನನಗೆ ಆ ಥರ ಬಾಂಡಿಂಗ್ ಆಗೋದು ಕಡಿಮೆ. ಆದರೆ, ಇಲ್ಲಿ ಆಗಿದೆ. ಸಂಗೀತಾ ಏನೇ ಇದ್ರೂ ಮುಖದ ಮೇಲೇ ಹೇಳ್ತಾರೆ. ನೀನು ಇಲ್ಲಿ ತಪ್ಪು ಮಾಡಿದೆ. ಇದು ಸರಿ ಎಂಬುದನ್ನು ನೇರವಾಗಿ ಹೇಳ್ತಾರೆ. ಅಂಥ ಕ್ರಿಟಿಕ್ ಎಲ್ಲರ ಬದುಕಿನಲ್ಲಿಯೂ ಇರಬೇಕು ಅನಿಸುತ್ತದೆ." ಎಂದು ನಮ್ರತಾ ಹೇಳಿದ್ದಾರೆ.
ವಿನಯ್ ಅಣ್ಣನ ಸ್ಥಾನ ತುಂಬಿದ್ದಾರೆ
ಬಿಗ್ ಬಾಸ್ ಮನೆಯೊಳಗೆ ವಿನಯ್ ಹಾಗೂ ನಮ್ರತಾ ಬಾಂಡಿಂಗ್ ಚೆನ್ನಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟುಕೊಡುತ್ತಿರಲಿಲ್ಲ. "ನನಗೆ ಅಣ್ಣ ಇಲ್ಲ ಎಂಬ ಕೊರಗು ಯಾವಾಗಲೂ ಇತ್ತು. ಆ ಸ್ಥಾನವನ್ನು ವಿನಯ್ ತುಂಬಿದ್ದಾರೆ. ಹೊರಗಡೆ ಕೂಡ ಆ ಬಂಧನವನ್ನು ಮುಂದುವರಿಸಿಕೊಳ್ಳಲು ಬಯಸುತ್ತೇನೆ." ಎಂದು ನಮ್ರತಾ ಹೇಳಿದ್ದಾರೆ.

ಬೇಗ ಹತ್ತಿರ ಆಗಿದ್ದು ಪ್ರತಾಪ್
"ಇಡೀ ಮನೆಯಲ್ಲಿ ನನಗೆ ಬಹುಬೇಗ ಮನಸ್ಸಿಗೆ ಹತ್ತಿರವಾದವನು ಪ್ರತಾಪ್. ಆವಾಗಾವಾಗ ವಿಯರ್ಡ್ ಆಗಿ ಆಡ್ತಾನೆ ನಿಜ. ಆದರೆ, ಅವನು ಇರೋದೇ ಹಾಗೆ. ಅವನನ್ನು ಹಾಗೆಯೇ ಒಪ್ಪಿಕೊಂಡಿದ್ದೇನೆ ನಾನು. ಅವನ ಅಪ್ಪ, ಅಮ್ಮ ಇಬ್ಬರೂ ಸಿಕ್ಕಾಪಟ್ಟೆ ಒಳ್ಳೆಯ ಜನ, ಮುಗ್ಧರು. ನಾನು ನೋಡಿದ ತಕ್ಷಣ ಪಟ್ ಅಂತ ಕನೆಕ್ಟ್ ಆದೆ. ಅವರಿಬ್ಬರ ಸೆಲ್ಫ್‌ಸೆಲ್ ಮಾತು ನೋಡಿ ಇಷ್ಟವಾಯ್ತು. ಅವನು ನಾನು ನಿಮಗೆ ಸೀರೆ ಕೊಡಿಸ್ತೀನಿ ದೀ... ನಿಮಗೆ ಓಲೆ ಜುಮುಕಿ ಕೊಡಿಸ್ತೀನಿ ಎಂದು ಹೇಳೋನು. ಬಟ್ ಅವರ ತಂದೆ ತಾಯಿ ಸೀರೆ ತಂದುಕೊಟ್ಟಿದ್ದು ನೋಡಿ ಬಹಳ ಎಮೋಷನಲ್ ಆಯ್ತು. ನಮ್ಮೋರು ಅಂತ ಅನಿಸಿತು. ಬೇಕೋ ಬೇಡವೋ ನಾನು ಯಾವಾಗಲೂ ಅವನ ದಿದಿ ಆಗಿಯೇ ಇರುತ್ತೇನೆ. ಅವನು ಯಾವಾಗಲೂ ನನ್ನ ಪುಟ್ಟ ತಮ್ಮನೇ." ಎಂದಿದ್ದಾರೆ.
ತುಕಾಲಿ ಸಂತೋಷ್ ಫೇಕ್
"ನನಗೆ ಅಕ್ಷರಶಃ ಫೇಕ್ ಅನಿಸಿದ್ದು ತುಕಾಲಿ ಸಂತೋಷ್. ಅವರನ್ನು ಬಿಟ್ಟರೆ ಮತ್ತೆ ವಾಪಸ್ ಮನೆಯೊಳಗೆ ಬಂದಾಗ ಸ್ನೇಹಿತ್ ಕೂಡ ಫೇಕ್ ಅನಿಸಿದ್ದರು. ನಾನು ಅವರ ಕಡೆಯಿಂದ ಸಾಕಷ್ಟು ಬೆಂಬಲ ನಿರೀಕ್ಷಿಸಿದ್ದೆ. ಆದರೆ, ಅವರು ಬಂದು ನನ್ನ ತುಂಬ ಡಿಮೋಟಿವೇಟ್ ಮಾಡಿದ್ದು ಸ್ನೇಹಿತ್. ಟಾಪ್ 3ನಲ್ಲಿ ವಿನಯ್, ಸಂಗೀತಾ ಮತ್ತು ತುಕಾಲಿ ಇರ್ತಾರೆ. ನನಗೆ ವಿನಯ್ ವಿನ್ ಆಗ್ಬೇಕು ಅಂತ ಇದೆ. ಆದರೆ, ಯಾಕೋ ನನ್ನ ಸಿಕ್ಸ್ತ್ ಸೆನ್ಸ್ ಹೇಳ್ತಿದೆ ಸಂಗೀತಾ ವಿನ್ ಆಗ್ತಾರೆ ಅಂತ" ಎಂದು ಹೇಳಿದ್ದಾರೆ.
ಬಿಗ್‌ಬಾಸ್ ಧ್ವನಿಗೆ ಬಿದ್ದೋಗಿದ್ದೀನಿ
ಕೊನೆದಾಗಿ ನಾನು ಬಿಗ್‌ಬಾಸ್‌ಗೆ ಹೇಳೋದು ಏನಂದ್ರೆ, "ಬಿಗ್‌ಬಾಸ್, ನಾನು ನಿಮ್ ಧ್ವನಿಗೆ ಬಿದ್ದೋಗಿದೀನಿ. ಫಿದಾ ಆಗಿದೀನಿ. ನೀವು ಹೇಗಿದ್ದೀರಾ ನೋಡ್ಬೇಕು. ಹ್ಯಾಪಿಯೆಸ್ಟ್ ವರ್ಷನ್ ಆಫ್ ನಮ್ರತಾ ಇದು. ನನ್ನನ್ನು ನಾನು ಪ್ರೀತಿಸಲು ಶುರುಮಾಡಿದೀನಿ. ನೀವು ಕೊಟ್ಟ ಎಲ್ಲಾ ಸನ್ನಿವೇಶಗಳು, ಪಾಠಗಳು ನನ್ನನ್ನು ಗಟ್ಟಿಗೊಳಿಸಿವೆ. ಇಲ್ಲಿ ಇಷ್ಟೊಂದು ಫೇಸ್ ಮಾಡಿದವಳು ಹೊರಗಡೆ ಏನು ಬೇಕಾದ್ರೂ ಫೇಸ್ ಮಾಡೋಕೆ ರೆಡಿ ಇದೀನಿ. ಥ್ಯಾಂಕ್ಯೂ ಸೋ ಮಚ್ ಬಿಗ್‌ಬಾಸ್" ಎಂದು ನಮ್ರತಾ ಹೇಳಿದ್ದಾರೆ.


Click it and Unblock the Notifications











