BBK 10: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್

ಬಿಗ್ ಬಾಸ್ ಕನ್ನಡ ಸೀಸನ್ 10 ಶುಭಾರಂಭಗೊಂಡಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಓಪನಿಂಗ್ ಎರಡು ದಿನ ನಡೆಯುತ್ತಿತ್ತು. ಆದರೆ, ಈ ಬಾರಿ ಕೇವಲ ಒಂದೇ ದಿನಕ್ಕೆ ಮೀಸಲಾಗಿದೆ. ಒಂದು ದಿನದೊಳಗೆ ಒಟ್ಟು 17 ಮಂದಿ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಾಗಿದೆ.

ಈ ಬಾರಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬೇರೆಯೇ ಇತ್ತು. ವೀಕ್ಷಕರನ್ನು ಮುಂದಿಟ್ಟುಕೊಂಡು ಆಯ್ಕೆ ಪ್ರಕ್ರಿಯೆ ಮಾಡಲಾಗಿತ್ತು. ಹೀಗಾಗಿ ಕೆಲವರು ರಿಜೆಕ್ಟ್ ಆದರು. ಮತ್ತೆ ಕೆಲವರು ಸೆಲೆಕ್ಟ್ ಆದರು. ಇವರಲ್ಲಿ ಕೆಲವರು ವಿಭಿನ್ನ ವ್ಯಕ್ತಿತ್ವದ, ವಿಭಿನ್ನ ಕ್ಷೇತ್ರದ ವ್ಯಕ್ತಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲಿ ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್ ಕೂಡ ಒಬ್ಬರು.

Bigg Boss Kannada Season 10: Nigerian Kannada Michael Ajay

ಬಾಸ್ ಕನ್ನಡ ಸೀಸನ್ 10 ವೇದಿಕೆ ವಿಭಿನ್ನ ಅನ್ನೋದು ಮತ್ತೊಮ್ಮೆ ಸಾಬೀತಾಗುತ್ತಿದೆ. ವಿಭಿನ್ನ ವ್ಯಕ್ತಿತ್ವದ, ಕ್ಷೇತ್ರದ ವ್ಯಕ್ತಿಯನ್ನು ಮನೆಯೊಳಗೆ ಕಳಿಸಲಾಗುತ್ತಿದೆ. ಈ ಬಾರಿ ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್ ಎಂಟ್ರಿ ಕೊಟ್ಟಿದ್ದಾರೆ. ಮಾಡಲ್, ಬಾಸ್ಕೆಟ್ ಬಾಲ್, ಫಿಟ್ನೆಸ್ ಬಗ್ಗೆ ಹೆಚ್ಚು ಒಲವಿದೆ. ಕಳೆದ ನಾಲ್ಕು ವರ್ಷಗಳಿಂದ ಹೇರ್ ಸ್ಟೈಲ್ ಬೆಳೆಸುತ್ತಿದ್ದಾರೆ. ಇವರ ಕನ್ನಡಕ್ಕೆ ನಟಿ ಶ್ರುತಿನೇ ಫಿದಾ ಆಗಿದ್ದಾರೆ.

ಮೈಕಲ್ ಅಜಯ್ ಹೇರ್‌ಸ್ಟೈಲ್‌ನಿಂದಲೇ ಕಿಚ್ಚ ಸುದೀಪ್ ಗಮನ ಸೆಳೆದಿದ್ದರಿ. ಮಾಡಲ್ ಆಗಿರೋ ಮೈಕಲ್ ಅಜಯ್‌ಗೆ ರಿಯಾಲಿಟಿ ಶೋದಲ್ಲಿ ಭಾಗವಹಿಸಬೇಕು ಎಂಬ ಆಸೆ ಇತ್ತು. ಆ ಕನಸು ಈಗ ನನಸಾಗಿದೆ. ಕನ್ನಡದಲ್ಲಿ ಮಾತನಾಡುವ ಮೈಕಲ್ ಅಜಯ್ ವೀಕ್ಷಕರ ಮೆಚ್ಚಿನ ಸ್ಪರ್ಧಿಯಾಗಿದ್ದಾರೆ.

"ನೋಡೊದಕ್ಕೆ ವಿಲನ್ ಥರ ಇದ್ದೀನಿ.. ಆದರೆ, ನಾನು ಒಳ್ಳೆ ಹುಡುಗ" ಎನ್ನುತ್ತಲೇ ವೀಕ್ಷಕರ ಮನಗೆದ್ದಿದ್ದಾರೆ. "ಬರೀ ಪಾಸಿಟಿವ್ ಆಗಿದ್ರೆ ಚೆನ್ನಾಗಿರಲ್ಲ, ಸ್ವಲ್ಪ ನೆಗೆಟಿವ್ ಕೂಡ ಇರಬೇಕು" ಎಂದು ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್ ಹೇಳಿದ್ದಾರೆ. ಮಾಡಲಿಂಗ್, ಬಾಸ್ಕೆಟ್‌ಬಾಲ್, ಫಿಟ್‌ನೆಸ್ ಇವರ ನೆಚ್ಚಿನ‌ ಹವ್ಯಾಸ.

ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಜಯ್ ಈಗ ಬರ್ಗರ್ ಶಾಪ್ ಕೂಡ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಗಳನ್ನು ಮಾಡಬೇಕು ಅನ್ನೋ ಆಸೆಯಿದೆ. ಈ ವಿಷಯವನ್ನು ವೇದಿಕೆ ಮೇಲೆ ಕಿಚ್ಚ ಸುದೀಪ್ ಎದುರೇ ಹಂಚಿಕೊಂಡಿದ್ದಾರೆ.

"ಹೀರೊ ನೋಡಿದ್ರೆ ಅನ್‌ರಿಯಲಿಸ್ಟಿಕ್ ಫೀಲ್ ಬರುತ್ತದೆ.. ವಿಲನ್ ರೋಲ್ ರಿಯಲಿಸ್ಟಿಕ್ ಆಗಿರುತ್ತದೆ.." ಎಂದು ನೇರವಾಗಿ ವೇದಿಕೆ ಮೇಲೆ ಮೈಕಲ್ ಅಜಯ್‌ ಹೇಳಿಕೊಂಡಿದ್ದಾರೆ. "ನನ್ನನ್ನು ಮನೆಯೊಳಗೆ ಕಳಿಸಿದರೆ ಜನರಿಗೆ ನನ್ನಿಂದ ಒಂದು ಯೂನಿಕ್ ಕನ್ನಡ ಸಿಗುತ್ತದೆ.." ಎಂದು ಮನವಿ ಮಾಡಿಕೊಂಡ ಅಜಯ್‌ಗೆ ವೀಕ್ಷಕರು 81% ವೋಟ್ ಮಾಡಿ ಮನೆಯೊಳಗೆ ಕಳಿಸಿದ್ದಾರೆ.

More from Filmibeat

English summary
Bigg Boss Kannada Season 10: Nigerian Kannada Michael Ajay profile
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X