BBK 10: ಸಂಗೀತಾಗೆ ಕಮೆಂಟ್ ಮಾಡುವುದೇ ತಪ್ಪಾ..? ಎಗರಿ ಬೀಳುವ ಚಾರ್ಲಿ ಬೆಡಗಿಗೆ ಕಿಚ್ಚನ ಕಿವಿ ಮಾತೇನು?

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಎಂಬುದು ಸಾಮಾನ್ಯ. ಮನೆಯೊಳಗಿನವರು ನಾಮಿನೇಟ್ ಮಾಡಿದಾಗ, ಜನ ವೋಟ್ ಮಾಡುವ ಮೂಲಕ ಅವರನ್ನು ಉಳಿಸಬಹುದು. ವೋಟ್ ತುಂಬಾ ಕಡಿಮೆ ಬಂದ ವ್ಯಕ್ತಿ ಮನೆಯಿಂದ ಹೊರಗೆ ಬರುತ್ತಾನೆ. ಮನೆಯೊಳಗೆ ಹೋದವರು ಯಾವುದೋ ಒಂದು ಕಾರಣದಿಂದ ಹೊರಗೆ ಬಾರದೆ ಹೋದಲ್ಲಿ, ಗೆಲ್ಲುವ ಒಬ್ಬ ವ್ಯಕ್ತಿಯನ್ನು ಉಳಿಸುವುದಾದರೂ ಹೇಗೆ ಹೇಳಿ..?

ಪ್ರತಿ ಸೀಸನ್‌ನಲ್ಲೂ ಈ ಪ್ರಕ್ರಿಯೆ ಹೀಗೆ ನಡೆಯುವುದು. ಮನೆಯೊಳಗಿರುವ ಮಂದಿಗೆ ತಾನು ಏನು ಅನ್ನಿಸಿದೆ ಎಂಬುದನ್ನು ನಾಮಿನೇಷನ್ ಮೂಲಕ ತಿಳಿಸಲಾಗುತ್ತದೆ. ಆದರೆ, ಅದನ್ನೆ ಟಾರ್ಗೆಟ್ ರೀತಿ ಫೀಲ್ ಮಾಡಿಕೊಂಡು, ಜಗಳಕ್ಕೆ ನಿಂತು ಬಿಡುತ್ತಿದ್ದಾರೆ. ಅದರಲ್ಲೂ ಸಂಗೀತಾ ಮುಂದು.

bbk10-kichcha-sudeep-sangeetha

ಕಿಚ್ಚನಿಂದಾನೂ ಸಂಗೀತಾಗೆ ಕಿವಿ ಮಾತು

ಎಸ್ ಆರ್ ನೋ ಬೋರ್ಡ್ ಕೊಟ್ಟು ಕೂಡ ಮನೆ ಮಂದಿಯ ಬಗೆಗಿನ ಅಭಿಪ್ರಾಯ ತಿಳಿಸುವ ಒಂದು ವಾಡಿಕೆ ಇದೆ. ಅದರಲ್ಲಿ ಇಂದು ಸುದೀಪ್, ಸಂಗೀತಾನ ಟಾರ್ಗೆಟ್ ಮಾಡಲಾಗಿದೆ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಎಲ್ಲರೂ ನೋ ಎಂದರೆ, ಸಂಗೀತಾ ಎಸ್ ಅಂದರು. ಆಗ ಎಲ್ಲರೂ ಟಾರ್ಗೆಟ್ ಮಾಡ್ತಾ ಇದ್ದಾರೆ ಎನಿಸಿದಾಗ ನೀವೂ ಇನ್ಫ್ಲೂಯನ್ಸ್ ಮಾಡ್ತಾ ಇರಬಹುದು ಅಲ್ವಾ. ಅದನ್ನು ಯೋಚನೆ ಮಾಡಿ ಎಂದಿದ್ದಾರೆ.

ನೀತೂ ಮೇಲೆ ಜಗಳಕ್ಕೆ ನಿಂತ ಸಂಗೀತಾ

ಗಾದೆ ಮಾತು ಹೇಳುವ ಟಾಸ್ಕ್ ಶುರುವಾದಾಗ ನೀತೂಗೆ ಒಂದು ಬೋರ್ಡ್ ಸಿಕ್ಕಿತು. ಅದರಲ್ಲಿ ಕಳ್ಳನಿಗೊಂದು ಪಿಳ್ಳೆ ನೆವ ಎಂಬುದನ್ನು ನೀಡಿ, ವಿನಯ್ ವಿಚಾರದ ಕಾರಣ ತಿಳಿಸಿದ್ದರು. ಕಿಚ್ಚನ ಪಂಚಾಯ್ತಿ ಮುಗಿದು, ಕೊಂಚ ಬ್ರೇಕ್ ಸಿಕ್ಕಿದ್ದೇ ತಡ, ಸಂಗೀತಾ ಮತ್ತು ನೀತೂ ನಡುವೆ ಜಗಳ ಶುರು ಮಾಡಿದ್ದಾರೆ. ನೀನು ಹೇಳಿದ್ದು ಸರಿ ಅಲ್ಲ ಅಂತಾನೆ ಸಂಗೀತಾ ವಾದ ಮಾಡಿದ್ದಾರೆ.

ಸಾಕ್ಷಿ ಒದಗಿಸುವಲ್ಲಿ ಸೋತ ನೀತೂ

ಸಂಗೀತಾ ಹೀಗೆ ಕೇಳುವಾಗ ನೀತೂ, ಭಾಗ್ಯ ಅವರ ಕಡೆಗೂ ಬೆರಳು ಮಾಡಿದ್ದಾರೆ. "ನಿಮ್ಮ ಬಗ್ಗೆಯೇ ಚರ್ಚೆಯಾಗ್ತಾ ಇತ್ತು. ಅದು ಕೆಟ್ಟದಾಗಿಯೇ ಮಾತನಾಡ್ತಾ ಇದ್ರು. ನನ್ನ ಜರ್ನಿಯಲ್ಲಿ ಅರ್ಧ ಪಾಲು ಇಲ್ಲ ನೀವೂ. ನಂಗೆ ಕೊಟ್ಟಾಗ ನಾನು ಪಾಸಿಟಿವ್ ಆಗಿನೇ ತಗೋಳ್ತಾ ಇದ್ದೀನಿ ಅಂದಾಗ ನೀವೂ ತೆಗೆದುಕೊಳ್ಳಿ" ಎಂದೇ ಸಮರ್ಥನೆ ನೀಡಿದ್ದಾರೆ. ಆದರೆ, ಕೆಟ್ಟದಾಗಿ ಯಾರು ಮಾತನಾಡುತ್ತಾ ಇದ್ದರು ಎಂಬುದನ್ನು ಪ್ರೂವ್ ಮಾಡುವುದಕ್ಕೆ ಆಗಿಲ್ಲ.

bbk10-kichcha-sudeep-sangeetha

ಪ್ರತಾಪನ ಮೇಲೆ ಯುದ್ಧಕ್ಕೆ ನಿಂತ ವರ್ತೂರು

ಆ ಕಡೆ ಸಂಗೀತಾ ಹಾಗೂ ನೀತೂ ಸಮಸ್ಯೆಯಾದರೆ, ಈ ಕಡೆ ವರ್ತೂರ್ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ವಿಚಾರ ಬಂದಿದೆ. ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬ ಗಾದೆ ಮಾತನ್ನು ಡ್ರೋನ್ ಪ್ರತಾಪ್, ವರ್ತೂರು ಸಂತೋಷ್‌ಗೆ ನೀಡಿದ್ದಾರೆ. ಇದಕ್ಕೆ ಜಗಳಕ್ಕೆ ಬಂದ ವರ್ತೂರು ಸಂತೋಷ್, ಅದೇಗೆ ನೀನು ನಂಗೆ ಈ ಗಾದೆ ಮಾತು ಕೊಟ್ಟಿದ್ದು. ಏನೇ ಮಾತನಾಡಿದರು ನಿನ್ನ ಬಗ್ಗೆಯೇ ಅಂತ ತಿಳಿದು ಬಿಡುತ್ತೀಯ ಅಲ್ವಾ. ಅವತ್ತು ಮಾತನಾಡಿದ್ದು ಈ ಮೇಡಂ ಬಗ್ಗೆ. ಮೊದಲು ತಿಳಿದುಕೊಂಡು ಕೊಡೋದನ್ನ ಕಲಿ" ಎಂದು ಜಗಳಕ್ಕೆ ಬಿದ್ದಿದ್ದಾರೆ.

More from Filmibeat

English summary
Bigg Boss Kannada Season 10 October 22nd episode of Sudeep and Sangeetha Sringeri
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X