BBK 10: ಮೂರು ಬಿಟ್ಟವ ಸ್ನೇಹಿತ್.. ಬೊಗಳೋ ನಾಯಿ ಕಚ್ಚಲ್ಲ ಎನಿಸಿಕೊಂಡ ತುಕಾಲಿ.. ಕಿಚ್ಚನ ಮುಂದೆ ಏನಿದು ಮಾತು..?

ಬಿಗ್ ಬಾಸ್ ವಾರಪೂರ್ತಿ ನೋಡುವುದಕ್ಕೆ ಒಂದು ಕಾರಣವಿದ್ದರೆ, ವಾರದ ಕೊನೆಯ ಎರಡುಬದಿನ ಅಂದ್ರೆ ಶನಿವಾರ ಮತ್ತು ಭಾನುವಾರ ಕಿಚ್ಚನ ಪಂಚಾಯತಿ ಕೇಳುವುದಕ್ಕೇನೆ ಚೆಂದ. ವಾರದ ಐದು ದಿನ ಮನೆಯಲ್ಲಿರುವ ಹದಿನಾರು ಮಂದಿಯನ್ನು ಬಿಗ್ ಬಾಸ್ ನೋಡಿಕೊಳ್ಳುತ್ತದೆ. ಟಾಸ್ಕ್‌ಗಳನ್ನು ಕೊಟ್ಟು, ಊಟ ತಿಂಡಿ ಮಾಡಿಕೊಳ್ಳಲು ಸಾಮಾನು ಕೊಟ್ಟು ಚೆನ್ನಾಗಿಯೇ ನೋಡಿಕೊಳ್ಳುತ್ತದೆ.

ವಾರವಿಡೀ ಒಂದೇ ಮನೆಯಲ್ಲಿ, ಅಷ್ಟೇ ಜನರ ನಡುವೆ ಬದುಕಬೇಕು. ಟೈಮ್ ಪಾಸ್‌ಗೆ ಗಾಸಿಪ್ ಮಾಡುವವರೇ ಹೆಚ್ಚು. ಹೀಗಿರುವಾಗ ನಾಟಕ ಮಾಡುವುದಕ್ಕೆ ಎಷ್ಟು ದಿನ ತಾನೇ ಸಾಧ್ಯ. ಈಗಾಗಲೇ ಎಲ್ಲರ ಬಣ್ಣ ಬಯಲಾಗಿದೆ. ಆ ಬಣ್ಣವನ್ನು ಕಿಚ್ಚನ ನೇತೃತ್ವದಲ್ಲಿ ಗಾದೆ ಮಾತುಗಳ ಮೂಲಕ ತಿಳಿಸಲಾಗಿದೆ.

bbk10-super-sunday-with-sudeep

ಇಶಾನಿ ಕೊಟ್ಟ ಬಿರುದಿಗೆ ಸ್ನೇಹಿತ್ ಶಾಕ್

ಇವತ್ತು ಬಿಗ್ ಬಾಸ್ ಮನೆಯಲ್ಲಿ ಗಾದೆ ಮಾತುಗಳ ಮೂಲಕ ಮನೆಯವ ಅಭಿಪ್ರಾಯ ಹೇಳುವ ಸುತ್ತನ್ನು ನಡೆಸಲಾಗಿತ್ತು. ಅದರಲ್ಲಿ ಮೊದಲಿಗೆ ಇಶಾನಿ ಬಂದು ಒಂದು ಬೋರ್ಡ್ ತೆಗೆದುಕೊಂಡರು. ಅದರಲ್ಲಿ ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬುದಿತ್ತು. ಇಶಾನಿಗೆ ಅರ್ಥ ಆಯ್ತೋ ಇಲ್ವೋ ಗೊತ್ತಿಲ್ಲ, ಸ್ನೇಹಿತ್ ಕೊಟ್ಟರು. ಬಳಿಕ ಸ್ನೇಹಿತ್ ಇದು ನಾನಲ್ಲ ಅಂತ ಅರ್ಥ ಮಾಡಿಸಲು ಹೋದಾಗ ಸೋತು, ಓಕೆ ಇದು ನಾನೇ ಅಂತ ಒಪ್ಪಿಕೊಂಡರು. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆಯನ್ನು ಗೌರೀಶ್ ಅಕ್ಕಿ ಅವರು ಮೈಕೆಲ್ ಕೊಟ್ಟಾಗ, ನಗುತ್ತಲೇ ಒಪ್ಪಿಕೊಂಡರು.


ಸಂತೋಷ್‌ಗೆ ಬಂದ ಬೋರ್ಡ್ ಎಷ್ಟು?

ಯಾವುದೇ ಟಾಸ್ಕ್ ಬರಲಿ ಅದರಲ್ಲಿ ಹೆಚ್ಚು ಹೆಸರು ತೆಗೆದುಕೊಳ್ಳುವುದು ತುಕಾಲಿಯೇ. ಇದೀಗ ತುಕಾಲಿಗೂ ಗಾದೆ ಮಾತುಗಳ ಬೋರ್ಡ್ ಸಿಕ್ಕಾಪಟ್ಟೆ ಬಂದಿದೆ. ಅದರಲ್ಲಿ ಭೂಮಿಗೆ ಭಾರ ಕೂಳಿಗೆ ದಂಡ ಎಂಬುದನ್ನು ನಮ್ರತಾ ಕೊಟ್ಡಿದ್ದು, ಉತ್ತರನ ಪೌರುಷ ಒಲೆಯ ಮುಂದೆ ಎಂಬುದನ್ನು ಕಾರ್ತಿಕ್ ಕೊಟ್ಟಿದ್ದಾರೆ. ಬೊಗಳೋ ನಾಯಿ ಕಚ್ಚಲ್ಲ ಎಂಬ ಬೋರ್ಡ್ ಸ್ನೇಹಿತ್ ಕೂಡ, ತುಕಾಲಿಗೆ ಕೊಟ್ಟಿದ್ದಾರೆ.


ವಿನಯ್ ಮತ್ತು ಭಾಗ್ಯಶ್ರೀಗೆ ಏನೆಲ್ಲ ಸಿಕ್ತು..?

ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ಅವರು ಕೊಟ್ಟರು ಅಂತ ಇವರು, ಇವರು ಕೊಡುವುದು ಕಾಮನ್ ಆಗಿ ಹೋಗಿದೆ. ಇದೀಗ ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಬೋರ್ಡ್ ಅನ್ನು ವಿನಯ್ ಭಾಗ್ಯಶ್ರೀಗೆ ನೀಡಿದರೆ, ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬ ಬೋರ್ಡ್ ಅನ್ನ ಭಾಗ್ಯಶ್ರೀ, ವಿನಯ್‌ಗೆ ನೀಡಿದ್ದಾರೆ. ಮನೆಯಲ್ಲಿ ಎಲ್ಲರ ಮಾತನ್ನ ಅವರೇ ಆಡುವ ಬದಲು, ಕಡಿಮೆ ಮಾತನಾಡಬೇಕು ಎಂದಿದ್ದಾರೆ.

ಮನೆಯಲ್ಲಿ ಇನ್ನುಳಿದವರಿಗೆ ಯಾವ ಗಾದೆ ಸಿಕ್ತು..?

ಕುಣಿಯುವುದಕ್ಕೆ ಬರದವರು ನೆಲ ಡೊಂಕು ಅಂದ್ರು ಎಂಬುದನ್ನು ಸಂಗೀತಾ ಅವರು ನೀತೂಗೆ ಕೊಟ್ಟಿದ್ದಾರೆ. ಬೆಳ್ಳಗೆ ಇರೋದೆಲ್ಲಾ ಹಾಲಲ್ಲ ಎಂಬುದನ್ನು ಪ್ರತಾಪ್‌ಗೆ ತನಿಷಾ ಕೊಟ್ಟಿದ್ದಾರೆ. ಇನ್ನು ವರ್ತೂರ್ ಸಂತೋಷ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುದನ್ನು ಪ್ರತಾಪ್‌ಗೆ ಕೊಟ್ಟಿದ್ದಾರೆ. ಆರಕ್ಕೇರಲ್ಲ ಮೂರಕ್ಕೆ ಇಳಿಯಲ್ಲ ಎಂಬ ಬೋರ್ಡ್ ಅನ್ನು ಸಿರಿ, ನೀತೂಗೆ ಕೊಟ್ಟು, ಎಲ್ಲಿದ್ದಾರೋ ಅಲ್ಲಿಯೇ ಇದ್ದಾರೆ ಎಂದಿದ್ದಾರೆ. ಕಳ್ಳನಿಗೊಂದು ಪಿಳ್ಳೆನೆವ ಗಾದೆಯನ್ನು ಸಂಗೀತಾಗೆ ನೀತೂ ನೀಡಿದ್ದಾರೆ. ರಕ್ಷಕ್, ಅರ್ಧ ಕಲಿತವನ ಅಬ್ಬರ ಜಾಸ್ತಿ ಎಂಬುದನ್ನು ನೀತೂಗೆ ನೀಡಿದ್ದಾರೆ. ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು, ಪ್ರತಾಪ್ ಪಡೆದಿದ್ದಾರೆ.

More from Filmibeat

English summary
Bigg Boss Kannada Season 10 October 22nd episode of Super Sunday with Sudeepa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X